ನಾನು ಅವರ ದೊಡ್ಡ ಅಭಿಮಾನಿ: ಪ್ರಧಾನಿ ಮೋದಿ ಭೇಟಿಗೆ 815 ಕಿ.ಮೀ ನಡೆದು ಬರುತ್ತಿರುವ ಯುವಕ

 ಕಳೆದ ಎರಡೂವರೆ ವರ್ಷಗಳಲ್ಲಿ ನಾನು ದೆಹಲಿಯಲ್ಲಿ ಪ್ರಧಾನಿ ಮೋದಿಯವರನ್ನು ಭೇಟಿ ಮಾಡಲು ಹಲವಾರು ಪ್ರಯತ್ನಗಳನ್ನು ಮಾಡಿದ್ದೇನೆ ಎಂದು ಶಾ ಹೇಳಿದರು. "ಪ್ರಧಾನಿಯವರ ಕೊನೆಯ ಕಾಶ್ಮೀರ ಭೇಟಿಯ ಸಮಯದಲ್ಲಿ, ಭದ್ರತಾ ಸಿಬ್ಬಂದಿ ನನ್ನನ್ನು ಭೇಟಿಯಾಗಲು ಅನುಮತಿಸಲಿಲ್ಲ" ಎಂದು ಅವರು ಹೇಳಿದರು.

ನರೇಂದ್ರ ಮೋದಿ

ನರೇಂದ್ರ ಮೋದಿ

 • Share this:
  ಫಾಹೀಮ್ ನಜೀರ್ ಷಾ ಶ್ರೀನಗರದಿಂದ ದೆಹಲಿಗೆ ತೆರಳುತ್ತಿರುವ ಯುವಕ, ಅಯ್ಯೋ ಇದರಲ್ಲೇನು ವಿಶೇಷ ಎಂದು ನಿಮಗೆ ಅನ್ನಿಸಬಹುದು ಆದರೆ ಈ ಯುವಕ  ಸುಮಾರು 815 ಕಿಮೀ ಪ್ರಯಾಣವನ್ನು ಪ್ರಧಾನಿ ನರೇಂದ್ರ ಮೋದಿಯವರ ಗಮನ ಸೆಳೆಯಲು ಮತ್ತು ಅವರನ್ನು ಭೇಟಿಯಾಗುವ ಅವಕಾಶ ಸಿಗುತ್ತದೆ ಎಂದು ಕಾಲ್ನಡಿಗೆಯಲ್ಲಿ ಹೊರಟಿದ್ದಾರೆ.

  ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ಅರೆಕಾಲಿಕ ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡುತ್ತಿರುವ 28 ವರ್ಷದ ಯುವಕ 200 ಕಿಮೀ ದೂರ ನಡೆದ ನಂತರ ಭಾನುವಾರ ಉಧಂಪುರ ತಲುಪಿದಾಗ "ನಾನು ಪ್ರಧಾನಿ ಮೋದಿಯವರ ದೊಡ್ಡ ಅಭಿಮಾನಿ" ಎಂದು ಮಾಧ್ಯಮಗಳಿಗೆ ತಮ್ಮ ಅಭಿಲಾಷೆಯನ್ನು ಹೇಳಿದರು.

  ಎರಡು ದಿನಗಳ ಹಿಂದೆ ಆರಂಭವಾದ ತನ್ನ ಪ್ರಯಾಣದಲ್ಲಿ ಸಣ್ಣ ವಿರಾಮ ತೆಗೆದುಕೊಂಡ  ಇವರು ಮಾಧ್ಯಮಗಳ ಜೊತೆ ಮಾತನಾಡಿದರು, ಶ್ರೀನಗರದ ಶಾಲಿಮಾರ್ ಪ್ರದೇಶದ ನಿವಾಸಿಯಾದ ಶಾ, ಈ ಕಷ್ಟಕರ ಪ್ರಯಾಣದ ಕೊನೆಯಲ್ಲಿ ಪ್ರಧಾನಿಯನ್ನು ಭೇಟಿ ಮಾಡುವ ಅವರ ಕನಸು ಈಡೇರುತ್ತದೆ ಎಂದು ನಂಬಿದ್ದೇನೆ ಎಂದರು. "ನಾನು (ಮೋದಿ) ಅವರನ್ನು ಭೇಟಿಯಾಗಲು ದೆಹಲಿಗೆ ಕಾಲ್ನಡಿಗೆಯಲ್ಲಿ ಹೋಗುತ್ತಿದ್ದೇನೆ ಮತ್ತು ಪ್ರಧಾನ ಮಂತ್ರಿಯ ಗಮನ ಸೆಳೆಯುವ ಭರವಸೆ ಹೊಂದಿದ್ದೇನೆ. ಪ್ರಧಾನ ಮಂತ್ರಿಯನ್ನು ಭೇಟಿ ಮಾಡುವುದು ನನ್ನ ಪಾಲಿನ ಕನಸು ಎಂದು ಅವರು ಹೇಳಿದರು, ಪ್ರಧಾನ ಮಂತ್ರಿಯನ್ನು ಭೇಟಿ ಮಾಡಲು ಅವರ ಹಿಂದಿನ ಪ್ರಯತ್ನಗಳು ಫಲಿಸಲಿಲ್ಲ ಎಂಬುದನ್ನೂ ಸಹ ಅವರು ಬೇಸರದಿಂದ ಹೇಳಿದರು.

  ಕಳೆದ ನಾಲ್ಕು ವರ್ಷಗಳಿಂದ ತಾನು ಪ್ರಧಾನಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಅನುಸರಿಸುತ್ತಿದ್ದೇನೆ ಮತ್ತು ಅವರ ಮಾತು ಮತ್ತು ಕಾರ್ಯಗಳು "ನನ್ನ ಹೃದಯವನ್ನು ಸ್ಪರ್ಶಿಸಿವೆ" ಎಂದು ಶಾ ಹೇಳಿದರು. "ಒಂದು ಸಮಯದಲ್ಲಿ ಅವರು ರ್ಯಾಲಿಯಲ್ಲಿ ಭಾಷಣ ಮಾಡುತ್ತಿದ್ದಾಗ, ಅವರು ಇದ್ದಕ್ಕಿದ್ದಂತೆ ಕಾರು ನಿಲ್ಲಿಸಿದರು 'ಅಜಾನ್' (ಪ್ರಾರ್ಥನೆಗಾಗಿ ಮುಸ್ಲಿಂ ಕರೆ) ಕೇಳಿದ ಸಾರ್ವಜನಿಕರು ನಮ್ಮ ಪ್ರಧಾನ ಮಂತ್ರಿಯ ಹಾವಭಾವ ನನ್ನ ಹೃದಯವನ್ನು ಸ್ಪರ್ಶಿಸಿತು ಮತ್ತು ನಾನು ಅವರ ಕಟ್ಟಾ ಅಭಿಮಾನಿಯಾಗಿದ್ದೇನೆ ಎಂದು ಆಶ್ಚರ್ಯಚಕಿತರಾಗಿ ನುಡಿದರು.

  ಕಳೆದ ಎರಡೂವರೆ ವರ್ಷಗಳಲ್ಲಿ ನಾನು ದೆಹಲಿಯಲ್ಲಿ ಪ್ರಧಾನಿ ಮೋದಿಯವರನ್ನು ಭೇಟಿ ಮಾಡಲು ಹಲವಾರು ಪ್ರಯತ್ನಗಳನ್ನು ಮಾಡಿದ್ದೇನೆ ಎಂದು ಶಾ ಹೇಳಿದರು. "ಪ್ರಧಾನಿಯವರ ಕೊನೆಯ ಕಾಶ್ಮೀರ ಭೇಟಿಯ ಸಮಯದಲ್ಲಿ, ಭದ್ರತಾ ಸಿಬ್ಬಂದಿ ನನ್ನನ್ನು ಭೇಟಿಯಾಗಲು ಅನುಮತಿಸಲಿಲ್ಲ" ಎಂದು ಅವರು ಹೇಳಿದರು.

  "ಈ ಬಾರಿ ಪ್ರಧಾನಿಯನ್ನು ಭೇಟಿ ಮಾಡಲು ನನಗೆ ಅವಕಾಶ ಸಿಗುವುದು ಖಚಿತ" ಎಂದು ಶಾ ಹೇಳಿದರು. ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ ನಂತರ ಮತ್ತು 2019 ರಲ್ಲಿ ಒಂದು ರಾಜ್ಯದಿಂದ ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಿದ ನಂತರ ಬದಲಾವಣೆ ಏನಾದರೂ ಆಗಿದೆಯೇ ಎಂದು ಮಾದ್ಯಮದವರು ಈ ಕುರಿತು ಪ್ರಶ್ನೆ ಕೇಳಲಾಯಿತು.

  ಇದನ್ನೂ ಓದಿ: ಅಫ್ಘನ್​ ಕ್ರಿಕೆಟ್​ ಬೋರ್ಡಿಗೆ ಹಂಗಾಮಿ ಅಧ್ಯಕ್ಷನನ್ನು ನೇಮಿಸಿದ ತಾಲಿಬಾನ್​

  ಪ್ರಧಾನಿ ಮೋದಿ ಜಮ್ಮು ಮತ್ತು ಕಾಶ್ಮೀರದತ್ತ ಗಮನ ಹರಿಸಿದ್ದರಿಂದ ಬದಲಾವಣೆ ಗೋಚರಿಸುತ್ತಿದೆ. "ಪರಿಸ್ಥಿತಿಯಲ್ಲಿ ಬದಲಾವಣೆ ಇದೆ, ಅಭಿವೃದ್ಧಿ ಚಟುವಟಿಕೆಗಳು ಉತ್ತಮ ವೇಗದಲ್ಲಿ ನಡೆಯುತ್ತಿವೆ ಮತ್ತು ಕೇಂದ್ರಾಡಳಿತ ಪ್ರದೇಶವು ಮುಂದೆ ಸಾಗುತ್ತಿದೆ" ಎಂದು ಅವರು ಹೇಳಿದರು. ವಿದ್ಯಾವಂತ ಮತ್ತು ನಿರುದ್ಯೋಗಿ ಯುವಕರ ಸಮಸ್ಯೆಗಳ ಕುರಿತು ಮೋದಿ ಮತ್ತು ಕೇಂದ್ರಾಡಳಿತ ಪ್ರದೇಶದಲ್ಲಿ ಕೈಗಾರಿಕಾ ವಲಯವನ್ನು ಅಭಿವೃದ್ಧಿಪಡಿಸಲು ಚರ್ಚಿಸಲು ಬಯಸುತ್ತೇನೆ ಎಂದು ಶಾ ಹೇಳಿದರು.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
  Published by:HR Ramesh
  First published: