Traffic Rules: ಚಾಲಕರೇ ಗಮನಿಸಿ, ವಾಹನದ ಈ ಭಾಗಗಳನ್ನು ಮಾರ್ಪಡಿಸುವ ಮುನ್ನ ಈ ಸ್ಟೋರಿಯನ್ನೊಮ್ಮೆ ಓದಿ

ವಾಹನದಲ್ಲಿರುವ ಮಿಶ್ರಲೋಹದ ಚಕ್ರಗಳು ಅಥವಾ ಚರ್ಮದ ಸೀಟ್ ಕವರ್‌ಗಳಂತಹ ಸಣ್ಣ ಮಾರ್ಪಾಡುಗಳನ್ನು ಮಾಡುವುದರಿಂದ ಯಾವುದೇ ಸಾರಿಗೆ ನಿಯಮಗಳನ್ನು ಮುರಿದ ಹಾಗೇ ಆಗುವುದಿಲ್ಲ. ಆದರೆ ವಾಹನದ ಭಾಗಗಳನ್ನು ಒಂದು ವಾಹನದಿಂದ ಮತ್ತೊಂದು ವಾಹನಕ್ಕೆ ಬದಲಾಯಿಸುವುದು ಕಾನೂನುಬಾಹಿರವಾಗಿದೆ. ಆ ವಾಹನಗಳ ಭಾಗಗಳು ಯಾವುವು? ಅವುಗಳನ್ನು ಬದಲಾಯಿಸುವುದು ಏಕೆ ಕಾನೂನು ಬಾಹಿರ? ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿಂದು ಚರ್ಚಿಸೋಣ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:

ಈ ಆಧುನಿಕ ಕಾಲದಲ್ಲಿ ಎಲ್ಲರೂ ತಮ್ಮ ತಮ್ಮ ಸ್ವಂತ ವಾಹನಗಳನ್ನು (own vehicle) ಹೊಂದಿಯೇ ಇರುತ್ತಾರೆ. ಆ ಜನರು ತನ್ನ ವಾಹನವನ್ನು ಆಗಾಗ ಬದಲಾಯಿಸುತ್ತಲೇ ಇರುತ್ತಾರೆ. ಇದನ್ನು ನೀವು ನೋಡಿರಬಹುದು. ಆದರೆ ವಾಹನದ ಕೆಲವು ಭಾಗಗಳನ್ನು ಮಾತ್ರ ನೀವು ಬದಲಾಯಿಸಬಹುದು ಅಂದರೆ ಅದರ ಬಣ್ಣ (Color), ಗಾತ್ರ (Size) ಮುಂತಾದವುಗಳ ವಿಷಯದಲ್ಲಿ ಬದಲಾಯಿಸಬಹುದು ಎಂಬ ವಿಷಯ ನಿಮಗೆ ತಿಳಿದಿದೆಯೇ? ಇತ್ತಿಚೀಗೆ ಎಲ್ಲರಿಗೂ ತಮ್ಮ ಅಂತಸ್ತು, ಕಾರು, ಬಂಗಾರ ಎಲ್ಲವನ್ನು ಬೇರೆಯವರ ಮುಂದೆ ತೋರಸಬೇಕೆಂಬ ಹುಚ್ಚು ಹೆಚ್ಚಾಗತೊಡಗಿದೆ. ಅಂತಹದರಲ್ಲಿ ಇನ್ನು ಕಾರಿನ ಮಾಲೀಕರು (Car owner) ಸಹ ನಮ್ಮ ಕಾರನ್ನು ಎಲ್ಲರೂ ತದೇಕ ಚಿತ್ತದಿಂದ ನೋಡಬೇಕೆಂದು ಏನೆನೋ ಪ್ರಯತ್ನ (effort) ಮಾಡುತ್ತಾರೆ.


ಇದರಿಂದ ಅವರ ಕಾರ್‌ ಏನೋ ಪ್ರತ್ಯೇಕ ಗಮನ ಸೆಳೆಯುತ್ತದೆ. ಆದರೆ ಇದಕ್ಕೆ ಅವರು ಭಾರೀ ದಂಡ ತೆರಬೇಕಾಗುತ್ತದೆ. ಎಚ್ಚರವಿರಲಿ. ಏನಪ್ಪ ಇವರು ಹೀಗೆ ಹೇಳ್ತಾರೆ ಅಂತ ಭಯಪಡಬೇಡಿ.


ವಾಹನದಲ್ಲಿರುವ ಮಿಶ್ರಲೋಹದ ಚಕ್ರಗಳು ಅಥವಾ ಚರ್ಮದ ಸೀಟ್ ಕವರ್‌ಗಳಂತಹ ಸಣ್ಣ ಮಾರ್ಪಾಡುಗಳನ್ನು ಮಾಡುವುದರಿಂದ ಯಾವುದೇ ಸಾರಿಗೆ ನಿಯಮಗಳನ್ನು ಮುರಿದ ಹಾಗೇ ಆಗುವುದಿಲ್ಲ. ಆದರೆ ವಾಹನದ ಭಾಗಗಳನ್ನು ಒಂದು ವಾಹನದಿಂದ ಮತ್ತೊಂದು ವಾಹನಕ್ಕೆ ಬದಲಾಯಿಸುವುದು ಕಾನೂನುಬಾಹಿರವಾಗಿದೆ. ಆ ವಾಹನಗಳ ಭಾಗಗಳು ಯಾವುವು? ಅವುಗಳನ್ನು ಬದಲಾಯಿಸುವುದು ಏಕೆ ಕಾನೂನು ಬಾಹಿರ? ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿಂದು ಚರ್ಚಿಸೋಣ.


ಮಾರ್ಪಾಡು ಮಾಡಬಾರದ ವಾಹನದ ಭಾಗಗಳು ಇಂತಿವೆ:
  • ಬಣ್ಣದ ಗಾಜು
    ವಾಹನಗಳಿಗೆ ಬಣ್ಣದ ಗಾಜು ಹಾಕುವುದು ಸಾರಿಗೆ ಸಂಚಾರ ನಿಯಮದ ಉಲ್ಲಂಘನೆಯಾಗುತ್ತದೆ. ಟ್ರಾಫಿಕ್ ಪೊಲೀಸರು ಈ ಅಪರಾಧವನ್ನು ಸುಲಭವಾಗಿ ಕಂಡು ಹಿಡಿಯುತ್ತಾರೆ ಮತ್ತು ಜನರಿಂದ ಸಾಕಷ್ಟು ದಂಡವನ್ನು ಸಂಗ್ರಹಿಸುತ್ತಾರೆ. ಕಾನೂನಿನ ಪ್ರಕಾರ, ನಿಮ್ಮ ಕಾರು ಹಿಂದಿನ ಕಿಟಕಿಗೆ ಕನಿಷ್ಠ 75% ಗೋಚರತೆಯನ್ನು ಹೊಂದಿರಬೇಕು ಮತ್ತು ಬದಿಯ ಕಿಟಕಿಗಳಿಗೆ 50% ಗೋಚರತೆ ಇರುವ ಕಿಟಕಿ ಹೊಂದಿರಬೇಕು.


ಇದನ್ನೂ ಓದಿ: Yadagiri: ಯಾದಗಿರಿಯಲ್ಲಿ ಗಾಂಜಾ ಮಿಶ್ರಿತ ಚಾಕೊಲೇಟ್ ಮಾರಾಟ ಮಾಫಿಯಾ, ಓರ್ವ ಅರೆಸ್ಟ್

  • ಅಲಂಕಾರಿಕ ಹಾರ್ನ್
    ಟ್ರಕ್ ಅಥವಾ ಕಾರುಗಳಲ್ಲಿ ಫ್ಯಾನ್ ಹಾರ್ನ್ ಸದ್ದು ಮಾಡುವುದನ್ನು ನೀವು ಅನೇಕ ಬಾರಿ ಕೇಳಿರಬೇಕು. ವಾಹನದಲ್ಲಿ ಇಂತಹ ಫ್ಯಾನ್ಸಿ ಸೈರನ್ ಮತ್ತು ಪ್ರೆಶರ್ ಹಾರ್ನ್ ಅಳವಡಿಸಿದರೆ ತಕ್ಷಣ ಪೊಲೀಸರು ತಡೆದು ದಂಡವನ್ನು ಹಾಕುತ್ತಾರೆ. ಏಕೆಂದರೆ ಅಕ್ರಮ ತಿದ್ದುಪಡಿಗಳ ಪಟ್ಟಿಯಲ್ಲಿ ವಾಹನದ ಈ ಭಾಗವು ಬರುತ್ತದೆ.

  • ಕಾರ್ ಸೈಲೆನ್ಸರ್
    ಅನೇಕ ಯುವಕರು ತಮ್ಮ ಕಾರನ್ನು ವಿಭಿನ್ನವಾಗಿ ಶೋ-ಆಫ್ ಮಾಡಲು ಇಷ್ಟಪಡುತ್ತಾರೆ. ಅವರು ತಮ್ಮ ವಾಹನಗಳಿಗೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಫ್ಯಾನ್ಸಿ ಸೈಲೆನ್ಸರ್‌ಗಳನ್ನು ಅಳವಡಿಸಿಕೊಳ್ಳುತ್ತಾರೆ. ತಮ್ಮ ವಾಹನದಿಂದ ಹೊರಹೊಮ್ಮುವ ಶಬ್ದವು ತಮ್ಮ ವಾಹನವನ್ನು ಇತರರಿಂದ ಪ್ರತ್ಯೇಕಿಸುತ್ತದೆ ಎಂದು ಅವರು ತಪ್ಪಾಗಿ ಭಾವಿಸುತ್ತಾರೆ. ಆದರೆ, ಹಾಗೆ ಮಾಡುವುದರಿಂದ ಸಾರಿಗೆ ನಿಯಮಗಳನ್ನು ನೀವು ಮುರಿದ ಹಾಗೆ ಆಗಿ, ಟ್ರಾಫಿಕ್‌ ಪೋಲಿಸರು ನಿಮಗೆ ದಂಡ ಹಾಕದೇ ಸುಮ್ಮನೆ ಬಿಡುವುದಿಲ್ಲ. ಆಗ ನೀವು ಎಷ್ಟೆ ಗೋಳಾಡಿದರೂ ನಿಮ್ಮ ಹಣ ನಿಮಗೆ ವಾಪಸ್‌ ಸಿಗುವುದಿಲ್ಲ.


ಇದನ್ನೂ ಓದಿ:  Viral Story: ಮದುವೆಯೂ ಆಗಿಲ್ಲ, ಗೆಳತಿಯೂ ಇಲ್ಲ, ಆದ್ರೆ ಈ ಯಂಗ್​ ಹೀರೋ 48 ಮಕ್ಕಳ ತಂದೆ!

ವಾಹನಗಳ ಭಾಗಗಳನ್ನು ಬದಲಾಯಿಸುವುದು ಏಕೆ ಕಾನೂನು ಬಾಹಿರ?
ಒಂದು ವಾಹನದ ಭಾಗಗಳು ಮತ್ತೊಂದು ವಾಹನಗಳ ಭಾಗಕ್ಕಿಂತ ಭಿನ್ನವಾಗಿರುತ್ತವೆ. ಈ ರೀತಿಯಾಗಿ ಬದಲಾವಣೆ ಮಾಡುವುದರಿಂದ, ವಾಹನಗಳು ಅಪಘಾತಕ್ಕೆ ಒಳಗಾಗುವ ಸಂಭವ ಹೆಚ್ಚು ಎಂಬುದರ ಆಧಾರದ ಮೇಲೆ ವಾಹನಗಳ ಭಾಗಗಳ ಮಾರ್ಪಾಡು ಕಾನೂನು ಬಾಹಿರ ಎಂದು ಸಾರಿಗೆ ಸಂಚಾರ ಇಲಾಖೆ ಹೇಳುತ್ತದೆ.

Published by:Ashwini Prabhu
First published: