ನವದೆಹಲಿ: ಭಾರತ್ ಜೋಡೋ ಯಾತ್ರೆ (Bharat Jodo Yatra) ವೇಳೆ ಕಾಂಗ್ರೆಸ್ ಕಾರ್ಯಕರ್ತರು (Congress Workers) ಶರ್ಟ್ (Shirt) ಬಿಚ್ಚಿ ಕುಣಿದು ಕುಪ್ಪಳಿಸಿದ್ದಾರೆ. ಭಾನುವಾರ ಬೆಳಗ್ಗೆ ಹರಿಯಾಣದ (Hariyana) ಕರ್ನಾಲ್ನಲ್ಲಿ (Karnal) ಯುವ ಕಾಂಗ್ರೆಸ್ ಕಾರ್ಯಕರ್ತರು ಬಸ್ (Bus) ಮೇಲೆ ನಿಂತುಕೊಂಡು ಶರ್ಟ್ ಧರಿಸಿದೇ ನೃತ್ಯ (Dance) ಮಾಡಿದ್ದಾರೆ. ಇದೀಗ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Video Viral) ಆಗುತ್ತಿದೆ. ವಿಡಿಯೋದಲ್ಲಿ ಭಾರತ್ ಜೋಡೋ ಯಾತ್ರೆ ಬ್ಯಾನರ್ಗಳನ್ನು (Banner) ಕೈಯಲ್ಲಿ ಹಿಡಿದು ಕಾರ್ಯಕರ್ತರು ಚುಮುಗುಡುವ ಚಳಿ ಮಧ್ಯೆ ಶರ್ಟ್ ಧರಿಸದೇ, ಸಾಂಗ್ ಹಾಡುತ್ತಾ, ಬಸ್ ಮೇಲೆ ಹೆಜ್ಜೆ ಹಾಕುತ್ತಿರುವುದನ್ನು ಕಾಣಬಹುದಾಗಿದೆ. ಕರ್ನಾಲ್ ನಲ್ಲಿ ಕನಿಷ್ಠ ತಾಪಮಾನ 4.5 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಹೀಗಿದ್ದರೂ ಚಳಿಯನ್ನು ಕೂಡ ಲೆಕ್ಕಿಸದೇ ಕಾಂಗ್ರೆಸ್ ಬೆಂಬಲಿಗರು ಉತ್ಸಾಹದಿಂದ ನೃತ್ಯ ಮಾಡಿರುವುದನ್ನು ನೋಡಿ ಎಲ್ಲರೂ ಆಶ್ಚರ್ಯಗೊಂಡಿದ್ದಾರೆ.
ಇತ್ತೀಚೆಗೆ ಸ್ವೆಟರ್ ಧರಿಸದೇ ಟೀ ಶರ್ಟ್ನಲ್ಲೆ ಪಾದಯಾತ್ರೆ ಮಾಡಿದ್ದ ರಾಹುಲ್
ಇತ್ತೀಚೆಗಷ್ಟೇ ಭಾರತ್ ಜೋಡೋ ಯಾತ್ರೆಯಲ್ಲಿ ಸ್ವೆಟರ್ ಧರಿಸಿದೇ ಚಳಿಯ ಮಧ್ಯೆ ಟೀ ಶರ್ಟ್ನಲ್ಲಿಯೇ ಯಾತ್ರೆಯಲ್ಲಿ ರಾಹುಲ್ ಗಾಂಧಿ ನಡೆದಿದ್ದರು. ಈ ಬಗ್ಗೆ ರಾಜಕೀಯದಲ್ಲಿ ಭಾರೀ ಚರ್ಚೆಯಾಗಿತ್ತು. ಈ ಕುರಿತಂತೆ ಸುದ್ದಿಗೋಷ್ಠಿವೊಂದರಲ್ಲಿ ಪ್ರತಿಕ್ರಿಯಿಸಿದ ರಾಹುಲ್, ನನ್ನ ಟೀ ಶರ್ಟ್ ಬಗ್ಗೆ ಯಾಕೆ ಇಷ್ಟೊಂದು ಚರ್ಚೆ? ನನಗೆ ಚಳಿ ಎಂದರೆ ಭಯವಿಲ್ಲ, ಹೀಗಾಗಿ ಸ್ವೆಟರ್ ಧರಿಸುವುದಿಲ್ಲ. ನನಗೆ ಚಳಿ ಅನಿಸಿದಾಗ ಸ್ವೆಟರ್ ಧರಿಸುತ್ತೇನೆ. ಭಾರತ್ ಜೋಡೋ ಯಾತ್ರೆ ಮುಗಿದ ನಂತರ ವಿಡಿಯೋ ಮಾಡಿ ಅದರಲ್ಲಿ ಸ್ವೆಟರ್ ಧರಿಸದಿದ್ದರ ಬಗ್ಗೆ ಗುಟ್ಟು ಹೇಳುತ್ತೇನೆ ಎಂದು ವ್ಯಂಗ್ಯವಾಡಿದ್ದರು.
#WATCH | Congress supporters dance shirtless amid dense fog during Bharat Jodo Yatra in Haryana's Karnal pic.twitter.com/0kmHmkL1nK
— ANI (@ANI) January 8, 2023
ಅಲ್ಲದೇ ಮಾಧ್ಯಮಗಳು ನನ್ನ ಟೀ ಶರ್ಟ್ ಬಗ್ಗೆ ಗಮನ ಹರಿಸಿದವು, ಆದರೆ ಎಂದಾದರೂ ಬಡ ರೈತರು ಮತ್ತು ಕಾರ್ಮಿಕರ ಹರಿದ ಬಟ್ಟೆಯನ್ನು ನೋಡಿದ್ದೀರಾ ಎಂದು ಪ್ರಶ್ನಿಸಿದ್ದರು. ಇದೀಗ ರಾಹುಲ್ ಅಭಿಮಾನಿಗಳು ಶರ್ಟ್ ಬಿಚ್ಚಿ ಚಳಿಯನ್ನು ಲೆಕ್ಕಿಸದೇ ಕುಣಿದಾಡಿರುವ ವಿಡಿಯೋ ಭಾರೀ ವೈರಲ್ ಆಗುತ್ತಿದೆ. ಒಟ್ಟಾರೆ ಪಕ್ಷದ ನಾಯಕ ಸ್ವೆಟರ್ ಧರಿಸದೇ ಪಾದಯಾತ್ರೆ ನಡೆಸಿದರೆ, ಬೆಂಬಲಿಗರು ಶರ್ಟ್ ಬಿಚ್ಚಿ ಡ್ಯಾನ್ಸ್ ಮಾಡಿದ್ದಾರೆ.
ಶನಿವಾರ ಹರಿಯಾಣದಲ್ಲಿ ನಡೆದ ಭಾರತ್ ಜೋಡೋ ಯಾತ್ರೆ
ಶನಿವಾರ ಹರಿಯಾಣದಲ್ಲಿ ನಡೆದ ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ಗೆ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್, ಸೇರಿದಂತೆ ಅಂತರರಾಷ್ಟ್ರೀಯ ಕ್ರೀಡಾಪಟುಗಳು ಮತ್ತು ಪಕ್ಷದ ನಾಯಕರು ಹಲವರು ಗಣ್ಯರು ಸಾಥ್ ನೀಡಿದರು.
ಅಲೆಮಾರಿ ಬುಡಕಟ್ಟು ಜನರನ್ನು ಭೇಟಿ ಮಾಡಿ ಸಮಸ್ಯೆ ಆಲಿಸಿದ್ದ ರಾಹುಲ್
ನಂತರ ಪಾಣಿಪತ್ನ ಪಕ್ಕದ ಕರ್ನಾಲ್ ಜಿಲ್ಲೆಗೆ ಪ್ರವೇಶಿಸಿದ ಪಾದಯಾತ್ರೆಯನ್ನು ನಿಲ್ಲಿಸಿದ ರಾಹುಲ್ ಗಾಂಧಿ ಅವರು ಸ್ಥಳೀಯರನ್ನು ಭೇಟಿಯಾದರು. ಲೋಕಸಭೆಯ ಸಂಸದ ದೀಪೇಂದರ್ ಹೂಡಾ ಅವರೊಂದಿಗೆ ರಾಹುಲ್ ಇತರ ಹಿಂದುಳಿದ ವರ್ಗಗಳ ಸದಸ್ಯರು ಮತ್ತು ಅಲೆಮಾರಿ ಮತ್ತು ಅರೆ ಅಲೆಮಾರಿ ಬುಡಕಟ್ಟುಗಳ ನಿಯೋಗವನ್ನು ಭೇಟಿ ಮಾಡಿ, ಜನರ ಸಮಸ್ಯೆಗಳನ್ನು ಆಲಿಸಿ, ಚರ್ಚೆ ನಡೆಸಿದರು.
ಜನವರಿ 10ಕ್ಕೆ ಪಂಜಾಬ್ ತಲುಪಲಿರುವ ಭಾರತ್ ಜೋಡೋ ಯಾತ್ರೆ
ಜನವರಿ 10 ರಂದು ಭಾರತ್ ಜೋಡೋ ಯಾತ್ರೆ ಶಂಭು ಗಡಿಯ ಮೂಲಕ ಪಂಜಾಬ್ಗೆ ಪ್ರವೇಶಿಸಿ ಫತೇಘರ್ ಸಾಹಿಬ್ಗೆ ತೆರಳಲಿದೆ. ಜನವರಿ 11 ರಂದು, ಗುರುದ್ವಾರ ಸಾಹಿಬ್ಗೆ ಪೂಜೆ ಸಲ್ಲಿಸಿ ನಂತರ ರಾಹುಲ್ ಪಂಜಾಬ್ ಲೆಗ್ ಆಫ್ ಫುಟ್ ಮ್ಯಾಚ್ ಅನ್ನು ಪ್ರಾರಂಭಿಸುವ ಮುನ್ನ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ