Rape: ಅನ್ಯ ಜಾತಿ ಯುವಕನ ಪ್ರೀತಿ ಮಾಡಿದ್ದಕ್ಕೆ ಮಗಳ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿ ತಂದೆ

ಯುವತಿ ಮನೆ ಬಿಟ್ಟು ಓಡಿ ಹೋಗಿ ಮದುವೆಯಾದ ಪರಿಣಾಮ ಸಮಾಜದ ಜನರು ಕುಟುಂಬವನ್ನು ಅವಮಾನಿಸಿದ್ದರು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಭೋಪಾಲ್​ (ನ. 17): ಬೇರೆ ಜಾತಿ ಯುವಕನನ್ನು ಪ್ರೀತಿಸಿ, ಮದುವೆಯಾದ (Inter caste Marriage)  ಕಾರಣಕ್ಕೆ ತಂದೆಯೇ ಮಗಳ ಮೇಲೆ ಅತ್ಯಾಚಾರ (Rape) ಎಸಗಿ ಕೊಲೆ ಮಾಡಿರುವ ಘಟನೆ ಮಧ್ಯಪ್ರದೇಶದ ಭೋಪಾಲ್​ನ (Bhopal) ರಾತಿಬಾದ್​ನಲ್ಲಿ ನಡೆದಿದೆ. ಕಳೆದ ಕೆಲವರು ವಾರಗಳ ಹಿಂದೆ ಯುವತಿ ತನ್ನ 8 ತಿಂಗಳ ಮಗುವನ್ನು ಅನಾರೋಗ್ಯದಿಂದ ಕಳೆದುಕೊಂಡಿದ್ದಳು. ಮಗುವನ್ನು ಕಳೆದುಕೊಂಡ ದುಃಖದಲ್ಲಿದ್ದ ಮೊಮ್ಮಗುವಿನ ಅಂತ್ಯಕ್ರಿಯೆಗೆ ಮಗಳನ್ನು ಸಮೀಪದ ಕಾಡಿಗೆ ತಂದೆ ಕರೆದು ಕೊಂಡು ಹೋಗಿದ್ದ. ಕುಟುಂಬಸ್ಥರ ಸಮ್ಮತಿಯಂತೆ ಈತ ಅಂತ್ಯಕ್ರಿಯೆ ನಡೆಸಲು ಮುಂದಾಗಿದ್ದ. ಈ ವೇಳೆ ಕಾಡಿನಲ್ಲಿ ಮಗುವಿನ ಅಂತ್ಯಸಂಸ್ಕಾರ ನಡೆಸಿದ ಬಳಿಕ 55 ವರ್ಷದ ತಂದೆ ಮಗಳ ಮೇಲೆ ಅತ್ಯಾಚಾರ ಎಸಗಿ, ಕತ್ತು ಹಿಸುಕಿ ಹತ್ಯೆ ಮಾಡಿದ್ದಾನೆ.

    ಮಗಳು ಕಳೆದ ಒಂದು ವರ್ಷದ ಹಿಂದೆ ತಂದೆ ವಿರೋಧದ ನಡುವೆ ಅನ್ಯ ಜಾತಿಯ ಹುಡುಗನನ್ನು ವಿವಾಹ ಆಗಿದ್ದಳು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
    ಮಗಳ ಮೇಲೆ ನೀಚ ಕೃತ್ಯ ಎಸಗಿದ ಬಳಿಕ ತಂದೆಯೇ ಪೊಲೀಸರ ಮುಂದೆ ಹೋಗಿ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಐಪಿಸಿ ಸೆಕ್ಷನ್​ 302 ಮತ್ತು 376ರ ಅಡಿ ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

    ತನಿಖೆಗೆ ಮುಂದಾದ ಪೊಲೀಸರು
    ಕಳೆದ ಎರಡು ದಿನಗಳ ಹಿಂದೆ ಅರಣ್ಯ ಪ್ರದೇಶದಲ್ಲಿ ಮಗುವಿನ ಮತ್ತು ಮಹಿಳೆಯ ಮೃತ ದೇಹ ಪತ್ತೆಯಾಗಿತ್ತು. ಈ ವೇಳೆ ತನಿಖೆಗೆ ಮುಂದಾದ ಪೊಲೀಸರು ಮಹಿಳೆ ಸೆಹೊರ್​ ಜಿಲ್ಲೆಯ ಬಿಲ್ಕಿಸ್ಗಂಜ್​ ಮೂಲದವರು ಎಂಬುದನ್ನು ಪತ್ತೆ ಹಚ್ಚಿದರು.
    ಈ ವೇಳೆ ಕುಟುಂಬಸ್ಥರನ್ನು ವಿಚಾರಣೆ ನಡೆಸಿದಾಗ ಮನೆಯವರ ಇಚ್ಛೆ ಮೀರಿ ಯುವತಿ ಮನೆಯಿಂದ ಓಡಿ ಹೋಗಿ ಪ್ರೀತಿಸಿದಿ ಹುಡುನಗ ಮದುವೆಯಾಗಿದ್ದಳು. ಈ ಸಿಟ್ಟು ಕುಟುಂಬದಲ್ಲಿ ಇತ್ತು ಎಂಬ ವಿಚಾರ ಬಯಲಾಗಿದೆ.

    ಅವಮಾನಕ್ಕೆ ಪ್ರತೀಕಾರ

    ಯುವತಿ ಮನೆ ಬಿಟ್ಟು ಓಡಿ ಹೋಗಿ ಮದುವೆಯಾದ ಪರಿಣಾಮ ಸಮಾಜದ ಜನರು ಕುಟುಂಬವನ್ನು ಅವಮಾನಿಸಿದ್ದರು. ಇದೇ ಕಾರಣಕ್ಕೆ ಆಕೆ ಮದುವೆಯಾದ ಬಳಿಕವೂ ಮನೆಗೆ ಬರಲಿಲ್ಲ. ಈ ನಡುವೆ ದೀಪಾವಳಿಗೆ ಯುವತಿ ತನ್ನ ಅಕ್ಕನ ಮನೆಗೆ ಭೇಟಿ ನೀಡಿದ್ದಳು. ಈ ವೇಳೆ ದುರಾದೃಷ್ಟವಶಾತ್​ ಮಗು ಅನಾರೋಗ್ಯದಿಂದ ಮೃತಪಟ್ಟಿತು. ಈ ವೇಳೆ ದಿಕ್ಕು ತೋಚದೆ ಯುವತಿಯ ಅಕ್ಕ ತನ್ನ 55 ವರ್ಷದ ತಂದೆಗೆ ಈ ವಿಚಾರ ತಿಳಿಸಿದಳು. ರಾತಿಬಾದ್​​ನಲ್ಲಿದ್ದ ಮೊದಲ ಮಗಳ ಮನೆಗೆ ತಂದೆ 24 ವರ್ಷದ ಮಗನೊಟ್ಟಿಗೆ ಆಗಮಿಸಿದ್ದ.

    ಇದನ್ನು ಓದಿ: ಮಣಿಪುರ ಮಾರಣಹೋಮದಲ್ಲಿ ಚೀನೀ ಸೇನೆ ಕೈವಾಡ? ಯಾಕಿಂಥ ಸೇಡು?

    ದಿಕ್ಕು ತಪ್ಪಿಸಲು ಮುಂದಾಗಿದ್ದ

    ಈ ವೇಳೆ ಮಗುವಿನ ಅಂತ್ಯ ಸಂಸ್ಕಾರಕ್ಕೆ ಕಾಡಿಗೆ ಹೋದರು. ಮಗ ರಸ್ತೆಯಲ್ಲಿ ನಿಂತಿದ್ದ. ಮಗಳೊಟ್ಟಿಗೆ ತಂದೆ ಅರಣ್ಯದ ಒಳಗೆ ಹೋಗಿದ್ದರು. ಬಳಿಕ ಈ ಕೃತ್ಯ ನಡೆಸಿದ್ದ. ಮನೆಗೆ ಬಂದ ತಂದೆ ಮೊದಲ ಮಗಳಿಗೆ ನಡೆದ ಘಟನೆಯ ಕುರಿತು ವಿವರಿಸಿದ್ದ.

    ತನಿಖೆ ಆರಂಭದಲ್ಲಿ ತಂದೆ ಮತ್ತು ಮಗ ಪ್ರಕರಣ ದಿಕ್ಕು ತಪ್ಪಿಸುವ ಯತ್ನ ನಡೆಸಿದ್ದರು. ಗಂಡ ಮತ್ತು ಮಗಳ ನಡುವೆ ಜಗಳ ಆಗುತ್ತಿತ್ತು. ಇದರಿಂದಾಗಿ ಆಕೆ ಮೊದಲ ಮಗಳ ಮನೆಗೆ ಆಗಮಿಸಿದ್ದಳು ಎಂದಿದ್ದಾರೆ.

    ಇದನ್ನು ಓದಿ: ಕುಡಿದ ಮತ್ತಿನಲ್ಲಿ ಹೆಂಡತಿಯನ್ನು ಸೆಕ್ಸ್​​ಗೆ ಪೀಡಿಸಿ ಅಪಾಯ ತಂದುಕೊಂಡ ಗಂಡ!

    ದೂರು ದಾಖಲಿಸಿದ್ದ ಮನೆ ಮಾಲೀಕರು
    ಅಕ್ಕನ ಮನೆಗೆ ಹೋಗುತ್ತೇನೆ ಎಂದು ಹೋದ ಪತ್ನಿ ಎರಡು ವಾರ ಕಳೆದರೂ ಬಾರದ ಹಿನ್ನಲೆ ಪತಿ ಕೂಡ ಆಕೆಗೆ ಕರೆ ಮಾಡಿದ್ದ. ಈ ವೇಳೆ ಮಾತನಾಡಿದ್ದ ಮನೆಯ ಮಾಲೀಕರಿಗೆ ಆತ ಮಗು ಮತ್ತು ಹೆಂಡತಿ ಕುರಿತು ವಿವರ ನೀಡುವಂತೆ ಬೆದರಿಸಿದ. ಈ ಬೆದರಿಕೆ ಹಿನ್ನಲೆ ಮನೆಯ ಮಾಲೀಕರು ಯುವತಿ ಕಣ್ಮರೆ ಕುರಿತು ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದರು.
    Published by:Seema R
    First published: