ನೀನೇನು ಡೊನಾಲ್ಡ್​ ಟ್ರಂಪ್​ ಮಗನಾ?: ರೋಡ್​ ರೋಮಿಯೋಗೆ ನಡುರಸ್ತೆಯಲ್ಲೇ ದೊಣ್ಣೆಯಿಂದ ಥಳಿಸಿದ ಯುವತಿ!


Updated:July 17, 2018, 4:32 PM IST
ನೀನೇನು ಡೊನಾಲ್ಡ್​ ಟ್ರಂಪ್​ ಮಗನಾ?: ರೋಡ್​ ರೋಮಿಯೋಗೆ ನಡುರಸ್ತೆಯಲ್ಲೇ ದೊಣ್ಣೆಯಿಂದ ಥಳಿಸಿದ ಯುವತಿ!

Updated: July 17, 2018, 4:32 PM IST
ನ್ಯೂಸ್​ 18 ಕನ್ನಡ

ಜೈಪುರ(ಜು.17): ರಾಜಸ್ಥಾನದ ಭರತಪುರ ನಗರದ ಹುಡುಗಿಯೊಬ್ಬಳು ತನ್ನನ್ನು ಚೇಡಿಸಿದ ಯುವಕನಿಕನಿಗೆ ನಡುರಸ್ತೆಯಲ್ಲಿ ದೊಣ್ಣೆಯಿಂದ ಥಳಿಸಿರುವ ಘಟನೆ ಬೆಳಕಿಗೆ ಬಂದಿದೆ. ಈ ವಿಡಿಯೋ ಸಾಮಾಜಿಕ ಜಾಲಾತಾಣಗಳಲ್ಲಿ ವೈರಲ್​ ಆಗುತ್ತಿದ್ದು, ಇದು ಕಳೆದ ಒಂದು ವಾರದ ಹಿಂದೆ ನಡೆದ ಘಟನೆ ಎನ್ನಲಾಗಿದೆ. ಯುವಕನಿಗೆ ಥಳಿಸುತ್ತಿರುವ ಹುಡುಗಿಯು "ನಿಮ್ಮನ್ನು ನೀವು ಅಮೆರಿಕಾದ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಎಂದು ಭಾವಿಸುತ್ತೀ ಎಂದಾದರೆ ಅದು ನಿಮ್ಮ ತಪ್ಪು ಕಲ್ಪನೆ. ಯಾವೊಬ್ಬ ಹುಡುಗಿಯೂ ದುರ್ಬಲಳಲ್ಲ. ತಪ್ಪು ನಡೆಯುತ್ತಿದ್ದರೆ ಅದರ ವಿರುದ್ಧ ಧ್ವನಿ ಎತ್ತುವ ತಾಕತ್ತು ಅವರಲ್ಲಿದೆ" ಎಂದಿದ್ದಾರೆ.


ಭರತ್​ಪುರ್​ ನಿವಾಸಿಯಾಗಿರುವ ಈ ಯುವತಿಯು ಈ ಕುರಿತಾಗಿ ಪ್ರತಿಕ್ರಿಯಿಸಿದ್ದು, ಆ ಯುವಕ ಕಳೆದ ಹಲವಾರು ದಿನಗಳಿಂದ ತನ್ನನ್ನು ಹಿಂಬಾಲಿಸುತ್ತಿದ್ದ ಹಾಗೂ ಹೆಸರು ಹಾಳು ಮಾಡಲು ಇಲ್ಲ ಸಲ್ಲದ ವದಂತಿಗಳನ್ನು ಹಬ್ಬಿಸುತ್ತಿದ್ದ ಎಂದಿದ್ದಾಳೆ. ಇನ್ನು ಯುವತಿ ಆತನಿಗೆ ಹೊಡೆದ ದಿನವೇ ಸಾರ್ವಜನಿಕರು ವಿಡಿಯೋ ಮಾಡಿ ಇದನ್ನು ಸೋಷಲ್ ಮೀಡಿಯಾಗಳಲ್ಲಿ ಶೇರ್​ ಮಾಡಿದ್ದಾರೆ.
First published:July 17, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...