ಇಂದು ಕ್ರಾಂತಿಕಾರಿ ಭಗತ್ ಸಿಂಗ್ ಅವರ​​ 113ನೇ ಜನ್ಮದಿನ

Bhagat Singh Birth Anniversary: ಭಗತ್ ಸಿಂಗ್ ಹುಟ್ಟಿದ ದಿನವೇ ಅವರ ತಂದೆ ಮತ್ತು ಇಬ್ಬರು ಚಿಕ್ಕಪ್ಪಂದಿರಾದ ಅಜಿತ್ ಸಿಂಗ್ ಮತ್ತು ಸ್ವರಣ್ ಸಿಂಗ್ ಅವರನ್ನು ಜೈಲಿನಿಂದ ಬಿಡುಗಡೆ ಮಾಡಲಾಯಿತು. ಭಗತ್ ಸಿಂಗ್ ಕುಟುಂಬಸ್ಥರು ಸದಾ ರಾಜಕೀಯ ವಲಯದಲ್ಲಿ ಸಕ್ರಿಯರಾಗಿದ್ದರು.

news18-kannada
Updated:September 28, 2020, 12:18 PM IST
ಇಂದು ಕ್ರಾಂತಿಕಾರಿ ಭಗತ್ ಸಿಂಗ್ ಅವರ​​ 113ನೇ ಜನ್ಮದಿನ
ಕ್ರಾಂತಿಕಾರಿ ಭಗತ್ ಸಿಂಗ್
  • Share this:
ಭಾರತದಲ್ಲಿ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಗೊತ್ತಿರುವ ಕ್ರಾಂತಿಕಾರಿ ನಾಯಕ ಎಂದರೆ ಅದು ಭಗತ್​ ಸಿಂಗ್​ ಅಲ್ಲದೇ ಮತ್ಯಾರೂ ಅಲ್ಲ. ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಕ್ರಾಂತಿಕಾರಿ ಭಗತ್ ಸಿಂಗ್ ಅವರ ಪಾತ್ರ ಬಹಳ ಮಹತ್ವದ್ದಾಗಿದೆ. ಬ್ರಿಟಿಷರ ವಿರುದ್ಧ ಎದೆಗುಂದದೆ ಹೋರಾಡಿ ತನ್ನ 23ನೇ ವಯಸ್ಸಿನಲ್ಲೇ ವೀರಮರಣ ಹೊಂದಿದ ಧೀಮಂತ ಭಗತ್ ಸಿಂಗ್. ಇಂದು ಆ ಮಹಾನ್​ ಧೀರನ 113ನೇ ಜನ್ಮ ದಿನ. ಭಗತ್ ಸಿಂಗ್ ಅವರಯ ಸೆಪ್ಟೆಂಬರ್ 28ರ 1907ರಲ್ಲಿ ಇಂದಿನ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಫೈಸಲಾಬಾದ್ ಜಿಲ್ಲೆಯ ಬಾಂಗಾ ಗ್ರಾಮದಲ್ಲಿ ಜನಿಸಿದರು. ಭಗತ್ ಸಿಂಗ್ ಹುಟ್ಟು ಹೋರಾಟಗಾರ. ಸಾಮಾಜಿಕ ಕ್ರಾಂತಿಕಾರಿ. 1931ರಲ್ಲಿ ತನ್ನ ಗೆಳೆಯರಾದ ರಾಜ್​​ಗುರು ಮತ್ತು ಸುಖದೇವ್​ ಜೊತೆಗೆ ನೇಣಿಗೆ ಕೊರಳೊಡ್ಡಿದ ವೀರ ಸೇನಾನಿ. ಬ್ರಿಟಿಷರ ವಿರುದ್ಧ ಕ್ರಾಂತಿಕಾರಿ ಹೋರಾಟ ನಡೆಸಿದ ವೀರ. ದೇಶಕ್ಕಾಗಿ ತನ್ನ ಪ್ರಾಣ ತ್ಯಾಗ ಮಾಡಿದ ಧೀರ ಭಗತ್ ಸಿಂಗ್.

ಭಗತ್ ಸಿಂಗ್ ಕಿಶನ್ ಸಿಂಗ್ ಮತ್ತು ವಿದ್ಯಾವತಿಯವರ ಮಗನಾಗಿ ಪಂಜಾಬ್​ನಲ್ಲಿ ಜನಿಸುತ್ತಾರೆ. ಭಗತ್ ಸಿಂಗ್ ಹುಟ್ಟಿದ ದಿನವೇ ಅವರ ತಂದೆ ಮತ್ತು ಇಬ್ಬರು ಚಿಕ್ಕಪ್ಪಂದಿರಾದ ಅಜಿತ್ ಸಿಂಗ್ ಮತ್ತು ಸ್ವರಣ್ ಸಿಂಗ್ ಅವರನ್ನು ಜೈಲಿನಿಂದ ಬಿಡುಗಡೆ ಮಾಡಲಾಯಿತು. ಭಗತ್ ಸಿಂಗ್ ಕುಟುಂಬಸ್ಥರು ಸದಾ ರಾಜಕೀಯ ವಲಯದಲ್ಲಿ ಸಕ್ರಿಯರಾಗಿದ್ದರು.

ಚಿಕ್ಕ ವಯಸ್ಸಿನಲ್ಲಿ ಭಗತ್ ಸಿಂಗ್ ಅವರು ಆರ್ಯ ಸಮಾಜ ಸಂಸ್ಥೆಯಾದ ದಯಾನಂದ್ ಆಂಗ್ಲೋ ವೇದಿಕ್ ಪ್ರೌಢಶಾಲೆಯಲ್ಲಿ ತಮ್ಮ ವಿದ್ಯಾಭ್ಯಾಸ ಮಾಡಿದರು. ಹೀಗಾಗಿ ಆರ್ಯ ಸಮಾಜದ ತತ್ವಗಳು ಭಗತ್ ಸಿಂಗ್ ಜೀವನದ ಮೇಲೆ ಪರಿಣಾಮ ಬೀರಿದವು ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ.

Coronavirus India Updates: ಭಾರತದಲ್ಲಿ 60 ಲಕ್ಷ ದಾಟಿದ ಕೊರೋನಾ ಸೋಂಕಿತರ ಸಂಖ್ಯೆ

1919ರಲ್ಲಿ ಭಗತ್ ಸಿಂಗ್ ತಮ್ಮ 12ನೇ ವಯಸ್ಸಿನಲ್ಲಿ ಜಲಿಯನ್ ವಾಲಾಬಾಗ್​​ ಹತ್ಯಾಕಾಂಡದ ಸ್ಥಳಕ್ಕೆ ಭೇಟಿ ನೀಡಿದಾಗ ಅವರಲ್ಲಿ ಮೊದಲ ಬಾರಿಗೆ ಕ್ರಾಂತಿ ಮನೋಭಾವನೆ ಹುಟ್ಟಿತು. ಇದಾದ ಬಳಿಕ ಭಗತ್ ಸಿಂಗ್ ತಮ್ಮ 14ನೇ ವಯಸ್ಸಿನಲ್ಲಿ ತಮ್ಮ ಹಳ್ಳಿಯಲ್ಲಿ ಪ್ರತಿಭಟನಾಕಾರರಲ್ಲಿ ಒಬ್ಬರಾಗಿ ಮಾರ್ಪಟ್ಟರು.

ನಂತರ ಭಗತ್ ಸಿಂಗ್ ಅವರು ಯುವ ಕ್ರಾಂತಿಕಾರಿ ಚಳುವಳಿಯಲ್ಲಿ ಭಾಗಿಯಾದರು. ಜೊತೆಗೆ ಬ್ರಿಟಿಷರನ್ನು ಭಾರತದಲ್ಲಿ ಓಡಿಸಲು ಹಿಂಸಾತ್ಮಕ ಮಾರ್ಗವನ್ನು ಹಿಡಿದರು. 1923ರಲ್ಲಿ ಲಾಹೋರ್​​ನ ರಾಷ್ಟ್ರೀಯ ಕಾಲೇಜಿಗೆ ಭಗತ್ ಸಿಂಗ್ ಸೇರಿಕೊಂಡರು. ಬಾಲ್ಯದಿಂದಲೂ ಉತ್ತಮ ವಿದ್ಯಾರ್ಥಿಯಾಗಿದ್ದ ಸಿಂಗ್, ಕಾಲೇಜು ದಿನಗಳಲ್ಲಿಯೂ ಓದಿನಲ್ಲಿ ಮುಂದಿದ್ದರು. ಈ ಕಾರಣಕ್ಕಾಗಿಯೇ ಹಲವಾರು ಪ್ರಶಸ್ತಿಗಳನ್ನು ಭಗತ್ ಸಿಂಗ್ ಪಡೆದಿದ್ದರು.
ತನ್ನ ಜೀವನವನ್ನೇ ದೇಶಕ್ಕಾಗಿ ಮುಡಿಪಿಟ್ಟಿದ್ದ ಭಗತ್ ಸಿಂಗ್ ತನ್ನ ಕೊನೆಯುಸಿರುವವರೆಗೂ ಬ್ರಿಟಿಷರ ವಿರುದ್ಧ ಹೋರಾಡಿದರು. ಕೊನೆಗೆ 1931ರಲ್ಲಿ ತನ್ನ ಗೆಳೆಯರಾದ ರಾಜ್​​ಗುರು ಮತ್ತು ಸುಖದೇವ್​ ಜೊತೆಗೆ ನೇಣಿಗೆ ಕೊರಳೊಡ್ಡಿ ವೀರಮರಣ ಹೊಂದಿದರು.
Published by: Latha CG
First published: September 28, 2020, 12:04 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading