ಜಾಮೀನು ನಿರ್ಬಂಧ ಸಡಿಲಿಕೆ; ದೆಹಲಿಗೆ ಪ್ರವೇಶಕ್ಕೆ ಚಂದ್ರಶೇಖರ್ ಆಜಾದ್​ಗೆ ದೆಹಲಿ ನ್ಯಾಯಾಲಯ ಅನುಮತಿ

ಜಾಮೀನು ನೀಡುವ ಮುನ್ನ ಆಜಾದ್ ನಾಲ್ಕು ವಾರಗಳ ಕಾಲ ದೆಹಲಿಗೆ ಭೇಟಿಗೆ ನಿರ್ಬಂಧ ಹಾಗೂ ಫೆಬ್ರವರಿ 16ರಿಂದ ಒಂದು ತಿಂಗಳ ಕಾಲ ಧರಣಿ ಕೈಗೊಳ್ಳದಂತೆ ನಿರ್ಬಂಧ ವಿಧಿಸಲಾಗಿತ್ತು. ಇದೀಗ ಅವರು ದೆಹಲಿ ಭೇಟಿ ನೀಡದಂತೆ ಏರಲಾಗಿದ್ದ ನಿರ್ಬಂಧವನ್ನು ಸಡಿಲಿಸಲಾಗಿದೆ.

HR Ramesh | news18-kannada
Updated:January 21, 2020, 5:36 PM IST
ಜಾಮೀನು ನಿರ್ಬಂಧ ಸಡಿಲಿಕೆ; ದೆಹಲಿಗೆ ಪ್ರವೇಶಕ್ಕೆ ಚಂದ್ರಶೇಖರ್ ಆಜಾದ್​ಗೆ ದೆಹಲಿ ನ್ಯಾಯಾಲಯ ಅನುಮತಿ
ಸಿಎಎ ವಿರೋಧಿ ಪ್ರತಿಭಟನೆ ವೇಳೆ ಸಂವಿಧಾನ ಪ್ರತಿ ಹಿಡಿದಿರುವ ಚಂದ್ರಶೇಖರ್ ಆಜಾದ್.
  • Share this:
ನವದೆಹಲಿ: ಭಿಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಅವರ ಜಾಮೀನು ಷರತ್ತುಗಳನ್ನು ಮಂಗಳವಾರ ದೆಹಲಿ ನ್ಯಾಯಾಲಯ ಬದಲಾವಣೆ ಮಾಡಿದೆ.  ಚುನಾವಣೆ ಹಿನ್ನೆಲೆಯಲ್ಲಿ ಅವರು ಯಾವಾಗ ಬೇಕಾದರೂ ರಾಷ್ಟ್ರ ರಾಜಧಾನಿ ದೆಹಲಿಗೆ ಬರಬಹುದು ಎಂದು ಹೇಳಿದೆ.

ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರಾದ ಕಾಮಿನಿ ಲೌ ಅವರು ಚಂದ್ರಶೇಖರ್ ಆಜಾದ್ ದೆಹಲಿಗೆ ಪ್ರವೇಶಿಸುವುದರಿಂದ ಕಾನೂನು ಮತ್ತು ಸುವ್ಯವಸ್ಥೆ, ಸಾರ್ವಜನಿಕ ಶಾಂತಿಗೆ ಭಂಗ, ಅಥವಾ ರಾಷ್ಟ್ರೀಯ ಭದ್ರತೆಗೆ ತೊಂದರೆಯಾಗಲಿದೆ  ಅಥವಾ ರಾಜಧಾನಿ ದೆಹಲಿಯಲ್ಲಿ ಅವರ ಇರುವಿಕೆ ಹಿಂಸಾಚಾರಕ್ಕೆ ಕಾರಣವಾಗಬಹುದು ಎಂದು ಸೂಚಿಸುವ ಯಾವುದೇ ಸೂಕ್ತ ಸಾಕ್ಷ್ಯಾಧಾರಗಳನ್ನು ಪ್ರಾಸಿಕ್ಯೂಷನ್ ನ್ಯಾಯಾಲಯಕ್ಕೆ ಸಲ್ಲಿಸಲು ವಿಫಲವಾಗಿದೆ ಎಂದು ಹೇಳಿ, ಆಜಾದ್ ದೆಹಲಿ ಪ್ರವಾಸಕ್ಕೆ ಇದ್ದ ಕಾನೂನು ತೊಡಕನ್ನು ತೆಗೆದುಹಾಕಿದರು.

ಚಂದ್ರಶೇಖರ ಆಜಾದ್ ಅವರು ಡಿಸೆಂಬರ್ 20ರಂದು ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನೆ ವೇಳೆ ಪೊಲೀಸರ ಅನುಮತಿ ಇಲ್ಲದೇ ಜಾಮಾ ಮಸೀದಿಯಿಂದ ಜಂತರ್​ ಮಂತರ್​ವರೆಗೆ ಪ್ರತಿಭಟನಾ ಮೆರವಣಿಗೆಗೆ ಕರೆ ನೀಡುವ ಮೂಲಕ ಪ್ರಚೋದನೆ ನೀಡಿದ್ದರು. ಈ ಆರೋಪದ ಮೇಲೆ ಚಂದ್ರಶೇಖರ್ ಆಜಾದ್ ಸೇರಿ ಒಂಭತ್ತು ಮಂದಿಯನ್ನು ಬಂಧಿಸಲಾಗಿತ್ತು. ಬಳಿಕ ಜ.15ರಂದು ಹೆಚ್ಚುವರಿ ಸೆಷನ್ಸ್​ ನ್ಯಾಯಾಲಯದಿಂದ  ಷರತ್ತುಬದ್ಧ ಜಾಮೀನಿನ ಮೇಲೆ ಆಜಾದ್ ಬಿಡುಗಡೆಯಾಗಿದ್ದರು. ಜಾಮೀನು ನೀಡುವ ಮುನ್ನ ಆಜಾದ್ ನಾಲ್ಕು ವಾರಗಳ ಕಾಲ ದೆಹಲಿಗೆ ಭೇಟಿಗೆ ನಿರ್ಬಂಧ ಹಾಗೂ ಫೆಬ್ರವರಿ 16ರಿಂದ ಒಂದು ತಿಂಗಳ ಕಾಲ ಧರಣಿ ಕೈಗೊಳ್ಳದಂತೆ ನಿರ್ಬಂಧ ವಿಧಿಸಲಾಗಿತ್ತು. ಇದೀಗ ಅವರು ದೆಹಲಿ ಭೇಟಿ ನೀಡದಂತೆ ಏರಲಾಗಿದ್ದ ನಿರ್ಬಂಧವನ್ನು ಸಡಿಲಿಸಲಾಗಿದೆ.

ಇದನ್ನು ಓದಿ: 1 ತಿಂಗಳು ಧರಣಿ ಮಾಡದಂತೆ ನಿರ್ಬಂಧ ವಿಧಿಸಿ ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್​ಗೆ ಜಾಮೀನು ಮಂಜೂರು
First published: January 21, 2020, 5:35 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading