ಪಾಕ್​ ಮಾಜಿ ಪ್ರಧಾನಿ ನವಾಜ್​ ಶರೀಫ್​ಗೆ ಬಿಗ್​ ರಿಲೀಫ್​; ಬಿಡುಗಡೆಗೆ ಆದೇಶಿಸಿದ ಕೋರ್ಟ್​

Sharath Sharma Kalagaru | news18
Updated:September 19, 2018, 5:23 PM IST
ಪಾಕ್​ ಮಾಜಿ ಪ್ರಧಾನಿ ನವಾಜ್​ ಶರೀಫ್​ಗೆ ಬಿಗ್​ ರಿಲೀಫ್​; ಬಿಡುಗಡೆಗೆ ಆದೇಶಿಸಿದ ಕೋರ್ಟ್​
ನವಾಜ್​ ಶರೀಫ್​
  • News18
  • Last Updated: September 19, 2018, 5:23 PM IST
  • Share this:
ಇಸ್ಲಾಮಾಬಾದ್​: ಪಾಕಿಸ್ತಾನ ಮಾಜಿ ಪ್ರಧಾನಿ ನವಾಜ್​ ಶರೀಫ್​ ಮತ್ತು ಮಗಳು ಮರಿಯಮ್​ ನವಾಜ್​ಗೆ ನ್ಯಾಯಾಲಯದಿಂದ ಬಿಗ್​ ರಿಲೀಫ್​ ಸಿಕ್ಕಿದೆ. ಪಾಕಿಸ್ತಾನದ ಇಸ್ಲಾಮಾಬಾದ್​ ಹೈಕೋರ್ಟ್​ ನವಾಜ್​ ಶರೀಫ್​ ಮತ್ತ ಮರಿಯಮ್​ರನ್ನು ಶೀಘ್ರದಲ್ಲೇ ಬಿಡುಗಡೆಗೊಳಿಸುವಂತೆ ಜೈಲು ಅಧಿಕಾರಿಗಳಿಗೆ ಆದೇಶಿಸಿದೆ.

ಪನಾಮ ಪೇಪರ್ಸ್​ನಲ್ಲಿ ನವಾಜ್​ ಶರೀಫ್​ ಅಕ್ರಮ ಹಣಗಳಿಸಿ ಲಂಡನ್​ನಲ್ಲಿ ಐಷಾರಾಮಿ ಬಂಗಲೆಗಳು ಮತ್ತು ಆಸ್ತಿಯನ್ನು ಮಾಡಿರುವ ಬಗ್ಗೆ ಉಲ್ಲೇಖಿಸಲಾಗಿತ್ತು. ದಾಖಲೆಗಳ ಸಮೇತ ಪನಾಮ ಪೇಪರ್ಸ್​ನಲ್ಲಿ ನವಾಜ್​ ಶರೀಫ್​ ಸೇರಿದಂತೆ ಪ್ರಪಂಚದ ಹಲವು ಗಣ್ಯರ ಭ್ರಷ್ಟಾಚಾರವನ್ನು ಬೆಳಕಿಗೆ ತರಲಾಗಿತ್ತು. ಇದರ ಬೆನ್ನಲ್ಲೇ ಪಾಕಿಸ್ತಾನ ಸುಪ್ರೀಂ ಕೋರ್ಟ್​ ನವಾಜ್​ ಶರೀಫ್​ರನ್ನು ಪ್ರಧಾನಿ ಹುದ್ದೆಯಿಂದ ವಜಾಗೊಳಿಸಿ ಐತಿಹಾಸಿಕ ತೀರ್ಪು ನೀಡಿತ್ತು.

ಪಾಕಿಸ್ತಾನ ಚುನಾವಣೆ ಇನ್ನೇನು ಹತ್ತಿರವಿದೆ ಎಂಬಾಗ ಶರೀಫ್​ರಿಗೆ 10 ವರ್ಷ​, ಮಗಳು ಮರಿಯಮ್​ರಿಗೆ 7 ವರ್ಷ ಕಾರಾಗೃಹ ಶಿಕ್ಷೆ ವಿಧಿಸಿ ಕೋರ್ಟ್​ ಆದೇಶಿಸಿತ್ತು. ಆದರೆ ಇದೀಗ ನವಾಜ್​ ಶರೀಫ್​ ಪರ ವಕೀಲರು ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ಇಸ್ಲಾಮಾಬಾದ್​ ನ್ಯಾಯಾಲಯ. ಆರ್ಥಿಕ ಅಪರಾಧಗಳ ನ್ಯಾಯಾಲಯ ನೀಡಿದ್ದ ತೀರ್ಪನ್ನು ವಜಾಗೊಳಿಸಿದೆ.
First published: September 19, 2018, 4:08 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading