UP Polls: ಸಿಎಂ ಯೋಗಿ ಆದಿತ್ಯನಾಥ್​ ವಿರುದ್ಧ ಭೀಮ್​ ಆರ್ಮಿ ಆಜಾದ್​ ಕಣಕ್ಕೆ

ವಿಧಾನಸಭೆಯಲ್ಲಿ ಸ್ಥಾನ ಗೆಲ್ಲುವುದು ನನಗೆ ಮುಖ್ಯವಲ್ಲ, ಯೋಗಿ ಆದಿತ್ಯನಾಥ್ ಅವರು ವಿಧಾನಸಭೆಗೆ ಬರಬಾರದು ಎಂಬುದು ನನಗೆ ಮುಖ್ಯ, ಹಾಗಾಗಿ ಅವರು ಎಲ್ಲಿ ಸ್ಪರ್ಧಿಸಿದರೂ ನಾನು ಸ್ಪರ್ಧಿಸುತ್ತೇನೆ

ಯೋಗಿ ಆದಿತ್ಯನಾಥ್​- ಚಂದ್ರಶೇಖರ್​ ಆಜಾದ್​

ಯೋಗಿ ಆದಿತ್ಯನಾಥ್​- ಚಂದ್ರಶೇಖರ್​ ಆಜಾದ್​

 • Share this:
  ಉತ್ತರ ಪ್ರದೇಶ ಚುನಾವಣೆಗೆ ದಿನಗಣನೆ ಶುರುವಾಗಿದೆ. ಗೋರಖ್ ಪುರದಿಂದ (Gorakhpur) ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath)​ ಸ್ಪರ್ಧೆ ಖಚಿತವಾಗಿದೆ. ಬಿಜೆಪಿ ಮೊದಲ ಅಭ್ಯರ್ಥಿ ಪಟ್ಟಿ ಬಿಡುಗಡೆ ಮಾಡಿದ್ದು, ಅದರ ಬೆನ್ನ ಹಿಂದೆ ಅನೇಕ ರಾಜಕೀಯ ಪಕ್ಷಗಳು ಪಟ್ಟಿ ಬಿಡುಗಡೆ ಗೊಳಿಸಿದೆ. ಆದರೆ, ಬಿಎಸ್​ಪಿ ಹಾಗೂ ಎಸ್​​ಪಿ ಪಕ್ಷಗಳಲ್ಲಿ ಸಿಎಂ ಯೋಗಿ ಆದಿತ್ಯನಾಥ್​ ಎದುರು ಯಾರು ಕಣಕ್ಕೆ ಇಳಿಯಲಿದ್ದಾರೆ ಎಂಬುದು ಬಹಿರಂಗವಾಗಿಲ್ಲ. ಈ ನಡುವೆ ಇದೀಗ ಯೋಗಿ ಆದಿತ್ಯನಾಥ್​ ವಿರುದ್ಧ ಗೋರಖ್​​ಪುರದಿಂದ ಕಣಕಿಳಿಯುವುದಾಗಿ ಭೀಮ್​ ಆರ್ಮಿ ನಾಯಕ ಚಂದ್ರಶೇಖರ್​ ಆಜಾದ್ (Bhim Army Chandrashekhar Azad)​ ಘೋಷಣೆ ಮಾಡಿ ಗಮನಸೆಳೆದಿದ್ದಾರೆ.

  ಕಳೆದ ವರ್ಷವೇ ಸ್ಪರ್ಧೆ ಘೋಷಣೆ

  ದಲಿತ ಮುಖಂಡರಾಗಿ ಗುರುತಿಸಿಕೊಂಡಿರುವ ಚಂದ್ರಶೇಖರ್​ ಆಜಾದ್ ಕಳೆದ ವರ್ಷವೇ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಯೋಗಿ ಆದಿತ್ಯನಾಥ್​ ವಿರುದ್ಧ ಕಣಕ್ಕೆ ಇಳಿಯುವುದಾಗಿ ಘೋಷಿಸಿದ್ದರು. ಈ ಹಿನ್ನಲೆ ಇಂದು ಮತ್ತೊಮ್ಮೆ ಔಪಚಾರಿಕವಾಗಿ ತಮ್ಮ ಚುನಾವಣಾ ಕಣದ ಬಗ್ಗೆ ಘೋಷಣೆ ಹೊರಡಿಸಿದ್ದಾರೆ.

  ಕುತೂಹಲ ಉಳಿಸಿಕೊಂಡ ಉಳಿದ ಪಕ್ಷಗಳು

  ಗೋರಖ್​ಪುರ ಲೋಕಸಭಾ ಚುನಾವಣೆಗಳಲ್ಲಿ ಸ್ಪರ್ಧಿಸಿದ್ದ ಯೋಗಿ ಆದಿತ್ಯನಾಥ್​ ಇದೇ ಮೊದಲ ಬಾರಿ ಶಾಸಕ ಸ್ಥಾನಕ್ಕೆ ಸ್ಪರ್ಧಿಸುತ್ತಿದ್ದಾರೆ. ಕಳೆದ ಬಾರಿ ಅವರು ವಿಧಾನಪರಿಷತ್​ನಿಂದ ಆಯ್ಕೆಯಾಗುವ ಮೂಲಕ ಮುಖ್ಯಮಂತ್ರಿಯಾದರು. ಈ ಬಾರಿ ಶಾಸಕ ಸ್ಥಾನಕ್ಕೆ ಸ್ಪರ್ಧಿಸುವುದಾಗಿ ಅವರು ತಿಳಿಸಿದ್ದರು. ಅದರಂತೆ ಪಕ್ಷ ಅವರನನು ಗೋರಖ್​​ಪುರದಿಂದ ಕಣಕ್ಕೆ ಇಳಿಸಲು ನಿರ್ಧರಿಸುವುದಾಗಿ ತಿಳಿಸಿದೆ. ಯೋಗಿ ಅದಿತ್ಯನಾಥ್​ ಅವರ ಪ್ರಮುಖ ಪ್ರತಿಸ್ಪರ್ಧಿ ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿದ್ದು, ಯಾರು ಅಖಿಲೇಶ್​ ಯಾದವ್​ ಪಕ್ಷದಿಂದ ಕಣಕ್ಕೆ ಇಳಿಯುತ್ತಾರೆ ಎಂಬುದನ್ನು ಇನ್ನೂ ಘೋಷಿಸಲಾಗಿಲ್ಲ.

  ಗೆಲುವು ನನಗೆ ಮುಖ್ಯ ಎಂದ ಆಜಾದ್​
  ಭೀಮ್​ ಆರ್ಮಿಯ ಚಂದ್ರಶೇಖರ್​ ಆಜಾದ್​ಗೂ ಇದು ಮೊದಲ ಚುನಾವಣೆ ಆಗಿದೆ. 34 ವರ್ಷದ ಆಜಾದ್ 2019 ರಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸ್ಪರ್ಧಿಸುವುದಾಗಿ ಘೋಷಿಸಿ ಗಮನಸೆಳೆದಿದ್ದರು. ಆದರೆ, ಅವರು ಕಡೆಗೆ ತಮ್ಮ ನಿರ್ಧಾರದಿಂದ ಹಿಂದೆ ಸರಿದರು. ಈ ಕುರಿತು ಪ್ರತಿಕ್ರಿಯಿಸಿದ ಅವರು, ತಮಗೆ ಯಾವುದೇ ಪಕ್ಷವಿಲ್ಲದ ಕಾರಣ ಮಾಯಾವತಿ ಅವರ ಪಕ್ಷ ಮತ್ತು ಕಾಂಗ್ರೆಸ್‌ಗೆ ಬೆಂಬಲ ನೀಡುವುದು ಉತ್ತಮ. ಈ ಹಿನ್ನಲೆ ಮೋದಿ ವಿರುದ್ಧ ಸ್ಪರ್ಧಿಸುವುದಿಲ್ಲ ಎಂದಿದ್ದರು.

  ಇದನ್ನು ಓದಿ: ಗೋವಾ ಆಮ್ ಆದ್ಮಿ ಪಕ್ಷದ ಸಿಎಂ ಅಭ್ಯರ್ಥಿಯಾಗಿ ಅಮಿತ್ ಪಾಲೇಕರ್ ಹೆಸರು ಘೋಷಣೆ

  ಈಗ ಯೋಗಿ ಆದಿತ್ಯನಾಥ್​ ವಿರುದ್ಧ ಕಣಕ್ಕೆ ಇಳಿಯಲು ಆಜಾದ್​ ತಯಾರಾಗಿದ್ದಾರೆ. ಇನ್ನು ತಮ್ಮ ಚುನಾವಣಾ ಸ್ಪರ್ಧೆ ಕುರಿತು ಮಾತನಾಡಿದ ಅವರು, ಉತ್ತರ ಪ್ರದೇಶ ವಿಧಾನಸಭೆಯಲ್ಲಿ ಸ್ಥಾನ ಗೆಲ್ಲುವುದು ನನಗೆ ಮುಖ್ಯವಲ್ಲ, ಯೋಗಿ ಆದಿತ್ಯನಾಥ್ ಅವರು ವಿಧಾನಸಭೆಗೆ ಬರಬಾರದು ಎಂಬುದು ನನಗೆ ಮುಖ್ಯ, ಹಾಗಾಗಿ ಅವರು ಎಲ್ಲಿ ಸ್ಪರ್ಧಿಸಿದರೂ ನಾನು ಸ್ಪರ್ಧಿಸುತ್ತೇನೆ ಎಂದಿದ್ದಾರೆ.

  ಬಿಜೆಪಿ ಭದ್ರಕೋಟೆಯಲ್ಲಿ ಅದೃಷ್ಟ ಪರೀಕ್ಷೆ 
  ಚಂದ್ರಶೇಖರ್ ಆಜಾದ್​​ ಪಕ್ಷಕ್ಕೆ ಗೋರಖ್​​ಪುರ್​ನಲ್ಲಿ ಯಾವುದೇ ನೆಲೆ ಇಲ್ಲ. ಜೊತೆಗೆ ಪೂರ್ವ ಉತ್ತರ ಪ್ರದೇಶದಲ್ಲಿ ಯಾವುದೇ ನೆಲೆಯನ್ನು ಅವರು ಹೊಂದಿಲ್ಲ. ಗೋರಖ್‌ಪುರ್ ಸದರ್ ಅಸೆಂಬ್ಲಿ ಸ್ಥಾನವು 1989 ರಿಂದ ನಿರಂತರವಾಗಿ ಬಿಜೆಪಿ ತೆಕ್ಕೆಯಲ್ಲಿದೆ. ಒಮ್ಮೆ ಅಖಿಲ ಭಾರತೀಯ ಹಿಂದೂ ಮಹಾಸಭಾ ಗೆದ್ದಾಗ ಹೊರತುಪಡಿಸಿ. 2017 ರಲ್ಲಿ ಬಿಜೆಪಿಯ ರಾಧಾ ಮೋಹನ್ ದಾಸ್ ಅಗರ್ವಾಲ್ 60,000 ಮತಗಳ ಅಂತರದಿಂದ ಮತ್ತೆ ಸ್ಥಾನವನ್ನು ಗೆದ್ದರು.

  ಇದನ್ನು ಓದಿ: ಸಮಾಜವಾದಿ ಪಕ್ಷಕ್ಕೆ ಶಾಕ್​ ನೀಡಿದ ಮುಲಾಯಂ ಸಿಂಗ್ ಯಾದವ್​ ಸೊಸೆ; ಬಿಜೆಪಿ ಸೇರಿದ Aparna Yadav

  ಅಖಿಲೇಶ್ ಯಾದವ್ ಅವರ ಸಮಾಜವಾದಿ ಪಕ್ಷದೊಂದಿಗೆ ತಮ್ಮ ಪಕ್ಷವು ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಚಂದ್ರಶೇಖರ್ ಆಜಾದ್ ಅವರು ಇತ್ತೀಚೆಗೆ ಘೋಷಿಸಿದರು, ಅವರ ಸ್ಥಾನ ಹಂಚಿಕೆ ಮಾತುಕತೆಗಳ ವಿಫಲವಾಗಿವೆ.

  ಯಾರೀ ಆಜಾದ್​
  ಚಂದ್ರಶೇಖರ್ ಆಜಾದ್ ನೇತೃತ್ವದ ಭೀಮ್ ಆರ್ಮಿಯು ಮೇ 2017 ರಲ್ಲಿ ದಲಿತರು ಮತ್ತು ಮೇಲ್ಜಾತಿ ಠಾಕೂರ್‌ಗಳ ನಡುವೆ ಸಹರಾನ್‌ಪುರದಲ್ಲಿ ನಡೆದ ಘರ್ಷಣೆ ಮೂಲಕ ಗಮನಸೆಳೆಯಿತು. ಈ ವೇಳೆ ಬಂಧನಕ್ಕೆ ಒಳಗಾದ ಚಂದ್ರಶೇಖರ್ ಆಜಾದ್ ರಿಗೆ ಅಲಹಾಬಾದ್​ ಹೈಕೋರ್ಟ್ ಜಾಮೀನು ನೀಡಿತು. ಆದರೆ, ಉತ್ತರ ಪ್ರದೇಶ ಪೊಲೀಸರು ಅವರನ್ನು ಕಠಿಣ ರಾಷ್ಟ್ರೀಯ ಭದ್ರತಾ ಕಾಯಿದೆ (ಎನ್ಎಸ್ಎ) ಅಡಿಯಲ್ಲಿ ಬಂಧಿಸಲಾಯಿತು. 16 ತಿಂಗಳ ಸೆರೆವಾಸ ಅನುಭವಿಸಿದ ಆಜಾದ್​ ನಂತರ 2018ರ ಸೆಪ್ಟೆಂಬರ್‌ನಲ್ಲಿ ಬಿಡುಗಡೆಗೊಂಡರು.
  Published by:Seema R
  First published: