Bhopal Gas Tragedy: ಭೋಪಾಲ್​ ಗ್ಯಾಸ್ ದುರಂತ ಸಂಭವಿಸಿ ಇಂದಿಗೆ 37 ವರ್ಷ; ಸಂತ್ರಸ್ತರಿಗೆ ಇನ್ನೂ ಸಿಕ್ಕಿಲ್ಲ ನ್ಯಾಯ

ದುರಂತ ಸಂಭವಿಸಿ 37 ವರ್ಷಗಳಾಗಿದ್ದು, ಬದುಕುಳಿದವರು ಮತ್ತು ಮೃತರ ಸಂಬಂಧಿಕರು ಇನ್ನೂ ಸರ್ಕಾರದಿಂದ ನ್ಯಾಯಯುತ ಪರಿಹಾರಕ್ಕಾಗಿ ಕಾಯುತ್ತಿದ್ದಾರೆ. ಪಿಟಿಐನ ಸುದ್ದಿ ಪ್ರಕಾರ, ದುರಂತದ ಪ್ರತಿ ಸಂತ್ರಸ್ತರು ಇದುವರೆಗೆ ನಿಗದಿಪಡಿಸಿದ ಮೊತ್ತದ ಐದನೇ ಒಂದು ಭಾಗಕ್ಕಿಂತ ಕಡಿಮೆ ಹಣವನ್ನು ಪಡೆದಿದ್ದಾರೆ.

ಭೋಪಾಲ್ ಅನಿಲ ದುರಂತ

ಭೋಪಾಲ್ ಅನಿಲ ದುರಂತ

  • Share this:
Bhopal Gas Tragedy: ಮಧ್ಯಪ್ರದೇಶದ ರಾಜಧಾನಿ ಭೂಪಾಲ್(Bhopal)​ನಲ್ಲಿ ಸಂಭವಿಸಿದ್ದ ಭೀಕರ ಅನಿಲ ದುರಂತ(Gas Tragedy) ಘಟನೆಗೆ ಇಂದಿಗೆ ಬರೋಬ್ಬರಿ 37 ವರ್ಷ. 1984ರಲ್ಲಿ ಯೂನಿಯನ್ ಕಾರ್ಬೈಡ್ ಇಂಡಿಯಾ ಲಿಮಿಟೆಡ್​​ನ(UCIL) ಕೀಟನಾಶಕ ಸ್ಥಾವರದಿಂದ ಅನಿಲ ಸೋರಿಕೆಯಾಗಿ ಈ ದುರಂತ ಸಂಭವಿಸಿತ್ತು. ಆ ವೇಳೆ ಘಟನೆಯಲ್ಲಿ ಸಾವಿರಾರು ಜನರು ಸಾವನ್ನಪ್ಪಿದ್ದರು. ಸಂತ್ರಸ್ತರಿಗೆ ಸೂಕ್ತ ನ್ಯಾಯ ಸಿಗಲಿಲ್ಲ. ಈ ದುರಂತದಲ್ಲಿ ಮೃತಪಟ್ಟವರಿಗೆ ನ್ಯಾಯ(Justice) ಒದಗಿಸಲು ಅಂದಿನಿಂದಲೂ ಈವರೆಗೆ ಎಲ್ಲಾ ಸರ್ಕಾರಗಳು ವಿಫಲವಾಗಿವೆ ಎಂಬ ಆರೋಪ ಕೇಳಿ ಬಂದಿದೆ.

ಈ ದುರಂತವು ಡಿಸೆಂಬರ್ 2-3ರ ಮಧ್ಯರಾತ್ರಿಯಲ್ಲಿ ಸಂಭವಿಸಿದೆ. ಇದು ವಿಶ್ವದ ಅತ್ಯಂತ ಕೆಟ್ಟ ಕೈಗಾರಿಕಾ ವಿಪತ್ತುಗಳಲ್ಲಿ ಒಂದಾಗಿದೆ. ಸುಮಾರು 5 ಲಕ್ಷಕ್ಕೂ ಹೆಚ್ಚು ಜನರು ಮೀಥೈಲ್ ಐಸೊಸೈನೇಟ್ ಅನಿಲ ದುರಂತದಲ್ಲಿ ಸಿಲುಕಿ ಪರಿತಪಿಸಿದ್ದಾರೆ. ಈ ದುರಂತದಲ್ಲಿ ತಕ್ಷಣಕ್ಕೆ ಮೃತಪಟ್ಟವರು 2259 ಮಂದಿ ಹೇಳಲಾಗಿತ್ತು.

ಸರ್ಕಾರದಿಂದ ಪರಿಹಾರ

ಆದರೆ 2006 ರಲ್ಲಿ ಅಂದಿನ ಮಧ್ಯಪ್ರದೇಶ ಸರ್ಕಾರ ನ್ಯಾಯಾಲಯಕ್ಕೆ ಸಲ್ಲಿಸಿದ ಅಫಿಡವಿಟ್ ಪ್ರಕಾರ, ಒಟ್ಟು 3787 ಮಂದಿ ಈ ಅನಿಲ ಸೋರಿಕೆ ದುರಂತದಲ್ಲಿ ಸಾವನ್ನಪ್ಪಿದ್ದಾರೆ. ಜೊತೆಗೆ ಆ ಕುಟುಂಬಗಳಿಗೆ ಪರಿಹಾರ ನೀಡಲಾಗಿದೆ. ಇದರೊಂದಿಗೆ ಗ್ಯಾಸ್ ಸೋರಿಕೆ ದುರಂತದಲ್ಲಿ ಅಸ್ವಸ್ಥರಾದ 5.58 ಲಕ್ಷ ಮಂದಿಗೂ ಅಂದಿನ ಸರ್ಕಾರ ನೆರವು ನೀಡಿದೆ. ಆದಾಗ್ಯೂ ಸಂತ್ರಸ್ತರಿಗಾಗಿ ಹೋರಾಡುತ್ತಿರುವ ಸಂಘಟನೆಗಳು ಈ ಅನಿಲ ಸೋರಿಕೆ ದುರಂತ ಸುಮಾರು 25 ಸಾವಿರ ಜನರನ್ನು ಬಲಿ ತೆಗೆದುಕೊಂಡಿದೆ ಎಂದು ಹೇಳುತ್ತಿವೆ.

ಇದನ್ನೂ ಓದಿ: Morning Digest: ನಾಳೆ ಅಪ್ಪಳಿಸಲಿದೆ ‘ಜವಾದ್‘ ಚಂಡಮಾರುತ, ಕೊರೋನಾದಿಂದ ಸತ್ತರೆ 1 ಲಕ್ಷ ರೂ. ಪರಿಹಾರ; ಬೆಳಗಿನ ಟಾಪ್ ನ್ಯೂಸ್​ಗಳು

ನ್ಯಾಯಕ್ಕಾಗಿ ಹೋರಾಟ

ದುರಂತ ಸಂಭವಿಸಿ 37 ವರ್ಷಗಳಾಗಿದ್ದು, ಬದುಕುಳಿದವರು ಮತ್ತು ಮೃತರ ಸಂಬಂಧಿಕರು ಇನ್ನೂ ಸರ್ಕಾರದಿಂದ ನ್ಯಾಯಯುತ ಪರಿಹಾರಕ್ಕಾಗಿ ಕಾಯುತ್ತಿದ್ದಾರೆ. ಪಿಟಿಐನ ಸುದ್ದಿ ಪ್ರಕಾರ, ದುರಂತದ ಪ್ರತಿ ಸಂತ್ರಸ್ತರು ಇದುವರೆಗೆ ನಿಗದಿಪಡಿಸಿದ ಮೊತ್ತದ ಐದನೇ ಒಂದು ಭಾಗಕ್ಕಿಂತ ಕಡಿಮೆ ಹಣವನ್ನು ಪಡೆದಿದ್ದಾರೆ.

ಸಂತ್ರಸ್ತರ ಗೋಳು ಹೇಳತೀರದು

ಅಂದಿನ ದುರಂತದಿಂದ ಜೀವ ಕಳೆದುಕೊಂಡವರು ಒಂದೆಡೆಯಾದರೆ ಬೇರೆ ಕೆಲವು ರೋಗಗಳಿಗೀಡಾದವರು ಮತ್ತೊಂದಷ್ಟು ಜನರು. ದುಡಿಯುವವರನ್ನು ಕಳೆದುಕೊಂಡು ನಿರಾಶ್ರಿತರಾದವರೂ ಇದ್ದಾರೆ. ಆದರೆ ಅಂಥವರಿಗೆ, ಅಂಥವರ ಕುಟುಂಬಕ್ಕೆ ಯಾವ ಸರ್ಕಾರಗಳೂ ನ್ಯಾಯ ಒದಗಿಸಿಲ್ಲ ಎಂಬುದು ಅನೇಕರ ಆರೋಪ. ಈಗ ಘಟನೆ ನಡೆದು 37 ವರ್ಷಗಳಾದ ಹಿನ್ನೆಲೆಯಲ್ಲಿ ಕೆಲವು ಎನ್​ಜಿಒಗಳು ಸ್ಥಳೀಯರನ್ನು ಒಟ್ಟಾಗಿಸಿಕೊಂಡು ಅಕ್ಟೋಬರ್​ 26ರಿಂದ ಪ್ರತಿಭಟನೆ ಶುರು ಮಾಡಿದ್ದವು.

ನ್ಯಾಯ ಒದಗಿಸುವಂತೆ ಪ್ರತಿಭಟನೆ

ಭೋಪಾಲ್​ನಲ್ಲಿ ಈಗ ಮುಚ್ಚಲ್ಪಟ್ಟ ಯೂನಿಯನ್​ ಕಾರ್ಬೈಡ್​ ಕಾರ್ಖಾನೆಯಿಂದ 1 ಕಿಮೀ ದೂರದಲ್ಲಿ ರಸ್ತೆ ಬದಿಯಲ್ಲೇ ಪ್ರತಿಭಟನೆ ನಡೆದಿತ್ತು. ಅನಿಲ ದುರಂತದಲ್ಲಿ ಸಂತ್ರಸ್ತರಾದವರಿಗೆ ಮತ್ತು ಅವರ ಕುಟುಂಬಗಳಿಗೆ ನ್ಯಾಯ, ಪರಿಹಾರ ಮತ್ತು ಪುನರ್ವಸತಿ ನೀಡಬೇಕು ಎಂದು ಎಂದು ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಒತ್ತಾಯಿಸಿದ್ದಲ್ಲದೆ, ಸರ್ಕಾರಗಳ ನಿರ್ಲಕ್ಷ್ಯತೆ ಬಗ್ಗೆ 37 ಪ್ರಶ್ನೆಗಳನ್ನೂ ಎತ್ತಲಾಗಿದೆ. ಇನ್ನು ಈ ಪ್ರತಿಭಟನೆಯಲ್ಲಿ ಬಹುಪಾಲು ವೃದ್ಧ ಮಹಿಳೆಯರೇ ಇದ್ದುದು ವಿಶೇಷವಾಗಿತ್ತು.

ಇದನ್ನೂ ಓದಿ: Omicron in Bengaluru: ಓಮಿಕ್ರಾನ್​ ಪತ್ತೆ ಹಿನ್ನೆಲೆ, ಸದ್ಯಕ್ಕೆ 2 ಡೋಸ್​ಗಳ ನಡುವಿನ ಅಂತರದಲ್ಲಿ ಯಾವುದೇ ಬದಲಾವಣೆ ಇಲ್ಲ

ಸಂಘರ್ಷ್ ಸಹಕಾರ್ ಸಮಿತಿ ವರದಿ

ಆರ್ಥಿಕ ನೆರವು 1989 ರಲ್ಲಿ USD 470 ಮಿಲಿಯನ್ ಆಗಿತ್ತು. ಭೋಪಾಲ್ ಗ್ಯಾಸ್ ಪೀಠದ ಸಂಘರ್ಷ್ ಸಹಕಾರ್ ಸಮಿತಿ (BGPSSS) ಸಹ-ಸಂಚಾಲಕ ಎನ್ ಡಿ ಜಯಪ್ರಕಾಶ್ ಅವರನ್ನು ಉಲ್ಲೇಖಿಸಿ ವರದಿ ಮಾಡಿದೆ. "2004 ರಲ್ಲಿ ವಿತರಣೆಗಳು ಪ್ರಾರಂಭವಾದಾಗ ಡಾಲರ್‌ಗಳು ₹ 3,000 ಕೋಟಿಗಿಂತ ಹೆಚ್ಚಾಯಿತು, ಆದರೆ ಸಂತ್ರಸ್ತರ ಸಂಖ್ಯೆ 5.73 ಲಕ್ಷಕ್ಕೆ ಏರಿತು ಮತ್ತು ಈ ಮೊತ್ತವನ್ನು ಅವರಿಗೆ ವಿತರಿಸಲಾಯಿತು. ಆದ್ದರಿಂದ, ಪ್ರತಿ ಸಂತ್ರಸ್ತರಿಗೆ ಐದನೇ ಒಂದು ಭಾಗದಷ್ಟು ಪರಿಹಾರ ಸಿಕ್ಕಿತು" ಎಂದು ಅವರು ಹೇಳಿದರು.
Published by:Latha CG
First published: