• Home
  • »
  • News
  • »
  • national-international
  • »
  • Bhutan Tourism: ಭೂತಾನ್​ ಪ್ರವಾಸಕ್ಕೆ ಇದು ಸುಸಮಯ; ಶುಲ್ಕ ಬರೀ ₹ 1200 ಮಾತ್ರ!

Bhutan Tourism: ಭೂತಾನ್​ ಪ್ರವಾಸಕ್ಕೆ ಇದು ಸುಸಮಯ; ಶುಲ್ಕ ಬರೀ ₹ 1200 ಮಾತ್ರ!

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

Bhutan Tourism: ಕೊರೋನಾ, ಲಾಕ್‌ ಡೌನ್‌ ಅಂತಾ ಬರೋಬ್ಬರಿ 2 ವರ್ಷಗಳ ನಂತರ ಭೂತಾನ್ ಪ್ರವಾಸಿಗರನ್ನು ಬರಮಾಡಿಕೊಳ್ಳುತ್ತಿದೆ.

  • Share this:

ಕೊರೊನಾ ಸಮಯದಲ್ಲಿ ಎಲ್ಲಾ ರಾಷ್ಟ್ರಗಳು ತಮ್ಮ ತಮ್ಮ ಗಡಿಯಲ್ಲಿ ನಿರ್ಬಂಧ ಹೇರಿದ್ದವು. ಇದೀಗ, ಕೊರೊನಾ ಸಾಂಕ್ರಾಮಿಕದ ತೀವ್ರತೆ ತಗ್ಗಿದೆ. ಹೀಗಾಗಿ, ಬಹುತೇಕ ದೇಶಗಳು ತಮ್ಮ ಗಡಿಯನ್ನು ಅಂತಾರಾಷ್ಟ್ರೀಯ ಪ್ರವಾಸಿಗರಿಗೆ ಮುಕ್ತಗೊಳಿಸಿದೆ. ಅದೇ ಸಾಲಿಗೆ ಈಗ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಒಂದಾದ ಭೂತಾನ್ (Bhutan)‌ ಕೂಡ ಸೇರಿದೆ. ಬರೋಬ್ಬರಿ ಎರಡೂವರೆ ವರ್ಷಗಳ ಬಳಿಕ ಈಗ ಭಾರತ ಭೂತಾನ್ ಗಡಿ ತೆರೆದುಕೊಳ್ಳುತ್ತಿದೆ. ಅಸ್ಸಾಂ ಗಡಿಯಲ್ಲಿರುವ (Assam Border) ಸಮ್ದ್ರೂಪ್ ಜೊಂಗ್‌ಖಾರ್ ಮತ್ತು ಗೆಲೆಫುನಲ್ಲಿನ ಭಾರತ-ಭೂತಾನ್ ಗಡಿ  (India-Bhutan Border) ಗೇಟ್‌ಗಳು ಪ್ರವಾಸಿಗರಿಗೆ ತೆರೆದುಕೊಂಡಿದೆ. ಇಲ್ಲಿದೆ ಈ ಕುರಿತ ಎಲ್ಲ ವಿವರ.


2 ವರ್ಷಗಳ ನಂತರ ಭೂತಾನ್ ಪುನಾರಂಭ
ಕೊರೋನಾ, ಲಾಕ್‌ ಡೌನ್‌ ಅಂತಾ ಬರೋಬ್ಬರಿ 2 ವರ್ಷಗಳ ನಂತರ ಭೂತಾನ್ ಪ್ರವಾಸಿಗರನ್ನು ಬರಮಾಡಿಕೊಳ್ಳುತ್ತಿದೆ. ಪ್ರವಾಸೋದ್ಯಮ, ದೇಶದ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಸುಸ್ಥಿರ ಅಭಿವೃದ್ಧಿ ಶುಲ್ಕದ ಹೆಸರಿನಲ್ಲಿ ಪ್ರವಾಸಿಗರಿಗೆ ಹೊಸ ಶುಲ್ಕವನ್ನು ಸಹ ವಿಧಿಸಲಾಗುತ್ತಿದೆ. ಭೂತಾನದ ದೇಶದ ಈ ಕ್ರಮ ಸಹಜವಾಗಿ ಪ್ರವಾಸಿಗರಿಗೆ ದುಬಾರಿ ಕೂಡ ಆಗಿದೆ.


ಭಾರತೀಯರಿಗೂ ಪ್ರವಾಸಿ ಶುಲ್ಕ
ಭೂತಾನ್‌ ದೇಶಕ್ಕೆ ಆದಾಯದ ಹೆಚ್ಚಿನ ಮೂಲವೇ ಪ್ರವಾಸೋದ್ಯಮ. ಹೀಗಾಗಿ ಇದರಿಂದಲೇ ಲಾಭ ಮಾಡಲು ಪ್ರವಾಸಿಗರಿಗೆ ಶುಲ್ಕ ಹೆಚ್ಚಿಸಿದೆ. ಭೂತಾನ್ ಸರ್ಕಾರವು ಪ್ರವಾಸಿ ತಾಣಗಳನ್ನು ವೀಕ್ಷಿಸಲು ಪ್ರವಾಸಿಗರ ಶುಲ್ಕವನ್ನು 200 ಡಾಲರ್‌ಗೆ ಏರಿಸಿದೆ. ಕಳೆದ 2 ವರ್ಷದ ಹಿಂದೆ ಇದೇ ಶುಲ್ಕ 65 ಡಾಲರ್ ಇತ್ತು.


ಇದನ್ನೂ ಓದಿ: Viral Video: ಬರಿಗೈಲಿ ಟಾಯ್ಲೆಟ್ ಕ್ಲೀನ್ ಮಾಡಿದ ಬಿಜೆಪಿ ಸಂಸದ! ವಿಡಿಯೋ ಫುಲ್ ವೈರಲ್


ಅಷ್ಟೇ ಅಲ್ಲ, ನೆರೆ ದೇಶ ಭಾರತಕ್ಕೂ ಕೂಡ ಶುಲ್ಕವನ್ನು ವಿಧಿಸಿದೆ. ಕೊರೊನಾಕ್ಕಿಂತ ಮೊದಲು ಭಾರತೀಯರಿಗೆ ಈ ರೀತಿಯ ಶುಲ್ಕದ ಯಾವುದೇ ನಿಯಮವಿರಲಿಲ್ಲ. ಆದರೆ ಇದೀಗ ಭಾರತೀಯರೂ ದಿನಕ್ಕೆ 1,200 ರೂ. ಪಾವತಿಸಬೇಕು ಎಂಬ ನಿಯಮವನ್ನು ಜಾರಿ ಮಾಡಿದೆ. ಆದರೆ, ಭಾರತೀಯ ಪ್ರವಾಸಿಗರಿಗೆ ಪರಿಷ್ಕೃತ ಶುಲ್ಕ ಇನ್ನೂ ಜಾರಿಗೆ ಬಂದಿಲ್ಲ.


ಕೊರೋನಾ ಪ್ರಕರಣಗಳ ನಂತರ ನಿರಧ ಹೇರಿದ್ದ ಭೂತಾನ್
ಮಾರ್ಚ್ 2020 ರಲ್ಲಿ, ಭೂತಾನ್ ತನ್ನ ಮೊದಲ ಕೋವಿಡ್-19 ಪ್ರಕರಣವನ್ನು ಪತ್ತೆಹಚ್ಚಿತ್ತು. ಇದಾದ ನಂತರ ಅಂತಾರಾಷ್ಟ್ರೀಯ ಪ್ರವಾಸಿಗರಿಗೆ ಭೂತಾನ್ ಪ್ರವಾಸ ಕೈಗೊಳ್ಳಲು ನಿಷೇಧ ಹೇರಿತ್ತು. 800,000 ಕ್ಕಿಂತ ಕಡಿಮೆ ಜನರಿರುವ ಹಿಮಾಲಯ ಸಾಮ್ರಾಜ್ಯವು 61,000 ಕ್ಕೂ ಹೆಚ್ಚು ಸೋಂಕುಗಳು ಮತ್ತು ಸಾವುಗಳನ್ನು ವರದಿ ಮಾಡಿತ್ತು. ಕೊರೋನಾ ನಂತರ ಆರ್ಥಿಕವಾಗಿ ಸಾಕಷ್ಟು ಹೊಡೆತ ತಿಂದಿದ್ದ ಭೂತಾನ್‌ ಚೇತರಿಸಿಕೊಳ್ಳಲು ಹೆಣಗಾಡುತ್ತಿದೆ. 


ಅಪಾರ ಪ್ರವಾಸಿಗರನ್ನು ಎದುರು ನೋಡುತ್ತಿರುವ ಭೂತಾನ್‌
ಭೂತಾನ್, ಭಾರತ ಮತ್ತು ಚೀನಾ ನಡುವೆ ಬೆಸೆದುಕೊಂಡಿದೆ. ಸಾಕಷ್ಟು ಅಪೂರ್ವ ತಾಣಗಳು, ಜನಾಕರ್ಷಣೆಯ ಕೇಂದ್ರಗಳು ಭೂತಾನ್‌ನಲ್ಲಿವೆ. ಇದೇ ಕಾರಣಕ್ಕೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ. ಹೆಚ್ಚಿನ ಸಂಖ್ಯೆಯ ಪ್ರವಾಸಿಗರನ್ನು ಎದುರು ನೋಡುತ್ತಿರುವ ಭೂತಾನ್‌, ಈ ಮೂಲಕ ಆರ್ಥಿಕವಾಗಿ ಸುಧಾರಿಸಿಕೊಳ್ಳಲು ಬಯಸುತ್ತಿದೆ.


ಇದನ್ನೂ ಓದಿ: Shocking: ಕಿಸೆಯಲ್ಲಿ ಕಾಂಡೋಮ್ ಸಿಕ್ಕಿದ್ದಕ್ಕೆ ಗುಂಡಿಕ್ಕಿದ ಪೊಲೀಸ್!


"ಪ್ರವಾಸೋದ್ಯಮವು ರಾಷ್ಟ್ರೀಯ ಆಸ್ತಿಯಾಗಿದೆ ಮತ್ತು ನಾವು ಕಾರ್ಬನ್ ತಟಸ್ಥವಾಗಿರಲು ಪ್ರಯತ್ನಿಸುತ್ತಿದ್ದೇವೆ. ಅದು ತನ್ನದೇ ಆದ ವೆಚ್ಚವನ್ನು ಹೊಂದಿದೆ. ನಮ್ಮ ಪ್ರವಾಸೋದ್ಯಮವನ್ನು ಸುಸ್ಥಿರಗೊಳಿಸಲು ನಾವು ನಮ್ಮ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸುತ್ತಿದ್ದೇವೆ. ನಾವು ಈ ಲೆವಿಯನ್ನು ತೆಗೆದುಕೊಳ್ಳುವುದಕ್ಕೆ ಇದು ಮುಖ್ಯ ಕಾರಣವಾಗಿದೆ" ಎಂದು ಭೂತಾನ್‌ನ ಕಾನ್ಸುಲ್ ಜನರಲ್ ಜಿಗ್ಮೆ ಥಿನ್ಲೆ ನಾಮ್ಗ್ಯಾಲ್ ಹೇಳಿದ್ದಾರೆ.


ಮಾರ್ಗಸೂಚಿಗಳು ಅನ್ವಯ, ಗಡಿಯಲ್ಲಿ ಅಲರ್ಟ್‌
ನಿಷೇಧ ಸಡಿಲಿಸಿದ್ದರು ಕೆಲವು ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ. ವಿಶೇಷವಾಗಿ ಹೋಟೆಲ್‌ಗಳು, ಗೈಡ್‌ಗಳು, ಟೂರ್ ಆಪರೇಟರ್‌ಗಳು ಮತ್ತು ಡ್ರೈವರ್‌ಗಳು ಸೇರಿದಂತೆ ಸೇವಾ ಪೂರೈಕೆದಾರರಿಗೆ ಪರಿಷ್ಕೃತ ಮಾನದಂಡಗಳನ್ನು ನೀಡಲಾಗಿದೆ. ಮತ್ತು ಗಡಿ ಕಾವಲು ಪಡೆ, ಸಶಸ್ತ್ರ ಸೀಮಾ ಬಾಲ್ ಸ್ಥಳೀಯ ಆಡಳಿತದೊಂದಿಗೆ ಘರ್ಷಣೆಯ ಪ್ರದೇಶಗಳನ್ನು ಗುರುತಿಸಿದ್ದು ಮತ್ತು ಮುಂಜಾಗ್ರತೆ ಕ್ರಮಗಳನ್ನು ಕೈಗೊಂಡಿರುವುದಾಗಿ ಕೇಂದ್ರ ಗೃಹ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

First published: