ವಾರಾಣಸಿ (ನ.20): ಬನಾರಸ್ ಹಿಂದು ವಿಶ್ವವಿದ್ಯಾಲಯದ ಸಂಸ್ಕೃತ ವಿದ್ಯಾ ಧರ್ಮ ವಿಜ್ಞಾನ್ ಕಾಲೇಜಿನ ಸಂಸ್ಕೃತ ವಿಭಾಗಕ್ಕೆ ಮುಸ್ಲಿಂ ಪ್ರೊಫೆಸರ್ ನೇಮಕ ಮಾಡಿರುವುದನ್ನು ಖಂಡಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ.
ಕಳೆದ ಎರಡು ವಾರಗಳಿಂದ ವಿದ್ಯಾರ್ಥಿಗಳ ಗುಂಪು ಈ ನೇಮಕಾತಿಯನ್ನು ಹಿಂಪಡೆಯುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದು, ಮಂಗಳವಾರ ಈ ಧರಣಿ ತಾರಕಕ್ಕೇರಿದೆ.
ಡಾ. ಫಿರೋಜ್ ಖಾನ್ ಅವರನ್ನು ಸಂಸ್ಕೃತ ವಿಭಾಗಕ್ಕೆ ಅಸಿಸ್ಟೆಂಟ್ ಪ್ರೊಫೆಸರ್ ಆಗಿ ನವಂಬರ್ 5ರಂದು ನೇಮಕ ಮಾಡಲಾಗಿತ್ತು. ಈ ಆದೇಶವನ್ನು ಹಿಂಪಡೆಯುವಂತೆ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ. ಇನ್ನು ಈ ಧರಣಿ ನಡೆಸುತ್ತಿರುವ ಸ್ಥಳಕ್ಕೆ ನಿನ್ನೆ ಬಿಎಚ್ಯು ಉಪ ಕುಲಪತಿ ಆಗಮಿಸಿದಾಗ ಅವರ ಕಾರಿನ ಮೇಲೆ ನೀರಿನ ಬಾಟಲ್ ಹಾಗೂ ಕಲ್ಲು ತೂರಲಾಗಿದೆ.
ಇನ್ನು ಈ ವಿದ್ಯಾರ್ಥಿಗಳ ಪ್ರತಿಭಟನೆಗೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷದ್ ಕೂಡ ಬೆಂಬಲಿಸಿದೆ, ನಮ್ಮ ಬೇಡಿಕೆ ಪರಿಗಣಿಸುವವರೆಗೂ ಈ ಪ್ರತಿಭಟನೆ ಕೈ ಬಿಡುವುದಿಲ್ಲ, ಡಾ ಫಿರೋಜ್ ಅವರ ಬದಲು ಹೊಸಬರನ್ನು ನೇಮಕ ಮಾಡಬೇಕು ಎಂದು ವಿದ್ಯಾರ್ಥಿಗಳು ತಿಳಿಸಿದ್ದಾರೆ.
ಇದನ್ನು ಓದಿ: ಮಹಾ ಸರ್ಕಸ್: ಪ್ರಧಾನಿ ಮೋದಿ ಭೇಟಿ ಮಾಡಲಿರುವ ಪವಾರ್; ಕುತೂಹಲ ಮೂಡಿದ ಎನ್ಸಿಪಿ ನಡೆ
ವಿದ್ಯಾರ್ಥಿಗಳ ಬೇಡಿಕೆಯಲ್ಲಿ ಒಂದು ಅರ್ಥವಿದೆ. ಇಲ್ಲಿನ ಕಾಲೇಜಿಗೆ ಹಿಂದು ಪ್ರಾಧ್ಯಪಕರ ನೇಮಕವಾಗಬೇಕು ಡಾ ಫಿರೋಜ್ ಬದಲು ಬೇರೆಯವರನ್ನು ಆಡಳಿತ ಮಂಡಳಿ ನೇಮಕ ಮಾಡಬೇಕು ಎಂದು ಎಂದು ಎಪಿವಿಪಿಯ ಕೂಡ ತಿಳಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ