ಡ್ರಗ್ ಪಾರ್ಟಿ ಮೇಲೆ ಪೊಲೀಸರ ದಾಳಿ: ಬಿಗ್​​ಬಾಸ್​ ಮಾಜಿ ಸ್ಪರ್ಧಿ, ನಟಿಯರ ಅಸಲಿಯತ್ತು ಬಯಲು!

ರೇವ್​ ಪಾರ್ಟಿಯಲ್ಲಿ ಭಾಗಿಯಾಗಿದ್ದ ಬಹುತೇಕರು ಸಿನಿಮಾ, ಕಿರುತೆರೆ, ರಿಯಾಲಿಟಿ ಶೋ, ವೆಬ್​ ಸಿರೀಸ್​ಗಳಲ್ಲಿ ಕಾಣಿಸಿಕೊಂಡಿರುವ ಸೆಲೆಬ್ರೆಟಿಗಳು. ಬಂಧಿತ ನಟಿ ಹೀನಾ ಪಂಚಾಲ್​​​ ಮರಾಠಿಯ ಬಿಗ್​ಬಾಸ್​ 2ನೇ ಸೀಸನ್​ನಲ್ಲಿ ವೈಲ್ಡ್​​ ಕಾರ್ಟ್​​ ಎಂಟ್ರಿಯಾಗಿ ಸ್ಪರ್ಧಿಸಿದ್ದರು.

ನಟಿ ಹೀನಾ ಪಂಚಾಲ್​​

ನಟಿ ಹೀನಾ ಪಂಚಾಲ್​​

  • Share this:
ನಾಸಿಕ್​​: ಡ್ರಗ್​​ ಪಾರ್ಟಿ ಮೇಲೆ ದಾಳಿ ನಡೆಸಿದ ಪೊಲೀಸರು ಬಿಗ್​ಬಾಸ್​ ಮರಾಠಿಯ ಮಾಜಿ ಸ್ಪರ್ಧಿ, ನಟಿ ಹೀನಾ ಪಂಚಾಲ್​​ನ ಬಂಧಿಸಿದ್ದಾರೆ. ಶನಿವಾರ ರಾತ್ರಿ ಇಲ್ಲಿನ ಇಗಾತಪುರಿಯ ಎರಡು ಬಂಗಲೆಗಳಲ್ಲಿ ಮರಾಠಿ ನಟಿ, ಮಾಡೆಲ್​​ಗಳು, ಬಾಲಿವುಡ್​​ನ​​ ಕೋರಿಯೋಗ್ರಾಫರ್​​ ಸೇರಿದಂತೆ 22 ಮಂದಿ ರೇವ್​ ಪಾರ್ಟಿ ನಡೆಸುತ್ತಿದ್ದದ್ದು ಪೊಲೀಸರ ರೇಡ್​ನಿಂದ ಬಯಲಾಗಿದೆ. 22 ಮಂದಿನೂ ಪಾರ್ಟಿಯಲ್ಲಿ ಕೊಕೇನ್​​, ಮಾರಿಜೋನಾ ಸೇರಿದಂತೆ ಇನ್ನು ಕೆಲ ಮಾದಕ ವಸ್ತುಗಳನ್ನು ಸೇವಿಸುತ್ತಿದ್ದರು ಎಂದು ದಾಳಿ ಬಳಿಕ ಪೊಲೀಸರು ತಿಳಿಸಿದ್ದಾರೆ.

ಬಂಧಿತರಲ್ಲಿ 10 ಮಂದಿ ಪುರುಷರು, 12 ಮಂದಿ ಯುವತಿಯರು ಇದ್ದಾರೆ. 6 ಮಂದಿ ಯುವತಿಯರು ಮಾಡೆಲ್​ ಹಾಗೂ ಬಾಲಿವುಡ್​ ನಟಿಯರು ಎಂದು ತಿಳಿದು ಬಂದಿದೆ. ರೇವ್​ ಪಾರ್ಟಿಯಲ್ಲಿ ಭಾಗಿಯಾಗಿದ್ದ ಬಹುತೇಕರು ಸಿನಿಮಾ, ಕಿರುತೆರೆ, ರಿಯಾಲಿಟಿ ಶೋ, ವೆಬ್​ ಸಿರೀಸ್​ಗಳಲ್ಲಿ ಕಾಣಿಸಿಕೊಂಡಿರುವ ಸೆಲೆಬ್ರೆಟಿಗಳು. ಬಂಧಿತ ನಟಿ ಹೀನಾ ಪಂಚಾಲ್​​​ ಮರಾಠಿಯ ಬಿಗ್​ಬಾಸ್​ 2ನೇ ಸೀಸನ್​ನಲ್ಲಿ ವೈಲ್ಡ್​​ ಕಾರ್ಟ್​​ ಎಂಟ್ರಿಯಾಗಿ ಸ್ಪರ್ಧಿಸಿದ್ದರು. ಬಿಗ್​ಬಾಸ್​ ಫೈನಲ್​ಗೂ ಮುನ್ನ ಎಲಿಮಿನೇಷನ್​ ಆಗಿದ್ದ ನಟಿ ಹಿಂದಿ, ಮರಾಠಿ, ತೆಲಗು ಹಾಗೂ ತಮಿಳಿನ ಐಟಂ ಸಾಂಗ್​ನಲ್ಲಿ ಕುಣಿದಿದ್ದಾರೆ.

ಇದನ್ನೂ ಓದಿ: ಅತ್ತೆ ಮೇಲೆ ಕುದಿಯುವ ಎಣ್ಣೆ ಸುರಿದ ಸೊಸೆ: ಇಬ್ಬರ ಜಗಳಕ್ಕೆ ಕಾರಣವಾಗಿದ್ದು ಸರ್ಕಾರದ ಅದೊಂದು ನಿರ್ಧಾರ!

ನಾಸಿಕ್​ ಎಸ್​​ಪಿ ಅವರು ಖಚಿತ ಮಾಹಿತಿ ಮೇರೆಗೆ ಖಾಸಗಿ ವಿಲ್ಲಾ ಮೇಲೆ ದಾಳಿ ನಡೆಸಿದ್ದರು. ಮಧ್ಯರಾತ್ರಿ 2:30ರ ಸುಮಾರಿಗೆ ಮಾದಕವಸ್ತು ಸೇವಿಸಿ ನಶೆಯಲ್ಲಿದ್ದ ಎಲ್ಲಾ 22 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಇನ್ನು ಮುಂಬೈ ನಿವಾಸಿ ಪಿಯೂಷ್​ ಸೇತಿಯಾ ಎಂಬುವರ ಬರ್ತ್​​ ಪಾರ್ಟಿ ಇದಾಗಿದ್ದು, ಸೆಲೆಬ್ರೆಟಿಗಳು ರೇವ್​ ಪಾರ್ಟಿ ಮಾಡಿಕೊಂಡಿದ್ದರು ಎಂಬ ಮಾಹಿತಿ ಲಭಿಸಿದೆ. ಬಂಧಿತ ಮರಾಠಿ ನಟಿ ಹೀನಾ ಪಂಚಾಲ್​ರನ್ನು ಪೊಲೀಸರು ಕೋರ್ಟ್​​ ಮುಂದೆ ಹಾಜರುಪಡಿಸಲಿದ್ದಾರೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಕೊರೊನಾ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
Published by:Kavya V
First published: