Punjab BJP: ಕಾಂಗ್ರೆಸ್​ಗೆ ಹೊಡೆತ, ಅಮಿತ್ ಶಾ ಸಮ್ಮುಖದಲ್ಲಿ ಐವರು ನಾಯಕರು ಬಿಜೆಪಿಗೆ ಸೇರ್ಪಡೆ

ಪಂಜಾಬ್‌ನಲ್ಲಿ ಐದು ಪ್ರಮುಖ ನಾಯಕರು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಶನಿವಾರ ಚಂಡೀಗಢದ ಬಿಜೆಪಿ ಪಕ್ಷದ ಕಚೇರಿಯಲ್ಲಿ ಐವರು ಕಾಂಗ್ರೆಸ್ ಮುಖಂಡರಯ ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಸೇರಿದರು.

ಬಿಜೆಪಿ ಸೇರಿದ ಕಾಂಗ್ರೆಸ್​ನ ಐವರು ಮುಖಂಡರು

ಬಿಜೆಪಿ ಸೇರಿದ ಕಾಂಗ್ರೆಸ್​ನ ಐವರು ಮುಖಂಡರು

  • Share this:
ದೆಹಲಿ(ಜೂ.05): ಕಾಂಗ್ರೆಸ್‌ಗೆ ದೊಡ್ಡ ಹೊಡೆತ ಸಿಕ್ಕಿದ್ದು ಇತ್ತೀಚಿನ ಬೆಳವಣಿಗೆಯಲ್ಲಿ, ಪಂಜಾಬ್‌ನಲ್ಲಿ (Punjab) ಐದು ಪ್ರಮುಖ ನಾಯಕರು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಶನಿವಾರ ಚಂಡೀಗಢದ ಬಿಜೆಪಿ ಪಕ್ಷದ ಕಚೇರಿಯಲ್ಲಿ ಐವರು ಕಾಂಗ್ರೆಸ್ ಮುಖಂಡರಯ ಭಾರತೀಯ ಜನತಾ ಪಕ್ಷಕ್ಕೆ (BJP) ಸೇರಿದರು. ಕೇಸರಿ ಪಕ್ಷಕ್ಕೆ ಸೇರ್ಪಡೆಗೊಂಡವರು ಮಾಜಿ ಸಚಿವರು ಮತ್ತು ಹಿರಿಯ ಕಾಂಗ್ರೆಸ್ ನಾಯಕರಾದ  (Congress Leaders)ರಾಜ್ ಕುಮಾರ್ ವರ್ಕಾ, ಬಲ್ಬೀರ್ ಸಿಂಗ್ ಸಿಧು, ಸುಂದರ್ ಶಾಮ್ ಅರೋರಾ ಮತ್ತು ಗುರುಪ್ರೀತ್ ಸಿಂಗ್ ಕಂಗರ್. ಬರ್ನಾಲದ ಮಾಜಿ ಕಾಂಗ್ರೆಸ್ ಶಾಸಕ ಕೆವಾಲ್ ಧಿಲ್ಲೋನ್ ಕೂಡ ಬಿಜೆಪಿಗೆ ಬಂದಿದ್ದಾರೆ. ಇವರ ಜೊತೆಗೆ ಪಕ್ಷದ ನಾಯಕ ಕಮಲಜೀತ್ ಎಸ್ ಧಿಲ್ಲೋನ್ ಕೂಡ ಬಿಜೆಪಿ ಸೇರಿದ್ದಾರೆ.

ಇವರಲ್ಲದೆ, ಶಿರೋಮಣಿ ಅಕಾಲಿದಳದ (ಎಸ್‌ಎಡಿ) ಮಾಜಿ ಶಾಸಕ ಸರೂಪ್ ಚಂದ್ ಸಿಂಗ್ಲಾ ಮತ್ತು ಪಕ್ಷದ ಉಚ್ಛಾಟಿತ ನಾಯಕಿ ಮೊಹಿಂದರ್ ಕೌರ್ ಜೋಶ್ ಕೂಡ ಬಿಜೆಪಿ ಸೇರಿದರು. ಮೊಹಾಲಿ ಮೇಯರ್ ಅಮರಜೀತ್ ಎಸ್ ಸಿಧು ಕೂಡ ಆ ದಿನ ಪಕ್ಷಕ್ಕೆ ಸೇರ್ಪಡೆಗೊಂಡರು.

ಕೇಂದ್ರ ಸಚಿವರಾದ ಗಜೇಂದ್ರ ಸಿಂಗ್ ಶೇಖಾವತ್ ಮತ್ತು ಸೋಮ್ ಪ್ರಕಾಶ್, ರಾಜ್ಯ ಘಟಕದ ಮುಖ್ಯಸ್ಥ ಅಶ್ವನಿ ಶರ್ಮಾ ಮತ್ತು ಪಕ್ಷದ ಹಿರಿಯ ನಾಯಕರಾದ ದುಷ್ಯಂತ್ ಗೌತಮ್, ತರುಣ್ ಚುಗ್, ಸುನಿಲ್ ಜಾಖರ್ ಮತ್ತು ಮಂಜಿಂದರ್ ಸಿಂಗ್ ಸಿರ್ಸಾ ಅವರ ಸಮ್ಮುಖದಲ್ಲಿ ಅವರು ಪಕ್ಷಕ್ಕೆ ಸೇರ್ಪಡೆಗೊಂಡರು.

ತ್ರೀ ಟೈಂ ಎಂಎಲ್​ಎ ಕೂಡಾ ಬಿಜೆಪಿ ತೆಕ್ಕೆಗೆ

ಬಿಜೆಪಿ ಸೇರಿದ ಕಾಂಗ್ರೆಸ್ ನಾಯಕರಲ್ಲಿ ವರ್ಕಾ ಮಜಾ ಪ್ರದೇಶದ ಪ್ರಮುಖ ದಲಿತ ನಾಯಕ. ಅವರು ಮೂರು ಬಾರಿ ಶಾಸಕರೂ ಆಗಿದ್ದು, ಹಿಂದಿನ ಸರ್ಕಾರದಲ್ಲಿ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಮತ್ತು ಅಲ್ಪಸಂಖ್ಯಾತರ ಸಚಿವರಾಗಿದ್ದರು. ಬಿಜೆಪಿ ಸೇರಿದ ಬಲ್ಬೀರ್ ಸಿಧು ಅವರು ಮೊಹಾಲಿಯಿಂದ ಮೂರು ಬಾರಿ ಶಾಸಕರಾಗಿದ್ದಾರೆ. ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ ಸಿಧು ಆರೋಗ್ಯ ಸಚಿವರಾಗಿದ್ದರೆ, ರಾಂಪುರ ಫುಲ್‌ನಿಂದ ಮೂರು ಬಾರಿ ಶಾಸಕರಾಗಿರುವ ಗುರುಪ್ರೀತ್ ಕಂಗರ್ ಅವರು ಕಂದಾಯ ಸಚಿವರಾಗಿದ್ದರು.

ಕಾಂಗ್ರೆಸ್ ಕೆಲಸ ಗುರುತಿಸುವುದಿಲ್ಲ

ಬಿಜೆಪಿಗೆ ಸೇರ್ಪಡೆಗೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಧು, 30-32 ವರ್ಷದಿಂದ ಕಾಂಗ್ರೆಸ್‌ನಲ್ಲಿದ್ದೇನೆ, ಈಗ ನನಗೆ 60 ವರ್ಷ ವಯಸ್ಸಾಗಿದೆ, ಪಕ್ಷಕ್ಕಾಗಿ ರಕ್ತ ಮತ್ತು ಬೆವರಿನಿಂದ ದುಡಿದಿದ್ದೇನೆ. ಆದರೆ ಕಾಂಗ್ರೆಸ್ ಕೆಲಸವನ್ನು ಗುರುತಿಸಿ ಏನೂ ಮಾಡುವುದಿಲ್ಲ ಎಂದಿದ್ದಾರೆ.

ಇದನ್ನೂ ಓದಿ: Boiler Explosion: ಬಾಯ್ಲರ್ ಸ್ಫೋಟದಲ್ಲಿ 12 ಮಂದಿ ಸಾವು, 21 ಮಂದಿ ಗಾಯ

ಮೋದಿ ಜಿ ಮತ್ತು ಅಮಿತ್ ಶಾ ಜಿ ಕೆಲಸ ಮಾಡುವ ರೀತಿಯಲ್ಲಿ ಅವರು ತಮ್ಮ ಕಾರ್ಯಕರ್ತರಿಗೆ ಮನ್ನಣೆ ನೀಡುತ್ತಾರೆ ಎಂದು ಸಿಧು ಹೇಳಿದರು. ಸುಂದರ್ ಶಾಮ್ ಅರೋರಾ ಹೋಶಿಯಾರ್‌ಪುರದ ಮಾಜಿ ಶಾಸಕ. ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ ಅವರು ಕೈಗಾರಿಕೆ ಮತ್ತು ವಾಣಿಜ್ಯ ಸಚಿವರಾಗಿದ್ದರು.

ಹಾರ್ದಿಕ್ ಪಟೇಲದ ಬಿಜೆಪಿಗೆ ಸೇರ್ಪಡೆ

ಕಳೆದ ವಾರ ಕಾಂಗ್ರೆಸ್ (Congress) ತೊರೆದಿದ್ದ ಹಾರ್ದಿಕ್ ಪಟೇಲ್ (Hardik Patel) ;ಅವರು ಇಂದು ಬೆಳಗ್ಗೆ ಟ್ವೀಟ್ (Tweet) ಮಾಡಿದ್ದು, 'ನಾನು ಹೊಸ ಅಧ್ಯಾಯವನ್ನು (Chapter) ಪ್ರಾರಂಭಿಸಲಿದ್ದೇನೆ ಮತ್ತು ಪ್ರಧಾನಿ ನರೇಂದ್ರ (Narendra Modi) ಮೋದಿ ನೇತೃತ್ವದಲ್ಲಿ ಸಣ್ಣ ಸೈನಿಕ ಆಗಿ ಕೆಲಸ ಮಾಡುತ್ತೇನೆ ಎಂದು ಬಿಜೆಪಿಗೆ (BJP) ಅಧಿಕೃತವಾಗಿ ಪಕ್ಷ ಬದಲಾಯಿಸಿದ್ದಾರೆ.

ರಾಷ್ಟ್ರೀಯ ಹಿತಾಸಕ್ತಿ, ಪ್ರಾದೇಶಿಕ ಹಿತಾಸಕ್ತಿ ಮತ್ತು ಸಾಮಾಜಿಕ ಹಿತಾಸಕ್ತಿಯ ಭಾವನೆಗಳೊಂದಿಗೆ ನಾನು ಹೊಸ ಅಧ್ಯಾಯವನ್ನು ಪ್ರಾರಂಭಿಸಲಿದ್ದೇನೆ. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ರಾಷ್ಟ್ರ ಸೇವೆಯಲ್ಲಿ ಬೃಹತ್ ಕಾರ್ಯದಲ್ಲಿ ನಾನು ಸಣ್ಣ ಸೈನಿಕನಾಗಿ ಕೆಲಸ ಮಾಡುತ್ತೇನೆ ಎಂದು ಅವರು ಹಿಂದಿಯಲ್ಲಿ ಟ್ವೀಟ್ ಮೂಲಕ ಹೇಳಿದರು.
Published by:Divya D
First published: