ಪಾನಿಪುರಿ, BHEL, ರೊಟ್ಟಿ, ಪೀಜ್ಜಾ, ಊಬರ್ ಓಲಾ… ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಆದ ನಿರ್ಮಲಾ ಸೀತಾರಾಮನ್

ಕಾಂಗ್ರೆಸ್ ಪಕ್ಷ ಕೂಡ ನಿರ್ಮಲಾ ಸೀತಾರಾಮನ್ ಮೇಲೆ ಹರಿಹಾಯ್ದಿದೆ. ನಿಮ್ಮ ಆರ್ಥಿಕ ನೀತಿ ಬಿಟ್ಟು ಉಳಿದೆಲ್ಲವನ್ನೂ ದೂಷಿಸಿ. ಕೊನೆಗೆ ಮತದಾರರನ್ನೇ ಹೊಣೆಯಾಗಿಸಿ ಎಂದು ನಿರ್ಮಲಾ ಸೀತಾರಾಮ್ ವಿರುದ್ಧ ಕಾಂಗ್ರೆಸ್ ನಾಯಕ ಅಭಿಷೇಕ್ ಮನು ಸಿಂಘ್ವಿ ತಿರುಗೇಟು ನೀಡಿದ್ದಾರೆ.

Latha CG | news18-kannada
Updated:September 11, 2019, 4:19 PM IST
ಪಾನಿಪುರಿ, BHEL, ರೊಟ್ಟಿ, ಪೀಜ್ಜಾ, ಊಬರ್ ಓಲಾ… ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಆದ ನಿರ್ಮಲಾ ಸೀತಾರಾಮನ್
ನಿರ್ಮಲಾ ಸೀತಾರಾಮನ್​
  • Share this:
ನವದೆಹಲಿ(ಸೆ.11): ಹಣಕಾಸು ಸಚಿವೆ ನಿರ್ಮಲಾ ಸೀತಾರಾಮಲ್​ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಆಟೋಮೊಬೈಲ್​ ಕ್ಷೇತ್ರದಲ್ಲಿ ಆರ್ಥಿಕ ಕುಸಿತ ಉಂಟಾಗಲು ಪ್ರಮುಖ ಕಾರಣ ಇಂದಿನ ಯುವಪೀಳಿಗೆಯ ಮನಸ್ಥಿತಿ ಎಂದು ಹೇಳಿದ್ದರು. ಅವರ ಈ ಹೇಳಿಕೆ ಈಗ ಕಾಂಗ್ರೆಸ್ ಟೀಕೆಯ ಜೊತೆಗೆ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಟ್ರೋಲ್ ಆಗುತ್ತಿದೆ.

ಜನರು ಸ್ವಂತ ವಾಹನ ಕೊಂಡುಕೊಂಡು ಇಎಂಐ ಕಟ್ಟುವ ಬದಲು ಓಲಾ, ಉಬರ್​ ಕ್ಯಾಬ್​ಗಳ ಸೇವೆ ಪಡೆಯುತ್ತಿದ್ದಾರೆ. ಹೀಗಾಗಿ ಆಟೋಮೊಬೈಲ್​ ಉದ್ಯಮದಲ್ಲಿ ಕುಸಿತ ಉಂಟಾಗಿದೆ. ಲಕ್ಷಾಂತರ ಉದ್ಯೋಗ ಕಡಿತಕ್ಕೂ ಕಾರಣವಾಗಿರುವ ಆಟೋಮೊಬೈಲ್ ಕ್ಷೇತ್ರದ ಪರಿಸ್ಥಿತಿ ಸುಧಾರಿಸಲು ಕೇಂದ್ರ ಸರ್ಕಾರ ಕಾರ್ಯ ನಿರತವಾಗಿದೆ ಎಂದು ಸೀತಾರಾಮನ್ ಅವರು ತಿಳಿಸಿದ್ದರು.

ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್​ ಅವರ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್​ ಆಗಿದೆ. #SayItLikeNirmala ಮತ್ತು #BoycottMillennials ಎಂಬ ಹ್ಯಾಷ್​ಟ್ಯಾಗ್​ ಬಳಸಿ ಸೋಷಿಯಲ್​ ಮೀಡಿಯಾದಲ್ಲಿ ನೆಟ್ಟಿಗರು ಟ್ರೋಲ್​ ಮಾಡುತ್ತಿದ್ದಾರೆ.

"ಇಂದಿನ ಯುವ ಪೀಳಿಗೆ 'ಪಾನಿಪುರಿ'ಗೆ ಹೆಚ್ಚಿನ ಒತ್ತು ನೀಡಿದ್ದರಿಂದ ಕಳೆದ 15 ವರ್ಷಗಳಲ್ಲಿ BHEL(ಬೇಲ್​​) ಕುಸಿದಿದೆ," ಎಂದು ಟ್ವಿಟ್ಟರ್​ನಲ್ಲಿ ಟ್ರೋಲ್ ಮಾಡಿದ್ದಾರೆ.

ಜನರು ಓಲಾ, ಊಬರ್​ ಬಳಸುತ್ತಿರುವುದರಿಂದ ಆಟೋಮೊಬೈಲ್​ ಉದ್ಯಮ ಕುಸಿದಿದೆ; ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ವ್ಯಾಖ್ಯಾನ

 "ಯುವಪೀಳಿಗೆಯ ಜನ ಬೆಳಗಿನ ಸಮಯದಲ್ಲಿ ಹೆಚ್ಚು ಆಕ್ಸಿಜನ್​ ಸೇವಿಸುವುದರಿಂದ ಆಮ್ಲಜನಕದ ಕೊರತೆ ಉಂಟಾಗುತ್ತದೆ" ಎಂದು ಒಬ್ಬ ಟ್ವೀಟಿಗ ವ್ಯಂಗ್ಯ ಮಾಡಿದ್ದಾರೆ.ಇಂದಿನ ಯುವ ಪೀಳಿಗೆ ದಾಲ್​ ರೊಟ್ಟಿಯನ್ನು ಬಿಟ್ಟು ಪಿಜ್ಜಾ ತಿನ್ನಲು ಹೆಚ್ಚಿನ ಆದ್ಯತೆ ನೀಡಿದ್ದರಿಂದ ಕೃಷಿ ಕ್ಷೇತ್ರದಲ್ಲಿ ಕುಂಠಿತವಾಗಿದೆ ಎಂಬುದು ಮತ್ತೊಬ್ಬರ ಲೇವಡಿ.


ಕಾಂಗ್ರೆಸ್ ಪಕ್ಷ ಕೂಡ ನಿರ್ಮಲಾ ಸೀತಾರಾಮನ್ ಮೇಲೆ ಹರಿಹಾಯ್ದಿದೆ. ನಿಮ್ಮ ಆರ್ಥಿಕ ನೀತಿ ಬಿಟ್ಟು ಉಳಿದೆಲ್ಲವನ್ನೂ ದೂಷಿಸಿ. ಕೊನೆಗೆ ಮತದಾರರನ್ನೇ ಹೊಣೆಯಾಗಿಸಿ ಎಂದು ನಿರ್ಮಲಾ ಸೀತಾರಾಮ್ ವಿರುದ್ಧ ಕಾಂಗ್ರೆಸ್ ನಾಯಕ ಅಭಿಷೇಕ್ ಮನು ಸಿಂಘ್ವಿ ತಿರುಗೇಟು ನೀಡಿದ್ದಾರೆ.

ಮೋದಿ ಅವರ ಟ್ವಿಟ್ಟರ್ ಫಾಲೋವರ್​ಗಳ ಸಂಖ್ಯೆ 50 ಮಿಲಿಯನ್ ದಾಟಿದೆ. ದೇಶದ ಆರ್ಥಿಕತೆ 5 ಟ್ರಿಲಿಯನ್ ದಾಟುತ್ತದೆ ಎನ್ನುತ್ತೀರಿ. ಅದು ಹೇಗೆ ಸಾಧ್ಯ? ಯುವಕರಿಗೆ ಕೆಲಸ ಸಿಗುತ್ತಿಲ್ಲ. ಇದಕ್ಕೂ ವಿಪಕ್ಷಗಳನ್ನೇ ಹೊಣೆಯಾಗಿಸುತ್ತೀರಿ. ಊಬರ್  ಮತ್ತು ಓಲಾ ಎಲ್ಲವನ್ನೂ ನಿರ್ನಾಮ ಮಾಡಿಬಿಟ್ಟಿವೆ ಎಂದು ಸಿಂಘ್ವಿ ಮತ್ತೊಂದು ಚಾಟಿ ಬೀಸಿದ್ದಾರೆ.

First published: September 11, 2019, 3:55 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading