Stop Rape: ಮೂರೂವರೆ ವರ್ಷದ ನರ್ಸರಿ ಮಗು ಮೇಲೆ ಅಮಾನುಷ ಅತ್ಯಾಚಾರ; ಪೋಷಕರೇ ಎಚ್ಚರ

ಮಗು ತನ್ನ ಜನನಾಂಗದಲ್ಲಿ ನೋವಿನ ಬಗ್ಗೆ ತಾಯಿಯಲ್ಲಿ ಹೇಳಿಕೊಂಡಿದೆ. ಇದರಿಂದ ಆತಂಕಕ್ಕೆ ಒಳಗಾದ ಮಗುವಿನ  ಪೋಷಕರು ಆಕೆಯನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೌನ್ಸೆಲಿಂಗ್ ಮಾಡಿದ್ದಾರೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
    ದೇಶವೇ ಬೆಚ್ಚಿ ಬೀಳುವಂತಹ ಇನ್ನೊಂದು ಅತ್ಯಾಚಾರ ಪ್ರಕರಣದ ಬೆಳಕಿಗೆ ಬಂದಿದೆ. ಮಧ್ಯಪ್ರದೇಶದ ರಾಜಧಾನಿ ಭೋಪಾಲ್‌ನಲ್ಲಿ (Bhopal, Madhya Pradesh)  ಮೂರೂವರೆ ವರ್ಷದ ನರ್ಸರಿ ವಿದ್ಯಾರ್ಥಿನಿ ಅತ್ಯಾಚಾರ ನಡೆದಿದೆ. ಪುಟ್ಟ ಬಾಲಕಿ ತೆರಳುತ್ತಿದ್ದ ಶಾಲೆಯ ಬಸ್ ಚಾಲಕನೇ ವಾಹನದೊಳಗೆ ಅತ್ಯಾಚಾರ (Bhopal Nursery Student Rape Case) ಎಸಗಿದ್ದಾನೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಇಂದು ತಿಳಿಸಿದ್ದಾರೆ. ಕಳೆದ ಗುರುವಾರ ಈ ಅಮಾನುಷ ಘಟನೆ ನಡೆದಿದೆ. ಮೂರುವರೆ ವರ್ಷದ ಮಗುವಿನ ಮೇಲೆ ಅತ್ಯಾಚಾರ ನಡೆಸಿದ ಆರೋಪದ ಮೇಲೆ ವಾಹನದೊಳಗೆ ಇದ್ದ ಬಸ್ ಚಾಲಕನ ಜೊತೆಗೆ ಮಹಿಳಾ ಅಟೆಂಡರ್​ಅನ್ನು ಸಹ ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.

    ಭೂಪಾಲ್ ನಗರದ ಪ್ರಮುಖ ಖಾಸಗಿ ಶಾಲೆಯೊಂದರಲ್ಲಿ ಓದುತ್ತಿರುವ ಮಗು ಬಸ್‌ನಲ್ಲಿ ಮನೆಗೆ ಹಿಂದಿರುಗುತ್ತಿದ್ದ ವೇಳೆ ಈ ಕೃತ್ಯ ನಡೆದಿದೆ. ಬಾಲಕಿ ಮನೆಗೆ ಮರಳಿದ ನಂತರ, ತನ್ನ ಬ್ಯಾಗ್‌ನಲ್ಲಿ ಇರಿಸಲಾಗಿದ್ದ ಮಗುವಿನ ಬಟ್ಟೆಯನ್ನು ಯಾರೋ ಬದಲಾಯಿಸಿದ್ದನ್ನು ಮೂರುವರೆ ವರ್ಷ ತಾಯಿ ಗಮನಿಸಿದ್ದಾರೆ.

    ಮಗುವಿನ ಬಟ್ಟೆ ಬದಲಾವಣೆಯಿಂದ ಹುಟ್ಟಿಕೊಂಡ ಅನುಮಾನ
    ಇದರಿಂದ ಮಗುವಿನ ತಾಯಿಗೆ ಸಂಶಯ ಹುಟ್ಟಿದೆ. ತಾಯಿ ತನ್ನ ಮಗಳ ಕ್ಲಾಸ್ ಟೀಚರ್ ಮತ್ತು ಶಾಲೆಯ ಪ್ರಾಂಶುಪಾಲರನ್ನು ಈ ಬಗ್ಗೆ ವಿಚಾರಿಸಿದ್ದಾಳೆ. ಆದರೆ ಇಬ್ಬರೂ ಮಗುವಿನ ಬಟ್ಟೆಯನ್ನು ಬದಲಾಯಿಸಿಲ್ಲ ಎಂದು ತಿಳಿಸಿದ್ದಾರೆ.

    ಕೌನ್ಸಿಲಿಂಗ್​ನಲ್ಲಿ ಹೊರಬಿತ್ತು ಭಯಾನಕ ಸತ್ಯ
    ಆದರೆ ಅದೇ ಸಮಯಕ್ಕೆ ಮಗು ತನ್ನ ಜನನಾಂಗದಲ್ಲಿ ನೋವಿನ ಬಗ್ಗೆ ತಾಯಿಯಲ್ಲಿ ಹೇಳಿಕೊಂಡಿದೆ. ಇದರಿಂದ ಆತಂಕಕ್ಕೆ ಒಳಗಾದ ಮಗುವಿನ  ಪೋಷಕರು ಆಕೆಯನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೌನ್ಸೆಲಿಂಗ್ ಮಾಡಿದ್ದಾರೆ.

    ಇದನ್ನೂ ಓದಿ: Viral Video: ನಾನು ಕಳ್ಳರ ಸರದಾರ ಎಂದ ಬಿಹಾರ ಸಚಿವ! ಸರ್ಕಾರದಲ್ಲಿ ಇನ್ನೂ ದೊಡ್ಡ ಕಳ್ಳರಿದ್ದಾರಂತೆ

    ಆಗಲೇ ಬಸ್ ಚಾಲಕ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಬಟ್ಟೆ ಬದಲಿಸಿದ್ದಾನೆ ಎಂದು ಮೂರುವರೆ ವರ್ಷದ ಮಗು ಹೇಳಿದ್ದಾಗಿ ಪೊಲೀಸ್ ಅಧಿಕಾರಿಯೋರ್ವರು ತಿಳಿಸಿದ್ದಾರೆ. ಅಲ್ಲದೇ ಮಾರನೇ ದಿನ ಮಗು ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಶಾಲಾ ಬಸ್ ಚಾಲಕನನ್ನು ಗುರುತಿಸಿದ್ದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಪೋಕ್ಸೊ ಪ್ರಕರಣ ದಾಖಲು
    ಭಾರತೀಯ ದಂಡ ಸಂಹಿತೆ ಸೆಕ್ಷನ್ 376-ಎಬಿ (12 ವರ್ಷದೊಳಗಿನ ಬಾಲಕಿಯ ಅತ್ಯಾಚಾರ) ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. 

    ಕಠಿಣ ಕ್ರಮದ ಭರವಸೆ,
    ಶಾಲೆಯ ಆಡಳಿತ ಮಂಡಳಿಯು ವಿಷಯವನ್ನು ಮುಚ್ಚಿಡಲು ಪ್ರಯತ್ನಿಸಿದೆಯೇ ಎಂಬ ಪ್ರಶ್ನೆಗೆ ಮಧ್ಯ ಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ, ಶಾಲೆಯ ಆಡಳಿತದ ಪಾತ್ರದ ಬಗ್ಗೆ ತನಿಖೆ ನಡೆಸಲಾಗುವುದು. ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಈ ಮೂಲಕ ಆರೋಪಿಗಳ ವಿರುದ್ಧ ಶೀಘ್ರ ಕ್ರಮ ಕೈಗೊಳ್ಳುವ ಭರವಸೆಯನ್ನು ಮಧ್ಯ ಪ್ರದೇಶ ಸಚಿವ ನರೋತ್ತಮ್ ಮಿಶ್ರಾ ನೀಡಿದ್ದಾರೆ.

    ಇದನ್ನೂ ಓದಿ: Kohinoor Diamond: ಕೊಹಿನೂರ್ ವಜ್ರ ಭಾರತದ ಈ ದೇವರಿಗೆ ಸೇರಿದ್ದು, ತಕ್ಷಣ ಮರಳಿಸಲು ಆಗ್ರಹ

    ಇದೇ ವೇಳೆ ಮಧ್ಯಪ್ರದೇಶ ಕಾಂಗ್ರೆಸ್ ಮಾಧ್ಯಮ ವಿಭಾಗದ ಉಸ್ತುವಾರಿ ಕೆ.ಕೆ. ರಾಜ್ಯದಲ್ಲಿ ಬಿಜೆಪಿ ಆಡಳಿತದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಆರೋಪಿಸಿದ್ದಾರೆ. ಹೆಣ್ಣುಮಕ್ಕಳು ಮತ್ತು ಮಹಿಳೆಯರು ಸುರಕ್ಷಿತವಾಗಿಲ್ಲ ಎಂದು ಆರೋಪಿಸಿದ ಅವರು ಸಚಿವ ನರೋತ್ತಮ್ ಮಿಶ್ರಾ ಅವರ ರಾಜೀನಾಮೆಗೆ ಮಿಶ್ರಾ ಆಗ್ರಹಿಸಿದ್ದಾರೆ.
    Published by:ಗುರುಗಣೇಶ ಡಬ್ಗುಳಿ
    First published: