ಮಾಜಿ ಬಿಗ್ ಬಾಸ್ ಸ್ಪರ್ಧಿಯೋರ್ವರಿಗೆ ಕೊಲೆ ಬೆದರಿಕೆ ಹಾಕಲಾಗಿದೆ. 'ಬಿಗ್ ಬಾಸ್ 10' ರ ಸ್ಪರ್ಧಿ ಮನು ಪಂಜಾಬಿ (Manu Punjabi Life Threat) ತಮಗೆ ಕೊಲೆ ಬೆದರಿಕೆ ಬಂದಿರುವುದಾಗಿ ತಿಳಿಸಿದ್ದಾರೆ. ಇತ್ತೀಚಿಗಷ್ಟೇ ಪಂಜಾಬಿ ರಾಪರ್ ಸಿಧು ಮೂಸೆವಾಲಾ (Sidhu Moose Wala) ಅವರಂತೆ ನನ್ನನ್ನೂ ಕೊಲ್ಲುವುದಾಗಿ ಬೆದರಿಕೆ ಹಾಕಿರುವ ಬಗ್ಗೆ ಟ್ವಿಟರ್ನಲ್ಲಿ ಪೋಸ್ಟ್ ಅನ್ನು ಮನು ಪಂಜಾಬಿ ಹಂಚಿಕೊಂಡಿದ್ದಾರೆ. ಅಲ್ಲದೇ ಈ ರೀತಿ ಕೊಲೆ ಬೆದರಿಕೆ ಹಾಕಿದ್ದ ವ್ಯಕ್ತಿಯನ್ನು ಈಗ ಪೊಲೀಸರು ಬಂಧಿಸಿದ್ದು ರಕ್ಷಣ ನೀಡಿದ್ದಕ್ಕಾಗಿ ಮನು ಪಂಜಾಬಿ ಪೊಲೀಸರಿಗೆ ಧನ್ಯವಾದ ಅರ್ಪಿಸಿದ್ದಾರೆ. ವರದಿಗಳ ಪ್ರಕಾರ ಹಣ ಕೊಡದೇ ಇದ್ದಲ್ಲಿ ಸಿದ್ದು ಮೂಸೆವಾಲಾ ಅವರಂತೆ ಗುಂಡಿಕ್ಕಿ ಸಾಯಿಸುವುದಾಗಿ ಕೊಲೆ ಬೆದರಿಕೆ ಹಾಕಲಾಗಿತ್ತು
ಚಿತ್ರಕೂಟ ಪೊಲೀಸರು 31 ವರ್ಷದ ವ್ಯಕ್ತಿಯನ್ನು ಬಂಧಿಸಿದ್ದಾರೆ. ಬಂಧಿತ ವ್ಯಕ್ತಿ ಬಿಗ್ ಬಾಸ್ ಸ್ಪರ್ಧಿ ಮನು ಪಂಜಾಬಿಗೆ 10 ಲಕ್ಷ ರೂಪಾಯಿಗಳನ್ನು ಸುಲಿಗೆಯಾಗಿ ನೀಡುವಂತೆ ಇಮೇಲ್ ಕಳುಹಿಸಿದ್ದ ಎನ್ನಲಾಗಿದೆ.
Ifeel blessed and thankful to @Tomarhricha
Add SP RamSingh ji
Comm Anand shrivtastav ji @jaipur_police to provide me security & find out the culprit.Igot email,claiming to be from gang of #SidhuMooseWala murderers demanding 10Lakh or else they would killme.Last week was stressful pic.twitter.com/BD6k5i226R
— Manu Punjabi (@manupunjabim3) June 29, 2022
ಕುಖ್ಯಾತ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ನ ಸದಸ್ಯನಂತೆ
ಅಲ್ಲದೇ ಬಂಧಿತ ಆರೋಪಿ ತಾನು ಕುಖ್ಯಾತ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ನ ಸದಸ್ಯ ಎಂದು ಹೇಳಿಕೊಂಡಿದ್ದಾನೆ. ಉತ್ತರ ಪ್ರದೇಶದ ಬಿಜ್ನೋರ್ ಪ್ರದೇಶದಲ್ಲಿ ಬಂಧಿಸಲಾಗಿದೆ. ಪೊಲೀಸ್ ಉಪ ಕಮಿಷನರ್ ಆಗಿರುವ ರಿಚಾ ತೋಮರ್ ತನಿಖೆ ಆರಂಭಿಸಿದ್ದಾರೆ.
ಏನಿದು ಸಿಧು ಮೂಸೆವಾಲಾ ಹತ್ಯೆ ಪ್ರಕರಣ?
ಪಂಜಾಬ್ನಲ್ಲಿ ಸಿಧು ಮೂಸೆವಾಲಾ ಅವರನ್ನು ಹಗಲು ಹೊತ್ತಿನಲ್ಲಿಯೇ ಭೀಕರವಾಗಿ ಹತ್ಯೆ ಮಾಡಲಾಗಿತ್ತು. ಭೀಕರ ಹತ್ಯೆಯು ಇಡೀದೇಶದಲ್ಲಿ ಭಾರೀ ಆಘಾತ ಉಂಟುಮಾಡಿತ್ತು.
ಇದನ್ನೂ ಓದಿ:Agnipath Recruitment: ಅಗ್ನಿವೀರರಾಗಲು ಅತ್ಯುತ್ಸಾಹ; 6 ದಿನಗಳಲ್ಲಿ ಒಟ್ಟು 1.83 ಲಕ್ಷಕ್ಕೂ ಹೆಚ್ಚು ಅರ್ಜಿ!
ಸಿಧು ಮೂಸೆ ವಾಲಾ ಅವರು ಡಿಸೆಂಬರ್ 2021 ರಲ್ಲಿ ಕಾಂಗ್ರೆಸ್ ಪಕ್ಷವನ್ನು ಸೇರಿದರು ಮತ್ತು 2022 ರ ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದರು. ಆದರೆ, ಅವರು ಎಎಪಿಯ ವಿಜಯ್ ಸಿಂಗ್ಲಾ ವಿರುದ್ಧ ಸೋತರು. ಕೇವಲ 28 ವರ್ಷ ವಯಸ್ಸಿನ ಸಿಧು ಮೂಸೆ ವಾಲಾ ಅವರನ್ನು ಮೇ 29 ರಂದು ಗುಂಡಿಕ್ಕಿ ಕೊಲ್ಲಲಾಗಿತ್ತು.
ಸಿಧು ದೇಹದಲ್ಲಿ 19 ಗುಂಡಿನ ಗಾಯ
ಪಂಜಾಬಿ ಗಾಯಕ ಸಿಧು ಮೂಸೆವಾಲಾ ಅವರಿಗೆ 19 ಗುಂಡುಗಳನ್ನು ಹಾರಿಸಲಾಗಿದ್ದು 15 ನಿಮಿಷಗಳಲ್ಲಿ ಸಾವನ್ನಪ್ಪಿದ್ದರು ಎಂದು ಅವರ ಶವಪರೀಕ್ಷೆ ವರದಿ ಹೇಳಿತ್ತು. ಪಂಜಾಬ್ನ ಮಾನ್ಸಾ ಜಿಲ್ಲೆಯಲ್ಲಿ ಭಾನುವಾರ ಮೂಸೆವಾಲಾ ಅವರನ್ನು ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದಾರು. ರಾಜ್ಯ ಸರ್ಕಾರವು ಅವರ ಭದ್ರತೆಯನ್ನು ಕತ್ತರಿಸಿದ ಒಂದು ದಿನದ ನಂತರ ಈ ಘಟನೆ ನಡೆದಿತ್ತು.
ಇದನ್ನೂ ಓದಿ: Urfi Javed: ಉದಯಪುರ ಟೈಲರ್ ಭೀಕರ ಹತ್ಯೆ ವಿರುದ್ಧ ಉರ್ಫಿ ಜಾವೇದ್ ಕಿಡಿಕಿಡಿ
ಜವಾಹರ್ ಕೆ ಗ್ರಾಮದಲ್ಲಿ 28 ವರ್ಷದ ಮೂಸೆವಾಲಾ ಅವರ ವಾಹನವನ್ನು ಅಡ್ಡಗಟ್ಟಿದ ನಂತರ ದುಷ್ಕರ್ಮಿಗಳು ಗುಂಡುಗಳನ್ನು ಎರಚಿದ್ದರು. ಕನಿಷ್ಠ ಮೂರು ಶಸ್ತ್ರಾಸ್ತ್ರಗಳನ್ನು ಬಳಸಲಾಗಿದೆ ಮತ್ತು ಸೈಟ್ನಿಂದ ಮೂವತ್ತು ಖಾಲಿ ಪ್ರಕರಣಗಳು ಕಂಡುಬಂದಿವೆ. ಐವರು ವೈದ್ಯರ ಸಮಿತಿ ಮೂಸೆವಾಲಾ ಅವರ ಮರಣೋತ್ತರ ಪರೀಕ್ಷೆ ನಡೆಸಿತ್ತು. ಗಾಯವನ್ನು ಸ್ವೀಕರಿಸಿದ 15 ನಿಮಿಷಗಳಲ್ಲಿ ಗಾಯಕ ಬಹುಶಃ ಸಾವನ್ನಪ್ಪಿದ್ದಾನೆ ಎಂದು ಶವಪರೀಕ್ಷೆ ವರದಿ ಹೇಳಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ