HOME » NEWS » National-international » BIDEN MODI SUGA MORRISON WRITE JOINT ARTICLE MENTIONING OF INDO PACIFIC REGION SNVS

ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಮುಕ್ತತೆ ಗುರಿ: ಕ್ವಾಡ್ ದೇಶಗಳ ಮುಖ್ಯಸ್ಥರಿಂದ ಜಂಟಿ ಲೇಖನ

ಭಾರತ, ಅಮೆರಿಕ, ಜಪಾನ್ ಮತ್ತು ಆಸ್ಟ್ರೇಲಿಯಾ ದೇಶಗಳ ನಾಯಕರು ಇದೇ ಮೊದಲ ಬಾರಿಗೆ ಜಂಟಿಯಾಗಿ ಸಂಪಾದಕೀಯ ಬರೆದಿದ್ದು, ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಮುಕ್ತ ವಾತಾರಣ ನಿರ್ಮಿಸುವ ಉದ್ದೇಶವನ್ನ ವ್ಯಕ್ತಪಡಿಸಿದ್ದಾರೆ.

news18
Updated:March 14, 2021, 11:27 AM IST
ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಮುಕ್ತತೆ ಗುರಿ: ಕ್ವಾಡ್ ದೇಶಗಳ ಮುಖ್ಯಸ್ಥರಿಂದ ಜಂಟಿ ಲೇಖನ
ಜೋ ಬೈಡನ್, ನರೇಂದ್ರ ಮೋದಿ, ಯೋಶಿಹಿಡೆ ಸುಗಾ ಮತ್ತು ಸ್ಕಾಟ್ ಮಾರಿಸನ್
  • News18
  • Last Updated: March 14, 2021, 11:27 AM IST
  • Share this:
ನವದೆಹಲಿ(ಮಾ. 14): ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಮುಕ್ತ ವಾತಾವರಣ ನಿರ್ಮಿಸುವ ಒಂದು ವ್ಯವಸ್ಥೆ ಆಗಬೇಕು ಎಂದು ಕ್ವಾಡ್ ದೇಶಗಳು ಆಶಿಸಿವೆ. ನಿನ್ನೆ ಭಾನುವಾರ ಅಮೆರಿಕದ ವಾಷಿಂಗ್ಟನ್ ಪೋಸ್ಟ್ ಪತ್ರಿಕೆಯಲ್ಲಿ ಈ ಕ್ವಾಡ್ ರಾಷ್ಟ್ರಗಳ ನಾಲ್ವರು ಮುಖ್ಯಸ್ಥರು ಬರೆದ ಜಂಟಿ ಲೇಖನದಲ್ಲಿ ಈ ವಿಚಾರವನ್ನು ಚರ್ಚಿಸಲಾಗಿದೆ. “ಇಂಡೋ ಪೆಸಿಫಿಕ್ ಪ್ರದೇಶದಲ್ಲಿ ಮುಕ್ತಸಾಗಣೆ ಇರಬೇಕು. ವಿವಾದಗಳಿಗೆ ಶಾಂತಿಯುತ ಪರಿಹಾರ ಇತ್ಯಾದಿ ಅಂಶಗಳು ಹಾಗೂ ಅಂತರರಾಷ್ಟ್ರೀಯ ಕಾನೂನು ಅನ್ವಯ ಆಗಿ ಅದು ಎಲ್ಲರಿಗೂ ಕೈಗೆಟುವಂತಿರಬೇಕು. ಯಾವುದೇ ಬಲವಂತವಿಲ್ಲದೇ ಎಲ್ಲಾ ದೇಶಗಳು ತಮ್ಮದೇ ರಾಜಕೀಯ ನಿಲುವುಗಳನ್ನ ತೆಗೆದುಕೊಳ್ಳುವಂಥ ವಾತಾವರಣವನ್ನು ಇಂಡೋ ಪೆಸಿಫಿಕ್ ಪ್ರದೇಶದಲ್ಲಿ ತರಲು ನಾವು ಪ್ರಯತ್ನಿಸುತ್ತಿದ್ದೇವೆ. ನಮ್ಮ ಈ ದೃಷ್ಟಿಕೋನಕ್ಕೆ ಸವಾಲಾಗುವಂಥ ಸಂದರ್ಭಗಳು ಇತ್ತೀಚಿನ ವರ್ಷಗಳಲ್ಲಿ ಇಲ್ಲಿ ಆಗಿದ್ದವು. ಇವು ನಮ್ಮ ಸಂಕಲ್ಪವನ್ನು ಇನ್ನಷ್ಟು ಬಲಪಡಿಸಿವೆ” ಎಂದು ಭಾರತದ ಪ್ರಧಾನಿ ನರೇಂದ್ರ ಮೋದಿ, ಅಮೆರಿಕ ಅಧ್ಯಕ್ಷ ಜೋ ಬೈಡೆನ್, ಜಪಾನ್ ಪ್ರಧಾನಿ ಯೋಶಿಹಿಡೆ ಸುಗಾ ಮತ್ತು ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ಅವರು ಜಂಟಿ ಲೇಖನದಲ್ಲಿ ಬರೆದಿದ್ದಾರೆ.

ಇಂಡೋ ಪೆಸಿಫಿಕ್​ನ ಸಮುದ್ರ ಪ್ರದೇಶದಲ್ಲಿ ಚೀನಾ ಪಾರುಪತ್ಯ ಮೆರೆಯಲು ಹವಣಿಸುತ್ತಿದೆ. ಇಲ್ಲಿರುವ ಬಹುತೇಕ ಸಮುದ್ರ ಭಾಗಗಳ ಮೇಲೆ ಚೀನಾ ಹಕ್ಕು ಚಲಾಯಿಸುತ್ತಿದೆ. ಇಲ್ಲಿ ಅಗಣಿತವಾದ ಸಾಗರ ಸಂಪತ್ತು ಇದ್ದು, ಅದರ ಮೇಲೆ ಚೀನಾ ಕಣ್ಣು ಹಾಕಿದೆ. ಹಾಗೆಯೇ, ಇಲ್ಲಿ ವಾಣಿಜ್ಯಾತ್ಮಕವಾಗಿ ಮುಖ್ಯವೆನಿಸಿರುವ ಸಮುದ್ರ ಮಾರ್ಗವೂ ಇಲ್ಲಿ ಹಾದುಹೋಗುತ್ತದೆ. ಇದರ ಮೇಲೂ ಚೀನಾ ಹಕ್ಕು ಚಲಾಯಿಸುತ್ತಿದೆ. ಇದು ಇಂಡೋಪೆಸಿಫಿಕ್ ವ್ಯಾಪ್ತಿಯ ದೇಶಗಳಿಗೆ ಇರಿಸುಮುರುಸು ತಂದಿದೆ. ಅಮೆರಿಕದ ವ್ಯವಹಾರಗಳಿಗೂ ಇದು ತಡೆಯಾಗಿದೆ. ಈ ನಿಟ್ಟಿನಲ್ಲಿ ಚೀನಾವನ್ನು ಬಗ್ಗಿಸಲು ಕ್ವಾಡ್ ಗುಂಪು ಒಂದು ಅಸ್ತ್ರವಾಗಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ಎಂಜಿನಿಯರಿಂಗ್ ಕೋರ್ಸ್ ಸೇರ್ಪಡೆಗೆ ಗಣಿತ, ಭೌತಶಾಸ್ತ್ರ ಕಡ್ಡಾಯವಲ್ಲ - AICTE ಸ್ಪಷ್ಟನೆ

“ಎಲ್ಲಾ ನಾಲ್ಕು ದೇಶಗಳ ಸರ್ಕಾರಗಳು ವರ್ಷಗಳಿಂದ ನಿಕಟವಾಗಿ ಕೆಲಸ ಮಾಡಿವೆ… ಶುಕ್ರವಾರ ಕ್ವಾಡ್ ಇತಿಹಾಸದಲ್ಲಿ ಮೊದಲ ಬಾರಿಗೆ ಈ ಅರ್ಥಗರ್ಭಿತ ಸಹಕಾರವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ನಾವು ನಾಯಕರಾಗಿ ಸೇರಿದ್ದೆವು. ಒಂದು ಪ್ರದೇಶವನ್ನು ಮುಕ್ತತೆಗೊಳಿಸುವ ನಮ್ಮ ಉದ್ದೇಶವನ್ನು ಬಲಪಡಿಸುವ ನಿಟ್ಟಿನಲ್ಲಿ ಹೊಸ ತಂತ್ರಜ್ಞಾನಗಳಿಂದ ಎದುರಾಗುವ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯಲು ಸಹಕಾರಕ್ಕೆ ನಾವು ಒಪ್ಪಿದ್ದೇವೆ. ಭವಿಷ್ಯದ ಆವಿಷ್ಕಾರಗಳಿಗೆ ಎಡೆ ಮಾಡಿಕೊಡುವ ಅಂಶಗಳನ್ನ ನಿರ್ದಿಷ್ಟಪಡಿಸಲು ನಾವೆಲ್ಲರೂ ಒಗ್ಗೂಡಿ ಕೆಲಸ ಮಾಡಲು ನಿರ್ಧರಿಸಿದ್ದೇವೆ” ಎಂದು ಭಾರತ, ಅಮೆರಿಕ, ಜಪಾನ್ ಮತ್ತು ಆಸ್ಟ್ರೇಲಿಯಾ ದೇಶಗಳ ನಾಯಕರು ತಿಳಿಸಿದ್ದಾರೆ.

“ಹವಾಮಾನ ಬದಲಾವಣೆ ಸಮಸ್ಯೆ ಜಾಗತಿಕವಾಗಿ ಸವಾಲಾಗಿದೆ. ಇದು ಇಂಡೋ-ಪೆಸಿಫಿಕ್ ಪ್ರದೇಶಕ್ಕೂ ದೊಡ್ಡ ಸವಾಲಾಗಿದೆ… ಆದ್ದರಿಂದ ಪ್ಯಾರಿಸ್ ಒಪ್ಪಂದವನ್ನು ಬಲಪಡಿಸಲು ನಾವು ಇತರ ದೇಶಗಳ ಜೊತೆ ಕೆಲಸ ಮಾಡುತ್ತೇವೆ. ನಮ್ಮ ಜನರ ಆರೋಗ್ಯ ಮತ್ತು ಸುರಕ್ಷತೆಗೆ ಬದ್ಧರಾಗಿರುವ ನಾವು ಕೋವಿಡ್-19 ಸಾಂಕ್ರಾಮಿಕ ರೋಗಕ್ಕೆ ಅಂತ್ಯವಾಡಲು ನಿಶ್ಚಯಿಸಿದ್ದೇವೆ. ಈ ಮಹಾಮಾರಿ ಇರುವವರೆಗೂ ಯಾವ ದೇಶವೂ ಸುರಕ್ಷಿತವಾಗಿರಲು ಸಾಧ್ಯವಿಲ್ಲ” ಎಂದು ಈ ನಾಯಕರುಗಳು ಕಳವಳ ವ್ಯಕ್ತಪಡಿಸಿದ್ದಾರೆ.
Published by: Vijayasarthy SN
First published: March 14, 2021, 11:27 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories