Bhagwant Mann: ಪಂಜಾಬ್ ನೂತನ ಸಿಎಂ ಪ್ರತಿಜ್ಞಾ ವಿಧಿ ಸ್ವೀಕರಿಸುವುದು ರಾಜಭವನದಲ್ಲಿ ಅಲ್ವಂತೆ! ಮತ್ತೆಲ್ಲಿ ಅಧಿಕಾರಿ ಸ್ವೀಕರಿಸ್ತಾರೆ ಭಗವಂತ್ ಮಾನ್?

ಸಾಮಾನ್ಯವಾಗಿ ಸಿಎಂ ಹಾಗೂ ಸರ್ಕಾರದ ಸಚಿವರು ಆಯಾ ರಾಜ್ಯಗಳ ರಾಜಭವನದಲ್ಲೇ, ರಾಜ್ಯಪಾಲರ ಎದುರು ಅಧಿಕಾರ ಸ್ವೀಕರಿಸುತ್ತಾರೆ. ಈ ಬಾರಿ ಭಗವಂತ್ ಮಾನ್ ಈ ಸಂಪ್ರದಾಯವನ್ನು ಬದಲಾಯಿಸುವುದಾಗಿ ಹೇಳಿದ್ದಾರೆ. ಅಂದರೆ "ಈ ಬಾರಿ ನಾನು ರಾಜಭವನದಲ್ಲಿ ಸಿಎಂ ಆಗಿ ಅಧಿಕಾರ ಸ್ವೀಕಾರ ಮಾಡುವುದಿಲ್ಲ" ಎಂದು ಹೇಳಿದ್ದಾರೆ.

ಭಗವಂತ್ ಮಾನ್

ಭಗವಂತ್ ಮಾನ್

  • Share this:
Punjab Election Results 2022: ಪಂಜಾಬ್‌ನಲ್ಲಿ (Punjab) ಆಮ್‌ ಆದ್ಮಿ ಪಕ್ಷ (Aam Admi Party) ಅಧಿಪತ್ಯ ಸಾಧಿಸಿದೆ. ದೆಹಲಿಯ (Delhi) ಜೊತೆಗೆ ಪಕ್ಕದ ಪಂಜಾಬ್‌ನಲ್ಲೂ ಆಮ್ ಆದ್ಮಿ ಅಧಿಕಾರ ವಿಸ್ತರಣೆ ಆಗಲಿದೆ. ಸದ್ಯ 117 ಸ್ಥಾನಗಳ ಪೈಕಿ 92ರಲ್ಲಿ ಆಮ್‌ ಆದ್ಮಿ ಕಮಾಲ್ ಮಾಡಿದ್ದಾನೆ. ಎಎಪಿ ಪಂಜಾಬ್ ಅಧಿಕಾರದ ಚುಕ್ಕಾಣಿ ಹಿಡಿಯೋದು ಪಕ್ಕಾ ಆಗಿದೆ. ಆಮ್‌ ಆದ್ಮಿ ಪಕ್ಷದ ಮುಖ್ಯಮಂತ್ರಿ (CM) ಅಭ್ಯರ್ಥಿಯಾಗಿ (Candidate) ಸ್ಫರ್ಧಿಸಿದ ಭಗವಂತ್‌ ಮಾನ್‌ (Bhagwant Mann) ಗೆಲುವು ಸಾಧಿಸಿದ್ದಾರೆ. ಧುರಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವ ಭಗವಂತ್‌ ಮಾನ್‌ ಅವರು ಕಾಂಗ್ರೆಸ್‌ ಶಾಸಕ ದಲ್ಬೀರ್‌ ಗೋಲ್ಡಿ ಅವರ ವಿರುದ್ಧ ಅಭೂತ ಪೂರ್ವ ಗೆಲವುು ದಾಖಲಿಸಿದ್ದಾರೆ. ಕಳೆದ ಬಾರಿ ನಡೆದ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದ ಭಗವಂತ್‌ ಮಾನ್‌ ಅವರು ಈಗ ವಿಧಾನಸಭಾ ಚುನಾವಣೆಯಲ್ಲೂ ಗೆದ್ದು ಬೀಗಿದ್ದಾರೆ. ಬರೋಬ್ಬರಿ 58,206 ಮತಗಳ ಅಂತರದಿಂದ ಭಗವಂತ್ ಮಾನ್ ಗೆದ್ದಿದ್ದಾರೆ.

 ಸಿಎಂ ಸ್ಥಾನಕ್ಕೆ ಏರಲಿರುವ ಭಗವಂತ್ ಮಾನ್

 ಭಗವಂತ್ ಮಾನ್ ಅವರನ್ನು ಎಎಪಿ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಈಗಾಗಲೇ ಘೋಷಿಸಲಾಗಿತ್ತು. ಇದೀಗ ಧುರಿ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ದಲ್ಬೀರ್‌ ಗೋಲ್ಡಿ ಅವರನ್ನು ಸೋಲಿಸಿ, ಭಗವಂತ್ ಮಾನ್ ಗೆಲುವಿನ ನಗೆ ಬೀರಿದ್ದಾರೆ. ಹೀಗಾಗಿ ಅವರೇ ಈ ಬಾರಿ ಪಂಜಾಬ್‌ನ ಮುಖ್ಯಮಂತ್ರಿಯಾಗಿ ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದಾರೆ.

ಈ ಬಾರಿ ರಾಜಭವನದಲ್ಲಿ ನಡೆಯುವುದಿಲ್ಲ ಪ್ರಮಾಣ ವಚನ!

ಸಾಮಾನ್ಯವಾಗಿ ಸಿಎಂ ಹಾಗೂ ಸರ್ಕಾರದ ಸಚಿವರು ಆಯಾ ರಾಜ್ಯಗಳ ರಾಜಭವನದಲ್ಲೇ, ರಾಜ್ಯಪಾಲರ ಎದುರು ಅಧಿಕಾರ ಸ್ವೀಕರಿಸುತ್ತಾರೆ. ಈ ಬಾರಿ ಭಗವಂತ್ ಮಾನ್ ಈ ಸಂಪ್ರದಾಯವನ್ನು ಬದಲಾಯಿಸುವುದಾಗಿ ಹೇಳಿದ್ದಾರೆ. ಅಂದರೆ ಈ ಬಾರಿ ನಾನು ರಾಜಭವನದಲ್ಲಿ ಸಿಎಂ ಆಗಿ ಅಧಿಕಾರ ಸ್ವೀಕಾರ ಮಾಡುವುದಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: Bhagwant Mann Profile: ಸ್ಟ್ಯಾಂಡ್ ಅಪ್ ಕಾಮಿಡಿಯನ್ ಆಗಿದ್ದ ಭಗವಂತ್ ಮಾನ್‌ ಪಂಜಾಬ್ ಸಿಎಂ ಆಗುವ ಮಟ್ಟಕ್ಕೆ ಬೆಳೆದಿದ್ದು ಹೇಗೆ?

 ಭಗತ್ ಸಿಂಗ್ ಹುಟ್ಟಿದ ಊರಿನಲ್ಲಿ ಸಿಎಂ ಪ್ರಮಾಣ ವಚನ ಸ್ವೀಕಾರ

ಕ್ರಾಂತಿವೀರ, ಸ್ವಾತಂತ್ರ್ಯ ಸೇನಾನಿ ಭಗತ್ ಸಿಂಗ್ ಅವರು ಜನಿಸಿದ ಊರಿನಲ್ಲಿ ಅಧಿಕಾರ ಸ್ವೀಕಾರ ಮಾಡುವುದಾಗಿ ಭವಗಂತ್ ಮಾನ್ ಹೇಳಿದ್ದಾರೆ. ಎಎಪಿ ಪಂಜಾಬ್‌ನಲ್ಲಿ ಭರ್ಜರಿ ಬಹುಮತ ಪಡೆದಾಗ ಸಂಗ್ರೂರ್‌ನಲ್ಲಿ ಭರ್ಜರಿ ವಿಜಯೋತ್ಸವ ನಡೆಯಿತು. ಈ ವೇಳೆ ಮಾತನಾಡಿದ ಭಗವಂತ್ ಮಾನ್, ಈ ವಿಚಾರ ತಿಳಿಸಿದ್ದಾರೆ.

ಖಟ್ಕರ್ ಕಾಲನ್ ಗ್ರಾಮದಲ್ಲಿ ಸಿಎಂ ಅಧಿಕಾರ ಸ್ವೀಕಾರ

ಭಗತ್ ಸಿಂಗ್ ಅವರ ಖಟ್ಕರ್ ಕಾಲನ್ ಗ್ರಾಮದಲ್ಲಿ ಪಂಜಾಬ್ ಸಿಎಂ ಆಗಿ ಅಧಿಕಾರ ಸ್ವೀಕಾರ ಮಾಡುವುದಾಗಿ ಭಗವಂತ್ ಮಾನ್ ಹೇಳಿದ್ದಾರೆ. ಪಂಜಾಬ್ ಜನರು ಭಾವನಾತ್ಮಕ ಬಂಧ ಹೊಂದಿರುವ ಭಗತ್ ಸಿಂಗ್ ಅವರ ಗ್ರಾಮದಲ್ಲೇ ಅಧಿಕಾರ ಸ್ವೀಕರಿಸಿ, ಹೊಸ ಸಂಪ್ರದಾಯಕ್ಕೆ ನಾಂದಿ ಹಾಡುತ್ತೇನೆ ಅಂತ ಅವರು ಹೇಳಿದ್ದಾರೆ.

ಕಚೇರಿಗಳಲ್ಲಿ ಭಗತ್ ಸಿಂಗ್, ಅಂಬೇಡ್ಕರ್ ಭಾವಚಿತ್ರ

"ಸಿಎಂ ಕಚೇರಿ ಸೇರಿದಂತೆ ಎಲ್ಲಾ ಕಚೇರಿಗಳಲ್ಲಿ ಸಹೀದ್ ಭಗತ್ ಸಿಂಗ್ ಮತ್ತು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಚಿತ್ರ ಮಾತ್ರ ಇರಲಿದೆ. ನಾನು ರಾಜಭವನದಲ್ಲಿ ಪ್ರಮಾಣವಚನ ಸ್ವೀಕರಿಸುವ ಬದಲು ಭಗತ್ ಸಿಂಗ್ ಅವರ ಜನ್ಮಸ್ಥಳವಾದ ಖಟ್ಕರ್ ಕಲಾನ್‌ನಲ್ಲಿ ಪ್ರಮಾಣವಚನ ಸ್ವೀಕರಿಸುತ್ತೇನೆ" ಎಂದು ಭಗವಂತ್ ಮಾನ್ ಹೇಳಿದ್ದಾರೆ. ಮುಂದೆ ಪ್ರಮಾಣ ವಚನ ಸಮಾರಂಭದ ದಿನಾಂಕವನ್ನು ನಂತರ ಪ್ರಕಟಿಸಲಾಗುವುದು ಎಂದು ಅವರು ಹೇಳಿದರು.

ಇದನ್ನೂ ಓದಿ: N Biren Singh: BSF ಯೋಧ, ಫುಟ್​ಬಾಲ್ ಆಟಗಾರ ಬಿರೇನ್ ಸಿಂಗ್​ಗೆ 2ನೇ ಬಾರಿ ಮಣಿಪುರ ಸಿಎಂ ಆಗೋ ಯೋಗ

ಒಟ್ಟಾಗಿ ಕೆಲಸ ಮಾಡೋಣ ಅಂತ ಪಂಜಾಬ್ ಜನರಲ್ಲಿ ಮನವಿ

ಜನರು ಒಗ್ಗಟ್ಟಿನಿಂದ ಕೆಲಸ ಮಾಡುವಂತೆ ಮನವಿ ಮಾಡಿದ ಅವರು, ಎಪಿಪಿಗೆ ಮತ ಹಾಕದವರು ಆತಂಕಪಡುವ ಅಗತ್ಯವಿಲ್ಲ, ಏಕೆಂದರೆ ಸರ್ಕಾರವು ಸಮಾಜದ ಎಲ್ಲಾ ವರ್ಗದವರಿಗೆ ಕೆಲಸ ಮಾಡುತ್ತದೆ ಅಂತ ಭಗವಂತ್ ಮಾನ್ ತಿಳಿಸಿದ್ದಾರೆ.
Published by:Annappa Achari
First published: