Bhagwant Mann Profile: ಸ್ಟ್ಯಾಂಡ್ ಅಪ್ ಕಾಮಿಡಿಯನ್ ಆಗಿದ್ದ ಭಗವಂತ್ ಮಾನ್‌ ಪಂಜಾಬ್ ಸಿಎಂ ಆಗುವ ಮಟ್ಟಕ್ಕೆ ಬೆಳೆದಿದ್ದು ಹೇಗೆ?

Punjab Election Results 2022: ಇನ್ನು 2019 ರಲ್ಲಿ ಪಂಜಾಬ್‌ನಲ್ಲಿ ನಡೆದ ರ‍್ಯಾಲಿಯಲ್ಲಿ ಅವರು ಇನ್ನು ಮುಂದೆ ಮದ್ಯ ಸೇವಿಸುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದರು.

ಭಗವಂತ್ ಮಾನ್‌ ಆಮ್ ಆದ್ಮಿ ಶಕ್ತಿ

ಭಗವಂತ್ ಮಾನ್‌ ಆಮ್ ಆದ್ಮಿ ಶಕ್ತಿ

  • Share this:
2022 ರ ಪಂಜಾಬ್ ಅಸೆಂಬ್ಲಿ ಚುನಾವಣೆಯ ಮತ ಎಣಿಕೆ (Punjab Assembly Election Result Updates) ಬೆಳಗ್ಗೆ 8 ಗಂಟೆಯಿಂದಲೇ ಆರಂಭವಾಗಿದ್ದು, ಈಗಾಗಲೇ ಫಲಿತಾಂಶ ಹೊರಹೊಮ್ಮುತ್ತಿದೆ. ಈವರೆಗಿನ ಫಲಿತಾಂಶದ ಪ್ರಕಾರ, ಆಡಳಿತಾರೂಢ ಕಾಂಗ್ರೆಸ್‌ (Punjab Congress) ಧೂಳೀಪಟವಾಗಿದ್ದು, ಎಎಪಿ (AAP) ಪಕ್ಷಕ್ಕೆ ಅಧಿಕಾರ ಸಿಗುವ ಸಾಧ್ಯತೆ ನಿಚ್ಚಳವಾಗುತ್ತಿದೆ. ಈ ಹಿನ್ನೆಲೆ ಆಮ್‌ ಆದ್ಮಿ ಪಕ್ಷದ ಸಿಎಂ ಅಭ್ಯರ್ಥಿ ಭಗವಂತ್‌ ಮಾನ್‌ ಪಂಜಾಬ್‌ನ ಮುಂದಿನ ಸಿಎಂ (Bhagwant Mann Profile) ಆಗುವ ಎಲ್ಲ ಸಾಧ್ಯತೆಗಳಿವೆ.  ಅಷ್ಟಕ್ಕೂ ಭಗವಂತ್ ಮಾನ್‌ ಯಾರು? ಇಲ್ಲಿದೆ ಅವರ ಜೀವನದ ಕುತೂಹಲಕರ ಮಾಹಿತಿ.

ನಟರಾಗಿದ್ದ ಭಗವಂತ್ ಮಾನ್‌, ನಂತರ ರಾಜಕಾರಣಿಯಾಗಿ ಬದಲಾದರು. ಪಂಜಾಬ್‌ನಲ್ಲಿ ಅರವಿಂದ್ ಕೇಜ್ರಿವಾಲ್‌  (Arvind Kejriwal) ನಾಯಕತ್ವದ ಆಮ್‌ ಆದ್ಮಿ ಪಕ್ಷವನ್ನು ಬೆಳೆಸಲು ಇವರ ಪಾಲೂ ಮೇಲ್ಪಂಕ್ತಿಯಲ್ಲಿದೆ ಇದೆ ಎಂದರೆ ತಪ್ಪಾಗುವುದಿಲ್ಲ.

ಪಂಜಾಬ್​ನಲ್ಲಿ ಮೊದಲ ಬಾರಿಗೆ ಅಧಿಕಾರ
ಪಂಜಾಬ್‌ನಲ್ಲಿ ಈವರೆಗೆ ಆಪ್‌ ಪಕ್ಷ ಅಧಿಕಾರಕ್ಕೆ ಬಂದಿರಲಿಲ್ಲ. ಆದರೆ, ಈ ಬಾರಿ ಬಿಜೆಪಿ, ಕಾಂಗ್ರೆಸ್‌, ಅಕಾಲಿ ದಳ, ಮಾಜಿ ಸಿಎಂ ಅಮರಿಂದರ್‌ ಸಿಂಗ್ ಅವರ ಹೊಸ ಪಕ್ಷ ಪಂಜಾಬ್‌ ಲೋಕ್‌ ಕಾಂಗ್ರೆಸ್‌ - ಹೀಗೆ ಎಲ್ಲ ಪಕ್ಷಗಳನ್ನು ಹಿಂದಿಕ್ಕಿ ಸ್ಪಷ್ಟ ಬಹುಮತ ಪಡೆದುಕೊಳ್ಳುತ್ತಿರುವುದು ಫಲಿತಾಂಶಗಳಲ್ಲಿ ನಿಚ್ಚಳವಾಗಿದೆ.

ಹಿಂದಿನ ಸೋಲಿಂದ ಪಾಠ ಕಲಿತರು!
2017 ರ ಪಂಜಾಬ್ ಅಸೆಂಬ್ಲಿ ಚುನಾವಣೆಯಲ್ಲಿ, ಆಮ್ ಆದ್ಮಿ ಪಕ್ಷವು ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸದೆ ಚುನಾವಣೆಗೆ ಹೋಯಿತು. ಅಲ್ಲದೆ, ಸರ್ಕಾರ ರಚಿಸಲು ವಿಫಲವಾಗಿತ್ತು. ಆದರೆ, ಈ ಬಾರಿ ಯಾವುದೇ ರಿಸ್ಕ್‌ ತೆಗೆದುಕೊಳ್ಳದೆ ಸಂಗ್ರೂರು ಸಂಸದ ಭಗವಂತ ಮಾನ್‌ರನ್ನು ಸಿಎಂ ಅಭ್ಯರ್ಥಿ ಎಂದು ಹೆಸರಿಸಿದೆ.

ವಿವಾದಗಳ ನೆನಪಾಗುತ್ತದೆ
48 ವರ್ಷದ ಭಗವಂತ್ ಮಾನ್ ಅವರು ಅಕ್ಟೋಬರ್ 17, 1973 ರಂದು ಸಂಗ್ರೂರಿನ ಸರ್ತೋಜ್ ಗ್ರಾಮದಲ್ಲಿ ಜನಿಸಿದರು. ಹಾಸ್ಯನಟ-ನಟ ಕಮ್‌ ರಾಜಕಾರಣಿಯಾಗಿ ಪರಿವರ್ತನೆಗೊಂಡ ಮಾನ್ ವಿವಾದಗಳ ನೆಚ್ಚಿನ ಮಗು ಎನಿಸಿಕೊಂಡಿದ್ದಾರೆ.

ಇದನ್ನೂ ಓದಿ: Yogi Adityanath Rare Photos: ಅಜಯ್ ಸಿಂಗ್ ಬಿಷ್ಟ್ ಯೋಗಿ ಆದಿತ್ಯನಾಥ್ ಆದ ರೋಚಕ ಕಥೆ!

ಜ್ಯಾಟ್‌ ಸಿಖ್ ಸಮುದಾಯದ ಭಗವಂತ್ ಮಾನ್, ಪಂಜಾಬ್‌ನ ಸಂಗ್ರೂರ್ ಕ್ಷೇತ್ರದ ಲೋಕಸಭಾ ಸಂಸದರಾಗಿದ್ದಾರೆ. ಭಗವಂತ್ ಮಾನ್ ಒಂದು ದಶಕದ ಹಿಂದೆ ಅಂದರೆ, 2011 ರಲ್ಲಿ ಪೀಪಲ್ಸ್ ಪಾರ್ಟಿ ಆಫ್ ಪಂಜಾಬ್ ಮೂಲಕ ರಾಜಕೀಯ ಪ್ರವೇಶಿಸಿದರು. ಅವರು ಮೊದಲು 2012 ರಲ್ಲಿ ಪಂಜಾಬ್‌ನ ಲೆಹ್ರಾ ಕ್ಷೇತ್ರಕ್ಕೆ ಸ್ಪರ್ಧಿಸಿದ್ದರು. ಆದರೆ, ಆ ವೇಳೆ ಸಂಸದರಾಗಲು ವಿಫಲರಾಗಿದ್ದರು.

ಆಮ್ ಆದ್ಮಿಗೆ ಸೇರಿದ್ದು ಎಂದು?
ನಂತರ ಆಮ್ ಆದ್ಮಿ ಪಕ್ಷ (ಎಎಪಿ) 2014 ರಲ್ಲಿ ಹಾಸ್ಯನಟ ಕಮ್‌ ರಾಜಕಾರಣಿಯನ್ನು ತಮ್ಮ ಪಕ್ಷಕ್ಕೆ ಸೇರಿಸಿಕೊಂಡಿತು. ಮಾನ್ 2014 ರಲ್ಲಿ ಸಂಗ್ರೂರ್ ಕ್ಷೇತ್ರದಿಂದ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸಿ ಮೊದಲ ಬಾರಿಗೆ ಸಂಸದರಾಗಿದ್ದರು.

ಅವರು 2019 ರಲ್ಲಿ ಮತ್ತೆ ಅದೇ ಸ್ಥಾನದಿಂದ ಗೆದ್ದು ತಮ್ಮ ಯಶಸ್ಸನ್ನು ಪುನರಾವರ್ತಿಸಿದರು ಮತ್ತು ಪ್ರಸ್ತುತ ಪಂಜಾಬ್‌ನ ಏಕೈಕ ಎಎಪಿ ಸಂಸದರಾಗಿದ್ದಾರೆ.

ಆ ವೇಳೆ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಕೇವಲ್ ಧಿಲ್ಲೋನ್ ಅವರನ್ನು 1,10,211 ಮತಗಳ ಅಂತರದಿಂದ ಸೋಲಿಸಿ ಸತತ ಎರಡನೇ ಬಾರಿಗೆ ಸಂಸದರಾಗಿ ಸ್ಥಾನ ಪಡೆದರು.

ಮದ್ಯ ಸೇವನೆ ಮಾಡಲ್ಲ ಎಂದು ಘೋಷಣೆ!
ಇನ್ನು 2019 ರಲ್ಲಿ ಪಂಜಾಬ್‌ನಲ್ಲಿ ನಡೆದ ರ‍್ಯಾಲಿಯಲ್ಲಿ ಅವರು ಇನ್ನು ಮುಂದೆ ಮದ್ಯ ಸೇವಿಸುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದರು.

ಸ್ಟ್ಯಾಂಡ್-ಅಪ್ ಕಾಮಿಡಿಯನ್ ಆಗಿದ್ದ ಭಗವಂತ್ ಮಾನ್‌..!
ಪಂಜಾಬ್‌ನ ಮುಂದಿನ ಸಿಎಂ ಎಂದೇ ಬಿಂಬಿತರಾಗಿರುವ ಭಗವಂತ್ ಮಾನ್‌ ಅವರು ದೂರದರ್ಶನ ಕಾರ್ಯಕ್ರಮ 'ದಿ ಗ್ರೇಟ್ ಇಂಡಿಯನ್ ಲಾಫ್ಟರ್ ಚಾಲೆಂಜ್' ನಲ್ಲಿ ಸ್ಟ್ಯಾಂಡ್-ಅಪ್ ಕಾಮಿಡಿಯನ್ ಆಗಿ ಕೆಲಸ ಮಾಡಿದ್ದರು. ಭಗವಂತ್ ಮಾನ್ ಸಂಗ್ರೂರ್ ಜಿಲ್ಲೆಯ ಧುರಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದು, ಗೆಲುವಿನ ಭರವಸೆಯನ್ನೂ ಹೊಂದಿದ್ದಾರೆ.

ಇದನ್ನೂ ಓದಿ: Punjab Election Result: ಇನ್ನೂ ಫಲಿತಾಂಶವೇ ಬಂದಿಲ್ಲ.. ಆಗಲೇ AAP ನಾಯಕನ ಮನೆಯಲ್ಲಿ ಕೆಜಿಗಟ್ಟಲೇ ಜಿಲೇಬಿ ತಯಾರಿ!

ಭಗವಂತ್ ಮಾನ್‌ ಅವರು ವಿಶೇಷ ಅಗತ್ಯವುಳ್ಳ ಮಕ್ಕಳ ಮೇಲೆ ಕೇಂದ್ರೀಕರಿಸುವ ತಮ್ಮದೇ ಆದ ಚಾರಿಟಬಲ್ ಫೌಂಡೇಶನ್‌ ಆದ ಲೋಕ್ ಲೆಹರ್ ಫೌಂಡೇಶನ್ ಅನ್ನು ಹೊಂದಿದ್ದಾರೆ. ಇನ್ನು, ಇರಾಕ್‌ನಿಂದ ಸಿಕ್ಕಿಬಿದ್ದ ಭಾರತೀಯರನ್ನು ಮರಳಿ ಕರೆತರಲು ಸಹ ಭಗವಂತ್ ಮಾನ್ ಸಹಾಯ ಮಾಡಿದ್ದರು.
Published by:guruganesh bhat
First published: