ಗಂಡನಿಗೆ ವಿಚ್ಛೇದನ ನೀಡಿ ಪ್ರೇಯಸಿಯನ್ನು ಮದುವೆಯಾಗಲು ಸಹಕರಿಸಿದ ಹೆಂಡತಿ!

ಆತ ಇಬ್ಬರೊಂದಿಗೂ ಸಂಬಂಧ ಹೊಂದಿರಲು ಬಯಸಿದ್ದರು. ಆದರೆ, ಅದು ಕಾನೂನುಬಾಹಿರ. ಹೀಗಾಗಿ ಪ್ರಬುದ್ಧಳಾಗಿದ್ದ ಆತನ ಹೆಂಡತಿ ಡಿವೋರ್ಸ್ ಪಡೆದು, ಆತ ತನ್ನ ಗೆಳತಿಯನ್ನು ಮದುವೆಯಾಗಲು ಸಹಕರಿಸಿದ್ದಾಳೆ ಎಂದು ಈ ಪ್ರಕರಣದ ವಕೀಲರು ಎಎನ್​ಐಗೆ ತಿಳಿಸಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಭೋಪಾಲ್‌ನ ಮಹಿಳೆಯೊಬ್ಬರು ಮದುವೆಯಾದ ಮೂರು ವರ್ಷಗಳ ನಂತರ ಪತಿಯಿಂದ ವಿಚ್ಛೇದನ ಪಡೆದಿದ್ದಾರೆ. ಆದಾಗ್ಯೂ, ಅವರು ವಿಚ್ಛೇದನ ಪಡೆಯಲು ಯಾವುದೇ ವೈವಾಹಿಕ ಸಮಸ್ಯೆಯಾಗಲಿ ಅಥವಾ ಇನ್ನಿತರ ಕೌಟುಂಬಿಕ ಸಮಸ್ಯೆ ಕಾರಣವಲ್ಲ. ಬದಲಾಗಿ ತನ್ನ ಗಂಡ ಪ್ರೀತಿಸುತ್ತಿದ್ದ ಗೆಳತಿಯನ್ನು ಮದುವೆಯಾಗಲು ಆಕೆ ಗಂಡನಿಂದ ಡೈವೋರ್ಸ್ ಪಡೆದಿದ್ದಾಳೆ. ಈ ಕತೆ ಯಾವ ಸಿನಿಮಾಗಿಂತ ಕೂಡ ಕಡಿಮೆಯಿಲ್ಲ.

  ಗಂಡ ತನ್ನ ಹೆಂಡತಿಗೆ ವಿಚ್ಛೇದನ ನೀಡದೆ ತನ್ನ ಗೆಳತಿಯನ್ನು ಮದುವೆಯಾಗಲು ಬಯಸಿದ್ದರೂ, ಒಂದು ಸಮಯದಲ್ಲಿ ಇಬ್ಬರು ಹೆಂಡತಿಯರನ್ನು ಹೊಂದಿರುವುದು ಕಾನೂನುಬಾಹಿರವಾದ್ದರಿಂದ ಹೆಂಡತಿ ವಿಚ್ಛೇದನ ಪಡೆಯಲು ನಿರ್ಧರಿಸಿದ್ದಾಳೆ. ತನ್ನ ಗಂಡನಿಗೆ ವಿಷಯಗಳನ್ನು ಸುಲಭಗೊಳಿಸಲು ಅವಳು ಆಪಾದಿತ ಪ್ರೇಮ ತ್ರಿಕೋನದಿಂದ ದೂರ ಸರಿದಳು.  ಇದನ್ನು ಓದಿ: ಮೊಬೈಲ್ ಟವರ್ ವಿಧ್ವಂಸ ಘಟನೆ: ರಿಲಾಯನ್ಸ್ ಅರ್ಜಿ ಮೇರೆಗೆ ಪಂಜಾಬ್ ಸರ್ಕಾರಕ್ಕೆ ಕೋರ್ಟ್ ನೋಟೀಸ್

  ಆತ ಇಬ್ಬರೊಂದಿಗೂ ಸಂಬಂಧ ಹೊಂದಿರಲು ಬಯಸಿದ್ದರು. ಆದರೆ, ಅದು ಕಾನೂನುಬಾಹಿರ. ಹೀಗಾಗಿ ಪ್ರಬುದ್ಧಳಾಗಿದ್ದ ಆತನ ಹೆಂಡತಿ ಡಿವೋರ್ಸ್ ಪಡೆದು, ಆತ ತನ್ನ ಗೆಳತಿಯನ್ನು ಮದುವೆಯಾಗಲು ಸಹಕರಿಸಿದ್ದಾಳೆ ಎಂದು ಈ ಪ್ರಕರಣದ ವಕೀಲರು ಎಎನ್​ಐಗೆ ತಿಳಿಸಿದ್ದಾರೆ. ತನ್ನ ಗಂಡ ವಿವಾಹಯೇತರ ಸಂಬಂಧ ಹೊಂದಿದ್ದ ಎಂಬುದನ್ನು ತಿಳಿದ ಮೇಲೂ ಆಕೆ ಈ ನಿರ್ಧಾರ ತೆಗೆದುಕೊಂಡಿದ್ದಾಳೆ.

  ಏತನ್ಮಧ್ಯೆ, ಗಂಡನ ಸಂತೋಷಕ್ಕಾಗಿ ತನ್ನ ಜೀವನವನ್ನೇ ತ್ಯಾಗ ಮಾಡಿದ ಆಕೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರಶಂಸೆಗಳ ಸುರಿಮಳೆಯನ್ನೇ ಸುರಿಸಲಾಗುತ್ತಿದೆ.

    

  Published by:HR Ramesh
  First published: