Intranasal Covid 19 Vaccine: ಮೂಗಿನ ಮೂಲಕ ನೀಡುವ ಭಾರತದ ಮೊದಲ ಕೊರೊನಾ ಲಸಿಕೆ ಬಳಕೆಗೆ ಅನುಮತಿ

ಈ ಲಸಿಕೆ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾದಿಂದ (DCGI) ತುರ್ತು ಬಳಕೆಗೆ ಅನುಮತಿ ಪಡೆದಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಘೋಷಿಸಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಭಾರತ್ ಬಯೋಟೆಕ್ (Bharat Biotech) ಉತ್ಪಾದಿಸುವ ಮೂಗಿನ ಮೂಲಕ ಹಾಕುವ ಕೋವಿಡ್ 19 ಲಸಿಕೆ (Intranasal COVID-19 Vaccine) ಬಳಕೆಗೆ ಅನುಮತಿ ದೊರೆತಿದೆ. ಭಾರತದಲ್ಲಿ ಉತ್ಪಾದನೆಯಾದ ಮೂಗಿನ ಮೂಲಕ ನೀಡುವ ಮೊದಲ ಕೋವಿಡ್ 19 ಲಸಿಕೆಯಾಗಿರುವ ಇದು ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾದಿಂದ (DCGI) ತುರ್ತು ಬಳಕೆಗೆ ಅನುಮತಿ ಪಡೆದಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಘೋಷಿಸಿದ್ದಾರೆ. ಇಂಟ್ರಾನೆಸಲ್ ಲಸಿಕೆ ಬಿಬಿವಿ154 (BBV154) ಲಸಿಕೆ ಆಗಿದ್ದು, ಭಾರತದಲ್ಲಿ ಈ ಮುನ್ನವೇ ಮನುಷ್ಯರ ಮೇಲೆ ಪ್ರಯೋಗ ನಡೆಸಿ ಫಲಿತಾಂಶವನ್ನು ಪರೀಕ್ಷಿಸಲಾಗಿದೆ. 

  ಭಾರತ್ ಬಯೋಟೆಕ್ ಕಂಪನಿಯೇ ತಿಳಿಸಿರುವಂತೆ ಈ ಹೊಸ 'BBV154'  ಇಂಟ್ರಾನಾಸಲ್ ಲಸಿಕೆಯನ್ನು ವಿತರಣೆಯನ್ನು ಕಡಿಮೆ ಮತ್ತು ಮಧ್ಯಮ ಆದಾಯ ಪಡೆಯುವ ನಾಗರಿಕರು ವಾಸಿಸುವ ದೇಶಗಳಲ್ಲಿ ಬಳಕೆಗೆ ಯೋಗ್ಯವಾಗಿ ತಯಾರಿಸಲಾಗಿದೆ. ಈ ಲಸಿಕೆಗೆ ಕಡಿಮೆ ದರ ನಿಗದಿಪಡಿಸಲಾಗುವುದು ಎಂದು ಸಹ ಕಂಪನಿ ತಿಳಿಸಿದೆ.

  ಸುಲಭ ಸಂಗ್ರಹಣೆ ಮತ್ತು ವಿತರಣೆಗೆ ಅನುಕೂಲ
  ಈ ಲಸಿಕೆಯು 2 ರಿಂದ 8 ಡಿಗ್ರಿ ಸೆಲ್ಸಿಯಸ್‌ನಲ್ಲಿ ಸ್ಥಿರವಾಗಿರುತ್ತದೆ. ಅಲ್ಲದೇ ಈ ಲಸಿಕೆಯನ್ನು ಸುಲಭವಾಗಿ ಸಂಗ್ರಹಿಸಬಹುದು ಮತ್ತು ವಿತರಣೆಯನ್ನು ಮಾಡಬಹುದಾಗಿದೆ.  ಭಾರತ್ ಬಯೋಟೆಕ್ ಗುಜರಾತ್, ಕರ್ನಾಟಕ, ಮಹಾರಾಷ್ಟ್ರ ಮತ್ತು ತೆಲಂಗಾಣ ಸೇರಿದಂತೆ ಭಾರತದಾದ್ಯಂತ ಅನೇಕ ಸೈಟ್‌ಗಳಲ್ಲಿ ದೊಡ್ಡ ಉತ್ಪಾದನಾ ಸಾಮರ್ಥ್ಯಗಳನ್ನು ಸ್ಥಾಪಿಸಿದೆ ಎಂದು ಹೇಳಿದೆ.

  ಪ್ರಯೋಗಗಳಲ್ಲಿ ಅತ್ಯುತ್ತಮ ಫಲಿತಾಂಶ
  ಇಂಟ್ರಾನಾಸಲ್ ಕೋವಿಡ್ ಲಸಿಕೆಯನ್ನು ವಾಷಿಂಗ್ಟನ್ ಯೂನಿವರ್ಸಿಟಿ ಸೇಂಟ್ ಲೂಯಿಸ್ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಪ್ರಯೋಗಗಳಲ್ಲೂ ಅತ್ಯತ್ತಮ ಫಲಿತಾಂಶವನ್ನು ನೀಡಿದೆ ಎಂದು ಭಾರತ್ ಬಯೋಟೆಕ್ ತಿಳಿಸಿದೆ.

  ಇದನ್ನೂ ಓದಿ: Ant Attack: ಇರುವೆ ದಾಳಿಗೆ ಊರು ಬಿಟ್ಟ ಜನರು! ಹಿಂದೆಂದೂ ಆಗಿರದ ವಿಚಿತ್ರ ಸಮಸ್ಯೆಯಿಂದ ಕಂಗಾಲು

  ಕೋವಿಡ್‌-19 ಅನ್ನು ಹೇಗೆ ನಿಯಂತ್ರಿಸಬಹುದು?
  ತುರ್ತು ಸಮಯದಲ್ಲಿ ಯಾವ ರೀತಿಯ ನಿಯಂತ್ರಣ ಕ್ರಮಗಳನ್ನು ಅಳವಡಿಸಿಕೊಂಡು ಪ್ರಾಣಾಪಾಯದಿಂದ ದೂರ ಇರಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಸೂಚನೆ ನೀಡಿದೆ. “ ಇಂದು ನಮ್ಮಲ್ಲಿ ಎಲ್ಲರಿಗೂ ಕೋವಿಡ್‌ ಬಗ್ಗೆ ಈಗಾಗಲೇ ಸಾಕಷ್ಟು ಮಾಹಿತಿ ತಿಳಿದಿರುವುದರಿಂದ, ಕೋವಿಡ್‌ನ ಆರಂಭಿಕ ಲಕ್ಷಣಗಳು ಕಾಣಿಸಿದ ಕೂಡಲೇ ವೈದ್ಯರ ಸಲಹೆ ಮೇರೆಗೆ ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥರು ಸಲಹೆ ನೀಡಿದ್ದಾರೆ.

  ಈಗಲೂ ಜನಸಂದಣಿಯಿಂದ ದೂರವೇ ಇರಿ
  ಪಾಸಿಟಿವ್‌ ಎಂದು ವರದಿ ಬಂದರೆ ಕೂಡಲೇ ಕೋವಿಡ್‌ ಲಸಿಕೆ ಪಡೆಯಿರಿ. ಜನಸಂದಣಿಯಿಂದ ದೂರವಿರಲು ಸಾಧ್ಯವಿಲ್ಲದ ಸಮಯದಲ್ಲಿ ಮುಖಕ್ಕೆ ಮಾಸ್ಕ್‌ ಅನ್ನು ಧರಿಸಿ. ಜನಸಂದಣಿಯಿಂದ ದೂರವಿರಲು ಪ್ರಯತ್ನಿಸಿ” ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥರು ಸಲಹೆ ನೀಡಿದ್ದಾರೆ.

  ಇದನ್ನೂ ಓದಿ: Bengaluru Rains: ಬೆಂಗಳೂರನ್ನು ಅಪಹಾಸ್ಯ ಮಾಡಬೇಡಿ; ತೆಲಂಗಾಣ ಸಚಿವರ ಮನವಿ

  ಕೋವಿಡ್-‌19 ನೊಂದಿಗೆ ಜೀವನ ನಡೆಸುವುದು ಅತಿ ಮುಖ್ಯ. ಆ ರೀತಿಯ ಜೀವನ ನಡೆಸಲು ನಮ್ಮಿಂದ ಆಗದು ಎಂದರೆ ನಾವು ನಮ್ಮ ಪ್ರಾಣವನ್ನು ಕಳೆದುಕೊಳ್ಳಬಹುದಾದ ಸಂದರ್ಭಗಳು ದೂರವೇನು ಇಲ್ಲ. ಇದರರ್ಥ ನಾವು ನಮ್ಮನ್ನು ರಕ್ಷಿಸಿಕೊಳ್ಳಲೇಬೇಕಾದ ತುರ್ತು ಸಮಯ ಇದಾಗಿದೆ. ನಮ್ಮ ರಕ್ಷಣೆಗೆ ಬೇಕಾಗುವ ಸಾಧನಗಳಿಂದ ನಮ್ಮ ಆರೋಗ್ಯ ಮತ್ತು ಸಾವಿನಿಂದ ನಮ್ಮನ್ನು ರಕ್ಷಿಸಿಕೊಳ್ಳುವ ಅಗತ್ಯ ಕ್ರಮವನ್ನು ಪ್ರತಿಯೊಬ್ಬರು ಕೈಗೊಳ್ಳಲೇಬೇಕಾದ ಅನಿವಾರ್ಯತೆ ನಮಗೆ ಬಂದಿದೆ” ಎಂದು WHO ಮುಖ್ಯಸ್ಥರು ಹೇಳಿದ್ದಾರೆ.

  ಕೋವಿಡ್‌-19 ವೈರಸ್‌ನ ಹೊಸ ರೂಪಾಂತರಗಳು:
  ಕೋವಿಡ್‌-19 ವೈರಸ್‌ ರೂಪಾಂತರ ಯಾವೆಲ್ಲ ರೂಪ ಪಡೆಯುತ್ತಿದೆ ಎಂಬುದೇ ದೊಡ್ಡ ಪ್ರಶ್ನೆಯಾಗಿದೆ. ಈ ಕೋವಿಡ್‌ನ ರೂಪಾಂತರವಾಗಿ ಓಮಿಕ್ರಾನ್ ಪ್ರಬಲ ವೈರಸ್‌ ಆಗಿ ನಮ್ಮನ್ನೆಲ್ಲ ಕಾಡುತ್ತಿದೆ. ಇಲ್ಲಿವರೆಗೂ ಆಸ್ಪತ್ರೆಗೆ ದಾಖಲಾದ 90% ಜನರು ಈ ಓಮ್ರಿಕಾನ್‌ ವೈರಸ್‌ನ ರೋಗಲಕ್ಷಣಗಳನ್ನು ಹೊಂದಿದ್ದಾರೆ ಎಂದು ಹೇಳಬಹುದು. ನಾವು ಈ ವೈರಸ್‌ನಿಂದ ಸಾಕಷ್ಟು ಸಾವು-ನೋವು ಅನುಭವಿಸದ್ದೇವೆ ಆದರೆ ಆ ವೈರಸ್‌ ಮಾನವ ಕುಲದಲ್ಲಿ ಇನ್ನು ಹೆಚ್ಚು ಸಾವು-ನೋವನ್ನು ಉಂಟು ಮಾಡಲೇಬೇಕೆಂಬ ಹಠ ಹಿಡಿದಂತಿದ್ದು ನಾವೆಲ್ಲ ಇಂದು ಈ ವೈರಸ್‌ನ ಅವಾಂತರದಿಂದಾಗಿ ಭಯದ ಜೀವನ ಸಾಗಿಸುವ ಹಾಗಾಗಿದೆ” ಎಂದು WHO ಮುಖ್ಯಸ್ಥರು ಹೇಳಿದ್ದಾರೆ.
  Published by:guruganesh bhat
  First published: