• Home
  • »
  • News
  • »
  • national-international
  • »
  • Bigg Boss: ಸಾಜಿದ್ ಖಾನ್ ವಿರುದ್ಧ ಕೆರಳಿದ ಶೆರ್ಲಿನ್ ಚೋಪ್ರಾ; FIR ದಾಖಲು

Bigg Boss: ಸಾಜಿದ್ ಖಾನ್ ವಿರುದ್ಧ ಕೆರಳಿದ ಶೆರ್ಲಿನ್ ಚೋಪ್ರಾ; FIR ದಾಖಲು

ಶೆರ್ಲಿನ್ ಚೋಪ್ರಾ ಮತ್ತು ಸಾಜಿದ್ ಖಾನ್

ಶೆರ್ಲಿನ್ ಚೋಪ್ರಾ ಮತ್ತು ಸಾಜಿದ್ ಖಾನ್

ಮೀಟೂ ಆಂದೋಲನದ ಸಮಯದಲ್ಲಿ ಅನೇಕ ಮಹಿಳೆಯರು ಸಾಜಿದ್ ವಿರುದ್ಧ ಮಾಡಿದ ಲೈಂಗಿಕ ದುರ್ನಡತೆಯ ಆರೋಪಗಳನ್ನು ಗೌರವಿಸಬೇಕು. ಅವರಿಗೆ ಮತ್ತೆ ಸಾರ್ವಜನಿಕ ವೇದಿಕೆಯಲ್ಲಿರಲು ಅವಕಾಶ ನೀಡಬಾರದು ಎಂದು ಹೇಳಿದ್ದಾರೆ.

  • Trending Desk
  • Last Updated :
  • New Delhi, India
  • Share this:

ಈಗಾಗಲೇ ಹಿಂದಿ ಭಾಷೆಯ ಬಿಗ್‌ಬಾಸ್ ಶೋ ನ ಸೀಸನ್ 16 (Bigg Boss Season 16) ಶುರುವಾಗಿದ್ದು, ಪ್ರತಿದಿನ ಯಾವುದಾದರೊಂದು ವಿಷಯಕ್ಕೆ ಸುದ್ದಿ ಮಾಡುತ್ತಿದೆ ಅಂತ ಹೇಳಬಹುದು. ಈಗ ಮತ್ತೆ ಸುದ್ದಿ ಮಾಡಿರುವುದು ಬಾಲಿವುಡ್ ನಿರ್ಮಾಪಕ ಸಾಜಿದ್ ಖಾನ್ ಅವರು ಶೋ ನಲ್ಲಿ ಕಾಣಿಸಿಕೊಂಡಿರುವುದಕ್ಕೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಏಕೆಂದರೆ ಹಿಂದಿ ಚಲನಚಿತ್ರೋದ್ಯಮದಲ್ಲಿ ಕೆಲಸ ಮಾಡುತ್ತಿರುವ ಮಹಿಳೆಯರಿಂದ ಸಾಜಿದ್ ಖಾನ್ (Sajid Khan) ಶೋನಲ್ಲಿ ಕಾಣಿಸಿಕೊಂಡಿರುವುದಕ್ಕೆ ತೀವ್ರವಾದ ಆಕ್ಷೇಪಗಳು ಕೇಳಿ ಬಂದಿದ್ದವು ಅಂತ ಹೇಳಬಹುದು.


ಚಲನಚಿತ್ರ ನಿರ್ಮಾಪಕ ಸಾಜಿದ್ ಖಾನ್ ಅವರನ್ನು 2018 ರ ಮೀಟೂ ಆಂದೋಲನದಲ್ಲಿ ಸಲೋನಿ ಚೋಪ್ರಾ ಎಂಬ ಅವರ ಸಹಾಯಕಿ ಅವರ ಮೇಲೆ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದು ಎಲ್ಲರಿಗೂ ಗೊತ್ತಿರುವ ವಿಚಾರವೇ ಆಗಿದೆ. ಈಗ ಸಾಜಿದ್ ಅವರು ಬಿಗ್‌ಬಾಸ್ ಶೋ ಕಾಣಿಸಿಕೊಂಡಿದ್ದು, ಅವರನ್ನು ಶೋ ದಿಂದ ಹೊರಹಾಕಬೇಕು ಅಂತ ಅನೇಕ ಮಹಿಳೆಯರು ಕೇಳಿಕೊಳ್ಳುತ್ತಿದ್ದಾರೆ.


ಸಾಜಿದ್ ವಿರುದ್ಧ ದೂರು ದಾಖಲಿಸಿದ ಶೆರ್ಲಿನ್!
ಶೆರ್ಲಿನ್ ಚೋಪ್ರಾ ಮುಂಬೈನ ಜುಹು ಪೊಲೀಸ್ ಠಾಣೆಯಲ್ಲಿ ಚಲನಚಿತ್ರ ನಿರ್ಮಾಪಕ ಸಾಜಿದ್ ಖಾನ್ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದಾರೆ. 2005 ರಲ್ಲಿ ತನಗೆ ಕಿರುಕುಳ ನೀಡಿದ ನೋವಿನ ಘಟನೆಯನ್ನು ಗಮನಕ್ಕೆ ತರಲು ನಟಿ ಈ ರೀತಿ ಮಾಡಿದ್ದಾರೆ.


ರಾಷ್ಟ್ರೀಯ ಮಹಿಳಾ ಆಯೋಗಕ್ಕೂ ದೂರು
ಶೆರ್ಲಿನ್ ಅವರ ವಕ್ತಾರರು ಸುದ್ದಿ ಮಾಧ್ಯಮದ ಜೊತೆಯಲ್ಲಿ ಮಾತನಾಡಿ "ನಾವು ಸೆಕ್ಷನ್ ಗಳನ್ನು ಬಹಿರಂಗಪಡಿಸಲು ಬಯಸುವುದಿಲ್ಲ. ಆದರೆ ಮಹಿಳೆಯ ವಿನಯತೆಯನ್ನು ಕೆರಳಿಸಿದ್ದ ಆರೋಪದಡಿಯಲ್ಲಿ ದೂರು ದಾಖಲಿಸಿದ್ದೇವೆ. ಅವರು ತಮ್ಮ ಇಮೇಜ್ ಗೆ ಬಣ್ಣ ಬಳಿಯಲು ಬಿಗ್‌ಬಾಸ್ ಶೋಗೆ ಬಂದಿದ್ದಾರೆ ಎಂಬುದನ್ನು ಸಹ ನಾವು ಉಲ್ಲೇಖಿಸಿದ್ದೇವೆ" ಎಂದಿದ್ದಾರೆ. ಶೆರ್ಲಿನ್ ಚೋಪ್ರಾ ಅವರು ಜಿಲ್ಲಾಧಿಕಾರಿ ಮತ್ತು ರಾಷ್ಟ್ರೀಯ ಮಹಿಳಾ ಆಯೋಗಕ್ಕೂ ಸಹ ದೂರು ನೀಡಿದ್ದಾರೆ.


ಎಫ್ಐಆರ್ ದಾಖಲು
ಅವರ ವಕೀಲ ಸೊಹೈಲ್ ಶರೀಫ್ ಈ ಬೆಳವಣಿಗೆಗಳನ್ನು ವಿವರಿಸಿ "ಶೆರ್ಲಿನ್ ಅವರು ಸಾಜಿದ್ ಖಾನ್ ವಿರುದ್ಧ ವಿವಿಧ ಸೆಕ್ಷನ್ ಗಳ ಅಡಿಯಲ್ಲಿ ಪೊಲೀಸ್ ದೂರು ದಾಖಲಿಸಿದ್ದಾರೆ ಮತ್ತು ಮಹಿಳೆಯ ವಿನಯವನ್ನು ಕೆರಳಿಸಿದ್ದಕ್ಕಾಗಿ ಸೆಕ್ಷನ್ 354 ರ ಅಡಿಯಲ್ಲಿ ಸಾಜಿದ್ ವಿರುದ್ಧ ಎಫ್ಐಆರ್ ದಾಖಲಿಸಲು ಅವರು ಈಗಾಗಲೇ ಜುಹು ಪೊಲೀಸ್ ಠಾಣೆಗೆ ತೆರಳಿದ್ದಾರೆ ಎಂದು ಹೇಳಿದರು. 


ಬಿಗ್ಬಾಸ್ ಶೋನಿಂದ ಸಾಜಿದ್ ಅವರನ್ನು ಅಮಾನತುಗೊಳಿಸಬೇಕು ಎಂದ ಶೆರ್ಲಿನ್
ಬಿಗ್‌ಬಾಸ್ ಶೋನಿಂದ ಸಾಜಿದ್ ಅವರನ್ನು ಅಮಾನತುಗೊಳಿಸಬೇಕು ಎಂಬುದು ಶೆರ್ಲಿನ್ ಅವರ ಷರತ್ತುಗಳಲ್ಲಿ ಒಂದಾಗಿದೆ. ಅವರು ಈಗಾಗಲೇ ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರಿಗೂ ಈ ಕುರಿತು ಪತ್ರವನ್ನು ಬರೆದಿದ್ದಾರೆ. ಒಂದೆರಡು ದಿನಗಳಲ್ಲಿ, ಸಾಜಿದ್ ಇರುವ ಬಿಗ್‌ಬಾಸ್ ನ ಎಲ್ಲಾ ಎಪಿಸೋಡ್ ಗಳನ್ನು ಪ್ರಸಾರ ಮಾಡುವುದನ್ನು ನಿಲ್ಲಿಸುವಂತೆ ನಾವು ಕಲರ್ಸ್ ಟಿವಿಗೆ ನೋಟಿಸ್ ಸಹ ನೀಡುತ್ತಿದ್ದೇವೆ ಎಂದು ಹೇಳಿದರು.


ಇದನ್ನೂ ಓದಿ: Serial Timings: ಜೊತೆ ಜೊತೆಯಲಿ ಸೀರಿಯಲ್‍ಗೆ ಶಾಕ್, ರಾತ್ರಿ 8.30ಕ್ಕೆ ಶ್ರೀರಸ್ತು ಶುಭಮಸ್ತು !


ಬಿಗ್‌ಬಾಸ್ ಶೋನಲ್ಲಿ ಸಾಜಿದ್ ಕಾಣಿಸಿಕೊಳ್ಳುತ್ತಿರುವುದಕ್ಕೆ ಚಿತ್ರರಂಗದ ಮಹಿಳೆಯೊಬ್ಬರು ಆಕ್ಷೇಪ ವ್ಯಕ್ತಪಡಿಸಿರುವುದು ಇದೇನು ಮೊದಲೇನಲ್ಲ. ನಟಿ ತನುಶ್ರೀ ದತ್ತಾ ಅವರು ಭಾರತದಲ್ಲಿ ಮೀಟೂ ಆಂದೋಲನವನ್ನು ಪ್ರಾರಂಭಿಸಿದ ಮೊದಲ ಮಹಿಳೆಯರಲ್ಲಿ ಒಬ್ಬರು ಎಂದು ವ್ಯಾಪಕವಾಗಿ ಪರಿಗಣಿಸಲ್ಪಟ್ಟಿದ್ದಾರೆ.


ಕೆಲವು ದಿನಗಳ ಹಿಂದೆ ಅವರು ಸಾಜಿದ್ ಅವರನ್ನು ಬಿಗ್‌ಬಾಸ್ ನ ಹೊಸ ಸೀಸನ್ ಗೆ ಕಾಸ್ಟಿಂಗ್ ಮಾಡಲು ಆಕ್ಷೇಪ ವ್ಯಕ್ತಪಡಿಸಿದ್ದರು. ಗಾಯಕಿ ಸೋನಾ ಮಹಾಪಾತ್ರ ಮತ್ತು ನಟ ಅಲಿ ಫಜಲ್ ಸಹ ಕಾರ್ಯಕ್ರಮದಲ್ಲಿ ಸಾಜಿದ್ ಖಾನ್ ಭಾಗಿಯಾಗಿರುವ ಬಗ್ಗೆ ಪ್ರತಿಕ್ರಿಯಿಸಿದ್ದಾರೆ ಮತ್ತು ಅವರನ್ನು ಟಿವಿ ಶೋ ನಿಂದ ತೆಗೆದು ಹಾಕಬೇಕೆಂದು ಒತ್ತಾಯಿಸಿದ್ದಾರೆ.


ಇದನ್ನೂ ಓದಿ: Red carpet: ಸ್ಟಾರ್‌ ಮಕ್ಕಳಿಗೆ ರೆಡ್‌ ಕಾರ್ಪೆಟ್‌ ಹಾಕಿರೋದಿಲ್ಲ: ತುಷಾರ್‌ ಕಪೂರ್


ಮೀಟೂ ಆಂದೋಲನದ ಸಮಯದಲ್ಲಿ ಅನೇಕ ಮಹಿಳೆಯರು ಸಾಜಿದ್ ವಿರುದ್ಧ ಮಾಡಿದ ಲೈಂಗಿಕ ದುರ್ನಡತೆಯ ಆರೋಪಗಳನ್ನು ಗೌರವಿಸಬೇಕು. ಅವರಿಗೆ ಮತ್ತೆ ಸಾರ್ವಜನಿಕ ವೇದಿಕೆಯಲ್ಲಿರಲು ಅವಕಾಶ ನೀಡಬಾರದು ಎಂದು ಹೇಳಿದ್ದಾರೆ.

Published by:ಗುರುಗಣೇಶ ಡಬ್ಗುಳಿ
First published: