• Home
  • »
  • News
  • »
  • national-international
  • »
  • PM Modi: ಪ್ರಧಾನಿ ಮೋದಿಗೆ ಭೂತಾನಿನ ಅತ್ಯುನ್ನತ ನಾಗರಿಕ ಪ್ರಶಸ್ತಿಯ ಗೌರವ

PM Modi: ಪ್ರಧಾನಿ ಮೋದಿಗೆ ಭೂತಾನಿನ ಅತ್ಯುನ್ನತ ನಾಗರಿಕ ಪ್ರಶಸ್ತಿಯ ಗೌರವ

 ಪ್ರಧಾನಿ ಮೋದಿ

ಪ್ರಧಾನಿ ಮೋದಿ

ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭೂತಾನ್ ಪ್ರಧಾನಿ ಕಿಂಗ್ ಜಿಗ್ಮೆ ಖೇಸರ್ ನಾಮ್ಗೈಲ್ ವಾಂಗ್ ಚುಕ್ ನರೇಂದ್ರ ಮೋದಿಗೆ ವಿಶೇಷವಾಗಿ ಕೋವಿಡ್-19 ವೇಳೆ ಬೆಂಬಲ ನೀಡಿರುವುದನ್ನು ಉಲ್ಲೇಖಿಸಿದರು.

  • Share this:

ಭಾರತ ಮತ್ತು ಭೂತಾನ್  (India and Bhutan) ನೆರೆಹೊರೆ ರಾಷ್ಟ್ರಗಳು. ಕೋವಿಡ್ ಸಮಯದಲ್ಲಿ ಭಾರತವು ಭೂತಾನ್‍ಗೆ ವ್ಯಾಕ್ಸಿನ್‌ನಿಂದ ಹಿಡಿದು ಆರೊಗ್ಯ ಉಪಕರಣಗಳು ಸೇರಿದಂತೆ ಸಾಕಷ್ಟು ಸಹಾಯ ಹಸ್ತ ನೀಡಿದೆ. ಈ ಹಿನ್ನೆಲೆ ಭೂತಾನ್ ದೇಶವು ಪ್ರಧಾನಮಂತ್ರಿ ನರೇಂದ್ರ ಮೋದಿ (Prime Minister Narendra Modi) ಯವರಿಗೆ ತನ್ನ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ನ್ಗಡಾಗ್ ಪೆಲ್ ಗಿ ಖೋರ್ಲೋವನ್ನು(Ngadag Pel Gih Khorlo) ಪ್ರದಾನ ಮಾಡಿದೆ. ದೇಶದ ಮುಖ್ಯಸ್ಥರಾದ ಜಿಗ್ಮೆ ಖೇಸರ್ ನಾಮ್ಗ್ಯೆಲ್ ವಾಂಗ್‍ಚುಕ್ (Namgyel Wangchuck) ಹೆಚ್ಚು ಅಪೇಕ್ಷಿತ ನಾಗರಿಕ ಪ್ರಶಸ್ತಿಗೆ (Civilian award) ಮೋದಿಯವರ ಹೆಸರನ್ನು ಉಚ್ಚರಿಸಿದರು.


ಪ್ರಧಾನಿ ಲೋಟೆ ತ್ಶೆರಿಂಗ್ ಪ್ರದಾನ
ಹೌದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಭೂತಾನ್‌ನ ಅತ್ಯುನ್ನತ ನಾಗರಿಕ ಪ್ರಶಸ್ತಿ ನ್ಗಾಡಾಗ್ ಪೆಲ್ ಗಿ ಖೋರ್ಲೊಗೆ ಭಾಜನರಾಗಿದ್ದು ಶುಕ್ರವಾರ ದೇಶದ ರಾಷ್ಟ್ರೀಯ ದಿನಾಚರಣೆಯ ಸಂದರ್ಭದಲ್ಲಿ ಭೂತಾನ್ ಪ್ರಧಾನಿ ಲೋಟೆ ತ್ಶೆರಿಂಗ್ ಪ್ರದಾನ ಮಾಡಿದ್ದಾರೆ.


ಇದನ್ನೂ ಓದಿ:21st India-Russia Summit: ಇಂಡೋ-ರಷ್ಯಾ ಸ್ನೇಹವನ್ನು ಬಣ್ಣಿಸಿದ ಮೋದಿ- ಶೃಂಗಸಭೆಯಲ್ಲಿ ಹಲವಾರು ಒಪ್ಪಂದಕ್ಕೆ ಸಹಿ


ಭೂತಾನ್ ಪ್ರಧಾನಿ ಲೋಟೆ ತ್ಶೆರಿಂಗ್‌ ಸಾಮಾಜಿಕ ಮಾಧ್ಯಮದಲ್ಲಿ ಅತ್ಯುನ್ನತ ನಾಗರಿಕ ಪ್ರಶಸ್ತಿ ನ್ಗಾಡಾಗ್ ಪೆಲ್ ಗಿ ಖೋರ್ಲೋ ಪ್ರಶಸ್ತಿಗೆ ಗೌರವಾನ್ವಿತ ನರೇಂದ್ರ ಮೋದೀಜಿ ಭಾಜನರಾಗಿರುವುದು ತುಂಬಾ ಸಂತಸ ತಂದಿದೆ ಎಂದು ಹೇಳಿದ್ದಾರೆ.


ಮೋದಿ  ಅರ್ಹರು
ತುಂಬಾ ಅರ್ಹರು! ಭೂತಾನ್ನಿನ ಜನರ ಪರವಾಗಿ ಶುಭಾಶಯಗಳು. ಎಲ್ಲಾ ಸಂವಾದಗಳಲ್ಲಿ, ನಿಮ್ಮ ಶ್ರೇಷ್ಠತೆಯನ್ನು, ಅತ್ಯುತ್ತಮ ಆಧ್ಯಾತ್ಮಿಕ ವ್ಯಕ್ತಿಯಾಗಿ ನೋಡಿದ್ದೇವೆ. ಈ ಪ್ರಶಸ್ತಿಗೆ ಭಾಜನರಾಗಿರುವ ನಿಮ್ಮನ್ನು ಗೌರವಿಸಲು ಎದುರು ನೋಡುತ್ತಿದ್ದೇನೆ" ಎಂದು ಭೂತಾನ್‌ ಪ್ರಧಾನ ಮಂತ್ರಿ ಕಚೇರಿ ಫೇಸ್ಬುಕ್‌ನಲ್ಲಿ ಹೇಳಿಕೆ ನೀಡಿತ್ತು.ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭೂತಾನ್ ಪ್ರಧಾನಿ ಕಿಂಗ್ ಜಿಗ್ಮೆ ಖೇಸರ್ ನಾಮ್ಗೈಲ್ ವಾಂಗ್ ಚುಕ್ ನರೇಂದ್ರ ಮೋದಿಗೆ ವಿಶೇಷವಾಗಿ ಕೋವಿಡ್-19 ವೇಳೆ ಬೆಂಬಲ ನೀಡಿರುವುದನ್ನು ಉಲ್ಲೇಖಿಸಿದರು.


ವ್ಯಾಕ್ಸಿನ್ ಕೊಡುಗೆ
ಈ ವರ್ಷದ ಆರಂಭದಲ್ಲಿ, ಭೂತಾನ್ ಪ್ರಧಾನಿ ಲೋಟೆ ತ್ಶೆರಿಂಗ್ ಪ್ರಧಾನಿ ಮೋದಿಯ ಒಂದು ಕೋಟಿ ಕೋವಿಡ್-19 ಲಸಿಕೆ ವಿತರಣೆ ಸಾಧನೆಗೆ ಶುಭ ಹಾರೈಸಿದ್ದರು. ಭಾರತವು ಭೂತಾನಿಗೆ 1.5 ಲಕ್ಷ ಕೋವಿಶಿಲ್ಡ್ ವ್ಯಾಕ್ಸಿನ್ ಅನ್ನು ಜನವರಿ ತಿಂಗಳಿನಲ್ಲಿ ಕಳುಹಿಸಿಕೊಟ್ಟಿತ್ತು. ಭೂತಾನ್ ಭಾರತದ ಸೆರಮ್ ಸಂಸ್ಥೆ ತಯಾರಿಸಿದ ವ್ಯಾಕ್ಸಿನ್ ಅನ್ನು ಕೊಡುಗೆಯಾಗಿ ಪಡೆದ ಮೊದಲ ರಾಷ್ಟ್ರ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.


ನ್ಗಾಡಾಗ್ ಪೆಲ್ ಗಿ ಖೋರ್ಲೋ ಪ್ರಶಸ್ತಿ ಯಾಕೆ ನೀಡಲಾಗುತ್ತದೆ?
ಕೆಲಸದಲ್ಲಿ ಹೆಚ್ಚು ಅರ್ಪಣಾ ಭಾವ, ನಿಷ್ಠೆ, ಬದ್ಧತೆ ತೋರುವ ವ್ಯಕ್ತಿಗೆ ಈ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಈ ಪ್ರಶಸ್ತಿಯನ್ನು ಭೂತಾನ್‍ನಲ್ಲಿ ಫೆಬ್ರವರಿ 9, 1967ರಂದು ಕಿಂಗ್ ಜಿಗ್ಮೆ ಡೋರ್ಜಿ ವಾಂಗ್ ಚುಕ್ (King jigme wangchuck) ಸ್ಥಾಪಿಸಿದರರು.


ಇದನ್ನೂ ಓದಿ: ಸರ್ವಪಕ್ಷ ಸಭೆಗೆ Modi ಗೈರು, ಸಭೆಗೆ ಪ್ರಧಾನಿ ಉಪಸ್ಥಿತಿ ಸಂಪ್ರದಾಯವಲ್ಲ ಎಂದ ಕೇಂದ್ರ ಸರ್ಕಾರ


ಕಿಂಗ್ ಜಿಗ್ಮೆ ಸಿಂಗ್ಯೆ ವಾಂಗ್ ಚುಕ್ 29 ಸೆಪ್ಟೆಂಬರ್ 1985ರಂದು ದೇಶದ ಪ್ರಧಾನ ರಾಷ್ಟ್ರೀಯ ಗೌರವವಾಗಿ ಮರುಸಂಘಟಿಸಲಾಯಿತು. ಮತ್ತು ಸಾಮ್ರಾಜ್ಯದಲ್ಲಿ 2ನೇ ಅತ್ಯತ್ತಮ ಗೌರವವಾಗಿ ಸ್ಥಾಪಿಸಲಾಯಿತು. ಇದು ಬ್ಯಾಡ್ಜ್ ಮತ್ತು ನಕ್ಷತ್ರವನ್ನು ಒಳಗೊಂಡಿದೆ. ಇದರ ಪೋಸ್ಟ್ ನಾಮಿನಲ್ ಪದ ಡಿಡಬ್ಲ್ಯೂಜಿ ಆಗಿದೆ.


ಈ ವರ್ಷದ ಆರಂಭದಲ್ಲಿ, ಭೂತಾನ್ ಪ್ರಧಾನಿ ಲೋಟೆ ಶೆರಿಂಗ್ ಅವರು ಒಂದು ಬಿಲಿಯನ್ ಕೋವಿಡ್ -19 ಲಸಿಕೆಪ್ರಮಾಣವನ್ನು ಸಾಧಿಸಿದ್ದಕ್ಕಾಗಿ ಪ್ರಧಾನಿ ಮೋದಿಯನ್ನು ಅಭಿನಂದಿಸಿದ್ದಾರೆ. ಭೂತಾನ್ ಭಾರತಕ್ಕೆ ಹತ್ತಿರದ ನೆರೆಯ ರಾಷ್ಟ್ರವಾಗಿರುವುದರಿಂದ ಹೆಚ್ಚು ಸುರಕ್ಷಿತವಾಗಿದೆ ಎಂದು ಅವರು ಹೇಳಿದ್ದಾರೆ.

Published by:vanithasanjevani vanithasanjevani
First published: