Bypoll Result: ಭಾನುವಾರ ಭವಾನಿಪುರದ ಮತ ಎಣಿಕೆ, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಭವಿಷ್ಯ ನಿರ್ಧಾರ

Mamata Banerjee- ವಿಧಾನ ಪರಿಷತ್ ಇಲ್ಲದ ಪಶ್ಚಿಮ ಬಂಗಾಳದಲ್ಲಿ ಮುಖ್ಯಮಂತ್ರಿ ಸ್ಥಾನ ಉಳಿಸಿಕೊಳ್ಳಲು ಮಮತಾ ಬ್ಯಾನರ್ಜಿ ಈ ಉಪ ಚುನಾವಣೆ ಗೆದ್ದು ವಿಧಾನಸಭೆ ಪ್ರವೇಶಿಸಲೇಬೇಕಿದೆ.

ಮಮತಾ ಬ್ಯಾನರ್ಜಿ.

ಮಮತಾ ಬ್ಯಾನರ್ಜಿ.

  • Share this:
ಕೋಲ್ಕತಾ, ಅ. 2: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Chief Minister Mamata Banerjee) ಅವರ ಭವಿಷ್ಯ ನಿರ್ಧಾರ ಮಾಡಲಿರುವ ಭವಾನಿಪುರ ಕ್ಷೇತ್ರದ ಉಪ ಚುನಾವಣೆಯ (Bhabanipur By Election) ಮತ ಎಣಿಕೆ (Vote Counting) ಭಾನುವಾರ ನಡೆಯಲಿದೆ. ಇತ್ತೀಚೆಗೆ ನಡೆದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ (General Election) ನಂದಿಗ್ರಾಮ (Nandigrama) ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದ ಮಮತಾ ಬ್ಯಾನರ್ಜಿ ಅವರು ಪರಾಭಾವಗೊಂಡರೂ ಅವರ ಪಕ್ಷ ತೃಣಮೂಲ ಕಾಂಗ್ರೆಸ್ ಪಕ್ಷ (Trinamool Congress Party) ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದ್ದರಿಂದ ಮುಖ್ಯಮಂತ್ರಿ ಆಗಿ ಪ್ರಮಾಣವಚನ ಸ್ವೀಕರಿಸಿದ್ದರು.‌ ವಿಧಾನ ಪರಿಷತ್ (Legislative Council) ಇಲ್ಲದ ಪಶ್ಚಿಮ ಬಂಗಾಳದಲ್ಲಿ ಮುಖ್ಯಮಂತ್ರಿ ಸ್ಥಾನ ಉಳಿಸಿಕೊಳ್ಳಲು ಮಮತಾ ಬ್ಯಾನರ್ಜಿ ಈ ಉಪ ಚುನಾವಣೆ ಗೆದ್ದು ವಿಧಾನಸಭೆ (Assembly) ಪ್ರವೇಶಿಸಲೇಬೇಕಿದೆ.

ಭವಾನಿಪುರ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಗುರುವಾರ ಮತದಾನ (Voting) ನಡೆದು ಕೇವಲ‌ ಶೇಕಡಾ 57ರಷ್ಟು ಮತ ಚಲಾವಣೆ ಆಗಿತ್ತು.‌ ಭಾನುವಾರ ಬೆಳಿಗ್ಗೆ 8 ಗಂಟೆಗೆ ಚುನಾವಣಾ ಆಯೋಗವು (Election Commission) ಮತ ಎಣಿಕೆ ಆರಂಭಿಸಲಿದ್ದು, ಮಧ್ಯಾಹ್ನದ ವೇಳೆಗೆ ಫಲಿತಾಂಶಗಳು ಟ್ರೆಂಡ್ (Trend) ಆಧಾರದ ಮೇಲೆ ಸ್ಪಷ್ಟವಾಗುತ್ತವೆ. ಭವಾನಿಪುರ ಕ್ಷೇತ್ರದಲ್ಲಿ 21 ಸುತ್ತಿನ ಮತ ಎಣಿಕೆ ನಡೆಯಲಿದೆ.

ಭವಾನಿಪುರದ ಇತಿಹಾಸ:

ಭವಾನಿಪುರ ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತಾದ (Kolkata) ಒಂದು ವಿಧಾನಸಭಾ ಕ್ಷೇತ್ರವಾಗಿದೆ. 2011ರಲ್ಲಿ ಕ್ಷೇತ್ರಗಳ ಪುನರ್ ವಿಂಗಡಣೆ (Delimitations) ಆದ ಬಳಿಕ ಭವಾನಿಪುರ ಕ್ಷೇತ್ರವು ತೃಣಮೂಲ ಕಾಂಗ್ರೆಸ್ ಪಕ್ಷದ ಭದ್ರಕೋಟೆಯಾಗಿದೆ. ಮಮತಾ ಬ್ಯಾನರ್ಜಿ ಅವರ ಕಾಳಿಘಾಟ್ (Mamata Banerjee’s Kalighat residence) ನಿವಾಸವು ಈ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ.

ಚುನಾವಣಾ ಆಯೋಗದ ಅಂಕಿಅಂಶಗಳ ಪ್ರಕಾರ 2011ರ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಟಿಎಂಸಿ 184 ಸ್ಥಾನಗಳಲ್ಲಿ ಗೆಲುವು ಸಾಧಿಸಿತು ಮತ್ತು 34 ವರ್ಷಗಳ ಲೆಫ್ಟ್ ಫ್ರಂಟ್ (Left Front rule) ಆಡಳಿತವನ್ನು ಕೊನೆಗೊಳಿಸಿತು. ಆ ಸಮಯದಲ್ಲಿ ಮಮತಾ ಬ್ಯಾನರ್ಜಿ ಚುನಾವಣೆಗೆ ಸ್ಪರ್ಧಿಸಿರಲಿಲ್ಲ. ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬ್ಯಾನರ್ಜಿಗೆ ದಾರಿ ಮಾಡಿಕೊಡಲು ಟಿಎಂಸಿ ಶಾಸಕ ಮತ್ತು ಆಗಿನ ಮಂತ್ರಿ ಸುಬ್ರತ ಬಕ್ಷಿ ಸ್ಥಾನವನ್ನು ತ್ಯಜಿಸಿದ್ದರು. ನಂತರ ಮಮತಾ ಬ್ಯಾನರ್ಜಿ ರಾಜ್ಯ ವಿಧಾನಸಭೆಗೆ ಮೊದಲ ಬಾರಿ ಪ್ರವೇಶ ಮಾಡಿದರು. ಆ ಉಪಚುನಾವಣೆಯಲ್ಲಿ ಗೆದ್ದು ತಮ್ಮ ಮುಖ್ಯಮಂತ್ರಿ ಕುರ್ಚಿಯನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಅದೇ ರೀತಿ, ಈಗಲೂ ಮಮತಾ ಬ್ಯಾನರ್ಜಿ‌ ಅವರು ಮುಖ್ಯಮಂತ್ರಿ ಸ್ಥಾನವನ್ನು ಉಳಿಸಿಕೊಳ್ಳಲು ಭವಾನಿಪುರ ಕ್ಷೇತ್ರದ ಉಪಚುನಾವಣೆಯನ್ನು ಗೆಲ್ಲಬೇಕಾಗುತ್ತದೆ.

ಇದನ್ನೂ ಓದಿ: ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಮೋದಿನ ಬಂಧಿಸಿ, ಗಲ್ಲಿಗೇರಿಸ್ತೀವಿ; Abdul Rashid Dar ವಿವಾದಾತ್ಮಕ ಹೇಳಿಕೆ

ಅಖಾಡದಲ್ಲಿರುವ ಅಭ್ಯರ್ಥಿಗಳು: 
1) ಮಮತಾ ಬ್ಯಾನರ್ಜಿ: 2016ರ ವಿಧಾನಸಭಾ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಹಾಗೂ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಭವಾನಿಪುರ ಕ್ಷೇತ್ರದಲ್ಲಿ ಗೆದ್ದಿದ್ದರು. ಈ ವರ್ಷವೂ ಅವರು ಸಿಎಂ ಆಗಿ ಮುಂದುವರಿಯಲು ಸ್ಥಾನವನ್ನು ಗೆಲ್ಲಬೇಕು.
2) ಪ್ರಿಯಾಂಕಾ ಟಿಬ್ರೆವಾಲ್: 41 ವರ್ಷದ ವಕೀಲರು ಮತ್ತು ಪಕ್ಷದ ಯುವ ಘಟಕದ ಉಪಾಧ್ಯಕ್ಷರಾದ ಪ್ರಿಯಾಂಕಾ ಟಿಬ್ರೂವಾಲ್ ಅವರನ್ನು ಬಿಜೆಪಿ ಕಣಕ್ಕಿಳಿಸಿದೆ.
3) ಶ್ರೀಜಿಬ್ ಬಿಸ್ವಾಸ್: ಬ್ಯಾನರ್ಜಿ ಮತ್ತು ಟಿಬ್ರೂವಾಲ್ ವಿರುದ್ಧ ಹೋರಾಡಲು ಎಡ ರಂಗವು ಶ್ರೀಜಿಬ್ ಬಿಸ್ವಾಸ್ ಅವರನ್ನು ಕಣಕ್ಕಿಳಿಸಿದೆ.

ಮತದಾನದ ದಿನದ ಅವಘಡ:
ಮತದಾನದ ದಿನ ಭವಾನಿಪುರ ಕ್ಷೇತ್ರದ ಕೆಲವು ಪ್ರದೇಶಗಳಲ್ಲಿ ಬಿಜೆಪಿ ಮತ್ತು ಟಿಎಂಸಿ ಬೆಂಬಲಿಗರ ನಡುವೆ ಘರ್ಷಣೆ ಆಗಿತ್ತು. ಆಡಳಿತ ಪಕ್ಷವು ನಕಲಿ ಮತದಾರರನ್ನು ಮತದಾನ ಕೇಂದ್ರದೊಳಗೆ ಕರೆತರುತ್ತಿದೆ ಎಂಬ ಆರೋಪದ ಮೇಲೆ ಟಿಎಂಸಿ ಮತ್ತು ಬಿಜೆಪಿ ಬೆಂಬಲಿಗರ ನಡುವೆ ಜಗಳ ನಡೆದಿತ್ತು. ಭದ್ರತಾ ಪಡೆಗಳು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದವು. ಈ‌ ಕಲಹಗಳ ಬಗ್ಗೆ ಟಿಎಂಸಿ ಚುನಾವಣಾ ಆಯೋಗಕ್ಕೆ ದೂರನ್ನು ದಾಖಲಿಸಿತ್ತು.‌ ಟಿಬ್ರೂವಾಲ್ 20 ಕಾರುಗಳ ಪರಿವಾರದೊಂದಿಗೆ ಚಲಿಸುತ್ತಿದೆ ಮತ್ತು ಮತದಾರರನ್ನು ಹೆದರಿಸುತ್ತಿದೆ ಎಂದು ಆರೋಪಿಸಲಾಗಿತ್ತು.

ಬಿಜೆಪಿ ತನ್ನ ಮತಗಟ್ಟೆ ಏಜೆಂಟರಿಗೆ ಹಲವಾರು ಬೂತ್‌ಗಳ ಒಳಗೆ ಪ್ರವೇಶವನ್ನು ಅನುಮತಿಸಲಿಲ್ಲ ಎಂದು ಆರೋಪಿಸಿತ್ತು. ಇನ್ನೊಂದು ಘಟನೆಯಲ್ಲಿ ಬಿಜೆಪಿ ನಾಯಕ ಕಲ್ಯಾಣ್ ಚೌಬೆ ಅವರ ಕಾರನ್ನು ಶರತ್ ಬೋಸ್ ರಸ್ತೆಯಲ್ಲಿ ದರೋಡೆ ಮಾಡಲಾಗಿದೆ ಎಂದು ಆರೋಪಿಸಲಾಗಿತ್ತು. ಘಟನೆಗೆ ಸಂಬಂಧಿಸಿದಂತೆ ಕೋಲ್ಕತ್ತಾ ಪೊಲೀಸರು ಇಸಿಗೆ ವರದಿಯನ್ನು ಸಲ್ಲಿಸಿದ್ದಾರೆ. ನಂತರ ಚುನಾವಣಾ ಆಯೋಗವು ಇದು ರಾಜಕೀಯ ದಾಳಿಯೆಂಬ ಆರೋಪವನ್ನು ತಳ್ಳಿಹಾಕಿತು.

ಸಂಸರ್‌ಗಂಜ್‌ನಲ್ಲಿ ಬೆಳಿಗ್ಗೆ 7 ಗಂಟೆಗೆ ಮತದಾನ ಆರಂಭವಾಗುವ ಕೆಲವು ಗಂಟೆಗಳ ಮೊದಲು ಬಾಂಬ್‌ಗಳನ್ನು ಎಸೆಯಲಾಯಿತು. ಕಾಂಗ್ರೆಸ್ ಈ ದಾಳಿ ನಡೆಸಿದೆ ಎಂದು ಟಿಎಂಸಿ ಆರೋಪಿಸಿತ್ತು. ಈ ಆರೋಪವನ್ನು ಕಾಂಗ್ರೆಸ್ ಆಧಾರರಹಿತ ಎಂದು ಹೇಳಿದೆ. ಸಂಸರ್‌ಗಂಜ್ ಕ್ಷೇತ್ರದ ಒಂಬತ್ತು ಬೂತ್‌ಗಳಲ್ಲಿ ಮರು ಮತದಾನಕ್ಕೆ ಕಾಂಗ್ರೆಸ್ ಒತ್ತಾಯಿಸಿದೆ. ಚುನಾವಣಾ ಆಯೋಗಕ್ಕೆ ಇದುವರೆಗೆ 97 ದೂರುಗಳು ಬಂದಿದ್ದು, ಅವುಗಳಲ್ಲಿ 91 ದೂರುಗಳನ್ನು ರದ್ದುಗೊಳಿಸಲಾಗಿದೆ. ಈ 97 ದೂರುಗಳಲ್ಲಿ 85 ದೂರುಗಳು ಭವಾನಿಪುರ ಉಪಚುನಾವಣೆಗೆ ಸಂಬಂಧಿಸಿವೆ.

ಇದನ್ನೂ ಓದಿ: ತಣ್ಣಗಾದ ಸಿಧು: ಪದವಿ ಇರಲಿ.. ಬಿಡಲಿ.. ರಾಹುಲ್-ಪ್ರಿಯಾಂಕಾ ಜೊತೆಗಿರುವೆ ಎಂದ Navjot Singh Sidhu

ಭದ್ರತಾ ವ್ಯವಸ್ಥೆ:
ಚುನಾವಣಾ ಆಯೋಗವು ಮೂರು ಹಂತದ ಭದ್ರತಾ ವ್ಯವಸ್ಥೆಯನ್ನು ಏರ್ಪಡಿಸಿದ್ದು, 24 ಕಂಪನಿಗಳ ಕೇಂದ್ರ ಪಡೆಗಳನ್ನು ಕರೆಸಿಕೊಳ್ಳಲಾಗಿದೆ ಮತ್ತು ಅವುಗಳನ್ನು ಈಗಾಗಲೇ ಎಣಿಕೆ ಕೇಂದ್ರದಲ್ಲಿ ನಿಯೋಜಿಸಲಾಗಿದೆ. ಭದ್ರತೆಯ ಹೊರ ಪದರವನ್ನು ರಾಜ್ಯ ಪೊಲೀಸರು ಮಾತ್ರ ನೋಡಿಕೊಳ್ಳುತ್ತಾರೆ. ಮುಂದಿನ ಪದರವು ಕೇಂದ್ರ ಪಡೆಗಳನ್ನು ಸಹ ಹೊಂದಿರುತ್ತದೆ. ಒಳ ಪದರವು ಕೇವಲ ಕೇಂದ್ರ ಪೊಲೀಸ್ ಅನ್ನು ಹೊಂದಿರುತ್ತದೆ. ಇಡೀ ಪ್ರದೇಶ ಸಿಸಿಟಿವಿ (CCTV) ಕಣ್ಗಾವಲಿನಲ್ಲಿರುತ್ತದೆ.

ಅಧಿಕಾರಿಗಳಿಗೆ ಪೆನ್ ಮತ್ತು ಪೇಪರ್ ಅನ್ನು ಮಾತ್ರ ಅನುಮತಿಸಲಾಗಿದೆ. ಅಲ್ಲದೆ ರಿಟರ್ನಿಂಗ್ ಆಫೀಸರ್ ಮತ್ತು ವೀಕ್ಷಕರಿಗೆ ಮಾತ್ರ ಫೋನ್ ಬಳಸಲು ಅವಕಾಶವಿದೆ.‌ಎಲ್ಲಾ ಅಧಿಕಾರಿಗಳು ಮತ್ತು ಎಣಿಕೆ ಕೇಂದ್ರಕ್ಕೆ ಪ್ರವೇಶಿಸುವಾಗ ಕೋವಿಡ್ -19 ನೆಗೆಟಿವ್ ಪ್ರಮಾಣಪತ್ರವನ್ನು ಹಾಜರುಪಡಿಸಬೇಕು.

ವರದಿ: ಧರಣೀಶ ಬೂಕನಕೆರೆ
Published by:Vijayasarthy SN
First published: