ಅಮೆರಿಕ ಅಧ್ಯಕ್ಷೀಯ ಚುನಾವಣೆ; ನಿರ್ಗಮನದ ಹಾದಿಯಲ್ಲಿ ಟ್ರಂಪ್, ಶ್ವೇತ ಭವನದ ಹೊಸ್ತಿಲಲ್ಲಿರುವ ಜೋ ಬಿಡೆನ್

ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆಯನ್ನು ಗೆಲ್ಲಲು 270 ಸ್ಥಾನಗಳ ಅಗತ್ಯವಿದ್ದು, ಟ್ರಂಪ್ 214 ಸ್ಥಾನಗಳಲ್ಲಿ ಗೆದ್ದು 15 ಸ್ಥಾನಗಳಲ್ಲಿ ಮುನ್ನಡೆಯಲ್ಲಿದ್ದಾರೆ. ಜೋ ಬಿಡೆನ್ 264 ಸ್ಥಾನಗಳನ್ನು ಗೆದ್ದಿದ್ದು, ಅವರಿಗೆ ಗೆಲ್ಲಲು ಇನ್ನೂ 6 ಸ್ಥಾನಗಳ ಅಗತ್ಯವಿದೆಯಾದರೂ 42 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ.

ಡೊನಾಲ್ಡ್​ ಟ್ರಂಪ್- ಜೋ ಬಿಡೆನ್

ಡೊನಾಲ್ಡ್​ ಟ್ರಂಪ್- ಜೋ ಬಿಡೆನ್

 • Share this:
  ವಾಷಿಂಗ್ಟನ್ (ನವೆಂಬರ್ 07); ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶ ಹೊರ ಬೀಳಲು ಕ್ಷಣಗಣನೆ ಆರಂಭವಾಗಿದೆ. ಎರಡನೇ ಬಾರಿ ಅಧ್ಯಕ್ಷ ಹುದ್ದೆಗೆ ಏರುವ ಡೊನಾಲ್ಡ್​ ಕನಸು ನನಸಾಗುವುದು ಬಹುತೇಕ ಕಷ್ಟ ಎನ್ನಲಾಗುತ್ತಿದೆ. ಮತ ಎಣಿಕೆ ಆರಂಭದಲ್ಲಿ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುನ್ನಡೆಯಲ್ಲಿದ್ದರೂ, ನಂತರದ ಬೆಳವಣೆಗೆಯಲ್ಲಿ ಅವರ ಪ್ರತಿಸ್ಪರ್ಧಿ ಡೆಮಾಕ್ರೆಟಿಕ್ ಪಕ್ಷದ ಜೋ ಬಿಡೆನ್ ಮುನ್ನಡೆ ಸಾಧಿಸಿದ್ದು, ಈ ಭಾರಿ ಅವರು ಅಮೆರಿಕದ ಅಧ್ಯಕ್ಷರಾಗುವುದು ನಿಶ್ಚಿತವಾಗುತ್ತಿದೆ. ಆದರೆ, ಎಣಿಕೆ ಇನ್ನೂ ನಡೆಯುತ್ತೇ ಇರುವುದರಿಂದ ಅಧೀಕೃತ ಪ್ರಕಟಣೆ ಹೊರ ಬಿದ್ದಿಲ್ಲ. ಫಲಿತಾಂಶವು ತನ್ನ ಪರವಾಗಿಲ್ಲ ಎಂದು ತಿಳಿಯುತ್ತಿದ್ದಂತೆ ಡೊನಾಲ್ಡ್ ಟ್ರಂಪ್ ಮತದಾನದಲ್ಲಿ ವಂಚನೆ ನಡೆದಿದೆ ಎಂದು ಆರೋಪಿಸಿದ್ದು, ಎಣಿಕೆಯನ್ನು ನಿಲ್ಲಿಸುವಂತೆ ಆಗ್ರಹಿಸಿದ್ದಾರೆ. ಅಲ್ಲದೆ, ಮತದಾನದಲ್ಲಿ ವಂಚನೆ ನಡೆದಿದೆ ಎಂದು ನಿರಂತರವಾಗಿ ಆರೋಪಿಸುತ್ತಿರುವ ಟ್ರಂಪ್ ಸರಣಿ ಟ್ವೀಟ್‌ಗಳನ್ನು ಮಾಡುತ್ತಿದ್ದಾರೆ.

  ಆದರೆ, ಅಮೆರಿಕದ ಎಲ್ಲಾ ರಾಜ್ಯಗಳಲ್ಲೂ ಬೈಡನ್​ ಬಿಡೆನ್ ಪರವಾಗಿ ಸಾಕಷ್ಟು ಮತಗಳು ಚಲಾವಣೆಯಾಗಿವೆ. ಪೆನ್ಸಿಲ್ವೇನಿಯಾ, ನೆವಾಡಾ ಮತ್ತು ಜಾರ್ಜಿಯಾದಲ್ಲಿ  ಜೋ ಬಿಡನ್​ ಡೊನಾಲ್ಡ್​ ಟ್ರಂಪ್ ಅವರಿಗಿಂತ ಸಾಕಷ್ಟು ಮುನ್ನಡೆ ಸಾಧಿಸಿದ್ದಾರೆ. ಪೆನ್ಸಿಲ್ವೇನಿಯಾದಲ್ಲಿ ಜೋ ಬಿಡೆನ್ 27,000 ಅಧಿಕ ದಾಖಲೆ ಮತಗಳೊಂದಿಗೆ ಟ್ರಂಪ್ ಅವರನ್ನು ಸೋಲಿಸಿದ್ದಾರೆ.

  ಮತ ಎಣಿಕೆ ನಿಗದಿಯಂತೆ ನಡೆದಿದ್ದರೆ ಇಷ್ಟೊತ್ತಿಗಾಗಲೇ ಫಲಿತಾಂಶ ಹೊರ ಬೀಳಬೇಕಿತ್ತು. ಆದರೆ, ಅಪಾರ ಸಂಖ್ಯೆಯ ಮೇಲ್​ ಇನ್ ಮತ್ತು ಅಂಚೆ ಮತಗಳು ಇದ್ದ ಕಾರಣ ಅಮೆರಿಕ ಅಧ್ಯಕ್ಷೀಯ ಫಲಿತಾಂಶ ತಡವಾಗುತ್ತಿದೆ ಎಂದು ಹೇಳಲಾಗುತ್ತಿದೆ.

  ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆಯನ್ನು ಗೆಲ್ಲಲು 270 ಸ್ಥಾನಗಳ ಅಗತ್ಯವಿದ್ದು, ಟ್ರಂಪ್ 214 ಸ್ಥಾನಗಳಲ್ಲಿ ಗೆದ್ದು 15 ಸ್ಥಾನಗಳಲ್ಲಿ ಮುನ್ನಡೆಯಲ್ಲಿದ್ದಾರೆ. ಜೋ ಬಿಡೆನ್ 264 ಸ್ಥಾನಗಳನ್ನು ಗೆದ್ದಿದ್ದು, ಅವರಿಗೆ ಗೆಲ್ಲಲು ಇನ್ನೂ 6 ಸ್ಥಾನಗಳ ಅಗತ್ಯವಿದೆಯಾದರೂ 42 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ.

  ಇದನ್ನೂ ಓದಿ : Gold Rate Today: ಹಬ್ಬದ ಸಮಯದಲ್ಲೇ ಗ್ರಾಹಕರಿಗೆ ಕಹಿ ಸುದ್ದಿ; ಸತತ ಏರಿಕೆ ಕಾಣುತ್ತಲೇ ಇದೆ ಚಿನ್ನದ ದರ

  ಮುನ್ನಡೆ ಕಾಯ್ದುಕೊಂಡಿರುವ ಎಲ್ಲಾ ಸ್ಥಾನಗಲ್ಲಿ ಬೈಡನ್ ಗೆದ್ದರೆ 270 ಕ್ಕಿಂತ ಹಚ್ಚಿನ ಸ್ಥಾನ ಪಡೆಯಲಿದ್ದು, ಟ್ರಂಪ್ ಹೀನಾಯ ಸೋಲು ಅನುಭವಿಸಲಿದ್ದಾರೆ. ಈಗಾಗಲೇ ಜೋ ಬಿಡೆನ್ ಅಮೆರಿಕಾದ ಇತಿಹಾಸದಲ್ಲೇ ಅತೀ ಹೆಚ್ಚು ಅಧ್ಯಕ್ಷೀಯ ಮತ ಪಡೆದ ಅಭ್ಯರ್ಥಿಯಾಗಿ ದಾಖಲಾಗಿದ್ದಾರೆ. ಈ ಹಿಂದೆ ಈ ದಾಖಲೆ ಬರಾಕ್ ಒಬಾಮ ಅವರ ಪಾಲಿಗಿತ್ತು.

  ಮತ ಎಣಿಕೆಯ ಪ್ರಾರಂಭದಲ್ಲಿ ಜೋ ಬಿಡೆನ್ ಹಿನ್ನಡೆ ಅನುಭವಿಸಿದ್ದರು, ಆದರೆ ಅವರು ಭಾವೋಧ್ವೇಗಕ್ಕೆ ಒಳಗಾಗದೆ “ನಾವು ಗಲ್ಲಲಿದ್ದೇವೆ, ವಿಶ್ವಾಸ ಇಡಿ” ಎಂದು ತಮ್ಮ ಅಭಿಮಾನಿಗಳಿಗೆ ಧೈರ್ಯ ತುಂಬಿದ್ದರು.
  Published by:MAshok Kumar
  First published: