Viral Video: ನಾನು ಕಳ್ಳರ ಸರದಾರ ಎಂದ ಬಿಹಾರ ಸಚಿವ! ಸರ್ಕಾರದಲ್ಲಿ ಇನ್ನೂ ದೊಡ್ಡ ಕಳ್ಳರಿದ್ದಾರಂತೆ

ಕೃಷಿ ಇಲಾಖೆ ಮಾತ್ರವಲ್ಲ, ಸರ್ಕಾರದ ಬೇರೆ ಬೇರೆ ಇಲಾಖೆಗಳಲ್ಲೂ ಕಳ್ಳರು ಇದ್ದಾರೆ.  ಕಳ್ಳತನ ಮಾಡಿದವರ ಪೈಕಿ ನಮ್ಮ ಕೃಷಿ ಇಲಾಖೆ ಒಂದೇ ಇಲ್ಲ. ಇತರ ಇಲಾಖೆಗಳೂ ಇವೆ ಎಂದು ಅವರು ಟೀಕಿಸಿದ್ದಾರೆ.

ಬಿಹಾರ ಸಚಿವ ಸುಧಾಕರ್ ಸಿಂಗ್

ಬಿಹಾರ ಸಚಿವ ಸುಧಾಕರ್ ಸಿಂಗ್

  • Share this:
ಪಾಟ್ನಾ: ಬಿಹಾರದಲ್ಲಿ ಇತ್ತೀಚಿಗಷ್ಟೇ ರಚನೆಯಾದ ನಿತೀಶ್ ಕುಮಾರ್ (Bihar CM Nitish Kumar) ಮತ್ತು ತೇಜಸ್ವಿ ಯಾದವ್  ನೇತೃತ್ವದ ಸರ್ಕಾರದ ಸಚಿವರೋರ್ವರು ತಮ್ಮ ಸರ್ಕಾರದ ವಿರುದ್ಧವೇ ಗಂಭೀರ ಆರೋಪ ಮಾಡಿದ್ದಾರೆ.  ಕೃಷಿ ಸಚಿವ ಸುಧಾಕರ್ ಸಿಂಗ್ ಅವರು (Bihar Minister Sudhakar Singh) ತಮ್ಮ ಇಲಾಖೆಯಲ್ಲಿ ಅನೇಕ ಕಳ್ಳರು ಇದ್ದಾರೆ ಎಂದು ಆರೋಪ ಮಾಡಿದ್ದಾರೆ. ಅಲ್ಲದೇ ಆ ಕಳ್ಳರ ಸರದಾರ ತಾನೇ ಎಂದಿರುವ ಅವರು, ತನಗಿಂತಲೂ ಮೇಲೆ ಸರ್ಕಾರದಲ್ಲಿ ದೊಡ್ಡ ದೊಡ್ಡ ಸರದಾರರು ಇರುವುದಾಗಿಯೂ ಹೇಳಿದ್ದಾರೆ. ಈ ಹೇಳಿಕೆ ಸದ್ಯ ಬಿಹಾರ ರಾಜಕೀಯದಲ್ಲಿ (Bihar Politics) ವಿವಾದವನ್ನೇ ಸೃಷ್ಟಿಸಿದೆ.

ಬಿಹಾರದ ಕೈಮೂರ್‌ನಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಕೃಷಿ ಸಚಿವ ಸುಧಾಕರ್ ಸಿಂಗ್, ನಿತೀಶ್ ಕುಮಾರ್ ನೇತೃತ್ವದ ಸಮ್ಮಿಶ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.ಸರ್ಕಾರವೇನೋ ಬದಲಾಗಿದೆ, ಆದರೆ..
ಕೃಷಿ ಇಲಾಖೆ ಮಾತ್ರವಲ್ಲ, ಸರ್ಕಾರದ ಬೇರೆ ಬೇರೆ ಇಲಾಖೆಗಳಲ್ಲೂ ಕಳ್ಳರು ಇದ್ದಾರೆ.  ಕಳ್ಳತನ ಮಾಡಿದವರ ಪೈಕಿ ನಮ್ಮ ಕೃಷಿ ಇಲಾಖೆ ಒಂದೇ ಇಲ್ಲ. ಇತರ ಇಲಾಖೆಗಳೂ ಇವೆ. ನಾನು ಕೃಷಿ ಇಲಾಖೆ ಸಚಿವ ಆಗಿರುವುದಕ್ಕೆ ನಾನು ಈ ಕಳ್ಳರ ಸರದಾರ ಎಂದು ಅವರು ವ್ಯಾಖ್ಯಾನಿಸಿದ್ದಾರೆ. ಸರ್ಕಾವೇನೋ ಬದಲಾಗಿದೆ.  ಆದರೆ ಅವರ ಕಾರ್ಯಶೈಲಿ ಮುಂಚೆ ಹೇಗಿತ್ತೋ, ಈಗಲೂ ಹಾಗೇ ಇದೆ ಎಂದು ಸಹ ಕೃಷಿ ಸಚಿವ ಸುಧಾಕರ್ ಸಿಂಗ್ ನಿತೀಶ್ ಕುಮಾರ್ ವಿರುದ್ಧ ಹರಿಹಾಯ್ದಿದ್ದಾರೆ.

ಸರ್ಕಾರ ರಚನೆಯಾದ 22 ದಿನದಲ್ಲೇ ಮೊದಲ ವಿಕೆಟ್​ ಪತನ
ಆಗಸ್ಟ್ 10 ರಂದು ಬಿಹಾರದಲ್ಲಿ ಮಹಾಘಟಬಂಧನ್ ಸರ್ಕಾರ ರಚನೆಯಾಗಿತ್ತು. ಸರಿಯಾಗಿ 22 ದಿನಗಳ ನಂತರ ನಿತೀಶ್ ಕುಮಾರ್ ಅವರ ಸಂಪುಟದಿಂದ ಮೊದಲ ರಾಜೀನಾಮೆ ನೀಡಿದ್ದಾರೆ. ಕಬ್ಬು ಕೈಗಾರಿಕಾ ಸಚಿವ ಕಾರ್ತಿಕೇಯ ಸಿಂಗ್ ಬುಧವಾರ ರಾಜೀನಾಮೆ ನೀಡಿದ್ದಾರೆ. ಮುಖ್ಯಮಂತ್ರಿ ನಿತೀಶ್ ಕುಮಾರ್ ಕೂಡ ತಮ್ಮ ಶಿಫಾರಸನ್ನು ರಾಜ್ಯಪಾಲ ಫಗು ಚೌಹಾಣ್ ಅವರಿಗೆ ಕಳುಹಿಸಿದ್ದು, ತಡಮಾಡದೆ ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ.

ಇದನ್ನೂ ಓದಿ: Arvind Kejriwal: ಆಟೋ ಡ್ರೈವರ್ ಮನೆಗೆ ಊಟಕ್ಕೆ ಹೊರಟ ಕೇಜ್ರಿವಾಲ್; ತಡೆದ ಪೊಲೀಸರಿಗೆ ವಾರ್ನ್

ಕಂದಾಯ ಮತ್ತು ಭೂ ಸುಧಾರಣಾ ಸಚಿವ ಅಲೋಕ್ ಕುಮಾರ್ ಮೆಹ್ತಾ ಅವರಿಗೆ ಕಬ್ಬು ಕೈಗಾರಿಕೆ ಇಲಾಖೆಯ ಹೆಚ್ಚುವರಿ ಹೊಣೆ ನೀಡಲಾಗಿದೆ. ಹಳೆಯ ಅಪಹರಣ ಪ್ರಕರಣದಲ್ಲಿ ಆರ್‌ಜೆಡಿ ಶಾಸಕ ಕಾರ್ತಿಕೇಯ ಸಿಂಗ್ ವಿರುದ್ಧ ನ್ಯಾಯಾಲಯ ವಾರಂಟ್ ಹೊರಡಿಸಿತ್ತು. ಅಂದಿನಿಂದ ಅವರು ವಿವಾದದಲ್ಲಿ ಸಿಲುಕಿದ್ದರು ಎಂಬುವುದು ಉಲ್ಲೇಖನೀಯ.

ಇದನ್ನೂ ಓದಿ: Kohinoor Diamond: ಕೊಹಿನೂರ್ ವಜ್ರ ಭಾರತದ ಈ ದೇವರಿಗೆ ಸೇರಿದ್ದು, ತಕ್ಷಣ ಮರಳಿಸಲು ಆಗ್ರಹ

ವಿವಾದದಲ್ಲಿ ಸಿಲುಕಿದ ಈ ಬಗ್ಗೆ ಬಿಜೆಪಿ ನಿರಂತರವಾಗಿ ನಿತೀಶ್ ಸರ್ಕಾರವನ್ನು ಗುರಿಯಾಗಿಸಿಕೊಂಡಿತ್ತು. ನಂತರ, ನಿತೀಶ್ ಕುಮಾರ್ ಅವರು ಬುಧವಾರ ಬೆಳಿಗ್ಗೆ ಕಾರ್ತಿಕೇಯ ಸಿಂಗ್ ಅವರಿಂದ ಕಾನೂನು ಸಚಿವಾಲಯವನ್ನು ಹಿಂಪಡೆದು ಅವರನ್ನು ಕಬ್ಬು ಉದ್ಯಮ ಸಚಿವರನ್ನಾಗಿ ಮಾಡಿದ್ದರು. ಆದರೆ ಸಂಜೆಯಾಗುವಷ್ಟರಲ್ಲಿ ವೇಳೆಗೆ ಕಾರ್ತಿಕೇಯ ಸಿಂಗ್ ರಾಜೀನಾಮೆ ನೀಡಿದರು. ಕಾರ್ತಿಕೇಯ ಸಿಂಹಗ್​ ಅವರನ್ನು ಅನಂತ್ ಸಿಂಗ್ ಆಪ್ತ ಎಂದು ಪರಿಗಣಿಸಲಾಗಿತ್ತು.
Published by:ಗುರುಗಣೇಶ ಡಬ್ಗುಳಿ
First published: