• Home
  • »
  • News
  • »
  • national-international
  • »
  • New Traffic Rule: ಎಚ್ಚರ! ನಿಮ್ಮ ಬಳಿ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ ಇಲ್ಲದಿದ್ದರೆ ಭಾರಿ ದಂಡ ಕಟ್ಬೇಕು

New Traffic Rule: ಎಚ್ಚರ! ನಿಮ್ಮ ಬಳಿ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ ಇಲ್ಲದಿದ್ದರೆ ಭಾರಿ ದಂಡ ಕಟ್ಬೇಕು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

New Traffic Rule: ಇನ್ಮುಂದೆ ಬೈಕ್ ಅಥವಾ ಕಾರುಗಳಿಗೆ ಮಾಲಿನ್ಯ ನಿಯಂತ್ರಣ ತಪಾಸಣೆ ಮಾಡಿಸಿ ಅದರ ಒಂದು ಪ್ರಮಾಣಪತ್ರವನ್ನು ಬೈಕ್ ಅಥವಾ ಕಾರಿನಲ್ಲಿ ಎಲ್ಲೇ ಹೊರಗೆ ಹೋದರೂ ತಮ್ಮ ಜೊತೆಯಲ್ಲಿರಿಸಿಕೊಂಡು ಹೋಗಬೇಕು.

  • Share this:

ಈ ಹಿಂದೊಮ್ಮೆ ಒಂದು ಸುದ್ದಿ (News) ಬಂದಿತ್ತು, ಅದೇನೆಂದರೆ ನಮ್ಮ ದೇಶದ ರಾಜಧಾನಿ ದೆಹಲಿಯಲ್ಲಿ ವಿಪರೀತ ವಾಯುಮಾಲಿನ್ಯದ (Air Pollution) ಕಾರಣದಿಂದಾಗಿ ದೆಹಲಿ ಸಾರಿಗೆ ಇಲಾಖೆಯು ಈ ವಾಯುಮಾಲಿನ್ಯವನ್ನು ತಕ್ಕ ಮಟ್ಟಿಗೆ ಕಡಿಮೆ ಮಾಡುವ ಪ್ರಯತ್ನದಲ್ಲಿ ಅನೇಕ ಕ್ರಮಗಳನ್ನು ತೆಗೆದುಕೊಂಡಿದೆ ಅಂತ.ಅದರಲ್ಲಿ ತುಂಬಾನೇ ಮುಖ್ಯವಾಗಿ ಈ ವಾಹನ ಚಾಲಕರು (Driver) ಕಡ್ಡಾಯವಾಗಿ ತಮ್ಮ ಬೈಕ್ (Bike) ಅಥವಾ ಕಾರುಗಳಿಗೆ ಮಾಲಿನ್ಯ ನಿಯಂತ್ರಣ (Pollution Under Control) ತಪಾಸಣೆ ಮಾಡಿಸಿ ಅದರ ಒಂದು ಪ್ರಮಾಣಪತ್ರವನ್ನು ಬೈಕ್ ಮೇಲೆ ಅಥವಾ ಕಾರಿನಲ್ಲಿ ಎಲ್ಲೇ ಹೊರಗೆ (Out) ಹೋದರೂ ತಮ್ಮ ಜೊತೆಯಲ್ಲಿರಿಸಿಕೊಂಡು ಹೋಗಬೇಕು ಎಂಬುದಾಗಿತ್ತು.


ಪೊಲೀಸರು ಅದನ್ನು ತೋರಿಸಿ ಅಂತ ಕೇಳಿದಾಗ ಅದನ್ನು ನೀವು ತೋರಿಸಬೇಕಾಗಿತ್ತು. ಈ ಪ್ರಮಾಣಪತ್ರವನ್ನು ತೋರಿಸದೆ ಇರುವ ಸಂದರ್ಭದಲ್ಲಿ ಭಾರಿ ದಂಡವನ್ನು ಮತ್ತು ನಿಮ್ಮ ಚಾಲನಾ ಪರವಾನಿಗಿಯನ್ನು ಸಹ ರದ್ದು ಮಾಡಬಹುದು ಅಂತ ಹೇಳಿದ್ದರು. ಈಗ ಹೀಗೆ PUC ಸರ್ಟಿಫಿಕೇಟ್ ಇಲ್ಲದೆ ಸಂಚರಿಸುವ ವಾಹನಗಳನ್ನು ನಿಯಂತ್ರಿಸಲು ಈಗ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎನ್ನುವುದು ಹೊಸ ಸುದ್ದಿ. ಒಟ್ಟಿನಲ್ಲಿ ಹೇಳುವುದಾದರೆ, ಈ PUC ಸರ್ಟಿಫಿಕೇಟ್ ಇಲ್ಲದೆ ವಾಹನಗಳು ಇನ್ನು ಮುಂದೆ ದೆಹಲಿಯ ರಸ್ತೆಗಳಲ್ಲಿ ಚಲಿಸಲು ಸಾಧ್ಯವಾಗುವುದಿಲ್ಲ ಎನ್ನುವುದನ್ನು ಚಾಲಕರು ಎಷ್ಟು ಬೇಗ ಅರ್ಥ ಮಾಡಿಕೊಳ್ಳುತ್ತಾರೋ ಅಷ್ಟೇ ಒಳ್ಳೆಯದು ಎಂದು ಹೇಳಬಹುದು.


ಪಿಯುಸಿ ಸರ್ಟಿಫಿಕೇಟ್ ಇಲ್ಲದಿದ್ದರೆ 10,000 ರೂಪಾಯಿ ದಂಡ


ದೆಹಲಿಯಲ್ಲಿ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರವಿಲ್ಲದೆ ವಾಹನ ಮಾಲೀಕರು ವಾಹನ ಚಲಾಯಿಸಿದರೆ ಅವರಿಗೆ ಆಗುವ ಸಮಸ್ಯೆಗಳು ಒಂದೆರಡಲ್ಲ ನೋಡಿ. ಪಿಯುಸಿ ಪ್ರಮಾಣಪತ್ರಗಳನ್ನು ಹೊಂದಿರದ ವಾಹನ ಮಾಲೀಕರಿಗೆ ದೆಹಲಿ ಸರ್ಕಾರದ ಸಾರಿಗೆ ಇಲಾಖೆ ನೋಟಿಸ್ ಕಳುಹಿಸಲು ಪ್ರಾರಂಭಿಸಬಹುದು. ಪಿಯುಸಿ ಸರ್ಟಿಫಿಕೇಟ್ ಇಲ್ಲದ ಚಾಲಕರು ಚಲನ್ ರೂಪದಲ್ಲಿ 10 ಸಾವಿರ ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ.


ವಾಯುಮಾಲಿನ್ಯ ಕಡಿಮೆ ಮಾಡಲು ಅನೇಕ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ದೆಹಲಿ ಸರ್ಕಾರ


ದೆಹಲಿಯಲ್ಲಿ ವಾಯುಮಾಲಿನ್ಯದ ಸಮಸ್ಯೆಯನ್ನು ಎದುರಿಸಲು ಕೇಜ್ರಿವಾಲ್ ಸರ್ಕಾರವು ಅನೇಕ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ರೆಡ್‌ಲೈಟ್ ಆನ್ ಜೊತೆಗೆ, ದೆಹಲಿಯ ರಸ್ತೆಗಳಲ್ಲಿ ಕಾರ್ ಆಫ್ ಅಭಿಯಾನ ಮತ್ತು ಧೂಳು ವಿರೋಧಿ ಅಭಿಯಾನ ಇತ್ಯಾದಿಗಳನ್ನು ಪರಿಸರ ಇಲಾಖೆ ನಡೆಸುತ್ತಿದೆ. ಅಂತಹ ಪರಿಸ್ಥಿತಿಯಲ್ಲಿ, ಸಾರಿಗೆ ಇಲಾಖೆ ಕೂಡ ತನ್ನ ಮಟ್ಟದಲ್ಲಿ ವಾಯುಮಾಲಿನ್ಯವನ್ನು ಕಡಿಮೆ ಮಾಡಲು ಪ್ರಯತ್ನಗಳನ್ನು ಮಾಡುತ್ತಿದೆ. ಈ ದಿಸೆಯಲ್ಲಿ ಈಗ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ ಇಲ್ಲದೆ ಸಂಚರಿಸುವ ವಾಹನಗಳನ್ನು ನಿಯಂತ್ರಿಸಲು ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.


ಇದನ್ನೂ ಓದಿ: ಈ ವಿಚಾರದಲ್ಲಿ ಕಿರಣ್ ಮಜುಂದಾರ್ ಶಾರನ್ನೇ ಹಿಂದಿಕ್ಕಿದ ಫಲ್ಗುಣಿ ನಾಯರ್!


PUC ಸರ್ಟಿಫಿಕೇಟ್ ಇಲ್ಲದೆಯೇ ರಸ್ತೆಗಿಳಿದಿವೆ ಅನೇಕ ವಾಹನಗಳು


ಅಧಿಕಾರಿಗಳ ಪ್ರಕಾರ, ಪಿಯುಸಿ ಇಲ್ಲದ ಹೆಚ್ಚಿನ ಸಂಖ್ಯೆಯ ವಾಹನಗಳು ದೆಹಲಿಯ ರಸ್ತೆಗಳಲ್ಲಿ ಚಲಿಸುತ್ತಿವೆ. ಈ ವಾಹನಗಳಿಂದ ಹೊರ ಹೊಮ್ಮುವ ಹೊಗೆ ನಗರದ ಹವಾಮಾನವನ್ನು ಇನ್ನಷ್ಟು ಹದಗೆಡಿಸುತ್ತಿದೆ.


ಸುಮಾರು 17,24,891 ವಾಹನಗಳ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರದ ಸಿಂಧುತ್ವದ ಅವಧಿ ಮುಗಿದಿದೆ ಎಂದು ಹೇಳಲಾಗಿದೆ. ಈ ಎಲ್ಲಾ ವಾಹನಗಳ ವಿರುದ್ಧ ಕಾರ್ಯಾಚರಣೆಯನ್ನು ತೀವ್ರಗೊಳಿಸಲು ಸಾರಿಗೆ ಇಲಾಖೆ ಸಿದ್ಧತೆ ನಡೆಸುತ್ತಿದೆ.


PUC ಸರ್ಟಿಫಿಕೇಟ್ ಇಲ್ಲದವರ ವಿರುದ್ಧ ಯಾವೆಲ್ಲಾ ಕ್ರಮ ಕೈಗೊಳ್ಳಲಾಗುವುದು?


ತಮ್ಮ ಬೈಕ್, ಕಾರಿನ ಅಥವಾ ಇನ್ನ್ಯಾವುದೇ ವಾಹನವನ್ನು ಪಿಯುಸಿ ಸರ್ಟಿಫಿಕೇಟ್ ಇಲ್ಲದೆಯೇ ರಸ್ತೆಗೆ ತಂದರೆ, ಅಂತಹವರ ವಿರುದ್ಧ ಕಠಿಣವಾದ ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆ ಈಗಾಗಲೇ ಸ್ಪಷ್ಟಪಡಿಸಿದೆ.


ಇದನ್ನೂ ಓದಿ:  ಇನ್ಮುಂದೆ ಡಿಎಲ್‌ ಜೊತೆ ಆಧಾರ್ ಕಾರ್ಡ್ ಲಿಂಕ್ ಆಗಿರಲೇಬೇಕು, ಈ ಸ್ಟೆಪ್ಸ್ ಬಗ್ಗೆ ತಿಳಿದುಕೊಂಡಿರಿ


ಇದರಲ್ಲಿ 10 ಸಾವಿರ ರೂಪಾಯಿ ದಂಡ ಅಥವಾ ಆರು ತಿಂಗಳ ಜೈಲು ಶಿಕ್ಷೆಯನ್ನು ನಿಗದಿಪಡಿಸಲಾಗಿದೆ. ಅಥವಾ ಚಲನ್ ಮತ್ತು ಶಿಕ್ಷೆ ಎರಡೂ ಇರಬಹುದು. ಇಷ್ಟೇ ಅಲ್ಲದೆ, ವಾಹನ ಚಾಲಕರ ಚಾಲನಾ ಪರವಾನಗಿಯನ್ನು ಮೂರು ತಿಂಗಳವರೆಗೆ ರದ್ದುಗೊಳಿಸಬಹುದು ಎಂದು ಹೇಳಲಾಗಿದೆ.

First published: