Bhutan: ಪ್ರವಾಸಿಗರನ್ನು ಸ್ವಾಗತಿಸಲು ಸಜ್ಜಾದ ಭೂತಾನ್; ಮಾರ್ಗಸೂಚಿಗಳು ಅನ್ವಯ

ಭೂತಾನ್‌ ದೇಶವು ಇನ್ನೂ ಕೆಲವೇ ದಿನಗಳಲ್ಲಿ ಪ್ರವಾಸಿಗರಿಗೆ ಮುಕ್ತವಾಗಿರಲಿದ್ದು, ಇದೇ ವೇಳೆ ಗಡಿ ಭದ್ರತಾ ಪಡೆಗಳು ಕೂಡ ಫುಲ್‌ ಅಲರ್ಟ್‌ ಆಗಿವೆ. ಸಿಕ್ಕಿಂ, ಪಶ್ಚಿಮ ಬಂಗಾಳ, ಅಸ್ಸಾಂ ಮತ್ತು ಅರುಣಾಚಲ ಪ್ರದೇಶದ ಜೊತೆಗೆ 699 ಕಿಮೀ ಗಡಿಯನ್ನು ಹಂಚಿಕೊಂಡಿರುವ ಭೂತಾನ್‌ ದೇಶದ ಭದ್ರತಾ ದೃಷ್ಟಿಯಿಂದ ಗಡಿಯಲ್ಲಿ ಸೆಕ್ಯೂರಿಟಿಯನ್ನು ನಿಯೋಜಿಸಿದೆ. ಮತ್ತು ಅಗತ್ಯವಿರುವ ಎಲ್ಲಾ ಸ್ಥಳದಲ್ಲಿ ಭದ್ರತಾ ಕ್ರಮಗಳನ್ನು ತೆಗೆದುಕೊಂಡಿದೆ.

ಭೂತಾನ್‌

ಭೂತಾನ್‌

  • Share this:
ಕೋವಿಡ್ ಬಳಿಕ ಪ್ರವಾಸಿಗರಿಗೆ (Tourists) ನಿಷೇಧ ಹೇರಿದ್ದ ಭೂತಾನ್‌ ಈಗ ಮತ್ತೆ ತನ್ನ ಗಡಿಗಳನ್ನು ತೆರೆಯಲು ಸಜ್ಜಾಗಿದೆ. ಇದೇ ಸೆಪ್ಟೆಂಬರ್‌ 23ರಿಂದ ಕೋವಿಡ್ -19 ಬಳಿಕ ಮೊದಲ ಬಾರಿಗೆ ಅಂತರರಾಷ್ಟ್ರೀಯ ಪ್ರವಾಸಿಗರಿಗೆ ಮುಕ್ತ ಅವಕಾಶ ನೀಡುತ್ತಿದೆ. ಭೂತಾನ್‌ (Bhutan) ದೇಶವು ಇನ್ನೂ ಕೆಲವೇ ದಿನಗಳಲ್ಲಿ ಪ್ರವಾಸಿಗರಿಗೆ ಮುಕ್ತವಾಗಿರಲಿದ್ದು, ಇದೇ ವೇಳೆ ಗಡಿ ಭದ್ರತಾ ಪಡೆಗಳು ಕೂಡ ಫುಲ್‌ ಅಲರ್ಟ್‌ ಆಗಿವೆ. ಸಿಕ್ಕಿಂ, ಪಶ್ಚಿಮ ಬಂಗಾಳ, ಅಸ್ಸಾಂ ಮತ್ತು ಅರುಣಾಚಲ ಪ್ರದೇಶದ ಜೊತೆಗೆ 699 ಕಿಮೀ ಗಡಿಯನ್ನು ಹಂಚಿಕೊಂಡಿರುವ ಭೂತಾನ್‌ ದೇಶದ ಭದ್ರತಾ ದೃಷ್ಟಿಯಿಂದ ಗಡಿಯಲ್ಲಿ ಸೆಕ್ಯೂರಿಟಿಯನ್ನು (Security) ನಿಯೋಜಿಸಿದೆ. ಮತ್ತು ಅಗತ್ಯವಿರುವ ಎಲ್ಲಾ ಸ್ಥಳದಲ್ಲಿ ಭದ್ರತಾ ಕ್ರಮಗಳನ್ನು ತೆಗೆದುಕೊಂಡಿದೆ.

ಭೂತಾನ್‌ ನಲ್ಲಿ ಭದ್ರತಾ ಪಡೆಗಳು ಅಲರ್ಟ್
ಹೋಟೆಲ್‌, ಪ್ರವಾಸಿ ತಾಣ ಹೀಗೆ ಎಲ್ಲಾ ಕಡೆ ಕೆಲವು ಕಟ್ಟುನಿಟ್ಟಿನ ಕ್ರಮಗಳನ್ನು ಜರುಗಿಸಿದೆ. ಭೂತಾನ್ ಪ್ರವಾಸಿ ಮಂಡಳಿಯು ಕೇವಲ 3 ಸ್ಟಾರ್+ ಹೋಟೆಲ್‌ಗಳು ಮತ್ತು ಹೋಮ್‌ಸ್ಟೇಗಳನ್ನು ಪ್ರಮಾಣೀಕರಿಸಲು ನಿರ್ಧರಿಸಿದೆ ಮತ್ತು ಭೂತಾನ್ ಅನ್ನು ಉನ್ನತ-ಮಟ್ಟದ ಪ್ರವಾಸಿ ತಾಣವಾಗಿ ಪ್ರಚಾರ ಮಾಡಲು ಬಯಸುತ್ತಿರುವುದರಿಂದ ಸೌಲಭ್ಯಗಳನ್ನು ಅಪ್‌ಗ್ರೇಡ್ ಮಾಡಲು ಕೇಳಲಾಗಿದೆ.

ಇದನ್ನೂ ಓದಿ: Chenab Rail Bridge: ಮೋಡಗಳ ಮೇಲಿನ ಸೇತುವೆಯಿದು, ಚಿನಾಬ್ ಬ್ರಿಡ್ಜ್ ಫೋಟೋ ಶೇರ್ ಮಾಡಿದ ಭಾರತೀಯ ರೈಲ್ವೇ!

ಭೂತಾನ್ ಗೆ ಭೇಟಿ ನೀಡುವವರ ಸಂಖ್ಯೆಯಲ್ಲಿ ಭಾರತ, ಮಾಲ್ಡೀವ್ಸ್ ಮತ್ತು ಬಾಂಗ್ಲಾದೇಶ ಹೆಚ್ಚು ಪಾಲನ್ನು ಪಡೆದಿದೆ. ಭಾರಿ ಪ್ರವಾಸಿಗರ ಒಳಹರಿವು ಬಜೆಟ್ ಹೋಟೆಲ್‌ಗಳ ತಿಕ್ಕಾಟಕ್ಕೆ ಕಾರಣವಾಗಬಹುದು ಎಂದು ಅಂದಾಜಿಸಲಾಗಿದೆ. ಗಡಿ ಕಾವಲು ಪಡೆ, ಸಶಸ್ತ್ರ ಸೀಮಾ ಬಾಲ್, ಸ್ಥಳೀಯ ಆಡಳಿತದೊಂದಿಗೆ ಘರ್ಷಣೆಯ ಪ್ರದೇಶಗಳನ್ನು ಗುರುತಿಸಿದ್ದು ಮತ್ತು ಮುಂಜಾಗ್ರತೆ ಕ್ರಮಗಳನ್ನು ಕೈಗೊಂಡಿರುವುದಾಗಿ ಕೇಂದ್ರ ಗೃಹ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ಅಧಿಕಾರಿಯೊಬ್ಬರು "ಎರಡು ವರ್ಷಗಳ ನಂತರ, ಭೂತಾನ್ ಪ್ರವಾಸಿಗರಿಗೆ ಅವಕಾಶ ನೀಡುತ್ತಿದೆ. ಹೆಚ್ಚಿನ ಸಂಖ್ಯೆಯ ವಿದೇಶಿ ಮತ್ತು ಸ್ಥಳೀಯ ಪ್ರವಾಸಿಗರು ಭೂ ಮಾರ್ಗಗಳನ್ನು ಬಳಸುವ ನಿರೀಕ್ಷೆಯಿದೆ. ಸ್ಥಳೀಯ ಆಡಳಿತ ಮತ್ತು ಭೂತಾನ್ ಸಹವರ್ತಿಗಳೊಂದಿಗೆ ಕೆಲಸ ಮಾಡಲು ಸಶಾಸ್ತ್ರ ಸೀಮಾ ಬಾಲ್ ಸಜ್ಜಾಗಿದೆ" ಎಂದು ನಾರ್ತ್ ಬ್ಲಾಕ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮಾರ್ಗಸೂಚಿಗಳು ಅನ್ವಯ
ನಿಷೇಧ ಸಡಿಲಿಸಿದ್ದರು ಕೆಲವು ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ. ವಿಶೇಷವಾಗಿ ಹೋಟೆಲ್‌ಗಳು, ಗೈಡ್‌ಗಳು, ಟೂರ್ ಆಪರೇಟರ್‌ಗಳು ಮತ್ತು ಡ್ರೈವರ್‌ಗಳು ಸೇರಿದಂತೆ ಸೇವಾ ಪೂರೈಕೆದಾರರಿಗೆ ಪರಿಷ್ಕೃತ ಮಾನದಂಡಗಳನ್ನು ನೀಡಲಾಗಿದೆ. ಸೇವಾ ಗುಣಮಟ್ಟವನ್ನು ಹೆಚ್ಚಿಸಲು ಅಗತ್ಯವಿರುವಲ್ಲಿ ಉದ್ಯೋಗಿಗಳು ಕೌಶಲ್ಯ ಮತ್ತು ಮರುಕಳಿಸುವ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಅಗತ್ಯವಿದೆ ಎಂದು ಸರ್ಕಾರ ತಿಳಿಸಿದೆ.

ದುಬಾರಿಯಾಗಿದರುವ ಭೂತಾನ್‌ ಪ್ರವಾಸ
ಭೂತಾನ್‌ ಪ್ರವಾಸಿಗರಿಗೆ ಅವಕಾಶ ನೀಡಿದೆಯಾದರೂ, ಪ್ರವಾಸ ಮಾತ್ರ ಜನರಿಗೆ ದುಬಾರಿಯಾಗಿದೆ. ಪ್ರಯಾಣಿಕರು ಈಗ ಭೂತಾನ್ ದೇಶ ಪ್ರವೇಶಿಸಲು ಮತ್ತು ಅನ್ವೇಷಿಸಲು ಭಾರಿ ತೆರಿಗೆಯನ್ನು ಪಾವತಿಸಬೇಕಾಗಿದೆ. ಇತ್ತೀಚಿನ ನವೀಕರಣದಲ್ಲಿ, ಭೂತಾನ್ ಪ್ರವಾಸಿಗರಿಗೆ ತನ್ನ ಸುಸ್ಥಿರ ಅಭಿವೃದ್ಧಿ ಶುಲ್ಕವನ್ನು ದಿನಕ್ಕೆ ಪ್ರತಿ ವ್ಯಕ್ತಿಗೆ $200 (ಸುಮಾರು15,985 ರೂ) ಗೆ ಹೆಚ್ಚಿಸಿದೆ ಮತ್ತು ಇದು ಇತರ ಪ್ರಯಾಣ ವೆಚ್ಚಗಳಿಗೆ ಹೆಚ್ಚುವರಿಯಾಗಿದ್ದು, ಇದರಿಂದ ಭಾರತೀಯ ಪ್ರಯಾಣಿಕರಿಗೆ ಸ್ವಲ್ಪ ವಿನಾಯಿತಿ ಸಿಕ್ಕಿದೆ. ಭಾರತೀಯ ನಾಗರಿಕರು ದಿನಕ್ಕೆ $15 (1,196 ರೂ) ಸುಸ್ಥಿರ ಅಭಿವೃದ್ಧಿ ಶುಲ್ಕವನ್ನು ಪಾವತಿಸಬೇಕು.

ಇದನ್ನೂ ಓದಿ:  Myrusu Travel Places: ದಸರಾಗೆ ಹೋದ್ರೆ ಮೈಸೂರಿನ ಈ ಸ್ಥಳಗಳನ್ನೂ ಕಣ್ತುಂಬಿಕೊಂಡು, ಸುಂದರ ಅನುಭವ ನಿಮ್ಮದಾಗಿಸಿಕೊಳ್ಳಿ

ಭೂತಾನ್ ಪ್ರವಾಸೋದ್ಯಮದಿಂದಲೇ ತನ್ನ ಹೆಚ್ಚಿನ ಆದಾಯವನ್ನು ಪಡೆಯುತ್ತಿರುವುದರಿಂದ ಇತರೆ ಶುಲ್ಕಗಳ ಹೆಚ್ಚಳದಿಂದಾಗಿ ಹೆಚ್ಚಿನ ಆದಾಯ ಪಡೆಯಲು ಯೋಜಿಸಿದೆ. ಪ್ರವಾಸೋದ್ಯಮವೇ ದೇಶದ ಆದಾಯದ ದೊಡ್ಡ ಮೂಲವಾಗಿರುವುದರಿಂದ ಅದರ ಪುನಶ್ಚೇತನಕ್ಕೆ ಭಾರಿ ಕ್ರಮಗಳನ್ನು ಮತ್ತು ಭದ್ರತೆಗಳನ್ನು ಭಾರತ ಮತ್ತು ಚೀನಾ ಗಡಿಯಲ್ಲಿರುವ ಹಿಮಾಲಯದ ಸಣ್ಣ ದೇಶವು ತೆಗೆದುಕೊಂಡಿದೆ.
Published by:Ashwini Prabhu
First published: