ಪಾಟ್ನಾ(ನ. 10): ಬಿಹಾರದಲ್ಲಿ ಮತ ಎಣಿಕೆ ಕಾರ್ಯ ಪ್ರಾರಂಭಗೊಂಡಿದೆ. ಇದಕ್ಕೂ ಮುನ್ನ ಮತದಾನ ನಂತರ ನಡೆದ ಮತಗಟ್ಟೆ ಸಮೀಕ್ಷೆಗಳು ಮಹಾಘಟಬಂಧನದ ವಿಜಯವನ್ನು ಸೂಚಿಸಿವೆ. ಈ ಮಹಾಘಟಬಂಧನದಲ್ಲಿ ಆರ್ಜೆಡಿ ಮತ್ತು ಕಾಂಗ್ರೆಸ್ ಪ್ರಮುಖ ಭಾಗವಾಗಿವೆ. ಆರ್ಜೆಡಿ 144 ಮತ್ತು ಕಾಂಗ್ರೆಸ್ 70 ಕ್ಷೇತ್ರಗಳಲ್ಲಿ ಸ್ಪರ್ಧಿಸಿವೆ. ಇನ್ನುಳಿದ 31 ಕ್ಷೇತ್ರಗಳಲ್ಲಿ ಎಡಪಕ್ಷಗಳ ಅಭ್ಯರ್ಥಿಗಳು ಕಣಕ್ಕಿಳಿದಿದ್ದಾರೆ. ಈ ಎಡಪಕ್ಷಗಳಲ್ಲಿ ಮಾರ್ಕ್ಸ್ವಾದಿ ಲೆನಿನ್ವಾದಿ ಕಮ್ಯೂನಿಸ್ಟ್ ಪಕ್ಷ (ಸಿಪಿಐ-ಎಂಎಲ್) 19 ಕ್ಷೇತ್ರಗಳಲ್ಲಿ ಸ್ಪರ್ಧಿಸಿದೆ.
ಮತಗಟ್ಟೆ ಸಮೀಕ್ಷೆಗಳ ಪ್ರಕಾರ ಸಿಪಿಐ-ಎಂಎಲ್ ತಾನು ಸ್ಪರ್ಧಿಸಿರುವ ಕ್ಷೇತ್ರಗಳಲ್ಲಿ ಭರ್ಜರಿ ಗೆಲುವು ಪಡೆಯುವ ಸಾಧ್ಯತೆ ಇದೆ. ಅದು ಸ್ಪರ್ಧಿಸಿರುವ 19 ಕ್ಷೇತ್ರಗಳಲ್ಲಿ 12-16 ಕ್ಷೇತ್ರಗಳಲ್ಲಿ ಗೆಲುವಿನ ಸಾಧ್ಯತೆ ಇದೆ ಎಂದು ಕೆಲ ಸಮೀಕ್ಷೆಗಳು ಅಂದಾಜಿಸಿವೆ. ಇದು ನಿಜವಾದರೆ ಎಡಪಕ್ಷಗಳಿಗೆ ಒಂದು ರೀತಿಯಲ್ಲಿ ಆನೆಬಲ ಬಂದಂತಾಗಬಹುದು.
ಇದನ್ನೂ ಓದಿ: Bihar Assembly Election 2020 Results Live: ಬಿಹಾರ ಚುನಾವಣೆ – ಮತ ಎಣಿಕೆ ಆರಂಭ; ಎನ್ಡಿಎ ಮಹಾಘಟಬಂಧನ ಸಮಬಲ ಮುನ್ನಡೆ
ಬಿಹಾರದಲ್ಲಿ ಸಿಪಿಐ(ಎಂಎಲ್) ಬಲ ಹೆಚ್ಚಾಗಿ ಇರುವುದು ಭೋಜಪುರ್ ಪ್ರದೇಶದಲ್ಲಿ. ಇಲ್ಲಿರುವ 49 ಕ್ಷೇತ್ರಗಳ ಪೈಕಿ 33 ಕ್ಷೇತ್ರಗಳಲ್ಲಿ ಮಹಾಘಟಬಂಧನದ ಅಭ್ಯರ್ಥಿಗಳು ಗೆಲ್ಲಲಿದ್ದಾರೆ. ಈ ವಲಯದಲ್ಲಿ ಸಿಪಿಐಎಂಎಲ್ನ ಸಂಘಟನಾ ಬಲದ ಪ್ರಭಾವ ಬಹಳಷ್ಟಿದೆ. ಇತ್ತೀಚಿನ ದಿನಗಳಲ್ಲಿ ಇಲ್ಲಿ ಅದರ ಸಂಘಟನಾ ಕೆಲಸಗಳು ತೀರಾ ತಳಮಟ್ಟದವರನ್ನ ಮುಟ್ಟಿವೆ. ಇದು ಮಹಾಘಟಬಂಧನ್ ಗೆಲುವಿಗೆ ಪೂರಕವಾದ ಅಂಶಗಳಲ್ಲಿ ಒಂದು.
ಚುನಾವಣಾ ಫಲಿತಾಂಶದ ಬಗ್ಗೆ ಇಂಗ್ಲಿಷ್ ಭಾಷೆಯಲ್ಲಿ ಓದಲು ಇಲ್ಲಿ ಕ್ಲಿಕ್ ಮಾಡಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ