FAKE – ಕಾರ್ಮಿಕರಿಗೆ ಸರ್ಕಾರದಿಂದ 1.2 ಲಕ್ಷ ಸಿಗುತ್ತೆ ಎಂಬ ಮೆಸೇಜ್ ಬಂದ್ರೆ ಹುಷಾರ್

ಇದೊಂದು ವಂಚನೆಯ ಜಾಲತಾಣವಾಗಿದೆ. ಐಐ ಡಾಟ್ ಐಐಐ ಡಾಟ್ ಕ್ಯಾಮ್ ಎಂಬ ವಿಳಾಸವನ್ನು ಈ ತಾಣ ಹೊಂದಿದೆ. ಮೇಲ್ನೋಟಕ್ಕೆಯೇ ಇದು ವಂಚಕ ವೆಬ್​ಸೈಟ್​ನಂತೆ ತೋರುತ್ತದೆ.

ನಕಲಿ ಸುದ್ದಿ

ನಕಲಿ ಸುದ್ದಿ

 • News18
 • Last Updated :
 • Share this:
  ಈಗಂತೂ ವಾಟ್ಸಾಪ್​ನಲ್ಲಿ ಹರಿದಾಡುವ ಅದೆಷ್ಟೋ ಮೆಸೇಜ್​ಗಳು ನಕಲಿಯಾಗಿರುತ್ತವೆ. ಜನರು ಇವನ್ನು ನಿಜವಾ ಎಂದು ಕೆಲ ಕ್ಷಣ ತಡೆದು ಆಲೋಚಿಸದೆಯೇ ಸುಮ್ಮನೆ ಫಾರ್ವರ್ಡ್ ಮಾಡುತ್ತಾ ಹೋಗುತ್ತಾರೆ. ಇದರಿಂದ ಅನೇಕ ಅಮಾಯಕರಿಗೆ ಹಾನಿಯಾಗುವ ಸಾಧ್ಯತೆ ಇರುತ್ತದೆ. ಕೆಲವರಿಗೆ ಇಷ್ಟು ಹಣ ಬಹುಮಾನವಾಗಿ ಬಂದಿದೆ ಎಂಬ ಸಂದೇಶವೋ, ಟ್ರಾವೆಲ್ ಪ್ಯಾಕೇಜ್ ಸಿಕ್ಕಿದೆ ಎಂದೋ, ಹೀಗೆ ನಾನಾ ರೀತಿಯ ಆಕರ್ಷಕ ಸಂದೇಶಗಳು ಫಾರ್ವರ್ಡ್ ಆಗುತ್ತವೆ. ಈಗ ಅಂಥದ್ದೇ ಒಂದು ಮೆಸೇಜ್ ಹರಿದಾಡುತ್ತಿದೆ. ಅದೇ, ಕೇಂದ್ರ ಸರ್ಕಾರದಿಂದ 1.2 ಲಕ್ಷ ಪಡೆಯುವ ಅವಕಾಶ ಬಗ್ಗೆ ಇರುವ ಸಂದೇಶ ಇದಾಗಿದೆ. ಇದು ಬಹಳ ವೈರಲ್ ಆಗಿ ಹರಿದಾಡುತ್ತಿದೆ. ಆದರೆ, ಜಾಗ್ರತೆ… ಇದು ದಾರಿ ತಪ್ಪಿಸುವ ಸಂದೇಶ.

  1990ರಿಂದ 2020ರ ಮಧ್ಯೆ ಕೆಲಸ ಮಾಡಿದ ಕಾರ್ಮಿಕರಿಗೆ ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದಿಂದ 1,20,000 ರೂಪಾಯಿ ಲಾಭ ಪಡೆಯುವ ಅವಕಾಶ ಇದೆ ಎಂದು ಈ ಸಂದೇಶ ತಿಳಿಸುತ್ತದೆ. ಹಾಗೆಯೇ, ಒಂದು ವೆಬ್​ಸೈಟ್​ನ ಲಿಂಕ್ ಇರುವ ಈ ಸಂದೇಶವು, ಈ ಲಿಂಕ್ ಕ್ಲಿಕ್ ಮಾಡಿದರೆ ಯಾರಿಗೆಲ್ಲಾ ಲಾಭ ಸಿಗುತ್ತದೆ ಎಂಬ ಪಟ್ಟಿ ಕಾಣುತ್ತದೆ ಎಂದು ಹೇಳುತ್ತದೆ. ಈ ಎರಡನೇ ವಾಕ್ಯಕ್ಕೆ ಜನರು ಹೆಚ್ಚು ಮಾರುಹೋಗಿ ಲಿಂಕ್ ಕ್ಲಿಕ್ ಮಾಡುತ್ತಿದ್ದಾರೆ.

  ಇದನ್ನೂ ಓದಿ: ಅಮೆರಿಕ, ಜಪಾನ್ ಬಿಟ್ಟರೆ ನರೇಂದ್ರ ಮೋದಿ ಘೋಷಿಸಿದ ಆರ್ಥಿಕ ಪ್ಯಾಕೇಜ್ ಅತಿದೊಡ್ಡದು

  ಆದರೆ, ಇದೊಂದು ವಂಚನೆಯ ಜಾಲತಾಣವಾಗಿದೆ. ಐಐ ಡಾಟ್ ಐಐಐ ಡಾಟ್ ಕ್ಯಾಮ್ ಎಂಬ ವಿಳಾಸವನ್ನು ಈ ತಾಣ ಹೊಂದಿದೆ. ಮೇಲ್ನೋಟಕ್ಕೆಯೇ ಇದು ವಂಚಕ ವೆಬ್​ಸೈಟ್​ನಂತೆ ತೋರುತ್ತದೆ. ಈ ಲಿಂಕ್ ಕ್ಲಿಕ್ ಮಾಡಿದರೆ ಅದು ವಂಚಕ ವೆಬ್​ಸೈಟ್​ಗೆ ಕರೆದೊಯ್ಯುತ್ತದೆ. ಅಲ್ಲಿ ನಮ್ಮ ಖಾಸಗಿ ವಿವರಗಳನ್ನ ಪಡೆದು ಹಣ ಲಪಟಾಯಿಸುವ ಪ್ರಯತ್ನವಾಗುತ್ತದೆ. ದಯವಿಟ್ಟು ಈ ಸಂದೇಶವನ್ನು ಫಾರ್ವರ್ಡ್ ಮಾಡುವುದಾಗಲೀ, ಈ ಸಂದೇಶದಲ್ಲಿರುವ ವೆಬ್​ಸೈಟ್ ಲಿಂಕನ್ನು ಕ್ಲಿಕ್ ಮಾಡುವುದಾಗಲೀ ಮಾಡದಿರಿ.

  ಇದೊಂದು ಸಣ್ಣ ಉದಾಹರಣೆ. ಇಂಥ ಅನೇಕ ಸಂದೇಶಗಳು ನಮಗೆ ವಾಟ್ಸಾಪ್, ಫೇಸ್ ಬುಕ್ ಮೊದಲಾದ ಕಡೆ ಬಂದಿರಬಹುದು. ಕೆಲವನ್ನು ನಾವು ಷೇರ್ ಮಾಡಿಕೊಂಡಿರಬಹುದು. ಆದರೆ, ಫಾರ್ವರ್ಡ್ ಆಗಿ ಬರುವ ಇಂಥ ಸಂದೇಶಗಳ ಬಗ್ಗೆ ಹುಷಾರಾಗಿರುವುದು ಉತ್ತಮ.

  First published: