ಲಂಚ ಕೇಳಿದ್ರೆ ವಾಟ್ಸಪ್ ಮಾಡಿ.. ಪಂಜಾಬ್​​​ ಅನ್ನು ಲಂಡನ್-ಪ್ಯಾರಿಸ್ ಮಾಡಬೇಕಿಲ್ಲ.. ಹೊಸ CM ಹೊಸ ಸ್ಟೈಲ್!

Punjab CM Bhagwant Mann: ನಮ್ಮ ರಾಜ್ಯವನ್ನು ನಿಜವಾದ ಪಂಜಾಬ್ ಆಗಿ ಮಾಡುವುದು ನಮ್ಮ ಪ್ರಧಾನ ಆದ್ಯತೆ ಆಗಬೇಕೇ ಹೊರತು ಲಂಡನ್, ಕ್ಯಾಲಿಫೋರ್ನಿಯಾ, ಪ್ಯಾರಿಸ್ ಮಾಡೋದಲ್ಲ ಎಂದು ಖಡಕ್ ಹೇಳಿಕೆ ನೀಡಿದ್ದಾರೆ.

ನೂತನ ಸಿಎಂ ಚೊಚ್ಚಲ ಸಭೆ

ನೂತನ ಸಿಎಂ ಚೊಚ್ಚಲ ಸಭೆ

  • Share this:
 ಚಂಡೀಗಢ: ಅಭೂತಪೂರ್ವ ಗೆಲುವಿನೊಂದಿಗೆ ನಿನ್ನೆಯಷ್ಟೇ ಭಗವಂತ್​ ಮಾನ್​​ ಪಂಜಾಬ್​​ನ ನೂತನ ಮುಖ್ಯಮಂತ್ರಿಯಾಗಿ (Punjab CM Bhagwant Mann) ಪ್ರಮಾಣವಚನ ಸ್ವೀಕರಿಸಿದರು. ಸಿಎಂ ಆದ ಬಳಿಕ ಅಧಿಕಾರಿಗಳೊಂದಿಗೆ ಚೊಚ್ಚಲ ಸಭೆಯನ್ನು (Mann chairs first meeting as CM) ಉದ್ದೇಶಿಸಿ ಮಾತನಾಡಿದ ಮಾನ್, ರಾಜ್ಯದ ನಾಗರಿಕ ಮತ್ತು ಪೊಲೀಸ್ ಆಡಳಿತದ ಉನ್ನತ ಅಧಿಕಾರಿಗಳು ಸಾರ್ವಜನಿಕ ಸೇವಕರಾಗಿ ತಮ್ಮ ಕರ್ತವ್ಯಗಳನ್ನು ಆತ್ಮದಿಂದ ಮಾಡುವಂತೆ ಸೂಚಿಸಿದರು. ಭಾರತ ಕ್ರಿಕೆಟ್ ತಂಡದ ಉದಾಹರಣೆಯನ್ನು ನೀಡುತ್ತಾ, ಹೊಸದಾಗಿ ಆಯ್ಕೆಯಾದ ಮುಖ್ಯಮಂತ್ರಿ, ಪಂದ್ಯಗಳನ್ನು ಗೆಲ್ಲುವುದು ಅಥವಾ ಸೋಲುವುದು ಮುಖ್ಯವಲ್ಲ. ತಂಡದ ಮನೋಭಾವವು ಮುಖ್ಯವಾಗಿದೆ. ನಮ್ಮ ರಾಜ್ಯವನ್ನು ನಿಜವಾದ ಪಂಜಾಬ್ ಆಗಿ ಮಾಡುವುದು ನಮ್ಮ ಪ್ರಧಾನ ಆದ್ಯತೆ ಆಗಬೇಕೇ ಹೊರತು ಲಂಡನ್, ಕ್ಯಾಲಿಫೋರ್ನಿಯಾ, ಪ್ಯಾರಿಸ್ ಅಲ್ಲ ಎಂದು ಖಡಕ್​ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: AAP CMನ ಹಾಡಿ ಹೊಗಳಿದ ಸಿಧು.. ರಾಜೀನಾಮೆ ಬಳಿಕ ಮತ್ತೆ ಕಾಂಗ್ರೆಸ್ ವಿರುದ್ಧ ತಿರುಗಿಬಿದ್ದರೇ?

ನನ್ನ ಬಳಿ ರೆಡ್​ ಡೈರಿ ಇಲ್ಲ

ತಮ್ಮ ಸರ್ಕಾರವು ರಾಜಕೀಯ ಸೇಡಿಗೆ ಒಳಗಾಗುವುದಿಲ್ಲ ಎಂದು ಹೇಳಿದ ಎಎಪಿ ನಾಯಕ, ಹಿಂದಿನ ಆಡಳಿತದಂತೆ ಯಾವುದೇ ರಾಜಕೀಯ ಒತ್ತಡವಿಲ್ಲದೆ ನಿರ್ಭೀತಿಯಿಂದ ತಮ್ಮ ಕರ್ತವ್ಯಗಳನ್ನು ನಿರ್ವಹಿಸುವಂತೆ ಇಡೀ ರಾಜ್ಯ ಆಡಳಿತವನ್ನು ಕೇಳಿಕೊಂಡರು. ಮತ ಚಲಾಯಿಸಿದ ಪಂಜಾಬಿಗಳ ಆಕಾಂಕ್ಷೆಗಳನ್ನು ಪಾಲಿಸಲು ಅತ್ಯಂತ ಪ್ರಾಮಾಣಿಕ, ಅಭೂತಪೂರ್ವ ತೀರ್ಪಿನೊಂದಿಗೆ ಎಎಪಿ ಅಧಿಕಾರಕ್ಕೆ ಬಂದಿದೆ.  ರಾಜ್ಯದಲ್ಲಿ ಹಿಂದಿನ ಸರ್ಕಾರಗಳನ್ನು ಟೀಕಿಸಿದ ಮಾನ್, "ನಾನು ಹಿಂದಿನ ರಾಜಕೀಯ ಪಕ್ಷಗಳಂತೆ ಕೆಂಪು ಡೈರಿಯನ್ನು ಇಟ್ಟುಕೊಂಡಿಲ್ಲ. ಹಸಿರು ಡೈರಿಯನ್ನು ಮಾತ್ರ ಹೊಂದಿದ್ದೇನೆ. ಆದ್ದರಿಂದ ನೀವು ಯಾವುದೇ ಸೇಡಿನ ಬಗ್ಗೆ ಚಿಂತಿಸಬೇಕಾಗಿಲ್ಲ" ಎಂದು ಅಧಿಕಾರಿಗಳಿಗೆ ಆಶ್ವಾಸನೆ ನೀಡಿದರು.

ಲಂಚ ಕೇಳಿದ್ರೆ ವಾಟ್ಸಪ್​​ ಮಾಡಿ

ಮಾನ್ ಅಧಿಕಾರ ವಹಿಸಿಕೊಂಡ ಒಂದು ದಿನದ ನಂತರ, ಎಎಪಿ ನೇತೃತ್ವದ ಪಂಜಾಬ್ ಸರ್ಕಾರವು ರಾಜ್ಯ ವಿಧಾನಸಭಾ ಚುನಾವಣೆಯ ಪೂರ್ವದಲ್ಲಿ ನೀಡಿದ್ದ ಭರವಸೆಗಳನ್ನು ಈಡೇರಿಸುವತ್ತ ಮೊದಲ ಹೆಜ್ಜೆ ಇಟ್ಟಿತು. ಭ್ರಷ್ಟಾಚಾರ ಮುಕ್ತ ಆಡಳಿತ ನೀಡುವ ಸಲುವಾಗಿ ಮಾನ್​​, ತಮ್ಮ ವಾಟ್ಸಪ್​ ನಂಬರ್​ ಅನ್ನು ಇಡೀ ರಾಜ್ಯದ ಜನತೆ ಜೊತೆ ಹಂಚಿಕೊಂಡಿದ್ದಾರೆ. ಸರ್ಕಾರದ ಯಾವುದೇ ಅಧಿಕಾರಿ, ಸಿಬ್ಬಂದಿ ಲಂಚ ಕೇಳಿದರೆ ವಿಡಿಯೋ ಮಾಡಿ ನನಗೆ ವಾಟ್ಸಪ್​ ಮಾಡಿ ಎಂದು ಕೇಳಿಕೊಂಡಿದ್ದಾರೆ. ಭ್ರಷ್ಟ ಅಧಿಕಾರಿಗಳಿಗೆ ನನ್ನ ಸರ್ಕಾರದಲ್ಲಿ ಸ್ಥಾನವಿಲ್ಲ, ದಕ್ಷ ಅಧಿಕಾರಿಗಳ ಪರ ನಾನು ನಿಲ್ಲುತ್ತೇನೆ ಎಂದು ಭರವಸೆ ನೀಡಿದ್ದಾರೆ.

ಇದನ್ನೂ ಓದಿ: ನನಗೆ ವೋಟ್ ಹಾಕದವರಿಗೂ ನಾನು ಸಿಎಂ: ಪಂಜಾಬ್ ಸಿಎಂ ಆಗಿ Bhagwant Mann ಪ್ರಮಾಣವಚನ ಸ್ವೀಕಾರ

ಅಧಿಕಾರಿಗಳಿಗೆ ಕಿರುಕುಳ ನೀಡುವುದಿಲ್ಲ

ದೈನಂದಿನ ಕೆಲಸಕ್ಕಾಗಿ ಲಂಚ ಕೇಳುವುದು ಅಥವಾ ಇತರ ದುಷ್ಕೃತ್ಯಗಳಲ್ಲಿ ತೊಡಗಿರುವವರ ವಿಡಿಯೋಗಳನ್ನು ಅಪ್‌ಲೋಡ್ ಮಾಡಲು ಸಹಾಯವಾಣಿ ವಿಶೇಷವಾಗಿದ್ದು, ಅಂತಹ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮಕ್ಕೆ ತರಬಹುದು ಎಂದು ಸಿಎಂ ಹೇಳಿದರು. ಸಿಎಂ ಕಚೇರಿಯಲ್ಲಿ 99% ಜನರು ಪ್ರಾಮಾಣಿಕರಾಗಿದ್ದಾರೆ, ಆದರೆ ಉಳಿದ ಒಂದು ಪ್ರತಿಶತವು ವ್ಯವಸ್ಥೆಯನ್ನು ಹದಗೆಡಿಸುತ್ತದೆ. ನಾನು ಯಾವಾಗಲೂ ಪ್ರಾಮಾಣಿಕ (ಸರ್ಕಾರಿ) ಅಧಿಕಾರಿಗಳೊಂದಿಗೆ ಇರುತ್ತೇನೆ ಎಂದು ಸಿಎಂ ಹೇಳಿದರು. ಯಾವುದೇ ನಾಯಕರು ಸುಲಿಗೆಗಾಗಿ ಯಾವುದೇ ಅಧಿಕಾರಿಗಳಿಗೆ ಕಿರುಕುಳ ನೀಡುವುದಿಲ್ಲ ಎಂದರು.

ಭ್ರಷ್ಟ ಅಧಿಕಾರಿಗಳಿಗೆ ನನ್ನ ಸರ್ಕಾರದಲ್ಲಿ ಸ್ಥಾನವಿಲ್ಲ. ಯಾವುದೇ ದೂರು ನನ್ನ ಗಮನಕ್ಕೆ ಬಂದರೆ ಅಂತಹ ಅಧಿಕಾರಿಗಳು ಯಾವುದೇ ರೀತಿಯ ಸಹಾನುಭೂತಿ ನಿರೀಕ್ಷಿಸಬೇಡಿ ಎಂದು ಹೇಳಿದರು. 48 ವರ್ಷದ ಮಾನ್ ನಿನ್ನೆ ಪ್ರಮಾಣವಚನ ಸ್ವೀಕರಿಸಿದರು. ಕಾರ್ಯಕ್ರಮದಲ್ಲಿ ಇತರೆ ಯಾವುದೇ ಮಂತ್ರಿಗಳು ಪ್ರಮಾಣವಚನ ಸ್ವೀಕರಿಸಲಿಲ್ಲ.  117 ಸದಸ್ಯ ಬಲದ ಪಂಜಾಬ್ ಅಸೆಂಬ್ಲಿಯಲ್ಲಿ ಎಎಪಿ 92 ಸ್ಥಾನಗಳನ್ನು ಗೆಲ್ಲುವ ಮೂಲಕ ಕಾಂಗ್ರೆಸ್ ಮತ್ತು ಎಸ್‌ಎಡಿ-ಬಿಎಸ್‌ಪಿ ಮೈತ್ರಿಯನ್ನು ಸೋಲಿಸಿತು.
Published by:Kavya V
First published: