ವಾಜಪೇಯಿ ಹೆಸರಿನಲ್ಲಿರುವ ಈ ವಿಶ್ವವಿದ್ಯಾನಿಯದಲ್ಲಿ ಹಿಂದಿಯಲ್ಲೇ ಇಂಜಿನಿಯರಿಂಗ್​ ಬೋಧನೆ!


Updated:August 16, 2018, 10:38 PM IST
ವಾಜಪೇಯಿ ಹೆಸರಿನಲ್ಲಿರುವ ಈ ವಿಶ್ವವಿದ್ಯಾನಿಯದಲ್ಲಿ ಹಿಂದಿಯಲ್ಲೇ ಇಂಜಿನಿಯರಿಂಗ್​ ಬೋಧನೆ!
  • Share this:
ನ್ಯೂಸ್​ 18 ಕನ್ನಡ

ಭೋಪಾಲ್​(ಆ.16): ಮಧ್ಯಪ್ರದೇಶದ ರಾಜಧಾನಿ ಭೋಪಾಲ್​ನಲ್ಲಿರುವ ವಿಶ್ವವಿದ್ಯಾನಿಯಯದಲ್ಲಿ ಕೇವಲ ಹಿಂದಿ ಭಾಷೆಯಲ್ಲೇ ಇಂಜಿನಿಯರಿಂಗ್​ ಬೋಧಿಸಲಾಗುತ್ತದೆ. ಇನ್ನು ಈ ವಿಶ್ವವಿದ್ಯಾನಿಲಯವು ಭಾರತರತ್ನ, ಮಾಜಿ ಪ್ರಧಾನಿ ಅಟಲ್​ ಬಿಹಾರಿ ವಾಜಪೇಯಿಯವರ ಹೆಸರಿನಲ್ಲಿದೆ ಎಂಬುವುದೇ ವಿಶೇಷದಿ ಮಾಧ್ಯಮದಲ್ಲಿ ಇಂಜಿನಿಯರಿಂಗ್​ ಕಲಿಸುವ ಈ ಪ್ರಯತ್ನ ಭೋಪಾಲದ ಅಟಲ್​ ಬಿಹಾರಿ ವಾಜಪೇಯಿ ಹಿಂದಿ ವಿಶ್ವ ವಿದ್ಯಾನಿಲಯದಿಂದ ಆರಂಭವಾಯಿತು.

ವಾಸ್ತವವಾಗಿ 2011ರ ಜೂನ್​ 19ರಂದು ಮಧ್ಯಪ್ರದೇಶ ಸರ್ಕಾರವು ಈ ವಿಶ್ವವಿದ್ಯಾನಿಲಯವನ್ನು ಸ್ಥಾಪಿಸಿದರು. ಮಾಜಿ ರಾಷ್ಟ್ರಪತಿ ಪ್ರಣಬ್​ ಮುಖರ್ಜಿಯವರು 2013ರ ಜೂನ್​ 6 ರಂದು ಭೋಪಾಲ್​ನ ಮುಗಲಿಯಾ ಕೋಟ್​ನಲ್ಲಿ ಇದರ ಶಿಲಾನ್ಯಾಸ ಮಾಡಿದರು.

ಆರಂಭಿಕ ದಿನಗಳಲ್ಲಿ ವಿಶ್ವವಿದ್ಯಾಲಯದ ಕುರಿತಾಗಿ ವಿದ್ಯಾರ್ಥಿಗಳು ಅಷ್ಟೇನು ಆಸಕ್ತಿ ತೋರಿರಲಿಲ್ಲ. ಆದರೆ ಬಳಿಕ ವಿದ್ಯಾರ್ಥಿಗಳು ಇಲ್ಲಿ ಬರಲಾರಂಭಿಸಿದರು. ವಿಶ್ವವಿದ್ಯಾನಿಲಯವು ಮೊದಲ ವರ್ಷದಲ್ಲಿ ಹಿಂದಿ ಮಾಧ್ಯಮದಲ್ಲಿ ವ್ಯಾಸಂಗ ನಡೆಸಲು 90 ಸೀಟುಗಳನಬ್ನು ಕಾಯ್ದಿರಿಸಿತ್ತು. ವಿಶ್ವವಿದ್ಯಾನಿಲಯದ ಉಪನ್ಯಾಸಕರಿಗೆ ಮೊದಲ ವರ್ಷದ ಪಠ್ಯಕ್ರಮವನ್ನು ತಯಾರಿಸುವುದು ಸುಲಭದ ಮಾತಾಗಿರಲಿಲ್ಲ. ಆರಂಭದಲ್ಲಿ ವಿಶ್ವವಿದ್ಯಾನಿಲಯವು ಮೆಕ್ಯಾನಿಕಲ್​, ಸಿವಿಲ್ ಹಾಗೂ ಇಲೆಕ್ಟ್ರಿಕಲ್​ ವಿಭಾಗಗಳಿಗೆ ಇಂಜಿನಿಯರಿಂಗ್​ ಹಾಗೂ ಡಿಪ್ಲೊಮಾದ ಪಠ್ಯಕ್ರಮಗಳನ್ನು ಆರಂಬಿಸಿತು.

ವಿಶ್ವವಿದ್ಯಾನಿಲಯ ಸ್ಥಾಪಿಸಿದ ಬಳಿಕ ಮೊದಲ ಕುಲಪತಿಯಾದ ಪ್ರೊ. ಮೋಹನ್​ಲಾಲ್​ ಛೀಪಾ ನ್ಯೂಸ್​ 18ನೊಂದಿಗೆ ಮಾತನಾಡುತ್ತಾ "ವಿಶ್ವವಿದ್ಯಾನಿಲಯವು ಪ್ರಸಕ್ತ ಶೈಕಜ್ಷಣಿಕ ವರ್ಷದಿಂದ ಹಿಂದಿಯಲ್ಲಿ ಇಂಜಿನಿಯರಿಂಗ್​ ಪಠ್ಯಕ್ರಮವನ್ನು ಎಲ್ಲಾ ಸಿದ್ಧತೆಗಳೊಂದಿಗೆ ಆರಂಭಿಸಿದೆ. ಅಂತೆಯೇ ಮೆಕ್ಯಾನಿಕಲ್​, ಸಿವಿಲ್ ಹಾಗೂ ಇಲೆಕ್ಟ್ರಿಕಲ್​ ವಿಭಾಗಗಳಿಗೆ ಇಂಜಿನಿಯರಿಂಗ್​ ಹಾಗೂ ಡಿಪ್ಲೊಮಾಗೆ ಪ್ರವೇಶಾತಿಯನ್ನೂ ಆರಂಭಿಸಲಾಗಿದೆ" ಎಂದಿದ್ದರು.

ಅಲ್ಲದೇ "ಸರಿ ಸುಮಾರು 250 ಇಂಜಿನಿಯರಿಂಗ್​ ಹಾಗೂ ಮೆಡಿಕಲ್​ ಕಾಲೇಜುಗಳಲ್ಲಿ ಆಂಗ್ಲ ಭಾಷೆಯ ಸಾಮ್ರಾಜ್ಯವಿದೆ. ಹೀಗಿರುವಾಗ ಹಿಂದಿ ಮಾಧ್ಯಮದಲ್ಲಿ ಭೋದಿಸುವ ಪ್ರಯತ್ನ ಮಾಡುತ್ತಿದ್ದೇವೆ" ಎಂದೂ ಕುಲಪತಿಗಳು ತಿಳಿಸಿದ್ದಾರೆ.
First published:August 16, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ