HOME » NEWS » National-international » BIDAR BACKWATER OF THE KARANJA DAM IS FILL OUT MAK

ಬೀದರ್: ಜಿಲ್ಲೆಯ ಜೀವನಾಡಿ ಕಾರಂಜಾ ಡ್ಯಾಂ ಭರ್ತಿ, 5000 ಹೆಕ್ಟೇರ್ ಹೆಚ್ಚುವರಿ ಜಮೀನಿಗೆ ನುಗ್ಗಿದ ಹಿನ್ನೀರು

ಮೊದಲೇ ಭೂಮಿ ಕಳೆದುಕೊಂಡವರಿಗೆ ಪರಿಹಾರ ನ್ಯಾಯುತವಾಗಿ ಸಿಕ್ಕಿಲ್ಲ. ಅಷ್ಟರಲ್ಲಿ ಹೆಚ್ಚುವರಿ 5000 ಎಕರೆ ಫಸಲು ಹೊತ್ತ ಜಮೀನಿಗೆ ನೀರು ನುಗ್ಗಿದೆ. ಈಗಾಗಲೇ ಮಳೆಯಿಂದ ತತ್ತರಿಸಿರುವ ಬೀದರ್ ಜಿಲ್ಲೆಯ ರೈತರಿಗೆ ಹೆಚ್ಚಾಗುತ್ತಿರುವ ಕಾರಂಜಾ ಜಲಾಶಯದ ಹಿನ್ನೀರಿನ ಪ್ರಮಾಣ ಆತಂಕಕ್ಕೆ ಕಾರಣವಾಗಿದೆ.

news18-kannada
Updated:October 17, 2020, 11:38 AM IST
ಬೀದರ್: ಜಿಲ್ಲೆಯ ಜೀವನಾಡಿ ಕಾರಂಜಾ ಡ್ಯಾಂ ಭರ್ತಿ, 5000 ಹೆಕ್ಟೇರ್ ಹೆಚ್ಚುವರಿ ಜಮೀನಿಗೆ ನುಗ್ಗಿದ ಹಿನ್ನೀರು
ಮಳೆಗೆ ಭರ್ತಿಯಾಗಿರುವ ಬೀದರ್​ ಕರಂಜಾ ಅಣೆಕಟ್ಟೆ.
  • Share this:
ಬೀದರ್: ಜಿಲ್ಲೆಯ ಜೀವನಾಡಿ ಅಂತಲೇ ಹೆಸರಾದ ಜಲಾಶಯ ಕಾರಂಜಾ ಡ್ಯಾಂ ಅನ್ನು 1972ರಲ್ಲಿ  ನಿರ್ಮಾಣ ಮಾಡುವಾಗ ಒಟ್ಟು 1500 ಎಕರೆ ಪ್ರದೇಶವನ್ನು ಮುಳುಗಡೆ ಪ್ರದೇಶವೆಂದು ಪರಿಗಣಿಸಲಾಗಿತ್ತು. ಆಗ ಸಮರ್ಪಕ ಜಮೀನು ಸರ್ವೇ ನಡೆಸಿ 7 ಟಿಎಂಸಿ ಸಾಮರ್ಥ್ಯದ ಡ್ಯಾಂ ನಿರ್ಮಿಸಲಾಗಿತ್ತು. ಹಿನ್ನೀರಿನಿಂದ ನೆರೆ ಉಂಟಾಗುವ ರೈತರ ಜಮೀನುಗಳಿಗೆ ನ್ಯಾಯಯುತ ಪರಿಹಾರ ಸಿಕ್ಕಿರಲಿಲ್ಲ. ಅದರ ನಡುವೆಯೇ ಪ್ರಸ್ತುತ ವರ್ಷ ಡ್ಯಾಂ ತುಂಬಿದ್ದು ರೈತರ ಸಮಸ್ಯೆಗಳನ್ನು ಮತ್ತಷ್ಟು ಹೆಚ್ಚಿಸಿದೆ. ಬೀದರ್ ಜಿಲ್ಲೆಯಲ್ಲಿ ಮಳೆಯ ಅಬ್ಬರಕ್ಕೆ ಕಾರಂಜಾ ಜಲಾಶಯ ಭರ್ತಿಯಾಗಿದೆ. ಡ್ಯಾಂ ನಿರ್ಮಿಸುವ ಆರಂಭದಲ್ಲೇ 26 ಹಳ್ಳಿಗಳ 15000 ಎಕರೆ ಜಮೀನನ್ನು ಸರ್ವೇ ಮಾಡಲಾಗಿತ್ತು. ಆದರೆ, ಈ ವರ್ಷ ಕಾರಂಜಾ ಜಲಾಶಯಕ್ಕೆ ಒಳಹರಿವು ಜಾಸ್ತಿಯಾಗಿರುವುದರಿಂದ ಹಿನ್ನೀರು ರೈತರ ಹೊಲಗಳಿಗೆ ನುಗ್ಗಿದೆ. ಅಲ್ಲದೆ, ಸರ್ವೇ ಮಾಡಿದ್ದು 15000 ಎಕರೆಯಾದರೆ, ಹೆಚ್ಚುವರಿ 5000 ಎಕರೆಗೂ ನೀರು ನುಗ್ಗಿದ್ದು, ರೈತರ ಶ್ರಮ ನೀರುಪಾಲಾಗಿದೆ.

ಬೆಳೆದಿದ್ದ ಕಬ್ಬು, ಉದ್ದು, ಸೋಯಾ, ತೊಗರಿ, ತೋಟಗಾರಿಕೆ ಬೆಳೆಗಳು ನೀರುಪಾಲಾಗಿವೆ. ಇದು ರೈತರನ್ನು ಕಂಗೆಡಿಸಿದೆ. ಮೊದಲು ಸರ್ವೇ ಮಾಡಿದ 15000 ಎಕರೆಗೆ ಸರಕಾರ ಸಮರ್ಪಕವಾದ ಪರಿಹಾರ ನೀಡಿಲ್ಲ. ಅಷ್ಟರಲ್ಲೇ ಹೆಚ್ಚುವರಿ 5000 ಎಕರೆ ಫಲವತ್ತಾದ ಭೂಮಿ ಮುಳುಗಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಇದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.

ತೆಲಂಗಾಣ ಭಾಗದಲ್ಲಿ ವಿಪರೀತ ಮಳೆಯಾಗುತ್ತಿರುವುದರಿಂದ  ಬೀದರ್ ಜಿಲ್ಲೆಯ ಕಾರಂಜಾ ಡ್ಯಾಂ ಗೆ ಹರಿದು ಬರುವ ನೀರಿನ ಪ್ರಮಾಣ ಹೆಚ್ಚಾಗಿದೆ. ಈಗಾಗಲೇ ಕಾರಂಜಾ ಜಲಾಶಯದ ನಾಲ್ಕು ಗೇಟ್ ಓಪನ್ ಮಾಡಿ ನೀರು ಹೊರಬಿಡಲಾಗುತ್ತಿದೆ. 7 ಟಿಎಂಸಿ ಸಾಮರ್ಥ್ಯದ ಕಾರಂಜಾ ಜಲಾಶಯಕ್ಕೆ ನೀರಿನ ಹರಿವು ಹೆಚ್ಚಾದಷ್ಟು ರೈತರ ದುಗುಡ ಹೆಚ್ಚಾಗಲಿದೆ. ಕಾರಂಜಾ ಜಲಾಶಯ ನಿರ್ಮಿಸಿದಾಗಿನಿಂದಲೂ ಪ್ರಸ್ತುತ ವರ್ಷ ಶೇಖರಣೆಯಾದಷ್ಟು ನೀರು ಸಂಗ್ರಹವಾಗಿರಲಿಲ್ಲ. ಇದು ರೈತರನ್ನು ಕಂಗೆಡಿಸಿದೆ.

ಇದನ್ನೂ ಓದಿ : ಉತ್ತರಪ್ರದೇಶದಲ್ಲಿ ಮತ್ತೋರ್ವ ಅಪ್ರಾಪ್ತ ದಲಿತ ಬಾಲಕಿಯ ಅತ್ಯಾಚಾರ-ಕೊಲೆ; ಕಾಮುಕರ ಬಂಧನ

ಮೊದಲೇ ಭೂಮಿ ಕಳೆದುಕೊಂಡವರಿಗೆ ಪರಿಹಾರ ನ್ಯಾಯುತವಾಗಿ ಸಿಕ್ಕಿಲ್ಲ. ಅಷ್ಟರಲ್ಲಿ ಹೆಚ್ಚುವರಿ 5000 ಎಕರೆ ಫಸಲು ಹೊತ್ತ ಜಮೀನಿಗೆ ನೀರು ನುಗ್ಗಿದೆ. ಈಗಾಗಲೇ ಮಳೆಯಿಂದ ತತ್ತರಿಸಿರುವ ಬೀದರ್ ಜಿಲ್ಲೆಯ ರೈತರಿಗೆ ಹೆಚ್ಚಾಗುತ್ತಿರುವ ಕಾರಂಜಾ ಜಲಾಶಯದ ಹಿನ್ನೀರಿನ ಪ್ರಮಾಣ ಆತಂಕಕ್ಕೆ ಕಾರಣವಾಗಿದೆ. ಹೆಚ್ಚುವರಿ ಮುಳುಗಡೆಯಾಗಿರುವ 5000 ಎಕರೆ ಜಮೀನಿನ ಪ್ರದೇಶವನ್ನು ಸರ್ವೇ ಮಾಡಿ ಪರಿಹಾರವನ್ನು ಕೂಡಲೇ ನೀಡಬೇಕೆಂದು ಈ ಭಾಗದ ರೈತರ ಆಗ್ರಹ.

ಸದ್ಯ ಬೀದರ್ ಜಿಲ್ಲೆಯ ರೈತರ ಪರಿಸ್ಥಿತಿ ಯಾತನಾಮಯವಾಗಿದೆ. ಒಂದು ಕಡೆ ಜಲಾಶಯ ತುಂಬಿದ್ದಕ್ಕೆ ಖುಷಿ ಪಡಬೇಕೋ? ಅದೇ ಜಲಾಶಯದ ಹಿನ್ನೀರು ಜಮೀನಿನಲ್ಲಿ ಪ್ರವಾಹ ಪರಿಸ್ಥಿತಿ ಸೃಷ್ಟಿಸಿರುವುದರಿಂದ ದುಃಖಿಸಬೇಕೋ ಎಂಬುದು ತಿಳಿಯದಂತಾಗಿದೆ. ಮೊದಲಿನ ಪರಿಹಾರವೇ ನ್ಯಾಯಯುತವಾಗಿ ಕೈ ಸೇರಿಲ್ಲ. ಅಷ್ಟರಲ್ಲಿ ಮತ್ತೆ ಹೆಚ್ಚುವರಿ ಜಮೀನು ಮುಳುಗಡೆಯಾಗಿರುವುದು ಸಾವಿರಾರು ರೈತ ಕುಟುಂಬಗಳ ಭವಿಷ್ಯದ ಕರಿನೆರಳಾವರಿಸುವಂತೆ ಮಾಡಿದೆ.
Published by: MAshok Kumar
First published: October 17, 2020, 11:38 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading