ಅಗ್ನಿಪಥ್ ಯೋಜನೆ ವಿರೋಧಿಸಿ ಇಂದು (ಜೂನ್ 20) ದೇಶದಲ್ಲಿ ವಿವಿಧ ಪ್ರತಿಭಟನಾಕಾರ ಗುಂಪುಗಳು ಭಾರತ್ ಬಂದ್‌ಗೆ (Bharat Bandh) ಕರೆ ನೀಡಿದ್ದು, ವಿವಿಧ ರಾಜ್ಯಗಳಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದಾರೆ. ಅಲ್ಲದೇ ಅಗ್ನಿಪಥ್ ಯೋಜನೆ ವಿರೋಧಿಸಿ ಹಿಂಸಾತ್ಮಕ ಪ್ರತಿಭಟನೆ ಮಾಡುತ್ತಿದ್ದ ಒಟ್ಟು 1000 ಜನರನ್ನು ದೇಶಾದ್ಯಂತ ಬಂಧಿಸಲಾಗಿದೆ. ಕೇಂದ್ರದ 'ಅಗ್ನಿಪಥ್', ಸೇನಾ ನೇಮಕಾತಿ ಯೋಜನೆ ವಿರುದ್ಧ ದೇಶದಲ್ಲಿ ವ್ಯಾಪಕ ಪ್ರತಿಭಟನೆಗಳು (Agnipath Protest Updates) ಮತ್ತು ಕೆಲವು ಸಂಘಟನೆಗಳು ಜೂನ್ 20 ರಂದು ಭಾರತ್ ಬಂದ್‌ಗೆ ಕರೆ ನೀಡಿದ ನಡುವೆ, ಹಿಂಸಾಚಾರ ಅಥವಾ ವಿನಾಶದಲ್ಲಿ ತೊಡಗಿರುವ ಯಾರನ್ನಾದರೂ ಬಂಧಿಸಲು ತನ್ನ ಸಂಪೂರ್ಣ ಪಡೆ ಕರ್ತವ್ಯದಲ್ಲಿದೆ ಎಂದು ಕೇರಳ ಪೊಲೀಸರು (Kerala Police) ಭಾನುವಾರ ಹೇಳಿದ್ದಾರೆ.
ಕಳೆದ ಐದು ದಿನಗಳಲ್ಲಿ ಕೇಂದ್ರದ ಅಗ್ನಿಪಥ್ ಯೋಜನೆ ವಿರುದ್ಧ ಹಿಂಸಾತ್ಮಕ ಪ್ರತಿಭಟನೆಗಳಲ್ಲಿ ಭಾಗವಹಿಸಿದ ಆರೋಪದಲ್ಲಿ ಭಾರತದಾದ್ಯಂತ 1,000 ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಸೋಮವಾರ ವರದಿ ಮಾಡಿದೆ. ಇಂದು ಭಾರತ್ ಬಂದ್‌ಗೆ ಕರೆ ಕೊಟ್ಟಿರುವುದರಿಂದ ಇನ್ನೂ ಎಲ್ಲೆಲ್ಲಿ ಏನೇನು ಘಟಿಸಲಿದೆ ಕಾದುನೋಡಬೇಕಿದೆ.
ಎಲ್ಲೆಲ್ಲಿ ಎಷ್ಟು ಜನರ ಬಂಧನ?
ಪೊಲೀಸರು ಒಟ್ಟು 1,238 ಜನರನ್ನು ಬಂಧಿಸಿದ್ದಾರೆ. ಈ ಪೈಕಿ ಬಿಹಾರದಲ್ಲಿ 805, ಉತ್ತರ ಪ್ರದೇಶದಲ್ಲಿ 387 ಮತ್ತು ತೆಲಂಗಾಣದ ಸಿಕಂದರಾಬಾದ್‌ನಲ್ಲಿ 46 ಪ್ರತಿಭಟನಾಕಾರರು ಸೇರಿದ್ದಾರೆ ಎಂದು ವರದಿಯಾಗಿದೆ.
ಕೇರಳ ಪೊಲೀಸರಿಂದ ಮಾರ್ಗಸೂಚಿ
ಸಾರ್ವಜನಿಕ ಆಸ್ತಿ. ಕೇರಳ ಪೊಲೀಸ್ ಮುಖ್ಯಸ್ಥ (ಎಸ್‌ಪಿಸಿ) ಅನಿಲ್ ಕಾಂತ್ ಅವರು ಸಾರ್ವಜನಿಕರ ಮೇಲಿನ ಹಿಂಸಾಚಾರವನ್ನು ತಡೆಗಟ್ಟಲು ಮತ್ತು ವ್ಯಾಪಾರಗಳನ್ನು ಬಲವಂತವಾಗಿ ಮುಚ್ಚುವುದನ್ನು ತಡೆಯಲು ಸಿಬ್ಬಂದಿಗೆ ಮಾರ್ಗಸೂಚಿಗಳನ್ನು ಹೊರಡಿಸಿದ್ದಾರೆ ಎಂದು ಕೇರಳ ಪೊಲೀಸ್ ಮಾಧ್ಯಮ ಕೇಂದ್ರದ ಪ್ರಕಟಣೆ ತಿಳಿಸಿದೆ.
West Bengal | Normal life continues in Siliguri, amid the call for #BharatBandh by some organisations against #AgnipathScheme
Public transport, including school buses, plying on the roads; Government offices remain open. Security personnel deployed in wake of the bandh call. pic.twitter.com/kb7O4RSxaf
— ANI (@ANI) June 20, 2022
ಪ್ರಮುಖ ಸ್ಥಳಗಳಲ್ಲಿ ಗಸ್ತು
ಜೂನ್ 20 ರಂದು ನ್ಯಾಯಾಲಯಗಳು, ಕೆಎಸ್‌ಇಬಿ ಕಚೇರಿಗಳು, ಕೆಎಸ್‌ಆರ್‌ಟಿಸಿ, ಖಾಸಗಿ ಬಸ್‌ಗಳು ಮತ್ತು ಸರ್ಕಾರಿ ಕಚೇರಿಗಳು ಮತ್ತು ಸಂಸ್ಥೆಗಳಿಗೆ ರಕ್ಷಣೆ ನೀಡುವಂತೆ ಎಸ್‌ಪಿಸಿ ಜಿಲ್ಲಾ ಪೊಲೀಸ್ ಮುಖ್ಯಸ್ಥರಿಗೆ ಸೂಚಿಸಿದೆ ಎಂದು ಕೇರಳ ಪೊಲೀಸರು ತಿಳಿಸಿದ್ದಾರೆ. ಇದಲ್ಲದೆ, ಇಂದು ರಾತ್ರಿಯಿಂದ ಪೊಲೀಸರು ಪ್ರಮುಖ ಸ್ಥಳಗಳಲ್ಲಿ ಗಸ್ತು ತಿರುಗಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಇದನ್ನೂ ಓದಿ: Agnipath Protest: ಅಗ್ನಿಪಥ್ ಕುರಿತು ಸುಳ್ಳು ಸುದ್ದಿ ಹರಡಿದ 35 ವಾಟ್ಸಾಪ್ ಗ್ರೂಪ್ಗಳು ಬ್ಯಾನ್; 10 ಮಂದಿ ಅರೆಸ್ಟ್
ಸಂಸತ್ನಲ್ಲಿ-ಯುವಕರ ಜೊತೆ ಚರ್ಚೆ ಮಾಡಿ
ಅಗ್ನಿಪಥ್ ಯೋಜನೆ ವಿರೋಧಿಸಿ ಇಂದು (ಜೂನ್ 20) ಜಂತರ್ ಮಂತರ್‌ನಲ್ಲಿ ಸತ್ಯಾಗ್ರಹ ಮಾಡಲಿದ್ದೇವೆ. ಜೊತೆಗೆ ಸಂಜೆ 5 ಗಂಟೆಗೆ ನಾವು ರಾಷ್ಟ್ರಪತಿಗಳನ್ನು ಭೇಟಿ ಮಾಡಿ ಅಗ್ನಿಪಥ್ ಯೋಜನೆಯನ್ನು ಹಿಂಪಡೆಯುವಂತೆ ಒತ್ತಾಯಿಸುತ್ತೇವೆ. ಈ ಯೋಜನೆಯ ಕುರಿತು ಮೊದಲು ಯುವಕರು ಜೊತೆ ಚರ್ಚಿಸಬೇಕು. ಸಂಸತ್ನಲ್ಲಿ ಚರ್ಚಿಸಬೇಕು. ಆದರೆ ಅದಕ್ಕೂ ಮೊದಲು ಅಗ್ನಿಪಥ್ ಯೋಜನೆಯನ್ನು ಜಾರಿಗೊಳಿಸಿರುವುದನ್ನು ಹಿಂಪಡೆಯಬೇಕು ಎಂದು ಕಾಂಗ್ರೆಸ್ ನಾಯಕ ಅಜಯ್ ಮಾಕನ್ ಆಗ್ರಹಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ