ಎಸ್​ಸಿ-ಎಸ್​ಟಿ ಮೀಸಲಾತಿ: ಸುಪ್ರೀಂ ತೀರ್ಪು ವಿರೋಧಿಸಿ ಫೆ. 23ಕ್ಕೆ ಭಾರತ್ ಬಂದ್​ಗೆ ಆಜಾದ್ ಕರೆ

ಫೆ. 23ರಂದು ನಡೆಸಲಾಗುವ ಭಾರತ್ ಬಂದ್​ಗೂ ಮುನ್ನ ಫೆ. 16ರಂದು ಭೀಮ್ ಆರ್ಮಿ ಸಂಘಟನೆ ತನ್ನ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನಾ ಮೆರವಣಿಗೆ ನಡೆಸಲಿದೆ. ದೆಹಲಿಯ ಮಂಡಿ ಹೌಸ್ ಪ್ರದೇಶದಿಂದ ಸಂಸತ್​​ವರೆಗೂ ಈ ರ್ಯಾಲಿ ನಡೆಯಲಿದೆ ಎಂದು ಚಂದ್ರಶೇಖರ್ ಆಜಾದ್ ತಿಳಿಸಿದ್ದಾರೆ.

ಚಂದ್ರಶೇಖರ್ ಆಜಾದ್ 'ರಾವಣ' ಭಾವಚಿತ್ರ

ಚಂದ್ರಶೇಖರ್ ಆಜಾದ್ 'ರಾವಣ' ಭಾವಚಿತ್ರ

  • News18
  • Last Updated :
  • Share this:
ನವದೆಹಲಿ(ಫೆ. 13): ಮೀಸಲಾತಿ ಮೂಲಭೂತ ಹಕ್ಕಲ್ಲ ಎಂದು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನ ಬಗ್ಗೆ ದಲಿತ ಸಂಘಟನೆಗಳು ಅಸಮಾಧಾನ ಹೊಂದಿವೆ. ನ್ಯಾಯಾಲಯದ ತೀರ್ಪನ್ನು ವಿರೋಧಿಸಿ ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಅವರು ಭಾರತ್ ಬಂದ್​ಗೆ ಕರೆ ನೀಡಿದ್ಧಾರೆ. ಫೆಬ್ರವರಿ 23ರಂದು ಬಂದ್​​ಗೆ ಕರೆ ನೀಡಿರುವ ಅವರು ದಲಿತ ಮತ್ತು ಹಿಂದುಳಿದ ವರ್ಗಗಳ ಎಲ್ಲಾ ಜನಪ್ರತಿನಿಧಿಗಳು ಒಗ್ಗೂಡಿ ಸರ್ಕಾರದ ಮೇಲೆ ಒತ್ತಡ ಹಾಕಬೇಕೆಂದು ಆಗ್ರಹಿಸಿದ್ದಾರೆ.

ಸುಪ್ರೀಂ ಕೋರ್ಟ್ ತೀರ್ಪಿಗೆ ವಿರುದ್ಧವಾಗಿ ಕೇಂದ್ರ ಸರ್ಕಾರವು ಸುಗ್ರೀವಾಜ್ಞೆ ಹೊರಡಿಸಬೇಕು. ಈ ನಿಟ್ಟಿನಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ  ಮತ್ತು ಹಿಂದುಳಿದ ವರ್ಗಗಳಿಗೆ ಸೇರಿದ ಸರ್ವಪಕ್ಷಗಳ ಎಲ್ಲಾ ಸಂಸದರು ಮತ್ತು ಶಾಸಕರು ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದು ಆಜಾದ್ ಒತ್ತಾಯಿಸಿದ್ಧಾರೆ.

“ಇವರನ್ನು ಜನರು ಆಯ್ಕೆ ಮಾಡಿ ಕಳುಹಿಸಿದ್ದಾರೆ. ಅವರು ಈ ವಿಚಾರದ ಬಗ್ಗೆ ಮಾತನಾಡಬೇಕು. ಅವರು ಈ ವಿಚಾರ ಪ್ರಸ್ತಾಪ ಮಾಡದೇ ಇದ್ದಲ್ಲಿ ಅವರ ಮನೆಗಳಿಗೆ ಘೇರಾವ್ ಹಾಕುತ್ತೇವೆ” ಎಂದು ಭೀಮ್ ಆರ್ಮಿ ಮುಖ್ಯಸ್ಥರು ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ಮೀಸಲಾತಿ ಮೂಲಭೂತ ಹಕ್ಕಲ್ಲ ಎಂಬ ಸುಪ್ರೀಂ ತೀರ್ಪನ್ನು ನಾನು ಖಂಡಿಸುತ್ತೇನೆ; ಅಸಮಾಧಾನ ಹೊರಹಾಕಿದ ಖರ್ಗೆ

ಫೆ. 23ರಂದು ನಡೆಸಲಾಗುವ ಭಾರತ್ ಬಂದ್​ಗೂ ಮುನ್ನ ಫೆ. 16ರಂದು ಭೀಮ್ ಆರ್ಮಿ ಸಂಘಟನೆ ತನ್ನ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನಾ ಮೆರವಣಿಗೆ ನಡೆಸಲಿದೆ. ದೆಹಲಿಯ ಮಂಡಿ ಹೌಸ್ ಪ್ರದೇಶದಿಂದ ಸಂಸತ್​​ವರೆಗೂ ಈ ರ್ಯಾಲಿ ನಡೆಯಲಿದೆ ಎಂದು ಚಂದ್ರಶೇಖರ್ ಆಜಾದ್ ತಿಳಿಸಿದ್ದಾರೆ.

ಮೂರು ದಿನಗಳ ಹಿಂದೆ ನ್ಯಾ| ಎಲ್ ನಾಗೇಶ್ವರ್ ರಾವ್ ಮತ್ತು ನ್ಯಾ| ಹೇಮಂತ್ ಗುಪ್ತಾ ಅವರಿದ್ದ ಸುಪ್ರೀಂ ಕೋರ್ಟ್ ನ್ಯಾಯಪೀಠವು ಮೀಸಲಾತಿ ಜನರ ಮೂಲಭೂತ ಹಕ್ಕಲ್ಲ ಎಂದು ಪ್ರತಿಪಾದಿಸಿತು.

ರಾಜ್ಯ ಸರ್ಕಾರಗಳು ಮೀಸಲಾತಿ ನೀತಿ ರೂಪಿಸಲು ಬರುವುದಿಲ್ಲ. ಮೀಸಲಾತಿಯಿಂದ ಬಡ್ತಿ ಪಡೆಯುವುದು ಮೂಲಭೂತ ಹಕ್ಕಲ್ಲ. ಮೀಸಲಾತಿ ನೀಡುವಂತೆ ರಾಜ್ಯ ಸರ್ಕಾರಗಳಿಗೆ ತಾನು ನಿರ್ದೇಶನ ನೀಡಲು ಬರುವುದಿಲ್ಲ ಎಂದು ಸುಪ್ರೀಂ ನ್ಯಾಯಪೀಠ ತೀರ್ಪು ನೀಡಿತ್ತು. ಈ ನ್ಯಾಯಪೀಠದ ತೀರ್ಪನ್ನು ಮರುಪರಿಶೀಲಿಸುವಂತೆ ಕೋರಿ ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಅವರು ಸುಪ್ರೀಂ ಕೋರ್ಟ್ ಮೊರೆ ಹೋಗಿದೆ.

‘ರಾವಣ’ ಬಿರುದು ಪಡೆದಿರುವ ಚಂದ್ರಶೇಖರ್ ಆಜಾದ್ ದಲಿತರ ಪರವಾಗಿ ಹೋರಾಟಗಳನ್ನ ಮಾಡುತ್ತಾ ಬಂದಿದ್ಧಾರೆ. ಸಿಎಎ ವಿರೋಧಿ ಹೋರಾಟದಲ್ಲೂ ಅವರು ತೊಡಗಿಸಿಕೊಂಡಿದ್ದರು.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

First published: