KGF 2 ಶೂಟಿಂಗ್ ಆಗಿದ್ದ ಭಾರತ್ ಗೋಲ್ಡ್ ಮೈನ್ಸ್ ಬಂದ್ ಮಾಡಲು ನಿರ್ಧಾರ, ಚಿನ್ನದ ಗಣಿ ಈ ಸ್ಥಿತಿಗೆ ಬಂದಿದ್ದು ಹೇಗೆ?

Bharat Gold Mining Limited: ಇನ್ನು ಇತ್ತೀಚೆಗೆ ಬಿಡಿಗಡೆಯಾದ ಸೂಪರ್ ಹಿಟ್ ಚಲನಚಿತ್ರ ಕೆಜಿಎಫ್ 2 ಕಾರಣದಿಂದ ಈ ಜಾಗ ಬಹಳ ಪ್ರಸಿದ್ದತೆಯನ್ನು ಪಡೆದಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಕೇಂದ್ರ ಸಚಿವ ಸಂಪುಟವು (Union Cabinet) ಭಾರತ್ ಗೋಲ್ಡ್ ಮೈನಿಂಗ್ ಲಿಮಿಟೆಡ್ (Bharat Gold Mining Limited) ಅನ್ನು ಮುಚ್ಚಲು ನಿರ್ಧರಿಸಿದೆ ಎಂದು ಸಿಎನ್‌ಬಿಸಿ ಟಿವಿ-18ಗೆ ಮೂಲಗಳಿಂದ ತಿಳಿದು ಬಂದಿದೆ. ಭಾರತ್ ಗೋಲ್ಡ್ ಮೈನ್ಸ್ ಲಿಮಿಟೆಡ್ (BGML), ಹಿಂದಿನ ಸಾರ್ವಜನಿಕ ವಲಯದ ಉದ್ಯಮವಾಗಿದ್ದು, ಗಣಿ ಇಲಾಖೆಯ ಆಡಳಿತಾತ್ಮಕ ನಿಯಂತ್ರಣದಲ್ಲಿ ಏಪ್ರಿಲ್, 1972 ರಲ್ಲಿ ಕೋಲಾರ ಗೋಲ್ಡ್ ಫೀಲ್ಡ್ಸ್ (KGF) ನಲ್ಲಿ ತನ್ನ ಕಛೇರಿಯನ್ನು ಹೊಂದಿದೆ. ಕನ್ನಡ ಕೆಜಿಎಫ್ 2 ಚಿತ್ರದ ಹಿಟ್ ನಂತರ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಹ ಪ್ರಸಿದ್ಧವಾಗಿದೆ.

ಮಾಜಿ ಉದ್ಯೋಗಿಗಳ ಸಮಾಜದ ವಿರೋಧದ ನಡುವೆಯೂ ಸಹ
ಜಾಗತಿಕ ಟೆಂಡರ್ ಮೂಲಕ ಆಸ್ತಿಗಳನ್ನು ವಿಲೇವಾರಿ ಮಾಡಲು 2006 ರಲ್ಲಿ ಕ್ಯಾಬಿನೆಟ್ ನಿರ್ಧಾರವನ್ನು ತೆಗೆದುಕೊಂಡಿತು. ಕಾಲ ಕಳೆದಂತೆ ನಾನಾ ಬದಲಾವಣೆಗಳು ನಡೆದು ನಾನಾ ಸಮಸ್ಯೆಗಳು ತಲೆದೋರಿದ್ದು, ಸಚಿವ ಸಂಪುಟದ ಈ ನಿರ್ಣಯ ಜಾರಿಯಾಗಲಿಲ್ಲ. ಕಂಪನಿಯನ್ನು ಮುಚ್ಚಿದಾಗಿನಿಂದ, ಅದನ್ನು ತೆರೆದು ಅಭಿವೃದ್ದಿ ಮಾಡುವ ಬೇಡಿಕೆ ಜೀವಂತವಾಗಿದೆ. ಅನೇಕ ರಾಜ್ಯ ಮತ್ತು ಕೇಂದ್ರ ಸಚಿವರು ಕಂಪನಿಯನ್ನು ಮತ್ತೆ ತೆರೆಯಲು ಹಲವಾರು ಭಾರೀ ಸಲಹೆ ನೀಡುವುದರ ಜೊತೆಗೆ ಒತ್ತಾಯ ಮಾಡುತ್ತಿದ್ದಾರೆ. ಆದರೆ, 2021ರಲ್ಲಿ ಈ ಬಗ್ಗೆ ಯಾವುದೇ ಪ್ರಸ್ತಾವನೆ ಇಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.

ಮತ್ತೆ ಕಂಪನಿ ತೆರೆಯುವ ಪ್ರಸ್ತಾಪವಿಲ್ಲ

ಇನ್ನು ಮುಂದೆ ಕಂಪನಿಯನ್ನು ಮತ್ತೆ ತೆರೆಯುವ ಯಾವುದೇ ಪ್ರಸ್ತಾಪವಿಲ್ಲ ಎಂದು ಧಾರವಾಡ ಲೋಕಸಭಾ ಕ್ಷೇತ್ರದ ಸಂಸದರು ಹಾಗೂ ಕೇಂದ್ರ ಗಣಿ, ಕಲ್ಲಿದ್ದಲು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಸ್ಪಷ್ಟನೆ ನೀಡಿದ್ದಾರೆ.

ಲೋಕಸಭೆಯಲ್ಲಿ ಈ ಬಗ್ಗೆ ಪ್ರಶ್ನೆಗೆ ಉತ್ತರಿಸಿದ ಅವರು, “ಭಾರತ್ ಗೋಲ್ಡ್ ಮೈನ್ಸ್ ಲಿಮಿಟೆಡ್ (ಬಿಜಿಎಂಎಲ್), ಸಾರ್ವಜನಿಕ ವಲಯದ ಉದ್ಯಮವನ್ನು ಏಪ್ರಿಲ್, 1972 ರಲ್ಲಿ ಆಗಿನ ಗಣಿ ಇಲಾಖೆಯ ಆಡಳಿತಾತ್ಮಕ ನಿಯಂತ್ರಣದಲ್ಲಿ ಕೆಜಿಎಫ್‌ನಲ್ಲಿ ಅದರ ಕಚೇರಿಯೊಂದಿಗೆ ಸಂಯೋಜಿಸಿ ಆರಂಭಿಸಲಾಗಿತ್ತು.
ಇದು ಮುಖ್ಯವಾಗಿ ಕೆಜಿಎಫ್‌ನಲ್ಲಿ ಚಿನ್ನದ ಗಣಿಗಾರಿಕೆ ಮತ್ತು ಉತ್ಪಾದನೆ ಮತ್ತು ಆಂಧ್ರಪ್ರದೇಶದಲ್ಲಿ ಕೆಲವು ಸಣ್ಣ ಕಾರ್ಯಾಚರಣೆಗಳಲ್ಲಿ ತೊಡಗಿಸಿಕೊಂಡಿದೆ.

ಜಾಗತಿಕ ಟೆಂಡರ್​ ಮೂಲಕ ಆಸ್ತಿ ಹರಾಜ್ 

ಅದರ ಕಾರ್ಯಚಟುವಟಿಕೆಗಳು ಆರ್ಥಿಕವಾಗಿ ಯಾವುದೇ ರೀತಿಯಲ್ಲಿ ಲಾಭ ನೀಡುತ್ತಿಲ್ಲ, ಈ ಕಾರಣದಿಂದ ಜೂನ್ 12, 2000 ರಂದು ಇದರ ಕಾರ್ಯಚರಣೆಯನ್ನು ನಿಲ್ಲಿಸಲು ಆದೇಶ ನೀಡಲಾಯಿತು. BGML ನಲ್ಲಿ ಕಾರ್ಯಾಚರಣೆಯನ್ನು ಮಾರ್ಚ್ 1, 2001 ರಿಂದ ನಿಲ್ಲಿಸಲಾಯಿತು. ಜೂನ್ 27, 2006 ರಂದು ಕೇಂದ್ರ ಸಚಿವ ಸಂಪುಟವು BGML ನ ಆಸ್ತಿಗಳನ್ನು ತೆರೆದ ಜಾಗತಿಕ ಟೆಂಡರ್ ಮೂಲಕ ಮಾರಾಟ ಮಾಡಲು ಒಪ್ಪಿಗೆ ನೀಡಿದೆ. ಆದರೆ ಇದನ್ನು ವಿರೋಧಿಸಿ ಕೋರ್ಟ್ಗೆ ಹೋಗಲಾಗಿತ್ತು. ಜುಲೈ 9, 2013 ರಂದು ಸುಪ್ರೀಂ ಕೋರ್ಟ್ ಆದೇಶವು ಕ್ಯಾಬಿನೆಟ್ ತೆಗೆದುಕೊಂಡ ನಿರ್ಧಾರದ ಪ್ರಕಾರ ಜಾಗತಿಕ ಟೆಂಡರ್‌ ಮೂಲಕ ಆಸ್ತಿ ಮಾರಾಟಕ್ಕೆ ಕೇಂದ್ರಕ್ಕೆ ಅನುಮತಿ ನೀಡಿದೆ ಎಂದಿದ್ದಾರೆ.

BGML ನ ಎಲ್ಲಾ ಗಣಿಗಾರಿಕೆ ಗುತ್ತಿಗೆಗಳು ಅವಧಿ ಮುಗಿದಿವೆ ಮತ್ತು ಕರ್ನಾಟಕದಲ್ಲಿ ಗಣಿಗಳ ನವೀಕರಣದ ಅರ್ಜಿಯು ಬಾಕಿ ಉಳಿದಿದೆ ಆದರೆ ಆಂಧ್ರ ಪ್ರದೇಶ ಸರ್ಕಾರವು ಎಲ್ಲಾ ಮೂರು ಗಣಿಗಾರಿಕೆ ಗುತ್ತಿಗೆಗಳನ್ನು ಮುಕ್ತಾಯಗೊಳಿಸಿದೆ. ಅಲ್ಲದೆ, ಗಣಿಗಾರಿಕೆ ಕಾಯಿದೆಯ ಇತ್ತೀಚಿನ ತಿದ್ದುಪಡಿಯಂತೆ, ಗಣಿಗಾರಿಕೆ ಗುತ್ತಿಗೆಯನ್ನು ನಿರ್ಧರಿಸದಿದ್ದರೆ ಗಣಿಗಾರಿಕೆ ಗುತ್ತಿಗೆಯು 2023 ರಲ್ಲಿ ಮುಕ್ತಾಯಗೊಳ್ಳುತ್ತದೆ, ”ಎಂದು ಸಚಿವರು ಹೇಳಿದ್ದಾರೆ.

ಇದನ್ನೂ ಓದಿ: 15 ದಿನ ಮೊದಲು ನಿರ್ಮಿಸಿದ್ದ ರಸ್ತೆ 15 ನಿಮಿಷದ ಮಳೆಗೆ ಹೇಗಾಯ್ತು ನೋಡಿ!

ಈ ವರ್ಷದ ಆರಂಭದಲ್ಲಿ, ಕೇಂದ್ರ ಸಚಿವ ಸಂಪುಟವು ಸಾರ್ವಜನಿಕ ವಲಯದ ಭೂ ಆಸ್ತಿಗಳನ್ನು ಒಟ್ಟುಗೂಡಿಸಲು ಮತ್ತು ಹಣಗಳಿಸಲು ಹೊಸ ಸರ್ಕಾರಿ ಸ್ವಾಮ್ಯದ ಸಂಸ್ಥೆಯನ್ನು ಸ್ಥಾಪಿಸಲು ಅನುಮೋದನೆ ನೀಡಿದೆ. ರಾಷ್ಟ್ರೀಯ ಭೂ ಮಾನಿಟೈಸೇಶನ್ ಕಾರ್ಪೊರೇಷನ್ (NLMC) ಮುಖ್ಯ ಉದ್ದೇಶವು ಹೆಚ್ಚುವರಿ ಭೂಮಿ ಮತ್ತು ಕೇಂದ್ರ ಸಾರ್ವಜನಿಕ ವಲಯದ ಉದ್ಯಮಗಳು (CPSEs) ಮತ್ತು ಸರ್ಕಾರಿ ಏಜೆನ್ಸಿಗಳ ಕಟ್ಟಡ ಆಸ್ತಿಗಳಿಂದ ಬರುವ ಲಾಭದ ಬಗ್ಗೆ ಕಂಟ್ರೋಲ್ ಮಾಡುವುದಾಗಿದೆ. ಸಂಸ್ಥೆಯು ಮುಚ್ಚಿರುವ ಅಥವಾ ಕಾರ್ಯತಂತ್ರದ ಮಾರಾಟಕ್ಕೆ ಸಾಲಾಗಿ ನಿಂತಿರುವ ಸಾರ್ವಜನಿಕ ವಲಯದ ಸಂಸ್ಥೆಗಳಿಗೆ ಸೇರಿದ ಆಸ್ತಿಗಳ ಮಾನಿಟೈಸೇಷನ್ ಮಾಡಲು ಸಹಾಯ ಮಾಡುತ್ತದೆ.

ಈ ಸ್ಥಳವು ಬೆಂಗಳೂರು ವಿಮಾನ ನಿಲ್ದಾಣದಿಂದ 90 ಕಿಮೀ, ಚೆನ್ನೈ ಬಂದರಿನಿಂದ 260 ಕಿಮೀ ಮತ್ತು ಕೃಷ್ಣಪಟ್ಟಣಂ ಬಂದರಿನಿಂದ 314 ಕಿಮೀ ದೂರದಲ್ಲಿದೆ. ಕೆಜಿಎಫ್ ಅನ್ನು ನಿರ್ವಹಿಸುತ್ತಿದ್ದ ಮತ್ತು 2001 ರಲ್ಲಿ ಮುಚ್ಚಲ್ಪಟ್ಟ BGML ಸುಮಾರು 12,000 ಎಕರೆ ಭೂಮಿಯನ್ನು ಹೊಂದಿದೆ.

ಇದನ್ನೂ ಓದಿ: ವಿದೇಶಿ ನಾಯಕರಿಗೆ ಮೋದಿ ಕೊಟ್ಟ ಉಡುಗೊರೆಗಳೇನು ಗೊತ್ತೇ?

ಇನ್ನು ಇತ್ತೀಚೆಗೆ ಬಿಡಿಗಡೆಯಾದ ಸೂಪರ್ ಹಿಟ್ ಚಲನಚಿತ್ರ ಕೆಜಿಎಫ್ 2 ಕಾರಣದಿಂದ ಈ ಜಾಗ ಬಹಳ ಪ್ರಸಿದ್ದತೆಯನ್ನು ಪಡೆದಿದೆ.
Published by:Sandhya M
First published: