Bihar Bridge Collapse: ಬಿಹಾರದಲ್ಲಿ ಉದ್ಘಾಟನೆಗೂ ಮುನ್ನವೇ ಕೊಚ್ಚಿ ಹೋದ ನೂತನ ಸೇತುವೆ
ಬಿಹಾರದಲ್ಲಿ ಭಾರೀ ಮಳೆಯಾಗುತ್ತಿದ್ದು, ಕಿಶನ್ಗಂಜ್ನ ಹಲವಾರು ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಜೊತೆಗೆ ಕಂಕೈ ನದಿ ಪ್ರವಾಹ ಮಟ್ಟ ಮೀರಿ ಹರಿಯುತ್ತಿದೆ.
news18-kannada Updated:September 18, 2020, 11:24 AM IST

ಕೊಚ್ಚಿ ಹೋಗಿರುವ ಸೇತುವೆ
- News18 Kannada
- Last Updated: September 18, 2020, 11:24 AM IST
ಪಾಟ್ನಾ(ಸೆ.18): ಬಿಹಾರದ ಕಿಶನ್ಗಂಜ್ನಲ್ಲಿ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಹೊಸದಾಗಿ ನಿರ್ಮಿಸಲಾಗಿದ್ದ ಸೇತುವೆ ಉದ್ಘಾಟನೆಗೂ ಮುನ್ನವೇ ಕೊಚ್ಚಿ ಹೋಗಿರುವ ಘಟನೆ ನಡೆದಿದೆ. ಕಂಕೈ ನದಿಯ ಒಳಹರಿವು ಹೆಚ್ಚಾದ ಪರಿಣಾಮ ಸೇತುವೆ ಸಂಪೂರ್ಣವಾಗಿ ಕೊಚ್ಚಿ ಹೋಗಿದೆ ಎನ್ನಲಾಗಿದೆ. ಸುಮಾರು 1.42 ಕೋಟಿ ಹಣ ಖರ್ಚು ಮಾಡಿ ಈ ಸೇತುವೆಯನ್ನು ನಿರ್ಮಿಸಲಾಗಿತ್ತು. ಗೋಬರಿ ಗ್ರಾಮದಲ್ಲಿ ಗುರುವಾರ ಈ ಘಟನೆ ನಡೆದಿದೆ. ಇತ್ತೀಚೆಗಷ್ಟೇ ಸೇತುವೆಯ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, ಉದ್ಘಾಟನೆಗೆ ಸಜ್ಜಾಗಿತ್ತು. ಆದರೆ ಈ ಮಧ್ಯೆ ಕಂಕೈ ನದಿಯ ನೀರಿನ ಮಟ್ಟ ಹೆಚ್ಚಾದ ಪರಿಣಾಮ ಕಟ್ಟಿದ್ದ ಸೇತುವೆ ಸಂಪೂರ್ಣವಾಗಿ ಕೊಚ್ಚಿ ಹೋಗಿದೆ. ಈ ಸೇತುವೆ ಕಾಮಗಾರಿಯಲ್ಲಿ ದೊಡ್ಡ ಭ್ರಷ್ಟಾಚಾರವೇ ನಡೆದಿದೆ. ಕಳಪೆ ಕಾಮಗಾರಿ ಮಾಡಿದ್ದಾರೆ. ಹೀಗಾಗಿಯೇ ಸೇತುವೆ ಕುಸಿದು ಬಿದ್ದಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ನದಿಯ ನೀರಿನ ರಭಸ ಹೆಚ್ಚಾದಂತೆ ಆ ಪ್ರದೇಶ ಮುಳುಗಲು ಶುರುವಾಯಿತು. ಹಾಗೆಯೇ ನಿರ್ಮಿಸಲಾಗಿದ್ದ ಸೇತುವೆಯೂ ಸಹ ಉದ್ಘಾಟನೆಗೂ ಮುನ್ನವೇ ನೀರಿನ ರಭಸಕ್ಕೆ ಕೊಚ್ಚಿ ಹೋಯಿತು ಎಂದು ಸ್ಥಳೀಯರು ಹೇಳಿದ್ದಾರೆ.
ಬಿಹಾರದಲ್ಲಿ ಭಾರೀ ಮಳೆಯಾಗುತ್ತಿದ್ದು, ಕಿಶನ್ಗಂಜ್ನ ಹಲವಾರು ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಜೊತೆಗೆ ಕಂಕೈ ನದಿ ಪ್ರವಾಹ ಮಟ್ಟ ಮೀರಿ ಹರಿಯುತ್ತಿದೆ. ಸೇತುವೆ ಕೊಚ್ಚಿ ಹೋಗಿರುವ ಕುರಿತಾಗಿ ಶೀಘ್ರವೇ ತನಿಖೆ ನಡೆಸುತ್ತೇವೆ ಎಂದು ಸ್ಥಳೀಯ ಎಂಜಿನಿಯರ್ಗಳು ಹೇಳಿದ್ದಾರೆ. ಪಿಎಂ ಮೋದಿ ಜೊತೆ ಚರ್ಚಿಸುವ ವಿಚಾರಗಳನ್ನು ಮಾಧ್ಯಮಗಳಿಗೆ ತಿಳಿಸಲು ಸಾಧ್ಯವಿಲ್ಲ; ಸಿಎಂ ಯಡಿಯೂರಪ್ಪ
ಬಿಹಾರದಲ್ಲಿ ಇತ್ತೀಚೆಗೆ ಹಲವು ಸೇತುವೆಗಳು ಕೊಚ್ಚಿ ಹೋಗಿರುವ ಘಟನೆಗಳು ನಡೆದಿವೆ. ಇದೇ ಜುಲೈ ತಿಂಗಳಿನಲ್ಲಿ ಬಿಹಾರದಲ್ಲಿ ಗೋಪಾಲ್ಗಂಜ್ ಮತ್ತು ಪೂರ್ವ ಚಂಪರನ್ಗೆ ಸಂಪರ್ಕ ಕಲ್ಪಿಸುತ್ತಿದ್ದ ಹೊಸ ಸೇತುವೆ ಭಾರೀ ಮಳೆಗೆ ಕೊಚ್ಚಿ ಹೋಗಿತ್ತು. ಈ ಹೊಸ ಸೇತುವೆ ಉದ್ಘಾಟನೆಯಾಗಿ ಕೇವಲ 29 ದಿನಗಳು ಕಳೆದಿದ್ದವು. ಬಿಹಾರ ಸಿಎಂ ನಿತೀಶ್ ಕುಮಾರ್ ನೂತನ ಸೇತುವೆಯನ್ನು ಉದ್ಘಾಟಿಸಿದ್ದರು.
ಗಂದಕ್ ನದಿ ಮೇಲೆ ಕಟ್ಟಲಾಗಿದ್ದ 1.4 ಕಿ.ಮೀ ಉದ್ದದ ಈ ಸತ್ತರ್ಘಾಟ್ ಮಹಾಸೇತು ಸೇತುವೆ ಜೂನ್ 16ರಿಂದ ಪ್ರವೇಶಕ್ಕೆ ಮುಕ್ತವಾಗಿತ್ತು. ಬರೋಬ್ಬರಿ 8 ವರ್ಷಗಳ ಬಳಿಕ ಈ ಸೇತುವೆ ನಿರ್ಮಾಣ ಕಾರ್ಯ ಮುಗಿದಿತ್ತು. ಅಂದರೆ 2012ರ ಏಪ್ರಿಲ್ ತಿಂಗಳಿನಲ್ಲಿ ಈ ಸೇತುವೆ ಕಾಮಗಾರಿ ಶುರುವಾಗಿತ್ತು. ಬಿಹಾರ ರಾಜ್ಯ ಪುಲ್ ನಿರ್ಮಾಣ ನಿಗಮ ನಿಯಮಿತ ಈ ಸೇತುವೆಯನ್ನು ನಿರ್ಮಿಸಿತ್ತು. ಸುಮಾರು 264 ಕೋಟಿ ಖರ್ಚು ಮಾಡಿ ಸೇತುವೆ ನಿರ್ಮಾಣ ಮಾಡಲಾಗಿತ್ತು.
8 ವರ್ಷಗಳಲ್ಲಿ ಕಟ್ಟಿದ ಸೇತುವೆ ಉದ್ಘಾಟನೆಗೊಂಡ ಕೇವಲ 29 ದಿನಕ್ಕೆ ಕೊಚ್ಚಿ ಹೋಯಿತು ಎಂದು ವಿಪಕ್ಷ ನಾಯಕ ತೇಜಸ್ವಿ ಯಾದವ್ ವ್ಯಂಗ್ಯವಾಡಿದ್ದರು.
ಬಿಹಾರದಲ್ಲಿ ಭಾರೀ ಮಳೆಯಾಗುತ್ತಿದ್ದು, ಕಿಶನ್ಗಂಜ್ನ ಹಲವಾರು ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಜೊತೆಗೆ ಕಂಕೈ ನದಿ ಪ್ರವಾಹ ಮಟ್ಟ ಮೀರಿ ಹರಿಯುತ್ತಿದೆ. ಸೇತುವೆ ಕೊಚ್ಚಿ ಹೋಗಿರುವ ಕುರಿತಾಗಿ ಶೀಘ್ರವೇ ತನಿಖೆ ನಡೆಸುತ್ತೇವೆ ಎಂದು ಸ್ಥಳೀಯ ಎಂಜಿನಿಯರ್ಗಳು ಹೇಳಿದ್ದಾರೆ.