Bharat Bandh – ದೇಶಾದ್ಯಂತ ಭಾರತ್ ಬಂದ್; ಉತ್ತರ ಭಾರತದಲ್ಲಿ ಪ್ರತಿಭಟನೆ ತೀವ್ರ

ಕೇಂದ್ರ ಸರ್ಕಾರದ ಕೃಷಿ ಮಸೂದೆಗಳನ್ನ ವಿರೋಧಿಸಿ ಭಾರತ್ ಬಂದ್ಗೆ ಆಚರಿಸಲಾಗುತ್ತಿದೆ. ಪಂಜಾಬ್, ಹರಿಯಾಣ, ಉತ್ತರ ಪ್ರದೇಶದಲ್ಲಿ ಪ್ರತಿಭಟನೆ ಬಿಸಿ ಹೆಚ್ಚಾಗಿದೆ. ಬಿಹಾರ, ಕರ್ನಾಟಕ ಮೊದಲ ರಾಜ್ಯಗಳಲ್ಲೂ ಬಹಳಷ್ಟು ಪ್ರತಿಭಟನೆಗಳು ನಡೆಯುತ್ತಿವೆ.

news18
Updated:September 25, 2020, 12:09 PM IST
Bharat Bandh – ದೇಶಾದ್ಯಂತ ಭಾರತ್ ಬಂದ್; ಉತ್ತರ ಭಾರತದಲ್ಲಿ ಪ್ರತಿಭಟನೆ ತೀವ್ರ
ಪಂಜಾಬ್​ನಲ್ಲಿ ರೈತರ ಪ್ರತಿಭಟನೆ
  • News18
  • Last Updated: September 25, 2020, 12:09 PM IST
  • Share this:
ನವದೆಹಲಿ(ಸೆ. 25): ಕೇಂದ್ರ ಸರ್ಕಾರದ ಕೃಷಿ ಮಸೂದೆಗಳನ್ನ ವಿರೋಧಿಸಿ ಹಲವು ಸಂಘಟನೆಗಳು ಇಂದು ಭಾರತ್ ಬಂದ್ ನಡೆಸಿವೆ. ಉತ್ತರ ಭಾರತದಲ್ಲಿ ಬಂದ್​ನ ತೀವ್ರತೆ ಹೆಚ್ಚಿದೆ. ಅದರಲ್ಲೂ ಪಂಜಾಬ್, ಹರಿಯಾಣ, ಉತ್ತರ ಪ್ರದೇಶ ಮತ್ತು ಬಿಹಾರ ರಾಜ್ಯಗಳಲ್ಲಿ ಪ್ರತಿಭಟನೆಗಳು ತೀವ್ರವಾಗಿ ನಡೆದಿವೆ. ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಸಾವಿರಾರು ರೈತರು ಸೇರಿ ಪ್ರತಿಭಟನೆ ನಡೆಸಿದ್ದಾರೆ. ರಾಜ್ಯಾದ್ಯಂತ ಅಲ್ಲಲ್ಲಿ ಹೆದ್ದಾರಿ ತಡೆದು ಸಾಂಕೇತಿಕ ಪ್ರತಿಭಟನೆ ಮಾಡಿವೆ. ಉತ್ತರ ಭಾರತದಲ್ಲಿ ಹಲವು ಹೆದ್ದಾರಿಗಳನ್ನ ಪ್ರತಿಭಟನಾಕಾರರು ತಡೆದಿದ್ಧಾರೆ. ರೈಲು ತಡೆ ಕೂಡ ನಡೆಸಿದ್ದಾರೆ. ಉತ್ತರ ಭಾರತದ ಅನೇಕ ಹೆದ್ದಾರಿಗಳಲ್ಲಿ ಭಾರೀ ಟ್ರಾಫಿಕ್ ಜಾಮ್ ಸೃಷ್ಟಿಯಾಗಿದೆ.

ಪಂಜಾಬ್​ನಲ್ಲಿ ದೊಡ್ಡ ಮಟ್ಟದಲ್ಲಿ ರೈತರ ಪ್ರತಿಭಟನೆಗಳು ನಡೆಯುತ್ತಿವೆ. ಎನ್​ಡಿಎ ಅಂಗಪಕ್ಷ ಶಿರೋಮಣಿ ಅಕಾಲಿ ದಳ ಕೂಡ ಈ ಹೋರಾಟಕ್ಕೆ ಕೈಜೋಡಿಸಿದೆ. ಅಲ್ಲಿನ ರೈತರು ಮೂರು ದಿನ ರೈಲು ತಡೆ ಅಭಿಯಾನ ಪ್ರಾರಂಭಿಸಿದ್ದಾರೆ. ಅಕ್ಟೋಬರ್ 1ರಿಂದ ಅನಿರ್ದಿಷ್ಟಾವಧಿಯವರೆಗೆ ಪಂಜಾಬ್​ನಾದ್ಯಂತ ರೈಲ್ ರೋಕೋ ನಡೆಯಲಿದೆ. ಅಲ್ಲಿನ ಕಾಂಗ್ರೆಸ್ ಸರ್ಕಾರ ಕೂಡ ರೈತರ ಹೋರಾಟಕ್ಕೆ ಬೆಂಬಲವಾಗಿ ನಿಂತಿದೆ. ಸೆಕ್ಷನ್ 144ರ ಅಡಿಯಲ್ಲಿ ಯಾವ ರೈತರ ಮೇಲೂ ಎಫ್​​ಐಆರ್ ದಾಖಲಿಸುವುದಿಲ್ಲ ಎಂದು ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಭರವಸೆ ನೀಡಿದ್ಧಾರೆ.

ಇದನ್ನೂ ಓದಿ: ಮೈಸೂರ್ ಬ್ಯಾಂಕ್ ಸರ್ಕಲ್ ಸೇರಿ ಬೆಂಗಳೂರಿನ ವಿವಿಧೆಡೆ ಪ್ರತಿಭಟನೆ; 40ಕ್ಕೂ ಹೆಚ್ಚು ಮಂದಿ ಪೊಲೀಸ್ ವಶಕ್ಕೆ

ಉತ್ತರ ಪ್ರದೇಶದಲ್ಲೂ ಪ್ರತಿಭಟನೆಯ ಬಿಸಿ ಹೆಚ್ಚಿದೆ. ಬಾಘಪತ್, ಲಕ್ನೋ, ಲಖೀಮ್ ​ಪುರ್ ಖೇರಿ, ಬಿಜ್ನೋರ್, ಘಾಜಿಯಾಬಾದ್, ಮುಜಾಫರ್ ​ನಗರ್, ಬಾರಾಬಂಕಿ, ಮೊರಾದಾಬಾದ್ ಮೊದಲಾದೆಡೆ ಜನರು ರಸ್ತೆ ತಡೆ, ರೈಲು ತಡೆ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಲ್ಲಿನ ಹೆದ್ದಾರಿಗಳಲ್ಲಿ ಟ್ರಾಫಿಕ್ ಜಾಮ್ ಆಗಿದೆ.

ಬಿಹಾರದಲ್ಲಿ ಆರ್​ಜೆಡಿ ನೇತೃತ್ವದಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ. ಆ ಪಕ್ಷದ ನಾಯಕ ತೇಜಸ್ವಿ ಯಾದವ್ ಅವರು ಟ್ರಾಕ್ಟರ್ ಚಲಾಯಿಸಿಕೊಂಡು ಬಂದು ರೈತರ ಹೋರಾಟಕ್ಕೆ ಕೈಜೋಡಿಸಿದರು. ಮೋದಿ ಸರ್ಕಾರ ಕೃಷಿ ಕ್ಷೇತ್ರವನ್ನು ಕಾರ್ಪೊರೇಟೈಸ್ ಮಾಡಹೊರಟಿದೆ ಎಂದು ಟೀಕಿಸಿದ್ದಾರೆ. ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರು ಕೇಂದ್ರದ ಕೃಷಿ ನೀತಿಯಿಂದ ರೈತರನ್ನು ಗುಲಾಮರನ್ನಾಗಿ ಮಾಡಲಾಗುತ್ತಿದೆ. ರೈತರಿಗೆ ಬೆಲೆಯೂ ಸಿಕ್ಕಲ್ಲ, ಗೌರವವೂ ಸಿಕ್ಕಲ್ಲ. ಅವರದೇ ನೆಲದಲ್ಲಿ ಅವರು ಕಾರ್ಮಿಕರಾಗಿ ಕೆಲಸ ಮಾಡಬೇಕಾಗುತ್ತದೆ. ಈ ಅನ್ಯಾಯ ಜರುಗಲು ಬಿಡುವುದಿಲ್ಲ ಎಂದು ಪ್ರಿಯಾಂಕಾ ಗಾಂಧಿ ವಿಷಾದಿಸಿದ್ಧಾರೆ.
Published by: Vijayasarthy SN
First published: September 25, 2020, 12:09 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading