• Home
  • »
  • News
  • »
  • national-international
  • »
  • Bharat Jodo: ಮುಂಜಾನೆ 5 ಗಂಟೆಗೆ ಎದ್ದು ಪಾದಯಾತ್ರೆಗೆ ಹೊರಡುವ ರಾಗಾ, ಭೇಟಿಯಾಗಲು ಬಯಸುವವರ ಆಯ್ಕೆ ಹೇಗೆ ನಡೆಯುತ್ತೆ?

Bharat Jodo: ಮುಂಜಾನೆ 5 ಗಂಟೆಗೆ ಎದ್ದು ಪಾದಯಾತ್ರೆಗೆ ಹೊರಡುವ ರಾಗಾ, ಭೇಟಿಯಾಗಲು ಬಯಸುವವರ ಆಯ್ಕೆ ಹೇಗೆ ನಡೆಯುತ್ತೆ?

ಮುಂಜಾನೆ 5 ಗಂಟೆಗೆ ಎದ್ದು ಪಾದಯಾತ್ರೆಗೆ ಹೊರಡುವ ರಾಗಾ

ಮುಂಜಾನೆ 5 ಗಂಟೆಗೆ ಎದ್ದು ಪಾದಯಾತ್ರೆಗೆ ಹೊರಡುವ ರಾಗಾ

Bharat Jodo: ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಈ ದಿನಗಳಲ್ಲಿ ಭಾರತ್ ಜೋಡೋ ಯಾತ್ರೆ ಅಭಿಯಾನದಲ್ಲಿದ್ದಾರೆ. ಇದರಡಿ 12 ರಾಜ್ಯಗಳಲ್ಲಿ 3,500 ಕಿ.ಮೀ ಪಾದಯಾತ್ರೆ ಕೈಗೊಳ್ಳಲಿದ್ದಾರೆ. ಈ ಸಂಪೂರ್ಣ ಅಭಿಯಾನವು 150 ದಿನಗಳದ್ದಾಗಿದೆ. ಈ ಅಭಿಯಾನದಲ್ಲಿ ಭಾಗಿಯಾಗಿರುವ ಅವರ ಸಹ-ಪ್ರಯಾಣಿಕರು ಮತ್ತು ಸಾಮಾನ್ಯ ಜನರ ಮನಸ್ಥಿತಿಯನ್ನು ತಿಳಿಯಲು ನ್ಯೂಸ್ 18 ಪ್ರಯತ್ನಿಸಿದೆ. ರಾಹುಲ್ ಗಾಂಧಿ- ಪ್ರಸ್ತುತ ಕರ್ನಾಟಕದಲ್ಲಿದ್ದು, ಇದು ಮೂರನೇ ಹಂತದ ಪಾದಯಾತ್ರೆಯಾಗಿದೆ.

ಮುಂದೆ ಓದಿ ...
  • Share this:

    ಬೆಂಗಳೂರು(ಅ.06): ಭಾರತ್ ಜೋಡೋ ಯಾತ್ರೆ (Bharat Jodo Yatra) ಅಭಿಯಾನದಡಿ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಪ್ರಸ್ತುತ ಪಾದಯಾತ್ರೆ ನಡೆಸುತ್ತಿದ್ದಾರೆ. ಈ 150 ದಿನಗಳ ಸುದೀರ್ಘ ಕಾಂಗ್ರೆಸ್ ಅಭಿಯಾನವು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ 12 ರಾಜ್ಯಗಳ ಮೂಲಕ ಹಾದುಹೋಗುತ್ತದೆ. ಈ ವೇಳೆ ರಾಹುಲ್ ಗಾಂಧಿ (Rahul Gandhi) ಮತ್ತು ಅವರ ಸಹ ಪ್ರಯಾಣಿಕರ ಜೊತೆ ಸುಮಾರು 3,500 ಕಿ.ಮೀ. ಪಾದಯಾತ್ರೆ ನಡೆಸಲಿದ್ದಾರೆ. ಇಂತಹ ಸಂದರ್ಭದಲ್ಲಿ ನ್ಯೂಸ್ 18 ಭಾರತ್ ಜೋಡೋ ಯಾತ್ರೆಯೊಂದಿಗೆ ಒಂದು ದಿನ ಕಳೆದಿದ್ದು, ರಾಹುಲ್ ಗಾಂಧಿ ಅವರ ಸಹ-ಪ್ರಯಾಣಿಕರು ಮತ್ತು ಸಾಮಾನ್ಯ ಜನರೊಂದಿಗೆ ಮಾತನಾಡಿ ಅವರ ಮನಸ್ಥಿತಿಯನ್ನು ತಿಳಿಯಲು ಪ್ರಯತ್ನಿಸಿದೆ. ಭಾರತ ಜೋಡೋ ಯಾತ್ರೆಯಡಿ ತಮಿಳುನಾಡು ಮತ್ತು ಕೇರಳದ (Kerala) ಮೂಲಕ ರಾಹುಲ್ ಗಾಂಧಿ ಕರ್ನಾಟಕ ತಲುಪಿದ್ದಾರೆ ಎಂಬುವುದು ಉಲ್ಲೇಖನೀಯ.ಪಾದಯಾತ್ರೆ ನಡೆಯುತ್ತಿರುವ ಬಿಜೆಪಿ ಆಡಳಿತವಿರುವ ಮೊದಲ ರಾಜ್ಯ ಕರ್ನಾಟಕವಾಗಿದ್ದು, ಇಲ್ಲಿ ಕಾಂಗ್ರೆಸ್‌ನ ಈ ಪ್ರಚಾರ ನಡೆಯುತ್ತಿದೆ.


    ಬೆಳಿಗ್ಗೆ 5 ಗಂಟೆಗೆ ದಿನದ ಆರಂಭ


    ಭಾರತ್ ಜೋಡೋ ಯಾತ್ರೆಯ ಅಡಿಯಲ್ಲಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ದಿನ ಪ್ರತಿದಿನ ಬೆಳಿಗ್ಗೆ 5 ಗಂಟೆಗೆ ಪ್ರಾರಂಭವಾಗುತ್ತದೆ. ನಿತ್ಯ ಕೆಲಸಗಳನ್ನು ಮುಗಿಸಿ, ಅವರು ತನ್ನ ಮೊಣಕಾಲುಗಳ ಫಿಸಿಯೋಥೆರಪಿ ಮಾಡುತ್ತಾರೆ. ಬೆಳಗ್ಗೆ 6 ಗಂಟೆಗೆ ಧ್ವಜಾರೋಹಣಕ್ಕೆ ಆಗಮಿಸುವ ಮೊದಲಿಗರಲ್ಲಿ ರಾಹುಲ್ ಗಾಂಧಿ ಒಬ್ಬರು. ಇದಾದ ಬಳಿಕ ರಾಹುಲ್ ಗಾಂಧಿ ಪಾದಯಾತ್ರೆಗೆ ಸಂಪೂರ್ಣ ಸಿದ್ಧತೆ ಮಾಡಿಕೊಳ್ಳುತ್ತಾರೆ. ಸಾಮಾನ್ಯವಾಗಿ ಭಾರತದ ಜೋಡೋ ಯಾತ್ರೆಯ ತಂಡವು ರಾತ್ರಿ ತಲುಪಿದ ಸ್ಥಳದಿಂದ ಪಾದಯಾತ್ರೆ ಪ್ರಾರಂಭವಾಗುತ್ತದೆ. ಸದಸ್ಯರ ಜಮಾವಣೆಯೊಂದಿಗೆ ರಾಹುಲ್ ಗಾಂಧಿಯವರ ರಥಯಾತ್ರೆ ಆರಂಭವಾಗುತ್ತದೆ. ರಾಹುಲ್ ಗಾಂಧಿ ತುಂಬಾ ವೇಗವಾಗಿ ನಡೆಯುತ್ತಾರೆ ಎಂದು ತಂಡದ ಜನರು ಹೇಳುತ್ತಾರೆ, ಇದು ಅವರ ದೈಹಿಕ ಸಾಮರ್ಥ್ಯವನ್ನು ತೋರಿಸುತ್ತದೆ.


    ಇದನ್ನೂ ಓದಿ:  Road Repair: ಗುಂಡಿ ಬಿದ್ದ ರಸ್ತೆಯಲ್ಲಿ ನಿತ್ಯ ನರಕ ದರ್ಶನ; ತಾವೇ ದುರಸ್ತಿಗೆ ಮುಂದಾದ ಗ್ರಾಮಸ್ಥರು


    ರಾಹುಲ್ ವೇಗದ ನಡಿಗೆ


    ಆರಂಭದಲ್ಲಿ 60+ ಎಡ್ಜ್‌ಗ್ರೂಪ್‌ನ ನಾಯಕರು ಮತ್ತು ಸಹ-ಪ್ರಯಾಣಿಕರು ಅವರೊಂದಿಗೆ ಹಂತ ಹಂತವಾಗಿ ನಡೆಯುತ್ತಾರೆ, ಆದರೆ ದೈಹಿಕ ಸ್ಥಿತಿಯ ಕಾರಣದಿಂದಾಗಿ ಅವರ ವೇಗವು ಸಮಯ ಕಳೆದಂತೆ ನಿಧಾನಗೊಳ್ಳುತ್ತದೆ. ರಾಹುಲ್ ಗಾಂಧಿ ಒಂದು ದಿನದಲ್ಲಿ ಸುಮಾರು 18 ರಿಂದ 20 ಕಿಲೋಮೀಟರ್ ದೂರ ಕ್ರಮಿಸುತ್ತಾರೆ ಎಂದು ಅವರ ಸಹ ಪ್ರಯಾಣಿಕರೊಬ್ಬರು ಹೇಳುತ್ತಾರೆ. ಸಾಮಾನ್ಯ ಜನರು ಕೂಡ ರಾಹುಲ್ ಗಾಂಧಿಯವರೊಂದಿಗೆ ಹೆಜ್ಜೆ ಹಾಕಲು ಬಯಸುತ್ತಾರೆ, ಆದರೆ ಭದ್ರತಾ ಕಾರಣಗಳಿಂದ ಅದು ಸಾಧ್ಯವಾಗುತ್ತಿಲ್ಲ.




    ರಾಹುಲ್ ಅವರನ್ನು ಭೇಟಿಯಾಗಲು ಬಯಸುತ್ತೇನೆ


    ಸಮಯ ಕಳೆಯುತ್ತಿದ್ದಂತೆಯೇ ಬಿಸಿಲು ಹೆಚ್ಚುತ್ತದೆ. ಆದರೂ ರಾಹುಲ್ ಗಾಂಧಿ ನಗು ಮುಖದಿಂದ ಜನರ ಶುಭಾಶಯಗಳನ್ನು ಸ್ವೀಕರಿಸುತ್ತಾ ಮುನ್ನಡೆಯುತ್ತಾರೆ. ರಾಹುಲ್‌ರನ್ನು ಭೇಟಿಯಾಗುವ ನಿರೀಕ್ಷೆಯಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇರುತ್ತಾರೆ. ಇವರಲ್ಲಿ ಕೆಲವರನ್ನು ಭೇಟಿಯಾಗುವಂತೆ ರಾಹುಲ್ ಕೂಡ ಆಹ್ವಾನಿಸುತ್ತಾರೆ. ಜನಸಾಮಾನ್ಯರ ಜೊತೆ ಭುಜದ ಮೇಲೆ ಕೈಯಿಟ್ಟು ಆತ್ಮೀಯತೆಯಿಂದ ನಡೆಯುವಾಗ ಪ್ರಶ್ನೆಗಳನ್ನು ಕೇಳುತ್ತಲೇ ಇರುತ್ತಾರೆ.


    ಮಕ್ಕಳೊಂದಿಗೂ ಹೆಜ್ಜೆ ಹಾಕೋ ಕಾಂಗ್ರೆಸ್​ ನಾಯಕ


    ಮಕ್ಕಳಿದ್ದರೆ ರಾಹುಲ್ ಕೂಡ ಅವರ ಜೊತೆ ಹೆಜ್ಜೆ ಹೆಜ್ಜೆಗೂ ನಡೆಯತೊಡಗುತ್ತಾರೆ. ರಾಹುಲ್ ಗಾಂಧಿ ಅವರೊಂದಿಗೆ ನಡೆಯುವುದು ಸುಲಭವಲ್ಲ ಎಂದು ಕಾಂಗ್ರೆಸ್ ನಾಯಕ ಪವನ್ ಖೇರಾ ಹೇಳಿದ್ದಾರೆ. ಅವರು ಬೆಳಗ್ಗೆ ಎಷ್ಟು ವೇಗವಾಗಿ ಹೆಜ್ಜೆ ಹಾಕುತ್ತಾರೋ ಅದೇ ವೇಗದಲ್ಲಿ ದಿನವಿಡೀ ನಡೆಯುತ್ತಾರೆ. ಸಾಮಾನ್ಯ ಜನರು ಅವರಿಗೆ ಮತ್ತು ನಮಗೆಲ್ಲರಿಗೂ ಹೆಚ್ಚಿನ ಬೆಂಬಲ ನೀಡಿ ಶಧಕ್ತಿ ತುಂಬುತ್ತಾರೆ ಎಂದಿದ್ದಾರೆ.


    ಆತ್ಮೀಯತೆ, ತನ್ನವರೆಂಬ ಭಾವ ಹಾಗೂ ಭಾವನಾತ್ಮಕ ಸಂಬಂಧ


    ಒಗ್ಗೂಡಿದ ಜನರಲ್ಲಿ ರಾಹುಲ್ ತಾನ್ಯಾರನ್ನು ಭೇಟಿಯಾಗಬೇಕೆಂದು ಹೇಗೆ ನಿರ್ಧರಿಸುತ್ತಾರೆ ಎಂಬ ಪ್ರಶ್ನೆ ಸಹಜವಾಗೇ ಉದ್ಭವಿಸುತ್ತದೆ. ಭಾರತ್ ಜೋಡೋ ಯಾತ್ರೆಯಲ್ಲಿ ನಿರಂತರವಾಗಿ ಅವರ ಜೊತೆಗಿರುವ ಕೆ.ಸಿ.ವೇಣುಗೋಪಾಲ್, ಕಾಂಗ್ರೆಸ್ ನಾಯಕನಿಗೆ ವಿಶೇಷವಾದ ನಂಟು, ಜಾದೂ ಇದೆ ಎನ್ನುತ್ತಾರೆ. ರಾಹುಲ್ ಗಾಂಧಿ ಇಲ್ಲಿಯವರೆಗೆ ಯಾರನ್ನು ಭೇಟಿಯಾಗಲು ಕರೆದಿದ್ದಾರೋ ಅವರೆಲ್ಲರೂ ಅದಕ್ಕೆ ಅರ್ಹರು ಎಂದು ಅವರು ಹೇಳುತ್ತಾರೆ.


    ಇದನ್ನೂ ಓದಿ: Teacher: ನಿವೃತ್ತ ಶಿಕ್ಷಕರಿಗೆ 50 ಗ್ರಾಂ ಚಿನ್ನ, 2 ಕೆಜಿ ಬೆಳ್ಳಿ ನೀಡಿ ಬೀಳ್ಕೊಡುಗೆ ನೀಡಿದ ಗ್ರಾಮಸ್ಥರು


    ನೋವನ್ನು ಅರ್ಥ ಮಾಡಿಕೊಳ್ಳುವ ವ್ಯಕ್ತಿ ಇತರರಲ್ಲಿಯೂ ಅದನ್ನು ಕಾಣುತ್ತಾನೆ ಎನ್ನುತ್ತಾರೆ ರಾಹುಲ್. ಈ ಆಧಾರದ ಮೇಲೆ ಅವರು ನಿಜವಾಗಿಯೂ ಯಾರಿಗೆ ಸಹಾಯದ ಅಗತ್ಯವಿದೆಯೋ ಅದೇ ವ್ಯಕ್ತಿಯನ್ನು ಭೇಟಿ ಮಾಡಲು ಕರೆಯುತ್ತಾರೆ. ತಿರುವನಂತಪುರಂನಲ್ಲಿ 80 ವರ್ಷದ ಮಹಿಳೆಯೊಬ್ಬರು ರಾಹುಲ್‌ರನ್ನು ಭೇಟಿಯಾಗಲು ಸುಮಾರು 2 ಕಿಲೋಮೀಟರ್ ನಡೆದಿದ್ದಾರೆ ಎಂದು ಕೆಸಿ ವೇಣುಗೋಪಾಲ್ ಹೇಳಿದ್ದಾರೆ. ಹೀಗಿರುವಾಗ ರಾಹುಲ್ ಆವರನ್ನು ಗುರುತಿಸಿ ಮತ್ತು ಅವರನ್ನು ಭೇಟಿಯಾದರು.

    Published by:Precilla Olivia Dias
    First published: