ರಾಯ್‌ಪುರ: ಕರ್ನಾಟಕ ಚುನಾವಣೆಯಲ್ಲಿ (Karnataka Election) ಬಿಜೆಪಿಗಿಂತ ಕಾಂಗ್ರೆಸ್ ಮೇಲುಗೈ ಸಾಧಿಸಲಿದೆ ಎಂದು ಎಕ್ಸಿಟ್ ಪೋಲ್‌ಗಳು (Exit Polls) ಭವಿಷ್ಯ ನುಡಿದಿದ್ದು, ಮೇ 13ರಂದು ವಿಧಾನಸಭೆ ಚುನಾವಣೆಯ ಫಲಿತಾಂಶ ಪ್ರಕಟವಾಗುವ ದಿನ ಬಿಜೆಪಿ ತಕ್ಕ ಪಾಠ ಕಲಿಯಲಿದೆ ಎಂದು ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಾಘೇಲ್ (Bhupesh Baghel) ಹೇಳಿದ್ದಾರೆ.
ಕರ್ನಾಟಕದಲ್ಲಿ ಮತದಾನ ನಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬುಧವಾರ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತವನ್ನು ಗಳಿಸುವ ನಿರೀಕ್ಷೆಯಿದೆ, ನಾಲ್ಕು ಎಕ್ಸಿಟ್ ಪೋಲ್‌ಗಳು ಪೂರ್ಣ ಬಹುಮತ ಬರೋದಾಗಿ ಹೇಳಿದೆ. ಹೀಗಾಗಿ ಕಾಂಗ್ರೆಸ್ ಪಕ್ಷ ಯಾರ ಹಂಗಿಲ್ಲದೆಯೂ ಪೂರ್ಣ ಬಹುಮತದ ಸರ್ಕಾರ ರಚಿಸಲಿದೆ ಎಂದರು.
ಇದನ್ನೂ ಓದಿ: Savitha Bai: ನಾನು ನಿಮ್ಮನ್ನೇ ನಂಬಿ ಬಂದಿದ್ದೇನೆ; ಫೇಸ್‌ಬುಕ್ ಲೈವ್‌ನಲ್ಲಿ ಗಳಗಳನೇ ಅತ್ತ ಪಕ್ಷೇತರ ಅಭ್ಯರ್ಥಿ!
'ಈ ಫಲಿತಾಂಶ ಬಿಜೆಪಿ ಪಾಠ ಕಲಿಸುತ್ತದೆ'
ಇಡೀ ದೇಶದ ಕಣ್ಣು ಕರ್ನಾಟಕ ವಿಧಾನಸಭಾ ಚುನಾವಣೆಯ ಮೇಲೆ ಇತ್ತು ಎಂದ ಭೂಫೇಶ್ ಬಾಘೇಲ್, ಒಂದೆಡೆ ಬಿಜೆಪಿ ಜನರಿಗೆ ಹಣ ಹಂಚುತ್ತಿದ್ದರೆ, ಇನ್ನೊಂದೆಡೆ ಕಾಂಗ್ರೆಸ್ ಮೇಲೆ ಜನರಿಗೆ ಪ್ರೀತಿ ಇದೆ. ಹೀಗಾಗಿ ಮೇ 13ರಂದು ಚುನಾವಣಾ ಫಲಿತಾಂಶ ಬಿಜೆಪಿಗೆ ತಕ್ಕ ಪಾಠ ಕಲಿಸುತ್ತದೆ ಎಂದು ನಾನು ಭಾವಿಸುತ್ತೇನೆ. ಕರ್ನಾಟಕದಲ್ಲಿ ಭಜರಂಗಬಲಿ ಭಗವಂತನ ಆಶೀರ್ವಾದವು ಕಾಂಗ್ರೆಸ್‌ನೊಂದಿಗೆ ಉಳಿಯುತ್ತದೆ. ಏಕೆಂದರೆ ದೇವರು ಅನ್ಯಾಯ, ದಬ್ಬಾಳಿಕೆ ಮತ್ತು ಭ್ರಷ್ಟಾಚಾರದಲ್ಲಿ ತೊಡಗಿರುವವರನ್ನು ಶಿಕ್ಷಿಸುತ್ತಾನೆ ಎಂದು ಹೇಳಿದರು.
'ಅಧಿಕಾರಿಗಳು ಬಿಜೆಪಿ ಏಜೆಂಟರಂತೆ ವರ್ತಿಸುತ್ತಿದ್ದಾರೆ'
ಇನ್ನು ವಿಪಕ್ಷಗಳ ನಾಯಕರ ಮೇಲೆ ಇ.ಡಿ ಅಧಿಕಾರಿಗಳು ದಾಳಿ ನಡೆಸುತ್ತಿರುವ ಬಗ್ಗೆಯೂ ಮಾತನಾಡಿದ ಛತ್ತೀಸ್‌ಗಡ ಸಿಎಂ, ಜಾರಿ ನಿರ್ದೇಶನಾಲಯ ಇಲ್ಲಿಯವರೆಗೆ ಯಾವುದೇ ದಾಖಲೆ ಇಲ್ಲದೇ ಅಥವಾ ಅಪರಾಧ ಎಸಗಿದ ಬಗ್ಗೆ ಖಚಿತ ಮಾಹಿತಿ ಇಲ್ಲದೆ ಇಲ್ಲಿಯತನಕ ಮಾಡಲಿಲ್ಲ. ಆದರೆ ಭಾರತದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಯಾವುದೇ ಮಾಹಿತಿ ಇಲ್ಲದೆಯೂ ಈ ಸಂಸ್ಥೆಗಳು ದಾಳಿ ಮಾಡುತ್ತಿವೆ. ಇ.ಡಿ ಅಧಿಕಾರಿಗಳು ತಮ್ಮ ಯಜಮಾನರನ್ನು ಮೆಚ್ಚಿಸಲು ಬಿಜೆಪಿ ಏಜೆಂಟರಂತೆ ಕೆಲಸ ಮಾಡುತ್ತಿದ್ದಾರೆ. ಇದರಿಂದ ಅವರು ನಿಯಮಗಳು ಮತ್ತು ಕಾರ್ಯ ವಿಧಾನಗಳನ್ನು ಅನುಸರಿಸುತ್ತಿಲ್ಲ ಎಂದು ಆರೋಪಿಸಿದರು.
ಬಿಜೆಪಿಗೆ ನೇರವಾಗಿ ನಮ್ಮ ವಿರುದ್ಧ ಹೋರಾಡಲು ಸಾಧ್ಯವಾಗದ ಕಾರಣ ಬಿಜೆಪಿಯೇತರ ರಾಜ್ಯ ಸರ್ಕಾರದ ಮಾನಹಾನಿ ಮಾಡುವುದೇ ಈ ಸರ್ಕಾರಿ ಸಂಸ್ಥೆಯ ಪ್ರಮುಖ ಉದ್ದೇಶವಾಗಿದೆ ಎಂದ ಅವರು, ನವೆಂಬರ್‌ನಲ್ಲಿ ಚುನಾವಣೆ ಇದೆ ಮತ್ತು ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲಿದೆ ಎಂಬುದು ಇಡೀ ರಾಜ್ಯದ ಜನತೆಗೆ ಗೊತ್ತಿದೆ. ಹೀಗಾಗಿ ಸರಕಾರದ ಮಾನಹಾನಿ ಮಾಡುವುದು ಹೇಗೆ ಎಂಬುದರಲ್ಲಿ ಬಿಜೆಪಿಗರು ನಿರತರಾಗಿದ್ದಾರೆ ಎಂದು ದೂರಿದರು.
ಇದನ್ನೂ ಓದಿ: GM Siddeshwara: ಪತ್ನಿ ಮತ ಹಾಕೋದನ್ನು ಮೆಲ್ಲನೆ ಇಣುಕಿ ನೋಡಿದ ದಾವಣಗೆರೆ ಸಂಸದ ಜಿಎಂ ಸಿದ್ದೇಶ್ವರ್!
'ಎಕ್ಸಿಟ್ ಪೋಲ್‌ಗಳು ಏನು ಹೇಳುತ್ತಿವೆ?'
ಇನ್ನು ನಿನ್ನೆ ನಡೆದ ಚುನಾವಣೆಯ ನಂತರದ ಎಕ್ಸಿಟ್ ಪೋಲ್‌ಗಳು ಕೂಡ ಕಾಂಗ್ರೆಸ್ ಪರ ಭವಿಷ್ಯ ನುಡಿದಿದ್ದು, ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿಯಲಿದೆ ಎಂದು ನಾಲ್ಕೈದು ಸಮೀಕ್ಷೆಗಳು ಭವಿಷ್ಯ ನುಡಿದಿದ್ದು, ಬಿಜೆಪಿ ಅಧಿಕಾರ ಹಿಡಿಯಲಿದೆ ಎಂದು ಒಂದೆರಡು ಎಕ್ಸಿಟ್ ಪೋಲ್‌ಗಳು ಹೇಳಿವೆ. ಇನ್ನೊಂದೆರಡು ಸಮೀಕ್ಷೆಗಳು ಯಾವುದೇ ಪಕ್ಷಗಳು ಸರಳ ಬಹುಮತ ಪಡೆಯದೆ ಅತಂತ್ರ ಸ್ಥಿತಿ ನಿರ್ಮಾಣವಾಗಲಿದೆ ಎಂದು ಹೇಳಿದೆ. ಅದಾಗ್ಯೂ ಕಾಂಗ್ರೆಸ್ ಪಕ್ಷ ಮಾತ್ರ ಮತದಾನ ನಡೆದ ನಂತರ ಅಧಿಕಾರಕ್ಕೆ ಏರುವ ಖಚಿತ ಆತ್ಮವಿಶ್ವಾಸದಲ್ಲಿ ನಿರಾಳವಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ