1 ತಿಂಗಳು ಧರಣಿ ಮಾಡದಂತೆ ನಿರ್ಬಂಧ ವಿಧಿಸಿ ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್​ಗೆ ಜಾಮೀನು ಮಂಜೂರು

ಚಂದ್ರಶೇಖರ ಆಜಾದ್ ಅವರು ಡಿಸೆಂಬರ್ 20ರಂದು ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನೆ ವೇಳೆ ಪೊಲೀಸರ ಅನುಮತಿ ಇಲ್ಲದೇ ಜಾಮಾ ಮಸೀದಿಯಿಂದ ಜಂತರ್​ ಮಂತರ್​ವರೆಗೆ ಪ್ರತಿಭಟನಾ ಮೆರವಣಿಗೆಗೆ ಕರೆ ನೀಡಿದ್ದರು. ಈ ಪ್ರಕರಣ ಸಂಬಂಧ ಇತರೆ ಒಂಭತ್ತು ಮಂದಿಯನ್ನು ಬಂಧಿಸಲಾಗಿತ್ತು. ಅವರೆಲ್ಲರಿಗೂ ಜನವರಿ 9ರಂದು ಜಾಮೀನು ಸಿಕ್ಕಿತ್ತು.

HR Ramesh | news18-kannada
Updated:January 15, 2020, 5:58 PM IST
1 ತಿಂಗಳು ಧರಣಿ ಮಾಡದಂತೆ ನಿರ್ಬಂಧ ವಿಧಿಸಿ ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್​ಗೆ ಜಾಮೀನು ಮಂಜೂರು
ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್.
  • Share this:
ನವದೆಹಲಿ: ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಅವರಿಗೆ ಬುಧವಾರ ದೆಹಲಿ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಜಾಮಾ ಮಸೀದಿಯಲ್ಲಿ ಜನರು ನಡೆಸುತ್ತಿದ್ದ ಪ್ರತಿಭಟನೆ ವೇಳೆ ಪ್ರಚೋದನಾಕಾರಿ ಭಾಷಣ ಮಾಡಿದ ಆರೋಪ ಮೇಲೆ ಚಂದ್ರಶೇಖರ್​ ಅವರನ್ನು ಡಿಸೆಂಬರ್ 20ರಂದು ಪೊಲೀಸರು ಬಂಧಿಸಿದ್ದರು.

ಹೆಚ್ಚುವರಿ ಸೆಷನ್ಸ್​ ನ್ಯಾಯಾಧೀಶರಾದ ಕಾಮಿನಿ ಲೌ ಅವರು ಚಂದ್ರಶೇಖರ್ ಆಜಾದ್ ಅವರಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದ್ದಾರೆ. ಆಜಾದ್ ನಾಲ್ಕು ವಾರಗಳ ಕಾಲ ದೆಹಲಿಗೆ ಭೇಟಿ ನೀಡುವುದನ್ನು ನಿರ್ಬಂಧಿಸಲಾಗಿದೆ ಹಾಗೂ ಫೆಬ್ರವರಿ 16ರಿಂದ ಒಂದು ತಿಂಗಳ ಕಾಲ ಧರಣಿ ಕೈಗೊಳ್ಳದಂತೆ ನಿರ್ಬಂಧ ವಿಧಿಸಲಾಗಿದೆ ಹಾಗು 25 ಸಾವಿರ ಬಾಂಡ್​ ಪಡೆದು ಜಾಮೀನು ನೀಡಲಾಗಿದೆ.

ಆಜಾದ್​ ಅವರು ಪೊಲೀಸರ ಬಂದೋಬಸ್ತ್​ನಲ್ಲಿ ಉತ್ತರಪ್ರದೇಶದ ಶಹರಾಪುರಕ್ಕೆ ಹಿಂದುರುಗಲಿದ್ದಾರೆ. ಆದಾಗ್ಯೂ, ಪೊಲೀಸರ ಬಂದೋಬಸ್ತ್​ನಲ್ಲಿ 24 ಗಂಟೆಯೊಳಗೆ ಜಾಮಾ ಮಸೀದಿಗೆ ತೆರಳಿ ನಮಸ್ಕಾರ ಸಲ್ಲಿಸುವುದಕ್ಕೆ ನ್ಯಾಯಾಲಯ ಅನುಮತಿ ನೀಡಿದೆ.

ಇದನ್ನು ಓದಿ: ಜಾಮಾ ಮಸೀದಿ ಪಾಕ್​ನಲ್ಲಿದೆಯೇ, ಇಲ್ಲಿ ಪ್ರತಿಭಟಿಸುವುದು ಹೇಗೆ ಕಾನೂನು ಉಲ್ಲಂಘನೆಯಾಗುತ್ತೆ?; ಪೊಲೀಸರನ್ನು ತರಾಟೆಗೆ ತೆಗೆದುಕೊಂಡ ಕೋರ್ಟ್​

ಚಂದ್ರಶೇಖರ ಆಜಾದ್ ಅವರು ಡಿಸೆಂಬರ್ 20ರಂದು ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನೆ ವೇಳೆ ಪೊಲೀಸರ ಅನುಮತಿ ಇಲ್ಲದೇ ಜಾಮಾ ಮಸೀದಿಯಿಂದ ಜಂತರ್​ ಮಂತರ್​ವರೆಗೆ ಪ್ರತಿಭಟನಾ ಮೆರವಣಿಗೆಗೆ ಕರೆ ನೀಡಿದ್ದರು. ಈ ಪ್ರಕರಣ ಸಂಬಂಧ ಇತರೆ ಒಂಭತ್ತು ಮಂದಿಯನ್ನು ಬಂಧಿಸಲಾಗಿತ್ತು. ಅವರೆಲ್ಲರಿಗೂ ಜನವರಿ 9ರಂದು ಜಾಮೀನು ಸಿಕ್ಕಿತ್ತು.
First published:January 15, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ