• Home
  • »
  • News
  • »
  • national-international
  • »
  • Kashmir Schools: ಸರ್ಕಾರಿ ಶಾಲೆಗಳಲ್ಲಿ ಭಜನೆ, ಸೂರ್ಯ ನಮಸ್ಕಾರಕ್ಕೆ ಮುಸ್ಲಿಂ ಸಂಘಟನೆಯಿಂದ ಭಾರೀ ವಿರೋಧ

Kashmir Schools: ಸರ್ಕಾರಿ ಶಾಲೆಗಳಲ್ಲಿ ಭಜನೆ, ಸೂರ್ಯ ನಮಸ್ಕಾರಕ್ಕೆ ಮುಸ್ಲಿಂ ಸಂಘಟನೆಯಿಂದ ಭಾರೀ ವಿರೋಧ

ಎಂಎಂಯು ಸಭೆ

ಎಂಎಂಯು ಸಭೆ

ಮುತ್ತಹಿದ್ ಮಜ್ಲಿಸ್ ಎ ಉಲೇಮಾ ಸಂಘಟನೆಯು ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಮುಸ್ಲಿಂ ವಿದ್ಯಾರ್ಥಿಗಳಿಗೆ ಹಿಂದೂ ಸ್ತುತಿಗೀತೆ ಅಂದರೆ ಭಜನೆ ಭಕ್ತಿಗೀತೆ ಹಾಡುವುದು ಹಾಗೂ ಸೂರ್ಯ ನಮಸ್ಕಾರ ಮಾಡುವಂತೆ ಹೇಳುತ್ತಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

  • Share this:

    ಶಾಲೆಗಳಲ್ಲಿ (Schools) ಪ್ರಾರ್ಥನೆ (Prayer) ಮತ್ತು ಭಜನೆ (Bhajans) ಹಾಗೂ ಸೂರ್ಯ ನಮಸ್ಕಾರ (Surya Namaskar), ಯೋಗ ಹಾಗೂ ವ್ಯಾಯಾಮ ಚಟುವಟಿಕೆಗಳನ್ನು ಮಾಡಿಸಲಾಗುತ್ತದೆ. ಆದರೆ ಇದಕ್ಕೆ ಈಗ ಮುತ್ತಹಿದ್ ಮಜ್ಲಿಸ್-ಎ-ಉಲೇಮಾ (MMU) ಸಂಘಟನೆ ವಿರೋಧ ವ್ಯಕ್ತಪಡಿಸಿದೆ. ಮುತ್ತಹಿದ್ ಮಜ್ಲಿಸ್-ಎ-ಉಲೇಮಾ ಇದು ಕಾಶ್ಮೀರದ ವಿವಿಧ ಧಾರ್ಮಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಸಂಸ್ಥೆಗಳ ಸಮೂಹವಾಗಿದೆ. ಇದು ಈಗ ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಮುಸ್ಲಿಂ ವಿದ್ಯಾರ್ಥಿಗಳಿಗೆ, ಹಿಂದೂ ಸ್ತುತಿಗೀತೆ, ಭಜನೆ ಮತ್ತು ಸೂರ್ಯ ನಮಸ್ಕಾರ ಮಾಡಲು ತಿಳಿಸಿರುವುದು ಸರಿಯಲ್ಲ ಎಂದು ಹೇಳಿದೆ. ಮತ್ತು ಇದನ್ನು ತಡೆಯುವಂತೆ ಮುತ್ತಹಿದ್ ಮಜ್ಲಿಸ್-ಎ-ಉಲೇಮಾ ಸಂಸ್ಥೆಯು ಸರ್ಕಾರಕ್ಕೆ ಮನವಿ ಮಾಡಿದೆ.  


    ಸರ್ಕಾರಿ ಶಾಲೆಗಳಲ್ಲಿ ಭಜನೆ, ಸೂರ್ಯ ನಮಸ್ಕಾರ ಚಟುವಟಿಕೆಗೆ ಎಂಎಂಯು ವಿರೋಧ
    ವಿವಿಧ ಧಾರ್ಮಿಕ ಮತ್ತು ಸಾಮಾಜಿಕ  ಶೈಕ್ಷಣಿಕ ಸಂಸ್ಥೆಗಳನ್ನು ಒಳಗೊಂಡ ಸಂಸ್ಥೆಗಳ ಸಮೂಹವಾಗಿರುವ ಮುತ್ತಹಿದ್ ಮಜ್ಲಿಸ್-ಎ-ಉಲೇಮಾ (ಎಂಎಂಯು) ಸಂಘಟನೆಯು ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಮುಸ್ಲಿಂ ವಿದ್ಯಾರ್ಥಿಗಳಿಗೆ, ಹಿಂದೂ ಸ್ತುತಿಗೀತೆ ಅಂದರೆ ಭಜನೆ, ಭಕ್ತಿಗೀತೆ ಹಾಡುವುದು ಹಾಗೂ ಸೂರ್ಯ ನಮಸ್ಕಾರ ಮಾಡುವಂತೆ ಹೇಳುತ್ತಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.


    ಹಿಂದುತ್ವ ಅಜೆಂಡಾವನ್ನು ಮುನ್ನಡೆಸುವ ಉದ್ದೇಶದಿಂದ ಕಣಿವೆ ರಾಜ್ಯ ಜಮ್ಮುಕಾಶ್ಮೀರದ ಶಾಲೆಗಳು ಮತ್ತು ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಭಜನೆ, ಭಕ್ತಿಗೀತೆ ಹಾಡುವುದು ಹಾಗೂ ಸೂರ್ಯ ನಮಸ್ಕಾರ ಮಾಡುವಂತೆ ಹೇಳಲಾಗುತ್ತಿದೆ. ಈ ಮೂಲಕ ಹಿಂದುತ್ವ ಅಜೆಂಡಾವನ್ನು ಕಾರ್ಯಗತಗೊಳಿಸುತ್ತಿರುವ ಚಟುವಟಿಕೆಯನ್ನು ತೀವ್ರವಾಗಿ ವಿರೋಧಿಸುವುದಾಗಿ ಎಂಎಂಯು ಹೇಳಿದೆ.


    ಇದನ್ನೂ ಓದಿ: SSC, HSC ಪರೀಕ್ಷೆಗಳ ಟೈಮ್ ಟೇಬಲ್​ಗಳನ್ನು ಮನೆಯಲ್ಲಿಯೇ ಕೂತು ನೋಡಿ, ಯಾವ ವೆಬ್​ಸೈಟ್​ನಲ್ಲಿ ಲಭ್ಯವಿದೆ?


    ಕಾಶ್ಮೀರದ ಜಾಮಾ ಮಸೀದಿಯಲ್ಲಿ ಎಂಎಂಯು ಸಭೆ
    ಶಾಲೆಗಳು ಮತ್ತು ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಮುಸ್ಲಿಂ ವಿದ್ಯಾರ್ಥಿಗಳಿಗೆ, ಹಿಂದೂ ಧಾರ್ಮಿಕ ಗೀತೆಗಳನ್ನು ಹಾಡಲು ಮತ್ತು ಸೂರ್ಯ ನಮಸ್ಕಾರ ಮಾಡುವಂತೆ ಹೇಳುವ ಮೂಲಕ ಕಾಶ್ಮೀರದ ಮುಸ್ಲಿಂ ಗುರುತನ್ನು ದುರ್ಬಲಗೊಳಿಸುವ ಪ್ರಯತ್ನ ಮಾಡಲಾಗ್ತಿದೆ ಎಂದು ಎಂಎಂಯು ಆರೋಪಿಸಿದೆ. ಈ ಕುರಿತು ಇಲ್ಲಿನ ಜಾಮಾ ಮಸೀದಿಯಲ್ಲಿ ಸಭೆ ಕೂಡ ನಡೆಸಿರುವುದಾಗಿ ಎಂಎಂಯು ಹೇಳಿಕೆಯಲ್ಲಿ ತಿಳಿಸಿದೆ.


    ಈ ರೀತಿ ಸರ್ಕಾರಿ ಶೈಕ್ಷಣಿಕ ಸಂಸ್ಥೆಗಳಲ್ಲಿ ಹಿಂದೂ ಭಜನಾ ಗೀತೆ ಹಾಡಿಸುವುದು, ಸೂರ್ಯ ನಮಸ್ಕಾರದಂತ ಚಟುವಟಿಕೆ ಮಾಡಿಸುವುದು ಮುಸ್ಲಿಮರ ಧಾರ್ಮಿಕ ಭಾವನೆಯನ್ನು ಘಾಸಿಗೊಳಿಸುತ್ತವೆ. ಹಾಗೂ ಅವರಲ್ಲಿ ಅಸಮಾಧಾನ ಉಂಟು ಮಾಡುತ್ತದೆ ಎಂದಿದೆ.


    ಜಮ್ಮು ಕಾಶ್ಮೀರದಲ್ಲಿ ಮುಸ್ಲಿಂ ಗುರುತನ್ನು ದುರ್ಬಲಗೊಳಿಸುವ ಹುನ್ನಾರ


    ಸಭೆಯಲ್ಲಿ ಸರ್ವಾನುಮತದಿಂದ ನಿರ್ಣಯ ಅಂಗೀಕರಿಸಲಾಗಿದೆ. ಕಣಿವೆ ರಾಜ್ಯ ಜಮ್ಮು ಕಾಶ್ಮೀರದಲ್ಲಿ ಮುಸ್ಲಿಂ ಗುರುತನ್ನು ದುರ್ಬಲಗೊಳಿಸುವ ಹುನ್ನಾರ ಇದಾಗಿದೆ ಎಂದು ಗಂಭೀರ ಕಳವಳ ವ್ಯಕ್ತಪಡಿಸಿದ್ದಾಗಿ ಸಂಘಟನೆ ಹೇಳಿದೆ.


    ಇತ್ತೀಚಿಗೆ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ರಘುಪತಿ ರಾಘವ್ ರಾಜಾ ರಾಮ್ ಎಂದು ಹಾಡುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಇದು ಗಮನಿಸಬೇಕಾದ ಸಂಗತಿ. ಸರ್ಕಾರಿ ಶಾಲೆಗಳಲ್ಲಿ ತಮ್ಮ ಮಕ್ಕಳಿಗೆ ಹಿಂದೂ ಭಜನೆ, ಸೂರ್ಯ ನಮಸ್ಕಾರದಂತ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಒತ್ತಾಯಿಸಿದರೆ, ಅಂತಹ ಶಾಲೆಗಳಿಂದ ಮಕ್ಕಳನ್ನು ಹೊರತೆಗೆದು ಖಾಸಗಿ ಶಾಲೆಗಳಿಗೆ ಸೇರಿಸಬೇಕು ಎಂದು ಎಂಎಂಯು ಪೋಷಕರನ್ನು ಒತ್ತಾಯಿಸಿದೆ.


    ಕಾಶ್ಮೀರದ ಮುಸ್ಲಿಮರಿಗೆ ಬಹಳ ಕಳವಳಕಾರಿ ಸಂಗತಿ- ಎಂಎಂಯು
    ಎಂಎಂಯು ಕಾಶ್ಮೀರದ ಶಾಲೆಗಳಲ್ಲಿ ಹಿಂದೂ ಗೀತೆಗಳ ಅನುಷ್ಠಾನವನ್ನು ಬಲವಾಗಿ ವಿರೋಧಿಸುತ್ತೇವೆ ಎಂದು ಹೇಳಿದೆ. ಶಾಲೆಯಲ್ಲಿ ಬೆಳಗಿನ ಪ್ರಾರ್ಥನೆಯ ಸಮಯದಲ್ಲಿ ಹಿಂದೂ ಸ್ತೋತ್ರಗಳನ್ನು ಹಾಡುವುದು. ಕಾಶ್ಮೀರದ ಮುಸ್ಲಿಮರಿಗೆ ಬಹಳ ಕಳವಳಕಾರಿ ಮತ್ತು ಧಾರ್ಮಿಕ ಗುರುತನ್ನು ದುರ್ಬಲಗೊಳಿಸುವ ಪ್ರಯತ್ನ ಎಂದು ಎಂಎಂಯು ದೂರಿದೆ.


    ನಮ್ಮ ಧರ್ಮ ಮತ್ತು ಇಸ್ಲಾಮಿಕ್ ಗುರುತನ್ನು ರಕ್ಷಿಸುವುದು ಮುಸ್ಲಿಮರಾದ ನಮ್ಮ ಮೂಲಭೂತ ಧಾರ್ಮಿಕ ಜವಾಬ್ದಾರಿ. ಸರ್ಕಾರ, ಶಿಕ್ಷಣ ಇಲಾಖೆ ಅಥವಾ ಯಾವುದೇ ಇತರ ಸಂಸ್ಥೆಗಳ ಉದ್ದೇಶಪೂರ್ವಕ ಹಸ್ತಕ್ಷೇಪವನ್ನು ತಾವು ಒಪ್ಪುವುದಿಲ್ಲ.


    ಇದನ್ನೂ ಓದಿ: ಇತರ ವಿದ್ಯಾರ್ಥಿಗಳ ಮುಂದೆ ಬಾಲಕಿಯ ಯುನಿಫಾರ್ಮ್ ಕಳಚಿಸಿದ ಶಿಕ್ಷಕ


    ಯುವ ಪೀಳಿಗೆಯನ್ನು ಇಸ್ಲಾಮಿಕ್ ನಂಬಿಕೆ ಮತ್ತು ಗುರುತುಗಳಿಂದ ದೂರವಿಡುವುದು, ಹಿಂದುತ್ವ ಕಲ್ಪನೆ ಮತ್ತು ಏಕೀಕರಣ ವೇಗಗೊಳಿಸಲು ಸರ್ಕಾರಿ ಶಿಕ್ಷಣ ಸಂಸ್ಥೆಗಳನ್ನು ಬಳಕೆ ಮಾಡಲಾಗ್ತಿದೆ ಎಂದು ಎಂಎಂಯು ಆರೋಪಿಸಿದೆ.

    Published by:renukadariyannavar
    First published: