• Home
  • »
  • News
  • »
  • national-international
  • »
  • Bharat Gaurav Trains: ಭಾರತ್ ಗೌರವ್ ರೈಲು ಪ್ರಯಾಣ ದರ ಇಳಿಕೆ? ರೈಲ್ವೆ ಇಲಾಖೆಯಿಂದ ಮಹತ್ವದ ನಿರ್ಧಾರ

Bharat Gaurav Trains: ಭಾರತ್ ಗೌರವ್ ರೈಲು ಪ್ರಯಾಣ ದರ ಇಳಿಕೆ? ರೈಲ್ವೆ ಇಲಾಖೆಯಿಂದ ಮಹತ್ವದ ನಿರ್ಧಾರ

ಭಾರತ್ ಗೌರವ್ ರೈಲು

ಭಾರತ್ ಗೌರವ್ ರೈಲು

ಹೀಗಾಗಿ ಪ್ರಯಾಣಿಕರ ಅನುಕೂಲಕ್ಕಾಗಿ ಮತ್ತು ಉದ್ದೇಶವನ್ನು ಸಾಕಾರಗೊಳಿಸುವ ಸಲುವಾಗಿ ಭಾರತ್ ಗೌರವ್ ವಿಶೇಷ ರೈಲುಗಳ ಪ್ರಯಾಣ ದರವನ್ನು ಶೇ 20 ರಿಂದ 30ರಷ್ಟು ಕಡಿತಗೊಳಿಸಲು ರೈಲ್ವೆ ಇಲಾಖೆ ಚಿಂತಿಸುತ್ತಿದೆ.

  • Share this:

ಹೆಚ್ಚಿನ ಪ್ರಯಾಣಿಕರನ್ನು ಆಕರ್ಷಿಸುವ ಸಲುವಾಗಿ ಮತ್ತು ಧಾರ್ಮಿಕ ಪ್ರವಾಸೋದ್ಯಮವನ್ನು ಉತ್ತೇಜಿಸಲು ಪರಿಚಯಿಸಲಾದ ಭಾರತ್ ಗೌರವ್ ರೈಲುಗಳ ದರವನ್ನು (Bharat Gaurav Trains Ticket Price) ಕಡಿಮೆ ಮಾಡಲು ಭಾರತೀಯ ರೈಲ್ವೆ ಇಲಾಖೆ ಯೋಜಿಸುತ್ತಿದೆ. ಭಾರತೀಯ ರೈಲ್ವೆ ಕೇಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮವು (Tourism Department) ವಿಶೇಷ ರೈಲುಗಳ (Special Trains) ದರ ಇಳಿಕೆ ಸಂಬಂಧ ರೈಲ್ವೆ ಇಲಾಖೆಗೆ ಮನವಿ ಸಲ್ಲಿಸಿದ್ದು, ಈ ಬಗ್ಗೆ ಮಂಡಳಿಯು ಅವಲೋಕನ ನಡೆಸುತ್ತಿದೆ. ಪ್ರಸ್ತುತ ಪ್ರತಿ ಪ್ರಯಾಣಿಕರಿಗೆ ಎಸಿ 3 ಹಂತದ ಸೀಟಿನಲ್ಲಿ 18 ದಿನಗಳ ಪ್ರವಾಸಕ್ಕೆ ₹62,000 ಶುಲ್ಕ ವಿಧಿಸಲಾಗುತ್ತದೆ. ಆದರೆ ಕಳಪೆ ಕೋಚ್‌ಗಳು, ಮಧ್ಯಮ ಮತ್ತು ಕೆಳ ಹಂತದ ಪ್ರಯಾಣಿಕರಿಗೆ ಈ ಬೆಲೆ ದುಬಾರಿಯಾಗಿರುವುದು ಸೇರಿ ಈ ಎಲ್ಲಾ ಕಾರಣಗಳಿಂದಾಗಿ ಪ್ರಯಾಣಿಕರ ಕೊರತೆ (Travellers) ಉಂಟಾಗಿದೆ.


ಹೀಗಾಗಿ ಪ್ರಯಾಣಿಕರ ಅನುಕೂಲಕ್ಕಾಗಿ ಮತ್ತು ಉದ್ದೇಶವನ್ನು ಸಾಕಾರಗೊಳಿಸುವ ಸಲುವಾಗಿ ಭಾರತ್ ಗೌರವ್ ವಿಶೇಷ ರೈಲುಗಳ ಪ್ರಯಾಣ ದರವನ್ನು ಶೇ 20 ರಿಂದ 30ರಷ್ಟು ಕಡಿತಗೊಳಿಸಲು ರೈಲ್ವೆ ಇಲಾಖೆ ಚಿಂತಿಸುತ್ತಿದೆ.


ಭಾರತ್ ದರ್ಶನ ರೈಲುಗಳಿಗಿಂತ ಭಾರತ್ ಗೌರವ್ ದುಬಾರಿ
ಭಾರತ್ ಗೌರವ್ ರೈಲುಗಳಿಗಿಂತಲೂ ಭಾರತ್ ದರ್ಶನ ರೈಲುಗಳ ದರ ಕಡಿಮೆ ಇರುವುದರಿಂದ ಯಾತ್ರಿಕರು ಆ ರೈಲುಗಳತ್ತ ತಮ್ಮ ಚಿತ್ತ ನೆಟ್ಟಿದ್ದಾರೆ. ಏಪ್ರಿಲ್ 2022 ರಲ್ಲಿ ಸ್ಥಗಿತಗೊಂಡ ಭಾರತ ದರ್ಶನದಲ್ಲಿ 18 ದಿನಗಳ ಪ್ರಯಾಣದ ವೆಚ್ಚ ಸುಮಾರು ₹27000 ಆಗಿತ್ತು.


ಆದರೆ ಭಾರತ್‌ ಗೌರವ್‌ ಶುಲ್ಕ ₹62,000 ಆಗಿದೆ. ಹೀಗಾಗಿ ಈ ಎರಡೂ ಬೆಲೆಯನ್ನು ಹೋಲಿಸಿ ನೋಡಿದರೆ ಭಾರತ್‌ ಗೌರವ್‌ ಪ್ರಯಾಣ ದರ ದುಬಾರಿಯಾಗಿದೆ. ಆದ್ದರಿಂದ, ಭಾರತ್ ಗೌರವ್ ರೈಲುಗಳ ದರವನ್ನು ಕನಿಷ್ಠ 20% ರಷ್ಟು ಕಡಿಮೆ ಮಾಡುವ ಗುರಿಯನ್ನು ಹೊಂದಲಾಗಿದೆ ಎಂದು ಕೆಲವು ಅಧಿಕಾರಿಗಳು ತಿಳಿಸಿದ್ದಾರೆ.


ಎರಡು ಪ್ರಯಾಣ ಸೇವೆ ರದ್ದು
ಯಾತ್ರಿಗಳ ಸಂಖ್ಯೆಯ ಕೊರತೆಯಿಂದಾಗಿ ಈಗಾಗಲೇ ನಿಗದಿಯಾಗಿದ್ದ ಭಾರತ್ ಗೌರವ್ ಶ್ರೀ ಜಗನ್ನಾಥ ಯಾತ್ರೆ ಹಾಗೂ ಭಾರತ್ ಗೌರವ್ ರಾಮಾಯಣ ಸರ್ಕ್ಯೂಟ್–2 ರೈಲು ಪ್ರಯಾಣ ಸೇವೆಗಳನ್ನು ರದ್ದುಗೊಳಿಸಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.


ಇದನ್ನೂ ಓದಿ: Bengaluru Airport: ಗಮನಿಸಿ, ಬೆಂಗಳೂರು ಏರ್​ಪೋರ್ಟ್​ನಲ್ಲಿ ನಿಮ್ಮ ಮುಖಕ್ಕೆ ಇರಲಿದೆ ಭಾರೀ ಮಹತ್ವ!


ಕಳಪೆ ಸಂಖ್ಯೆಯ ಪ್ರಯಾಣಿಕರಿಂದಾಗಿ ರೈಲ್ವೇಯು ರಾಮಾಯಣ ಮಾರ್ಗದಲ್ಲಿ ಕೇವಲ ಒಂದು ರೈಲನ್ನು ಓಡಿಸಲು ನಿರ್ಧರಿಸಿತು. ಆದರೆ ಇದು ಆದಾಯದ ನಷ್ಟಕ್ಕೆ ಕಾರಣವಾಗುತ್ತದೆ. ಜೊತೆಗೆ ಐಆರ್‌ಸಿಟಿಸಿಯು ಈ ಸಮಸ್ಯೆಯನ್ನು ಸಚಿವಾಲಯಕ್ಕೆ ಪ್ರಸ್ತಾಪಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಯಾಣ ದರ ಕೂಡ ಹೆಚ್ಚಿರುವುದರಿಂದ ಪ್ರಯಾಣಿಕರನ್ನು ಓಲೈಸುವುದು ಕಷ್ಟವಾಗಿದೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.


ಇನ್ನೂ ಹಲವು ಸೂಚನೆ
ಪ್ರಯಾಣಿಕರಿಗೆ ಆರಾಮದಾಯಕ ಬರ್ತ್‌ಗಳು, ಚಾರ್ಜಿಂಗ್ ಪಾಯಿಂಟ್‌ಗಳು ಮತ್ತು ಇತರ ಸೌಲಭ್ಯಗಳನ್ನು ಒದಗಿಸುವ ಉದ್ದೇಶದಿಂದ ಲಿಂಕ್ ಹಾಫ್‌ಮನ್ ಬುಶ್ (ಎಲ್‌ಹೆಚ್‌ಬಿ) ಕೋಚ್‌ಗಳನ್ನು ಮಾತ್ರ ಬಳಸಲು ರೈಲ್ವೆ ಮಂಡಳಿ ಕಳೆದ ವಾರ ಅನುಮೋದನೆ ನೀಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


ಇದನ್ನೂ ಓದಿ: Durian Fruit: ಕಾಣೋದಕ್ಕೆ ಹಲಸು, ತಿಂದರೆ ಹೊಲಸು! ವಿಶ್ವದ ಅತ್ಯಂತ ದುರ್ನಾತದ ಹಣ್ಣನ್ನು ತಿಂದು ತೇಗಿದ ಆ ಮಹಿಳೆ ಯಾರು?


"ಉತ್ತಮ-ಗುಣಮಟ್ಟದ ಕೋಚ್‌ಗಳು ಮತ್ತು ಕಾರ್ಯಸಾಧ್ಯವಾದ ಪ್ರವಾಸ ಪ್ಯಾಕೇಜ್‌ಗಳನ್ನು ಒದಗಿಸುವ ಮೂಲಕ ರೈಲು ಆಧಾರಿತ ಪ್ರವಾಸೋದ್ಯಮವನ್ನು ಉತ್ತೇಜಿಸುವ ಪ್ರಯತ್ನಗಳಿಗೆ ಭಾರತ್ ಗೌರವ್ ರೈಲುಗಳ ಯೋಜನೆಯನ್ನು ಪರಿಶೀಲಿಸಲಾಗಿದೆ.


ಇನ್ನು ಮುಂದೆ, ಭಾರತ್ ಗೌರವ್ ರೈಲುಗಳ ಯೋಜನೆಯಡಿಯಲ್ಲಿ LHB ಕೋಚ್‌ಗಳನ್ನು ಮಾತ್ರ ಹಂಚಲಾಗುತ್ತದೆ ”ಎಂದು ಈ ತಿಂಗಳ ಆರಂಭದಲ್ಲಿ ಬಿಡುಗಡೆ ಮಾಡಿದ ಸಚಿವಾಲಯದ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.


ಏನಿದು ಭಾರತ್‌ ಗೌರವ್‌ ರೈಲು?
ದೇಶದ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಮತ್ತು ಭವ್ಯ ಐತಿಹಾಸಿಕ ಸ್ಥಳಗಳನ್ನು ಜನರಿಗೆ ತೋರಿಸುವ ಮತ್ತು ಆ ಮೂಲಕ ದೇಶದ ಪ್ರವಾಸೋದ್ಯಮವನ್ನು ಉತ್ತೇಜಿಸುವ ಗುರಿ ಇಟ್ಟುಕೊಂಡು ಕೇಂದ್ರ ಸರಕಾರ 'ಭಾರತ್‌ ಗೌರವ್‌' ಹೊಸ ಪರಿಕಲ್ಪನೆಯ ರೈಲು ಸೇವೆಯನ್ನು ದೇಶದಲ್ಲಿ ಪರಿಚಯಿಸಿತ್ತು.

Published by:ಗುರುಗಣೇಶ ಡಬ್ಗುಳಿ
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು