• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • ಜೋ ಬೀಡೆನ್ ಭಾರೀ ಮತಗಳಿಂದ ಮುನ್ನಡೆ; ಅಮೆರಿಕ ಅಧ್ಯಕ್ಷೀಯ ಚುನಾವಣೆ ಇತಿಹಾಸದಲ್ಲಿ ದಾಖಲೆ ನಿರ್ಮಿಸಿದ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ

ಜೋ ಬೀಡೆನ್ ಭಾರೀ ಮತಗಳಿಂದ ಮುನ್ನಡೆ; ಅಮೆರಿಕ ಅಧ್ಯಕ್ಷೀಯ ಚುನಾವಣೆ ಇತಿಹಾಸದಲ್ಲಿ ದಾಖಲೆ ನಿರ್ಮಿಸಿದ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ

ಜೋ ಬಿಡೆನ್.

ಜೋ ಬಿಡೆನ್.

ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಶ್ವೇತಭವನದ ಅಧಿಕಾರಕ್ಕಾಗಿ ನಡೆದ ಬಿಗಿಯಾದ ಚುನಾವಣಾ ಮತ ಹೋರಾಟದಲ್ಲಿ ಬಿಡೆನ್, ಜನಪ್ರಿಯ ಮತಗಳಲ್ಲಿ ರಿಪಬ್ಲಿಕನ್ ನಾಯಕನಿಗಿಂತ 2.7 ಮಿಲಿಯನ್ ಮತಗಳ ಮುಂದಿದ್ದಾರೆ. ಪ್ರಮುಖ ರಾಜ್ಯಗಳಲ್ಲಿ ಜೋ ಬೀಡನ್ ಅತ್ಯಧಿಕ ಮತಗಳನ್ನು ಪಡೆದುಕೊಂಡಿದ್ದಾರೆ.

ಮುಂದೆ ಓದಿ ...
  • Share this:

ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶ ಅಂತಿಮ ಘಟ್ಟಕ್ಕೆ ಬಂದಿದ್ದು, ಇನ್ನು ಕೆಲವೇ ಅಧಿಕೃತ ಘೋಷಣೆಯಾಗಲಿದೆ. ಈವರೆಗಿನ ಫಲಿತಾಂಶದಲ್ಲಿ ರಿಪಬ್ಲಿಕ್ ಪಕ್ಷದ ಅಭ್ಯರ್ಥಿ ಹಾಗೂ ಹಾಲಿ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅವರ ಎದುರು ಸ್ಪರ್ಧಿಸಿರುವ ಡೆಮಾಕ್ರಟಿಕ್ ಪಕ್ಷದ ಜೊ ಬೀಡೆನ್ ಅವರು ಭಾರೀ ಬಹುಮತ ಪಡೆದುಕೊಂಡಿದ್ದಾರೆ. ಅಲ್ಲದೇ. ಜೊ ಬೀಡೆನ್ ಅವರು ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಇತಿಹಾಸದಲ್ಲಿ ಅತ್ಯಧಿಕ ಮತಗಳನ್ನು ಪಡೆಯುವ ಮೂಲಕ ದಾಖಲೆ ನಿರ್ಮಿಸಿದ್ದಾರೆ. 


ಮಾಧ್ಯಮದ ವರದಿಗಳ ಪ್ರಕಾರ, ಈ ಹಿಂದೆ ಅಧ್ಯಕ್ಷರಾಗಿದ್ದ ಬರಾಕ್ ಒಬಾಮಾ ಅವರ ದಾಖಲೆಯನ್ನು ಬೀಡೆನ್ ಮುರಿದಿದ್ದಾರೆ. ನವೆಂಬರ್ 4 ರ ಹೊತ್ತಿಗೆ, ಬಿಡೆನ್ 70.7 ಮಿಲಿಯನ್ ಮತಗಳನ್ನು ಪಡೆದಿದ್ದಾರೆ. ಇದು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಎಲ್ಲ ಅಭ್ಯರ್ಥಿಗಳಿಗಿಂತ ಹೆಚ್ಚು ಎಂದು ನ್ಯಾಷನಲ್ ಪಬ್ಲಿಕ್ ರೇಡಿಯೋ (ಎನ್‌ಪಿಆರ್) ವರದಿ ಮಾಡಿದೆ.


ಈ ಎಣಿಕೆ 2008 ರಲ್ಲಿ ಒಬಾಮಾ ಪಡೆದಿದ್ದಕ್ಕಿಂತ 300,000 ಹೆಚ್ಚಿನ ಮತಗಳನ್ನು ಒಳಗೊಂಡಿದೆ. ಈ ಹಿಂದೆ 2008 ರಲ್ಲಿ ಒಬಾಮಾ ಅಧ್ಯಕ್ಷೀಯ ಚುನಾವಣೆಯಲ್ಲಿ 69,498,516 ಮತಗಳನ್ನು ಪಡೆದು ದಾಖಲೆ ನಿರ್ಮಿಸಿದ್ದರು. ಇದೀಗ ಆ ದಾಖಲೆಯನ್ನು ಬೀಡೆನ್ ಹಿಂದಿಕ್ಕಿದ್ದಾರೆ.


ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಶ್ವೇತಭವನದ ಅಧಿಕಾರಕ್ಕಾಗಿ ನಡೆದ ಬಿಗಿಯಾದ ಚುನಾವಣಾ ಮತ ಹೋರಾಟದಲ್ಲಿ ಬಿಡೆನ್, ಜನಪ್ರಿಯ ಮತಗಳಲ್ಲಿ ರಿಪಬ್ಲಿಕನ್ ನಾಯಕನಿಗಿಂತ 2.7 ಮಿಲಿಯನ್ ಮತಗಳ ಮುಂದಿದ್ದಾರೆ. ಪ್ರಮುಖ ರಾಜ್ಯಗಳಲ್ಲಿ ಜೋ ಬೀಡನ್ ಅತ್ಯಧಿಕ ಮತಗಳನ್ನು ಪಡೆದುಕೊಂಡಿದ್ದಾರೆ.


ಇದನ್ನು ಓದಿ: ಅಮೆರಿಕ ಅಧ್ಯಕ್ಷೀಯ ಚುನಾವಣೆ: ಬಹುಮತದತ್ತ ಬೈಡನ್; ವಿಸ್ಕಾನ್ಸಿನ್​ನಲ್ಲಿ ಮರುಎಣಿಕೆಗೆ ಟ್ರಂಪ್ ಒತ್ತಾಯ


ಕ್ಯಾಲಿಫೋರ್ನಿಯಾ ಸೇರಿದಂತೆ ದೇಶಾದ್ಯಂತ ಲಕ್ಷಾಂತರ ಮತಗಳನ್ನು ಇನ್ನೂ ಪಟ್ಟಿ ಮಾಡಲಾಗುತ್ತಿದೆ ಎಂದು ಎನ್‌ಪಿಆರ್ ಹೇಳಿದೆ. ಈವರೆಗೆ ಶೇಕಡಾ 64 ರಷ್ಟು ಮತಗಳನ್ನು ಎಣಿಕೆ ಮಾಡಲಾಗಿದೆ ಎಂದು ವರದಿ ಮಾಡಿದೆ. ಬುಧವಾರ ಹೊತ್ತಿಗೆ ಟ್ರಂಪ್ ಅವರು ಸಹ 67.32 ಮಿಲಿಯನ್ ಮತಗಳನ್ನು ಪಡೆದುಕೊಳ್ಳುವ ಮೂಲಕ ಒಬಾಮಾ ಪಡೆದಿದ್ದ ಮತಗಳ ಸನಿಹಕ್ಕೆ ಬಂದಿದ್ದಾರೆ.


ಮುಂಚಿನ ಮತದಾನ ಮತ್ತು ಮೇಲ್-ಇನ್ ಬ್ಯಾಲೊಟ್ ಮೂಲಕ 100 ಮಿಲಿಯನ್​ಗೂ ಹೆಚ್ಚಿನ ಮತ ಚಲಾವಣೆಯಾಗಿತ್ತು. ಎನ್‌ಬಿಸಿ ನ್ಯೂಸ್ ವರದಿ ಪ್ರಕಾರ, ಇನ್ನೂ ಕನಿಷ್ಠ 23 ಮಿಲಿಯನ್ ಮತಗಳನ್ನು ಎಣಿಕೆ ಮಾಡಬೇಕಿದೆ. ಇದು ಜೋ ಬೀಡೆನ್‌ಗೆ ಮತ್ತಷ್ಟು ಹೆಚ್ಚಿನ ಮತಗಳನ್ನು ಪಡೆದುಕೊಳ್ಳಲಿದ್ದಾರೆ ಎಂದು ಹೇಳಿದೆ.

Published by:HR Ramesh
First published: