Bhutan Economic Crisis: ಆರ್ಥಿಕ ಬಿಕ್ಕಟ್ಟಿನಲ್ಲಿ ಭೂತಾನ್‌: ಶ್ರೀಲಂಕಾದಂತೇ ಆಗುವುದೇ?

ಆರ್ಥಿಕ ಹೊಡೆತ ಅನುಭವಿಸುತ್ತಿರುವ ಭೂತಾನ್‌ನ ಸಣ್ಣ ಮತ್ತು ಮಧ್ಯಮ ಗಾತ್ರದ ವ್ಯವಹಾರಗಳನ್ನು ನಿಭಾಯಿಸಲು ಕೂಡ ಹೆಣಗಾಡುತ್ತಿದೆ. ಅಷ್ಟರ ಮಟ್ಟಿಗೆ ಭೂತಾನ್‌ನ ಆರ್ಥಿಕ ಬಿಕ್ಕಟ್ಟು ಗಂಭೀರವಾಗಿದೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಶ್ರೀಲಂಕಾ (Sri Lanka) ಮಾತ್ರವಲ್ಲದೇ ದೇಶದ ಹಲವು ದೇಶಗಳು ಆರ್ಥಿಕ ಸಂಕಷ್ಟದಲ್ಲಿ ಇವೆ ಎಂದು ಈ ಹಿಂದೆ ವರದಿಯಾಗಿತ್ತು. ಇದೇ ಸಾಲಿಗೆ ಸೇರಿರುವ ಭಾರತದ ನೆರೆ ದೇಶ ಭೂತಾನ್ (Bhutan) ಪ್ರಸ್ತುತ ಅತೀವ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದೆ. 800,000ಕ್ಕಿಂತ ಕಡಿಮೆ ಜನಸಂಖ್ಯೆ (Less Population) ಹೊಂದಿರುವ ಭೂತಾನ್ ಜಾಗತಿಕ ಆರ್ಥಿಕ ಕುಸಿತ, ರಾಷ್ಟ್ರವ್ಯಾಪಿ ಕೋವಿಡ್ ಲಾಕ್‌ಡೌನ್‌, ಚೀನಾ ಮತ್ತು ಭಾರತ ನಡುವಿನ ಪೂರೈಕೆ ಸರಪಳಿ ಕುಸಿತ ಈ ಎಲ್ಲಾ ಅಂಶಗಳು ನೇರವಾಗಿ ಭೂತಾನ್ ಆರ್ಥಿಕ ಪರಿಸ್ಥಿತಿ ಮೇಲೆ ತೀವ್ರವಾಗಿ ಪ್ರಭಾವ ಬೀರಿದೆ. ಆರ್ಥಿಕ ಹೊಡೆತ ಅನುಭವಿಸುತ್ತಿರುವ ಭೂತಾನ್‌ನ ಸಣ್ಣ ಮತ್ತು ಮಧ್ಯಮ ಗಾತ್ರದ ವ್ಯವಹಾರಗಳನ್ನು (Business) ನಿಭಾಯಿಸಲು ಕೂಡ ಹೆಣಗಾಡುತ್ತಿದೆ. ಅಷ್ಟರ ಮಟ್ಟಿಗೆ ಭೂತಾನ್‌ನ ಆರ್ಥಿಕ ಬಿಕ್ಕಟ್ಟು ಗಂಭೀರವಾಗಿದೆ.

“ ಶ್ರೀಲಂಕಾದಷ್ಟು ಪರಿಸ್ಥಿತಿ ಹದಗೆಟ್ಟಿಲ್ಲ”
“ಭೂತಾನ್ ಎದುರಸುತ್ತಿರುವ ಪರಿಸ್ಥಿತಿಯನ್ನು ಸದ್ಯ ಶ್ರೀಲಂಕಾಕ್ಕೆ ಹೋಲಿಸಲಾಗುವುದಿಲ್ಲ" ಎಂದು ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ದಕ್ಷಿಣ ಏಷ್ಯಾದ ಅಧ್ಯಯನಗಳ ಪ್ರಾಧ್ಯಾಪಕ ಸಂಗೀತಾ ಥಪ್ಲಿಯಾಲ್ ತಿಳಿಸಿದ್ದಾರೆ. ಶ್ರೀಲಂಕಾದ ಸ್ಥಿತಿ ಹೇಗಿತ್ತು ಎಂದರೆ ಸಾಲದ ಹೊರೆಯ ಆರ್ಥಿಕತೆಯು ಆಹಾರ, ಇಂಧನ ಮತ್ತು ಔಷಧಕ್ಕಾಗಿ ಪಾವತಿಸಲು ಕೂಡ ಹಣವಿರದ ಸ್ಥಿತಿ ಉಂಟಾಗಿ ಜನ ಬೀದಿಗಿಳಿದು ಪ್ರತಿಭಟನೆಗಳನ್ನು ಮಾಡಿದ್ದರು. ಇಷ್ಟು ಮಾತ್ರವಲ್ಲದೇ ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧವು ವಿಶೇಷವಾಗಿ ಹೆಚ್ಚುತ್ತಿರುವ ಪೆಟ್ರೋಲಿಯಂ ಬೆಲೆಗಳೊಂದಿಗೆ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿದೆ" ಎಂದು ಅವರು ಹೇಳಿದರು.

ಈ ಹಿಂದೆ ವರದಿಯೊಂದು ವಿಶ್ವದ 13 ದೇಶಗಳು ಆರ್ಥಿಕ ಸಂಕಷ್ಟದಲ್ಲಿವೆ ಎಂದು ತಿಳಿಸಿತ್ತು. ಅದೇ ರೀತಿ ಇತರ ದೇಶಗಳಂತೆ ಭೂತಾನ್‌ನ ಆರ್ಥಿಕತೆಯು ಹಣದುಬ್ಬರ, ಆರ್ಥಿಕ ಹಿನ್ನಡೆ ಮತ್ತು ಉದ್ಯೋಗ ನಷ್ಟ ಅನುಭವಿಸುತ್ತಿದೆ.

ಭೂತಾನ್ ಆರ್ಥಿಕ ಸಂಕಷ್ಟಕ್ಕೆ ಕಾರಣಗಳೇನು?
ಭೂತಾನ್ ನ ಈ ಪರಿಸ್ಥಿತಿಗೆ ಹಲವಾರು ತಜ್ಞರು ಮತ್ತು ದೇಶದ ನಾಯಕರು ಬೇರೆ ಬೇರೆ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ. ತಜ್ಞರು ಹೇಳುವ ಪ್ರಕಾರ ಭೂತಾನ್‌ನ ಎನ್‌ಗುಲ್ಟ್ರಮ್ ಕರೆನ್ಸಿಯನ್ನು ಬಲಪಡಿಸುವ ಡಾಲರ್ ಮತ್ತು ಕುಸಿಯುತ್ತಿರುವ ಭಾರತೀಯ ರೂಪಾಯಿ ಕೂಡ ಇದಕ್ಕೆ ಕಾರಣ ಎನ್ನುತ್ತಾರೆ. ಭೂತಾನ್ ಚೇಂಬರ್ಸ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರಿಯ ಹಿರಿಯ ಅಧಿಕಾರಿಗಳು, "ಗೋಧಿ ರಫ್ತಿನ ಮೇಲೆ ಭಾರತ ವಿಧಿಸಿರುವ ನಿರ್ಬಂಧಗಳು ಸ್ಥಳೀಯ ಬೆಲೆಗಳಲ್ಲಿ ಮತ್ತಷ್ಟು ಏರಿಕೆಯಾಗುವ ಆತಂಕವನ್ನು ಹೆಚ್ಚಿಸಿವೆ, ಇದು ಆರ್ಥಿಕತೆಗೆ ಪೆಟ್ಟು ನೀಡಿದೆ ಎಂದು ತಿಳಿಸಿದರು.

ಪ್ರವಾಸೋದ್ಯಮ ಚೇತರಿಕೆ, ಉತ್ಪಾದನಾ ವಲಯ ನಿಶ್ಚಲ
ಭೂತಾನ್ ತನ್ನ ಜಲವಿದ್ಯುತ್ ಮತ್ತು ಪ್ರವಾಸೋದ್ಯಮ ಕ್ಷೇತ್ರಗಳ ಮೇಲೆ ಕೇಂದ್ರೀಕೃತವಾಗಿರುವುದರಿಂದ ಸ್ವಲ್ಪ ಮಟ್ಟಿಗೆ, ಅಲ್ಲಿಂದ ಆದಾಯವನ್ನು ಗಳಿಸುತ್ತಿದೆ. ಏತನ್ಮಧ್ಯೆ, ಜಿಡಿಪಿಯಲ್ಲಿ ಭೂತಾನ್‌ನ ಉತ್ಪಾದನಾ ವಲಯದ ಪಾಲು ಒಂದು ದಶಕದಿಂದ ನಿಶ್ಚಲವಾಗಿದೆ. ಇತ್ತೀಚಿನ ಸಭೆಯಲ್ಲಿ, ಭೂತಾನ್‌ನ ಹಣಕಾಸು ಸಚಿವ ಲಿಯಾನ್‌ಪೋ ನಮ್‌ಗೇ ತ್ಶೆರಿಂಗ್, ಸರ್ಕಾರವು ಆಮದುಗಳನ್ನು ನಿಷೇಧಿಸುವ ಪರವಾಗಿಲ್ಲ. ಆದರೆ ವಿದೇಶಿ ಮೀಸಲುಗಳನ್ನು ರಕ್ಷಿಸಲು ಸಹಾಯ ಮಾಡಲು ಪ್ರಯತ್ನಿಸುತ್ತದೆ ಎಂದು ಹೇಳಿದ್ದರು. ತ್ಶೆರಿಂಗ್ ಇತ್ತೀಚೆಗೆ ಮಂಡಿಸಿದ ವಾರ್ಷಿಕ ಬಜೆಟ್ ಭೂತಾನ್‌ನ ಅತ್ಯಧಿಕ ವಿತ್ತೀಯ ಕೊರತೆ 22.882 ಶತಕೋಟಿ Nu (€283 ಮಿಲಿಯನ್) ಮತ್ತು ದೇಶದ ಜಿಡಿಪಿ 11.25% ಆಗಿದೆ.

ಇದನ್ನೂ ಓದಿ: Langya HenipaVirus: ಏನಿದು ಚೀನಾದಲ್ಲಿ ಪತ್ತೆಯಾದ ಹೊಸ ವೈರಸ್? ಮನುಕುಲಕ್ಕೆ ವಿನಾಶಕಾರಿಯೇ 'ಲಾಂಗ್ಯಾ'?

ಕುಗ್ಗುತ್ತಿದೆಯೇ ವಿದೇಶಿ ಮೀಸಲು?
ಭೂತಾನ್‌ನ ರಾಯಲ್ ಮಾನಿಟರಿ ಅಥಾರಿಟಿ ಜುಲೈನಲ್ಲಿ ಬಿಡುಗಡೆ ಮಾಡಿದ ಡೇಟಾವು ವಿದೇಶಿ ವಿನಿಮಯ ಮೀಸಲುಗಳು ಡಿಸೆಂಬರ್ ಅಂತ್ಯದಲ್ಲಿ $ 970 ಮಿಲಿಯನ್ (€ 955 ಮಿಲಿಯನ್) ಗೆ ತಗ್ಗಿದೆ ಎಂದು ತೋರಿಸಿದೆ. ಏಪ್ರಿಲ್ 2021 ರಲ್ಲಿ $ 1.46 ಶತಕೋಟಿ ಇದ್ದು, ಆದರೆ ಒಟ್ಟು ಬಾಹ್ಯ ಸಾಲವು ಕರೋನವೈರಸ್ ಮೊದಲು $ 2.7 ಶತಕೋಟಿಯಿಂದ $ 3.2 ಶತಕೋಟಿಗೆ ಏರಿಕೆ ಕಂಡಿದೆ.

14 ತಿಂಗಳ ಕಾಲ ಅಗತ್ಯ ವಸ್ತುಗಳ ಆಮದನ್ನು ಪೂರೈಸಲು ದೇಶವು ಸಾಕಷ್ಟು ವಿದೇಶಿ ಮೀಸಲನ್ನು ಪ್ರಸ್ತುತ ಹೊಂದಿದೆ. ಭೂತಾನ್‌ನ ಸರ್ಕಾರ ಕೂಡ 12 ತಿಂಗಳ ಆಮದುಗಳನ್ನು ಪೂರೈಸಲು ಸಾಕಷ್ಟು ವಿದೇಶಿ ಕರೆನ್ಸಿಯನ್ನು ಕಾಯ್ದುಕೊಳ್ಳಲು ಕಡ್ಡಾಯವಾಗಿ ಕ್ರಮ ತೆಗೆದುಕೊಂಡಿದೆ.

"ನಮ್ಮದು ಆಮದು-ಅವಲಂಬಿತ ದೇಶವಾಗಿದೆ. ನಾವು ಇತರ ಕ್ಷೇತ್ರಗಳನ್ನು ನೋಡಲು ಪ್ರಾರಂಭಿಸಬೇಕು ಮತ್ತು ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸಲು ಆದಾಯವನ್ನು ತರುವಂತಹ ನೀತಿಗಳನ್ನು ಮರುರೂಪಿಸಬೇಕಾಗಿದೆ. ಕೃಷಿಗಾಗಿ ಹೊಸ ತಂತ್ರಜ್ಞಾನದಲ್ಲಿ ಹೂಡಿಕೆ ಮಾಡುವುದು ಒಂದು ಆರಂಭವಾಗಿದೆ," ಎಂದು ಉಗ್ಯೆನ್ ಪೆಂಜರ್, ಕ್ಯುನ್ಸೆಲ್ನ CEO,ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಪ್ರವಾಸೋದ್ಯಮಕ್ಕೆ ಹೆಚ್ಚು ಒತ್ತು
ಕೋವಿಡ್ ಕಾರಣದಿಂದ ಪ್ರವಾಸಿಗರಿಗೆ ನಿರ್ಭಂದ ಹೇರಿದ್ದ ದೇಶ, ಸೆಪ್ಟೆಂಬರ್ ನಿಂದ ಪ್ರವಾಸಿಗರಿಗೆ ದೇಶಕ್ಕೆ ಬರಲು ಅವಕಾಶ ನೀಡಿದೆ. ಭೂತಾನ್‌ನ ಆದಾಯಕ್ಕೆ ಹೆಚ್ಚಿನ ಕೊಡುಗೆ ನೀಡುವವರಲ್ಲಿ ಪ್ರವಾಸೋದ್ಯಮ ಒಂದಾಗಿರುವುದರಿಂದ ಅದನ್ನು ಪುನರ್ ಜ್ಜೀವನಗೊಳಿಸಲು 50,000ಕ್ಕೂ ಹೆಚ್ಚು ಜನರನ್ನು ನೇಮಿಸಿಕೊಂಡಿದೆ. ಆದರೆ 2019-2020ರಲ್ಲಿ ಕುಸಿತ ಕಂಡಿತ್ತು. ಕೇವಲ 2020ರಲ್ಲಿ 28,000 ಸಂದರ್ಶಕರು ಭೂತಾನ್‌ಗೆ ಬಂದಿದ್ದು, $19 ಮಿಲಿಯನ್ (€18.67 ಮಿಲಿಯನ್) ಆದಾಯವನ್ನು ಗಳಿಸಿತ್ತು. ಹೀಗಾಗಿ ಆದಾಯ ಗಳಿಸಲು ಭೂತಾನ್ ಹೊಸ ಕ್ರಮಕ್ಕೆ ಮುಂದಾಗಿದ್ದು, ಪ್ರವಾಸಿಗರ ಸುಸ್ಥಿರ ಅಭಿವೃದ್ಧಿ ಶುಲ್ಕವನ್ನು $200ಕ್ಕೆ (€196)ಹೆಚ್ಚಿಸಿದೆ.

ಇದನ್ನೂ ಓದಿ:  Explained: ಅಲ್ ಖೈದಾ ಮುಖ್ಯಸ್ಥನ ಹತ್ಯೆ ಹೇಗಾಯ್ತು? ಅಮೆರಿಕಾ ಇವನನ್ನೇ ಏಕೆ ಟಾರ್ಗೆಟ್ ಮಾಡಿತ್ತು?

ಜಲವಿದ್ಯುತ್ ಉತ್ಕರ್ಷ
ಭೂತಾನ್‌ನ ಆರ್ಥಿಕ ಅಭಿವೃದ್ಧಿಯು ಅದರ ಜಲವಿದ್ಯುತ್ ಕ್ಷೇತ್ರದ ಬೆಳವಣಿಗೆಯೊಂದಿಗೆ ಸಹ ಸಂಬಂಧ ಹೊಂದಿದೆ. ದೇಶವು ಉತ್ಪಾದಿಸುವ ಸುಮಾರು 70% ಶಕ್ತಿಯನ್ನು ಭಾರತಕ್ಕೆ ರಫ್ತು ಮಾಡುವುದರಿಂದ ದೇಶಕ್ಕೆ ಅದರಿಂದ ಪ್ರಮುಖ ಆದಾಯ ಬೊಕ್ಕಸಕ್ಕೆ ಸೇರುತ್ತದೆ.

ಈ ರಂಗದಲ್ಲಿ ಭಾರತವು ಭೂತಾನ್‌ನ ಅತಿದೊಡ್ಡ ರಫ್ತು ಮಾರುಕಟ್ಟೆಯಾಗಿದೆ. ಇದು ಭೂತಾನ್‌ನ ಒಟ್ಟಾರೆ ವ್ಯಾಪಾರದ 50% ರಷ್ಟಿದೆ ಮತ್ತು ದೇಶದ ಅಗ್ರ ವಿದೇಶಿ ಹೂಡಿಕೆದಾರರಲ್ಲಿ ಒಂದಾಗಿದೆ.

ಆರ್ಥಿಕ ಬಿಕ್ಕಟ್ಟಿನಿಂದ ಹದಗೆಡುತ್ತಾ ಭಾರತ-ಭೂತಾನ್ ಸಂಬಂಧ?
ದೀರ್ಘಾವಧಿಯ ಆರ್ಥಿಕ ಬಿಕ್ಕಟ್ಟು ಭಾರತ ಮತ್ತು ಭೂತಾನ್ ನಡುವಿನ ಸಂಬಂಧವನ್ನು ಹದಗೆಡಿಸಬಹುದು ಎಂಬ ಆತಂಕ ಕೂಡ ಇದೆ. ಭೂತಾನ್ ಇದುವರೆಗೆ ಭಾರತದೊಂದಿಗೆ ವಿಶಿಷ್ಟವಾದ ಮೈತ್ರಿಯನ್ನು ಉಳಿಸಿಕೊಂಡಿದೆ, ಆದರೆ ಚೀನಾದೊಂದಿಗೆ ತಟಸ್ಥ ವ್ಯವಹಾರಗಳನ್ನು ಹೊಂದಿದೆ. ಇಬ್ಬರ ನಡುವಿನ ಈ ಪರಿಸ್ಥಿತಿಯ ಲಾಭವನ್ನು ಚೀನಾ ಪಡೆದುಕೊಳ್ಳಬಹುದು ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಇದನ್ನೂ ಓದಿ:  Explained: ಸೂರ್ಯನ ಆಯಸ್ಸಿನ ಅರ್ಧಭಾಗ ಕಂಪ್ಲೀಟ್! ನಿಗಿನಿಗಿ ಕೆಂಡದಂತಹ ನಕ್ಷತ್ರ ಎಷ್ಟು ವರ್ಷ ಬದುಕಲಿದೆ?

ಭಾರತದಿಂದ ಸಹಾಯ ಬಯಸಿದ ನೆರೆ ದೇಶ
ಭಾರತದ ಮೇಲೆ ಗೌರವ ಹೊಂದಿರುವ ಭೂತಾನ್ ನಾಯಕರು ಕೂಡ ಭಾರತದಿಂದ ಸಹಾಯವನ್ನು ಬಯಸಿರುವುದಾಗಿ ತಿಳಿದು ಬಂದಿದೆ. "ಈ ಪರಿಸ್ಥಿತಿಯಲ್ಲಿ, ಭಾರತವು ವಿಶೇಷ ಸಂಬಂಧವನ್ನು ಹೊಂದಿರುವ ಭೂತಾನ್‌ಗೆ ಸಹಾಯ ಮಾಡುವುದು ಅತ್ಯಗತ್ಯ. ಆರ್ಥಿಕವಾಗಿ ಬಲಿಷ್ಠ ಭಾರತವು ತನ್ನ ಆರ್ಥಿಕ ಸವಾಲುಗಳನ್ನು ಎದುರಿಸಲು ಭೂತಾನ್‌ಗೆ ಸಹಾಯ ಮಾಡುವ ಸಾಮರ್ಥ್ಯವನ್ನು ಹೊಂದಿದೆ, ಅದು ದೀರ್ಘಾವಧಿಯಲ್ಲಿ ದ್ವಿಪಕ್ಷೀಯ ಸಂಬಂಧಗಳನ್ನು ಬಲವಾಗಿ ಮತ್ತು ಸ್ಥಿರವಾಗಿ ಹಿಡಿದಿಟ್ಟುಕೊಳ್ಳುತ್ತದೆ" ಎಂದು ಥಪ್ಲಿಯಾಲ್ ಹೇಳಿದ್ದಾರೆ.
Published by:Ashwini Prabhu
First published: