• Home
  • »
  • News
  • »
  • national-international
  • »
  • Mobile while Driving: ವಾಹನ ಚಲಾಯಿಸುವಾಗ ಮೊಬೈಲ್​ ಬಳಸುವವರೇ ಎಚ್ಚರ! ಒಂದೇ ವರ್ಷದಲ್ಲಿ1040 ಜನ ಸಾವು

Mobile while Driving: ವಾಹನ ಚಲಾಯಿಸುವಾಗ ಮೊಬೈಲ್​ ಬಳಸುವವರೇ ಎಚ್ಚರ! ಒಂದೇ ವರ್ಷದಲ್ಲಿ1040 ಜನ ಸಾವು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಇತ್ತೀಚೆಗೆ ಆ್ಯಕ್ಸಿಡೆಂಟ್​ ಎಂಬ ಪದಗಳೇ ಕೇಳಿಬರುತ್ತಿದೆ. ಕೆಲವೊಮ್ಮೆ ಅತಿಯಾದ ವೇಗದಲ್ಲಿ ವಾಹನ ಚಲಾಯಿಸುವುದರಿಂದ ಅಪಘಾತಗಳು ಸಂಭವಿಸುತ್ತರೆ. ಆದರೆ ನಮ್ಮ ಬೇಜಾವಬ್ದಾರಿಯಿಂದ ಈ ರೀತಿಯ ಸಂದರ್ಭಗಳು ಎದುರಾಗುತ್ತದೆ. ಇದೀಗ ವರದಿಯೊಂದರ ಪ್ರಕಾರ ದೇಶದಲ್ಲಿ 1040 ಜನರು ಮೊಬೈಲ್​ ಬಳಕೆಯಿಂದಾಗಿ ನಡೆದ ಅಪಘಾತದಿಂದ ಸಾವನ್ನಪ್ಪದ್ದಾರೆ ಎಂದು ತಿಳಿದುಬಂದಿದೆ.

ಮುಂದೆ ಓದಿ ...
  • Share this:

    ರಸ್ತೆಗಳಲ್ಲಿ ವಾಹನಗಳ (Vehicles) ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಎಲ್ಲಿ ನೋಡಿದ್ರೂ ಈಗ ಟ್ರಾಫಿಕ್ ಜಾಮ್ ಎಂಬ ಮಾತೇ ಕೇಳಿಬರುತ್ತಿದೆ. ಒಂದು ಕಡೆ ಟ್ರಾಫಿಕ್ ಸಮಸ್ಯೆ ಎಂಬ ಮಾತು ಕೇಳಿದ್ರೆ ಇನ್ನೊಂದು ಕಡೆಯಿಂದ ಆ್ಯಕ್ಸಿಡೆಂಟ್ (Accident)​ ಎಂಬ ಮಾತುಗಳು ಸಹ ಕೇಳುತ್ತಿದೆ. ಇದಕ್ಕೆ ಮುಖ್ಯ ಕಾರಣ ನಮ್ಮೆಲ್ಲರ ಅಜಾಗರೂಕತೆ ಎಂದು ಹೇಳ್ಬಹುದು. ಇತ್ತೀಚೆಗೆ ಮೊಬೈಲ್​​ ಬಳಕೆ (Mobile Use) ಹೆಚ್ಚಾಗಿದೆ. ಹೌದು ಆದರೆ ಅದನ್ನು ಎಲ್ಲಿ ಬಳಸ್ಬೇಕೋ ಅಲ್ಲೇ ಬಳಕೆ ಮಾಡಬೇಕು. ವಾಹನ ಚಲಾಯಿಸುವಾಗ, ರಸ್ತೆ ದಾಟುವಾಗ ರಸ್ತೆ ನೋಡಿಕೊಂಡು ನಡೆಯುವುದು ಬಿಟ್ಟು ಮೊಬೈಲ್ ನೋಡಿದ್ರೆ ಆ್ಯಕ್ಸಿಡೆಂಟೂ ಆಗಬಹುದು, ಮತ್ತೇನೋ ಆಗಬಹುದು. ಆದ್ದರಿಂದ ಯಾರೇ ಆಗಲಿ ಮುಖ್ಯವಾಗಿ ವಾಹನ ಚಲಾಯಿಸುವಾಗ ಮೊಬೈಲ್ ಬಳಸುವುದನ್ನು, ಇಯರ್​ಫೋನ್ ಕಿವಿಗೆ ಸಿಕ್ಕಿಸಿ ಕೊಳ್ಳುವುದನ್ನು ಸಂಪೂರ್ಣವಾಗಿ ನಿಲ್ಲಿಸಬೇಕು.


    ಇತ್ತೀಚೆಗೆ ಆ್ಯಕ್ಸಿಡೆಂಟ್​ ಎಂಬ ಪದಗಳೇ ಕೇಳಿಬರುತ್ತಿದೆ. ಕೆಲವೊಮ್ಮೆ ಅತಿಯಾದ ವೇಗದಲ್ಲಿ ವಾಹನ ಚಲಾಯಿಸುವುದರಿಂದ ಅಪಘಾತಗಳು ಸಂಭವಿಸುತ್ತರೆ. ಆದರೆ ನಮ್ಮ ಬೇಜಾವಬ್ದಾರಿಯಿಂದ ಈ ರೀತಿಯ ಸಂದರ್ಭಗಳು ಎದುರಾಗುತ್ತದೆ. ಇದೀಗ ವರದಿಯೊಂದರ ಪ್ರಕಾರ ದೇಶದಲ್ಲಿ 1040 ಜನರು ಮೊಬೈಲ್​ ಬಳಕೆಯಿಂದಾಗಿ ನಡೆದ ಅಪಘಾತದಿಂದ ಸಾವನ್ನಪ್ಪದ್ದಾರೆ ಎಂದು ತಿಳಿದುಬಂದಿದೆ.


    ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ವರದಿ


    2021 ರ ಹೆದ್ದಾರಿಗಳ ಬಗ್ಗೆ ಸಮೀಕ್ಷೆ ನಡೆಸಿದಾಗ 1997 ವಾಹನ ಅಪಘಾತಗಳು ಚಾಲಕರ ಅತಿಯಾದ ಮೊಬೈಲ್ ಬಳಕೆಯಿಂದಲೇ ಸಂಭವಿಸಿದೆ ಎಂದು ತಿಳಿದುಬಂದಿದೆ. ಹಾಗೆಯೇ ಈ ಅಪಘಾತದಲ್ಲಿ 1040 ಜನರು ಸಾವನ್ನಪ್ಪಿರುತ್ತಾರೆ ಎಂದು ಕೇಂದ್ರ ಸಾರಿಗೆ ಮತ್ತು ಹೆದ್ದಾರೆ ಸಚಿವಾಲಯದ ವರದಿಯಲ್ಲಿ ತಿಳಿಸಲಾಗಿದೆ.




    ಸಿಗ್ನಲ್​ ಅಪಘಾತಗಳು


    ಸರಕಾರ ನೀಡುವಂತಹ ಸಾರಿಗೆ ನಿಯಮಗಳನ್ನು ಸರಿಯಾಗಿ ಪಾಲಿಸಿದ್ರೆ ಈ ರೀತಿಯ ಘಟನೆಗಳು ಎಂದಿಗೂ ನಡೆಯಲು ಸಾಧ್ಯವಿಲ್ಲ. ಅದೇ ರೀತಿಯಲ್ಲಿ ಟ್ರಾಫಿಕ್​ ಸಮಸ್ಯೆಯನ್ನು ಎದುರಿಸುವ ಉದ್ದೇಶದಿಂದ ಹೆದ್ದಾರಿ ಸಚಿವಾಲಯಗಳು ರಸ್ತೆಗಳಲ್ಲಿ ಅಲ್ಲಲ್ಲಿ ಸಿಗ್ನಲ್​ಗಳನ್ನು ಹಾಕಿರುತ್ತಾರೆ. ಆದರೆ ಈ ನಿಯಮಗಳನ್ನು ಉಲ್ಲಂಘಿಸಿದ್ದರಿಂದ 555 ಅಪಘಾತಗಳು ನಡೆದಿವೆ ಮತ್ತು ಇದರಲ್ಲಿ 222 ಜನರು ಸಾವನ್ನಪ್ಪಿದ್ದಾರೆ ಎಂದು ವರದಿ ತಿಳಿಸಿದೆ.


    ರಸ್ತೆಯಲ್ಲಿನ ಹೊಂಡಗಳು ಅಪಘಾತಕ್ಕೆ ಕಾರಣ


    ಇನ್ನು 3,625 ಅಪಘಾತಗಳು ರಸ್ತೆಯಲ್ಲಿನ ಗುಂಡಿಯ ಕಾರಣಕ್ಕಾಗಿ ಸಂಭವಿಸಿದ್ದು, ಇದರಲ್ಲಿ 1481 ಜನ ಪ್ರಾಣ ಕಳೆದುಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.


    ಸಾಂದರ್ಭಿಕ ಚಿತ್ರ


    2021 ರಲ್ಲಿ ಸಂಭವಿಸಿದ ಒಟ್ಟು 4,12,432 ರಸ್ತೆ ಅಪಘಾತಗಳಲ್ಲಿ 1,53,972 ಜನ ಸಾವನ್ನಪ್ಪಿದ್ದು, 3,84,448 ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.


    ಇನ್ನು ರಸ್ತೆ ಅಪಘಾತಗಳನ್ನು ತಡೆಯುವ ನಿಟ್ಟಿನಲ್ಲಿ ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಈ ಬಗ್ಗೆ ಮಹತ್ತರವಾ ನಿಯಮಗಳನ್ನು ತರಲು ಶ್ರಮಿಸುತ್ತಲೇ ಇದೆ.


    ಡಿಎಲ್​​ ಟೆಸ್ಟ್​ಗೆ ಹೊಸ ನಿಯಮಗಳು ಜಾರಿ


    ಇತ್ತೀಚೆಗೆ ಸಾರಿಗೆ ಆಯುಕ್ತರು ಡಿಎಲ್​ ಟೆಸ್ಟ್​ನ ಹೊಸ ನಿಯಮಗಳನ್ನು ಜಾರಿ ಮಾಡಿದ್ದಾರೆ. ಇದು ರಸ್ತೆಯಲ್ಲಾಗುತ್ತಿರುವಂತಹ ಅಪಘಾತಗಳ ಸಂಖ್ಯೆಯನ್ನು ಕಡಿಮೆ ಮಾಡುವ ದೃಷ್ಟಿಯಲ್ಲಿ ಜಾರಿಗೆ ತಂದಿದ್ದಾರೆ. ಹಾಗಿದ್ರೆ ಏನೆಲ್ಲಾ ಹೊಸ ನಿಯಮಗಳು ಜಾರಿಗೆಯಾಗಿವೆ ಎಂಬುದನ್ನು ಈ ಲೇಖನದ ಮೂಲಕ ತಿಳಿಯಿರಿ.


    ಇದನ್ನೂ ಓದಿ: ಇನ್ಮುಂದೆ ಡಿಎಲ್​ ಆಗ್ಬೇಕಾದ್ರೆ ಈ 24 ರೂಲ್ಸ್ ಪಾಲಿಸಲೇಬೇಕು! ಸಾರಿಗೆ ಆಯುಕ್ತರಿಂದ ಹೊಸ ನಿಯಮ ಜಾರಿ




      • ಲೈಸೆನ್ಸ್​ ಪರೀಕ್ಷೆ​ ವೇಳೆ ಅಭ್ಯರ್ಥಿಗಳು ಟಾಪ್​ ಗೇರ್​ಗಳನ್ನು ಸಹ ಬಳಸಿ ಡ್ರೈವ್ ಮಾಡ್ಬೇಕು.

      • ಸ್ವಯಂ ಚಾಲಿತ ಗೇರ್​​ ವಾಹನಗಳನ್ನು, ಟ್ರ್ಯಾಕ್​ಗಳಲ್ಲಿ ಟಾಪ್​ ಗೇರ್​ಗಳನ್ನ ಬಳಸಬಹುದು.

      • ಪರೀಕ್ಷೆಯ ವೇಳೆ ಬೇರೆ ವಾಹನವನ್ನ ಯಾವ ರೀತಿ ಓಪರ್ ಟೇಕ್ ಮಾಡಬೇಕೆಂದು ಗೊತ್ತಿರಬೇಕು. ಅದೇ ರೀತಿ ಓವರ್​ ಟೇಕ್ ಸಹ ಮಾಡಬೇಕು.‘

      • ಏಕಾಗ್ರತೆಯಲ್ಲಿ ಡ್ರೈವಿಂಗ್ ಮಾಡ್ಬೇಕು. ಯಾವುದೇ ರೀತಿಯ ಬೇರೆ ಗಮನಗಳಿರಬಾರದು.

      • ಹಿಂಬದಿಯ ವಾಹನಗಳು ಕಾಣಿಸುವ ಹಾಗೆ ಕನ್ನಡಿಯನ್ನು ಇರಿಸಬೇಕು. ನಂತರ ಡ್ರೈವಿಂಗ್ ಮಾಡ್ಬೇಕು.




    ಈ ರೀತಿಯಾ ಇನ್ನೂ ಹಲವಾರು ನಿಯಮಗಳನ್ನು ಜಾರಿಗೆ ತಂದಿದ್ದಾರೆ.

    Published by:Prajwal B
    First published: