• Home
  • »
  • News
  • »
  • national-international
  • »
  • Bihar Question Paper: ಕಾಶ್ಮೀರವನ್ನು ಪ್ರತ್ಯೇಕ ದೇಶವೆಂದು ಉಲ್ಲೇಖಿಸಿದ ಬಿಹಾರದ ಏಳನೇ ತರಗತಿಯ ಪ್ರಶ್ನೆಪತ್ರಿಕೆ!

Bihar Question Paper: ಕಾಶ್ಮೀರವನ್ನು ಪ್ರತ್ಯೇಕ ದೇಶವೆಂದು ಉಲ್ಲೇಖಿಸಿದ ಬಿಹಾರದ ಏಳನೇ ತರಗತಿಯ ಪ್ರಶ್ನೆಪತ್ರಿಕೆ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಶಾಲಾ ಆಡಳಿತ ಮಂಡಳಿ ಕೂಡ ದೋಷವನ್ನು ಗಮನಾರ್ಹ ಎಂದು ಪರಿಗಣಿಸದೇ ಇದು ಮಾನವ ನಿರ್ಮಿತ ದೋಷ ಎಂದು ಹಾರಿಕೆಯ ಉತ್ತರವನ್ನು ನೀಡಿದೆ.

  • Share this:

ಬಿಹಾರ ರಾಜ್ಯ ಶಿಕ್ಷಣ (Bihar State Education) ಮಂಡಳಿಯ ಏಳನೇ ತರಗತಿಯ ಪ್ರಶ್ನೆ ಪತ್ರಿಕೆಯು ಕಾಶ್ಮೀರವನ್ನು ಪ್ರತ್ಯೇಕ ದೇಶವನ್ನಾಗಿ ಮಾಡಿದೆ. ಮಾಧ್ಯಮ ವರದಿಗಳ ಪ್ರಕಾರ, ಬಿಹಾರದ ಸೀಮಾಂಚಲ್ ಜಿಲ್ಲೆಯ ಕಿಶನ್‌ಗಂಜ್‌ನಲ್ಲಿ ಏಳನೇ ತರಗತಿಯ ಅರ್ಧವಾರ್ಷಿಕ ಪರೀಕ್ಷೆಯಲ್ಲಿ ಈ ಘಟನೆ ನಡೆದಿದೆ. ಕಾಶ್ಮೀರ (Kashmir) ದೇಶದಲ್ಲಿ ವಾಸಿಸುವ ನಿವಾಸಿಗಳನ್ನು ಏನೆಂದು ಕರೆಯುತ್ತಾರೆ? ಎಂಬುದಾಗಿ ಪ್ರಶ್ನೆಪತ್ರಿಕೆಯಲ್ಲಿನ ಪ್ರಶ್ನೆಯು (Question) ಕೇಳಿದ್ದು, ಈ ದೇಶದಲ್ಲಿ ವಾಸಿಸುವ ನಾಗರಿಕರನ್ನು ಏನೆಂದು ಕರೆಯುತ್ತಾರೆ ಎಂಬುದನ್ನು ಖಾಲಿ ಜಾಗದಲ್ಲಿ (Empty Space) ತುಂಬುವಂತೆ ವಿದ್ಯಾರ್ಥಿಗಳಿಗೆ ಸೂಚಿಸಲಾಗಿದೆ.


ಕಾಶ್ಮೀರವನ್ನು ಭಾರತದಿಂದ ಪ್ರತ್ಯೇಕಿಸಿರುವ ಪ್ರಶ್ನೆ ಪತ್ರಿಕೆ


ಈ ಕೆಳಗಿನ ದೇಶಗಳಲ್ಲಿ ವಾಸಿಸುವ ಜನರನ್ನು ಏನೆಂದು ಸಂಬೋಧಿಸಲಾಗುತ್ತದೆ ಎಂಬುದಾಗಿ ಪ್ರಶ್ನೆ ಇದ್ದು ಕೆಳಗೆ ಆಯ್ಕೆಗಳನ್ನು ನೀಡಲಾಗಿತ್ತು. ಚೀನಾದಲ್ಲಿ ವಾಸಿಸುವವರನ್ನು ಚೈನೀಸ್ ಎಂದು ಕರೆಯುತ್ತಾರೆ ಎಂಬ ಉದಾಹರಣೆಯ ಮೂಲಕ ಅಂತೆಯೇ ನೇಪಾಳದಲ್ಲಿ ವಾಸಿಸುವರನ್ನು ಏನೆಂದು ಕರೆಯುತ್ತಾರೆ? ಇಂಗ್ಲೆಂಡ್‌ನಲ್ಲಿ ವಾಸಿಸುವ ನಾಗರಿಕರನ್ನು ಹೇಗೆ ಕರೆಯುತ್ತಾರೆ ಮತ್ತು ಕಾಶ್ಮೀರದಲ್ಲಿ ವಾಸಿಸುವ ಜನರನ್ನು ಏನೆಂದು ಕರೆಯುತ್ತಾರೆ ಹಾಗೂ ಕೊನೆಯಲ್ಲಿ ಭಾರತದಲ್ಲಿ ವಾಸಿಸುವ ಜನರನ್ನು ಏನೆಂದು ಕರೆಯುತ್ತಾರೆ? ಎಂಬ ಪ್ರಶ್ನೆಗಳನ್ನು ಹೊಂದಿದೆ.


ಸಣ್ಣ ಪ್ರಮಾದವೆಂದು ಹೇಳಿರುವ ಶಾಲಾ ಮಂಡಳಿ


ಪ್ರಶ್ನೆಪತ್ರಿಕೆಯಲ್ಲಿರುವ ಪ್ರಶ್ನೆಯು ಒಂದೋ ಟೈಪಿಂಗ್ ಪ್ರಮಾದದಿಂದ ಅಥವಾ ಇನ್ಯಾವುದೋ ದೋಷದಿಂದ ಉಂಟಾಗಿರಬಹುದು ಆದರೆ ಇದನ್ನು ಅನಗತ್ಯವಾಗಿ ದೊಡ್ಡದು ಮಾಡಲಾಗುತ್ತಿದೆ ಎಂದು ಜಿಲ್ಲಾ ಶಿಕ್ಷಣಾಧಿಕಾರಿ ಸುಭಾಷ್ ಕುಮಾರ್ ಗುಪ್ತಾ ತಿಳಿಸಿದ್ದಾರೆ.


ಶಾಲಾ ಆಡಳಿತ ಮಂಡಳಿ ಕೂಡ ದೋಷವನ್ನು ಗಮನಾರ್ಹ ಎಂದು ಪರಿಗಣಿಸದೇ ಇದು ಮಾನವ ನಿರ್ಮಿತ ದೋಷ ಎಂದು ಹಾರಿಕೆಯ ಉತ್ತರವನ್ನು ನೀಡಿದೆ. ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಶಾಲಾ ಮುಖ್ಯಸ್ಥರಾದ ಎಸ್‌.ಕೆ ದಾಸ್, ಬಿಹಾರ್ ಶಿಕ್ಷಣ ಮಂಡಳಿಯ ಮೂಲಕ ಪ್ರಶ್ನೆಪತ್ರಿಕೆ ನಮಗೆ ದೊರಕಿದೆ.


ಇದನ್ನೂ ಓದಿ: ತಿರುಪತಿ ದರ್ಶನದ ಸಮಯದಲ್ಲಿ ಮಹತ್ವದ ಬದಲಾವಣೆ


ಕಾಶ್ಮೀರದ ಜನರನ್ನು ಏನೆಂದು ಕರೆಯುತ್ತಾರೆ ಎಂಬುದು ಸರಿಯಾದ ಪ್ರಶ್ನೆಯಾಗಿದೆ ಆದರೆ ತಪ್ಪಾಗಿ ಕಾಶ್ಮೀರ ದೇಶದ ಜನರನ್ನು ಏನೆಂದು ಕರೆಯುತ್ತಾರೆ ಎಂಬುದಾಗಿ ಮುದ್ರಿತವಾಗಿದೆ ಇದು ಮಾನವ ನಿರ್ಮಿತ ದೋಷ ಎಂದು ತಿಳಿಸಿದ್ದಾರೆ.


ನಿತೀಶ್ ಕುಮಾರ್ ಆಡಳಿತದ ವಿರುದ್ಧ ಬಿಜೆಪಿ ವಾಗ್ದಾಳಿ


ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ನಿತೀಶ್ ಕುಮಾರ್ ಸರಕಾರದ ವಿರುದ್ಧ ವಾಗ್ಧಾಳಿ ನಡೆಸಿರುವ ಬಿಹಾರದ ಬಿಜೆಪಿ ಅಧ್ಯಕ್ಷ ಸಂಜಯ್ ಜೈಸ್ವಾಲ್, ಸಂಯುಕ್ತ ಜನತಾ ದಳವು (ಯುನೈಟೆಡ್) ಕಾಶ್ಮೀರವನ್ನು ಭಾರತದ ಭಾಗವೆಂದು ಪರಿಗಣಿಸುವುದಿಲ್ಲ ಎಂದು ಹೇಳಿದ್ದಾರೆ. ಇಡೀ ಸೀಮಾಂಚಲ್ ಪ್ರದೇಶದಲ್ಲಿ ಹಿಂದಿ ಶಾಲೆಗಳನ್ನು ಮುಚ್ಚಲಾಗಿದೆ ಎಂದು ಅವರು ಆರೋಪಿಸಿದರು.


ಬಿಜೆಪಿ ಮಾಡಿರುವ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಜೆಡಿಯು ನಾಯಕ ಸುನೀಲ್ ಸಿಂಗ್, ಕಾಶ್ಮೀರವು ಭಾರತದ ಅವಿಭಾಜ್ಯ ಅಂಗವಾಗಿದೆ ಮತ್ತು ಬಿಜೆಪಿಯು ಅನಗತ್ಯ ವಿಚಾರವನ್ನು ದೊಡ್ಡುದು ಮಾಡುತ್ತಿದೆ ಎಂಬುದು ತಿಳಿದಿರುವ ವಿಷಯವೇ ಆಗಿದ್ದು ಯಾರೂ ಇದನ್ನು ಅಲ್ಲಗಳೆಯುವಂತಿಲ್ಲ ಎಂದು ಪ್ರತಿಪಾದಿಸಿದ್ದಾರೆ.


ಇಂಟರ್ನೆಟ್‌ನಲ್ಲಿ ಬಳಕೆದಾರರ ಪ್ರತಿಕ್ರಿಯೆಗಳು


ಬಿಹಾರದ ಗ್ರಾಮೀಣಾಭಿವೃದ್ಧಿ ಸಚಿವ ಶ್ರವಣ್ ಕುಮಾರ್ ಈ ಬಗ್ಗೆ ತನಿಖೆ ನಡೆಸಲಾಗುವುದು ಇದಕ್ಕೆ ನೈತಿಕ ಹೊಣೆಗಾರರು ಯಾರಾಗಿದ್ದರೂ ಅಂತಹ ತಪ್ಪಿತಸ್ಥರನ್ನು ಶಿಕ್ಷಿಸಲಾಗುವುದು ಮತ್ತು ಈ ವಿಷಯದಲ್ಲಿ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಖಚಿತಪಡಿಸಿದ್ದಾರೆ.


ಇದನ್ನೂ ಓದಿ: ಯುಕೆ ಆಡಳಿತವನ್ನು ಸಂಗೀತ ಕುರ್ಚಿ ಆಟಕ್ಕೆ ಹೋಲಿಸಿದ ಬ್ರಿಟನ್ ಮಾಧ್ಯಮಗಳು, ರಿಷಿ ಸುನಕ್ ಮುಂದಿನ ನಡೆ ಏನು?


ಇಂಟರ್ನೆಟ್‌ನಲ್ಲಿ ಈ ಪ್ರಶ್ನೆಪತ್ರಿಕೆ ಬಹುವಾಗಿಯೇ ಸದ್ದುಮಾಡುತ್ತಿದ್ದು ಇದು ಖಂಡಿತ ಮಾನವ ದೋಷವಲ್ಲ ಹಾಗಿದ್ದರೆ ಮುಂಬೈ ಮತ್ತು ದೆಹಲಿ ಕುರಿತು ಏಕೆ ಪ್ರಶ್ನಿಸಲಾಗಿಲ್ಲ? ಕಾಶ್ಮೀರವನ್ನೇ ಏಕೆ ತೆಗೆದುಕೊಳ್ಳಲಾಗಿದೆ? ಪ್ರಶ್ನೆಪತ್ರಿಕೆಯನ್ನು ಯಾರು ಸಿದ್ಧಪಡಿಸಿದ್ದಾರೆ ಎಂಬುದನ್ನು ಪರಿಶೀಲಿಸಿ ಎಂದು ಬಳಕೆದಾರರೊಬ್ಬರು ನೇರವಾಗಿಯೇ ಪ್ರಶ್ನಿಸಿದ್ದಾರೆ.


ಖಂಡಿತವಾಗಿಯೂ ಇದು ಮಾನವ ನಿರ್ಮಿತ ದೋಷವಲ್ಲ. ಬೇಕೆಂದೇ ಇದನ್ನು ಮಾಡಲಾಗಿದೆ. ಶಾಲಾ ಉಪಾಧ್ಯಾಯರೇ ಇಂತಹ ಪತ್ರಿಕೆಗಳನ್ನು ಸಿದ್ಧಪಡಿಸಿರುತ್ತಾರೆ ಎಂದರೂ ಅತಿಶಯೋಕ್ತಿಯಲ್ಲ ಎಂದು ತಿಳಿಸಿದ್ದಾರೆ. ಇನ್ನು ಶಾಲಾ ಮುಖ್ಯಸ್ಥರು ನೀಡಿರುವ ಹೇಳಿಕೆ ಸಮಂಜಸವಾದುದಲ್ಲ ಎಂದು ತಿಳಿಸಿರುವ ಬಳಕೆದಾರರು, ಕಾಶ್ಮೀರದ ಹೆಸರನ್ನು ಇತರ ದೇಶಗಳೊಂದಿಗೆ ಸೇರಿಸಿ ಕೇಳಲಾಗಿದೆ ಎಂದು ತಿಳಿಸಿದ್ದಾರೆ.

First published: