HOME » NEWS » National-international » BIG CONSPIRACY AROUND DELHI TO CONFUSE FARMERS SAYS PM MODI

ರೈತರಲ್ಲಿ ಗೊಂದಲ ಮೂಡಿಸುವ ಹುನ್ನಾರ; ರೈತರ ಅನುಮಾನಗಳನ್ನು ಸ್ಪಷ್ಟಪಡಿಸಲು ಸರ್ಕಾರ ಸಿದ್ಧ; ಮೋದಿ

ರೈತರನ್ನು ದಾರಿ ತಪ್ಪಿಸುವಂತಹ ಹುನ್ನಾರಗಳು ನಡೆಯುತ್ತಿವೆ. ಕೇಂದ್ರ ಸರ್ಕಾರ ಸದಾ ರೈತರ ಅಭಿವೃದ್ಧಿಗೆ ಬದ್ಧವಾಗಿದ್ದು, ಅವರ ಎಲ್ಲಾ ಅನುಮಾನಗಳಿಗೂ ಸರ್ಕಾರ ಉತ್ತರಿಸಲಿದೆ 

news18-kannada
Updated:December 15, 2020, 5:00 PM IST
ರೈತರಲ್ಲಿ ಗೊಂದಲ ಮೂಡಿಸುವ ಹುನ್ನಾರ; ರೈತರ ಅನುಮಾನಗಳನ್ನು ಸ್ಪಷ್ಟಪಡಿಸಲು ಸರ್ಕಾರ ಸಿದ್ಧ; ಮೋದಿ
ನರೇಂದ್ರ ಮೋದಿ
  • Share this:
ನವದೆಹಲಿ (ಡಿ.15): ಕೇಂದ್ರದ ವಿವಾದಿತ ಕೃಷಿ ಕಾಯ್ದೆ ವಿರೋಧಿಸಿ ಕಳೆದ 20 ದಿನಗಳಿಂದ ದೆಹಲಿ ಗಡಿಯಲ್ಲಿ ರೈತರು ಪ್ರತಿಭಟನೆ ನಡೆಸಿದ್ದಾರೆ. ಕೃಷಿ ಕಾಯ್ದೆ ರದ್ದುಪಡಿಸುವಂತೆ ಅವರು ಬಿಗಿ ಪಟ್ಟು ಹಿಡಿದಿದ್ದು, ಕೃಷಿಕರೊಂದಿಗೆ ಸರ್ಕಾರ ನಡೆಸಿರುವ ಆರು ಸುತ್ತಿನ ಮಾತುಕತೆ ವಿಫಲವಾಗಿದೆ. ಈ ನಡುವೆ ಕೃಷಿ ಕಾಯ್ದೆಯನ್ನು ಸಮರ್ಥನೆ ನೀಡುತ್ತಿದ್ದು, ಇದರಿಂದ ರೈತರಿಗೆ ಅನುಕೂಲವಾಗಲಿದೆ. ಹೊಸ ಮಾರುಕಟ್ಟೆ ಸೃಷ್ಟಿಯಾಗಲಿದ್ದು, ರೈತರಿಗೆ ಕೇಂದ್ರ ಸರ್ಕಾರ ಅನುಕೂಲ ಮಾಡಿಕೊಡಲಿದೆ ಎಂಬ ಭರವಸೆ ನೀಡುತ್ತಿದ್ದಾರೆ. ಇಂದು ಕೂಡ ಕಾಯ್ದೆಯನ್ನು ಬೆಂಬಲಿಸಿ ಮಾತನಾಡಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ, ರೈತರನ್ನು ದಾರಿ ತಪ್ಪಿಸುವಂತಹ ಹುನ್ನಾರಗಳು ನಡೆಯುತ್ತಿವೆ. ಕೇಂದ್ರ ಸರ್ಕಾರ ಸದಾ ರೈತರ ಅಭಿವೃದ್ಧಿಗೆ ಬದ್ಧವಾಗಿದ್ದು, ಅವರ ಎಲ್ಲಾ ಅನುಮಾನಗಳಿಗೂ ಸರ್ಕಾರ ಉತ್ತರಿಸಲಿದೆ  ಎಂದು ತಿಳಿಸಿದರು.



ಕಛ್​ನಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ರೈತರು ಹಾಗೂ ವಿರೋಧ ಪಕ್ಷಗಳು ಕಳೆದ ಹಲವು ವರ್ಷಗಳಿಂದ ಕೇಳುತ್ತಿರುವಂತಹ ಕೃಷಿ ಸುಧಾರಣೆಗಳು ಈಗ ಆಗಿವೆ. ಭಾರತ ಸರ್ಕಾರ ರೈತರ ಕಲ್ಯಾಣಕ್ಕೆ ಬದ್ಧವಾಗಿದೆ ಎಂಬ ಭರವಸೆ ನೀಡುತ್ತೇವೆ ಎಂದರು.


ಇದೇ ವೇಳೆ ಪ್ರತಿಪಕ್ಷದ ವಿರುದ್ಧ ಹರಿಹಾಯ್ದ ಅವರು, ರೈತರಲ್ಲಿ ಗೊಂದಲ ಮೂಡಿಸುವಂತಹ ಹುನ್ನಾರಗಳು ದೆಹಲಿ ಸುತ್ತಮುತ್ತ ನಡೆಯುತ್ತಿವೆ. ಕೃಷಿ ಸುಧಾರಣೆ ಬಳಿಕ ರೈತರ ಭೂಮಿಯನ್ನು ಆಕ್ರಮಿಸಿಕೊಳ್ಳುತ್ತಾರೆ ಎಂದು ರೈತರಲ್ಲಿ ಅಂಜಿಕೆ ಮೂಡಿದೆ. ಡೈರಿಯಲ್ಲಿ ನೀವು ಹಾಲನ್ನು ಹಾಕುವ ಬಗ್ಗೆ ಒಪ್ಪಂದ ಮಾಡಿಕೊಂಡರೆ, ಹಸುವನ್ನೇ ಅವರು ಕರೆದೊಯ್ಯುತ್ತಾರೆಯೇ ಎಂದು ಇದೇ ವೇಳೆ ಉದಾಹರಿಸಿ ಪ್ರಶ್ನಿಸಿದರು.

ವಿರೋಧ ಪಕ್ಷಗಳು ಅಧಿಕಾರದಲ್ಲಿದ್ದಾಗ ಕೃಷಿ ಕ್ಷೇತ್ರದ ಸುಧಾರಣೆಗಳ ಪರವಾಗಿದ್ದವು, ಆದರೆ, ಅವರು ಯಾವುದೇ ನಿರ್ಧಾರ ತೆಗೆದುಕೊಳ್ಳಲಿಲ್ಲ. ಈಗ ಇಡೀ ದೇಶ ಈ ಸುಧಾರಣೆ ಸ್ವೀಕರಿಸಲು ಸಿದ್ಧವಾಗಿದ್ದಾಗ ಜನರಿಗೆ ಸುಳ್ಳು ಮಾಹಿತಿಯನ್ನು ನೀಡುವ ಮೂಲಕ ರೈತರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ. ಆದರೆ, ನಮ್ಮ ಸರ್ಕಾರ ಎಲ್ಲಾ ಅನುಮಾನಗಳನ್ನು ಪರಿಹರಿಸಲು ಸಿದ್ಧವಾಗಿದೆ. ಇದಕ್ಕಾಗಿ 24 ಗಂಟೆ ಕೂಡ ತಯಾರಾಗಿದ್ದೇವೆ ಎಂದರು
Published by: Seema R
First published: December 15, 2020, 4:47 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories