ಅಕ್ಟೋಬರ್ನಲ್ಲಿ (October ) ಕೆಮ್ಮು ಮತ್ತು ಶೀತದ ಔಷಧಿ ಕುಡಿದು 66 ಮಕ್ಕಳು ಸಾವನ್ನಪ್ಪಿದ್ದ ಘಟನೆ ಮರೆಯುವ ಮುನ್ನ ಕೆಮ್ಮಿನ ಔಷಧಿಯ ಮತ್ತೊಂದು ಕರ್ಮಕಾಂಡ ಬೆಳಕಿಗೆ ಬಂದಿದೆ. ಭಾರತ ಮೂಲದ ಮೇಡನ್ ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್ ಔಷಧಿ ಕಂಪನಿ ತಯಾರಿಸಿದ ಕೆಮ್ಮು ಮತ್ತು ಶೀತದ ಔಷಧಿ ಕುಡಿದು ಪಶ್ಚಿಮ ಆಫ್ರಿಕಾದ ಗಾಂಬಿಯಾದಲ್ಲಿ 66 ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ಡಬ್ಲೂಹೆಚ್ಒ (WHO) ವರದಿ ಹೇಳಿತ್ತು. ಕೆಮ್ಮಿನ ಔಷಧಿ ಯಾಕೋ ಇತ್ತೀಚಿನ ದಿನಗಳಲ್ಲಿ ಅಪಾಯಕಾರಿ ಆದಂತೆ ಕಾಣುತ್ತಿದೆ. ಇತ್ತೀಚೆಗಷ್ಟೇ ಮುಂಬೈನಲ್ಲಿ ಕೆಮ್ಮಿನ ಔಷಧಿ ಕುಡಿದು ಮಗುವೊಂದು ಉಸಿರಾಟವೇ ಇಲ್ಲದೇ ಪ್ರಜ್ಞಾಹೀನಾವಾಗಿ ಕುಟುಂಬವನ್ನು ಆತಂಕಕ್ಕೀಡು ಮಾಡಿತ್ತು. ಮುಂಬೈನ (Mumbai) ಪ್ರತಿಷ್ಠಿತ ಫಾರ್ಮಾಸ್ಯುಟಿಕಲ್ನಿಂದ ಕೆಮ್ಮಿನ ಸಿರಪ್ ಅನ್ನು ಖರೀದಿಸಿ ತಮ್ಮ ಮೂರುವರೆ ವರ್ಷದ ಗಂಡು ಮಗುವಿಗೆ ಕೆಮ್ಮಿನ ನಿವಾರಣೆಗಾಗಿ ಔಷಧಿಯನ್ನು ನೀಡಿದ್ದಾರೆ. ಔಷಧಿ ಸೇವಿಸಿದ ಸ್ವಲ್ಪ ಹೊತ್ತಿನ ಬಳಿಕ ಮಗು ಹಠಾತ್ ಕುಸಿದು ಬಿದ್ದಿದ್ದಲ್ಲದೇ ಉಸಿರಾಟವೇ ನಿಂತು ಹೋಗಿತ್ತು ಎಂದು ಮಗುವಿನ ಕುಟುಂಬ ಟೈಮ್ಸ್ ಆಫ್ ಇಂಡಿಯಾಗೆ ತಿಳಿಸಿದೆ.
ಮಗುವಿನ ಉಸಿರಾಟವೇ ನಿಂತು ಹೋಗಿತ್ತು
ಔಷಧಿಯನ್ನು ಸೇವಿಸಿದ ಬಳಿಕ ಮಗುವಿಗೆ ನಾಡಿಮಿಡಿತವೇ ಇರಲಿಲ್ಲ ಎಂದು ಮಗುವಿನ ತಾಯಿ ತಿಳಿಸಿದ್ದಾರೆ. ತಕ್ಷಣ ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು.
ವೈದ್ಯರ ಚಿಕಿತ್ಸೆಯಿಂದಾಗಿ ಮಗುವಿಗೆ ಹೃದಯಬಡಿತ ಆರಂಭವಾಯಿತು ಎಂದು ಮೂಲಗಳು ತಿಳಿಸಿವೆ. ಮಗುವಿಗೆ ಸುಮಾರು 17 ನಿಮಿಷಗಳ ಕಾಲ ಉಸಿರಾಟ ಇರಲಿಲ್ಲ, ಹೃದಯ ಬಡಿತವೂ ಇರಲಿಲ್ಲ ಎಂದು ವರದಿಯಾಗಿತ್ತು.
ಮಗುವನ್ನು ಪರೀಶೀಲಿಸಿದ ವೈದ್ಯರು ದೀರ್ಘಕಾಲದ ಕೆಮ್ಮಿನಿಂದಾಗಿ ಇದು ಸಂಭವಿಸಿದೆ ಎಂದಿದ್ದಾರೆ. ದೀರ್ಘಕಾಲದ ಕೆಮ್ಮು ಮನುಷ್ಯನನ್ನು ಆಯಾಸವನ್ನು ಉಂಟು ಮಾಡುತ್ತದೆ. ಈ ವೇಳೆ ಕೆಮ್ಮಿನ ಸಿರಪ್ ಸೇವಿಸಿದ್ದಲ್ಲಿ ಈ ರೀತಿಯಾಗಿ ಆರೋಗ್ಯದಲ್ಲಿ ಏರುಪೇರು ಉಂಟಾಗಬಹುದು ಎಂದಿದ್ದಾರೆ.
ಶಿಶುವೈದ್ಯರು ಹೇಳಿದ್ದೇನು?
ಆದಾಗ್ಯೂ, ಶಿಶುವೈದ್ಯರು ನಾಲ್ಕು ವರ್ಷಕ್ಕಿಂತ ಕಡಿಮೆ ವಯಸ್ಸಿನ ರೋಗಿಗಳಿಗೆ ಕೆಮ್ಮು ಸಿರಪ್ ಅನ್ನು ಬಳಸದಂತೆ ಪೋಷಕರಿಗೆ ತಿಳಿಸಿದ್ದಾರೆ. ಕೆಮ್ಮಿನ ಸಿರಪ್ಗಳು ಕ್ಲೋರ್ಫೆನಿರಮೈನ್ ಮತ್ತು ಡೆಕ್ಸ್ಟ್ರೋಮೆಥೋರ್ಫಾನ್ನಂತಹ ರಾಸಾಯನಿಕಗಳನ್ನು ಹೊಂದಿದ್ದು ಇವು ಅಪಾಯಕಾರಿ ಎಂದಿದ್ದಾರೆ. ಇದಲ್ಲದೆ, ದೀರ್ಘಾವಧಿಯ ಬಳಕೆಯು ಹೃದಯದ ಸಮಸ್ಯೆಗಳಂತಹ ಇತರ ಆರೋಗ್ಯ ತೊಡಕುಗಳಿಗೆ ಕಾರಣವಾಗಬಹುದು ಎಂದಿದ್ದಾರೆ.
ಇದನ್ನೂ ಓದಿ: ಉದ್ದೇಶಪೂರ್ವಕವಾಗಿ ಕೊರೊನಾ ಸೋಂಕಿಗೆ ತುತ್ತಾದ ಗಾಯಕಿ; ಯಾಕಿಂಗೆ ಅಂದ್ರೆ ಹಿಂಗ್ ಅಂದ್ರು!
ಕೆಇಎಂ ಆಸ್ಪತ್ರೆಯ ಪೀಡಿಯಾಟ್ರಿಕ್ಸ್ ವಿಭಾಗದ ಮಾಜಿ ಮುಖ್ಯಸ್ಥ ಡಾ.ಮುಕೇಶ್ ಅಗರ್ವಾಲ್ ಮಾತನಾಡಿ, ಕೆಮ್ಮು ಸಿರಪ್ಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದನ್ನು ವಿವರಿಸಿದರು.
"ಹೆಚ್ಚಿನ ಕೆಮ್ಮು ಸಿರಪ್ಗಳು ಕೇವಲ ನಿದ್ರಾಜನಕವಾಗಿ ಕಾರ್ಯನಿರ್ವಹಿಸುತ್ತವೆ. ಕೆಮ್ಮು ಮುಂದುವರಿದರೆ, ಅಲರ್ಜಿಗಳಿಗೆ ಆಂಟಿಹಿಸ್ಟಮೈನ್ ಹೊಂದಿರುವ ಕೆಮ್ಮು ಸಿರಪ್ ಅನ್ನು ನೀಡಬಹುದು, ಆದರೆ ಡೋಸ್ ಒಂದೇ ಆಗಿರಬೇಕು'' ಎಂದು ಅವರು ಹೇಳಿದ್ದಾರೆ.
ಕೆಮ್ಮಿನ ಸಿರಪ್ ಅನ್ನು ಮಕ್ಕಳಿಗೆ ನೀಡುವಾಗ ಪೋಷಕರು ನೆನಪಿನಲ್ಲಿಟ್ಟುಕೊಳ್ಳಬೇಕಾದ ಸಲಹೆಗಳು
* ವೈದ್ಯರನ್ನು ಸಂಪರ್ಕಿಸದೇ ಯಾವುದೇ ಔ಼ದಿಗಳನ್ನು ಮಕ್ಕಳಿಗೆ ನೀಡಬಾರದು
* ಮಕ್ಕಳ ವೈದ್ಯರನ್ನು ಸಂಪರ್ಕಿಸದೆ ಅಸೆಟಾಮಿನೋಫೆನ್ ಅಥವಾ ಐಬುಪ್ರೊಫೇನ್ನಂತಹ ನೋವು ನಿವಾರಕ ಔಷಧಗಳನ್ನು ನೀಡಬೇಡಿ.
* ಮಗುವು ಜ್ವರ ಅಥವಾ ಚಿಕನ್ಫಾಕ್ಸ್ನಿಂದ ಬಳಲುತ್ತಿದ್ದರೆ, ಆಸ್ಪಿರಿನ್ ಅನ್ನು ನೀಡಬೇಡಿ, ಏಕೆಂದರೆ ಅಂತಹ ಮಕ್ಕಳಲ್ಲಿ ರೇಯೆಸ್ ಸಿಂಡ್ರೋಮ್ನಂತಹ ಮಾರಣಾಂತಿಕ ಕಾಯಿಲೆಗಳನ್ನು ಉಂಟುಮಾಡುತ್ತದೆ.
* ಔಷಧಿ ಮೇಲಿನ ಲೇಬಲ್ ಮತ್ತು ಸೂಚಿಸಲಾದ ಡೋಸ್ಗಳನ್ನು
ಪರಿಶೀಲಿಸಿ. ಹಾಗು ಔಷಧಿಯ ಎಕ್ಸ್ ಪೈರಿ ಡೇಟ್ ಅನ್ನು ಮುಖ್ಯವಾಗಿ ಪರಿಶೀಲಿಸಿ.
ನಿಮ್ಮ ಮಗುವಿಗೆ ಕೆಮ್ಮಿನ ನಿವಾರಣೆಗೆ ಸಲಹೆ
* ಬೆಚ್ಚಗಿನ ನಿಂಬೆ ನೀರನ್ನು ನೀಡಿ
* ಮಕ್ಕಳಿಗೆ ಸಾಧ್ಯವಾದಷ್ಟು ಬೆಚ್ಚಗಿನ ನೀರು ಕುಡಿಯಲು ಕೊಡಿ ಮತ್ತು ಬೆಚ್ಚಗಿನ ನೀರಿನಿಂದ ಗಾರ್ಗ್ಲಿಂಗ್ ಮಾಡಲು ಹೇಳಿ
* ಮಕ್ಕಳು ಮಲಗುವ ಕೋಣೆಯಲ್ಲಿ ಫ್ಯಾನ್ ಹಾಕದೇ ಆರ್ದ್ರಕವನ್ನು ಸೇರಿಸಿ
* ಮೂಗಿನ ಸಲೈನ್ ಡ್ರಾಪ್ಸ್ ಅಥವಾ ಸ್ಪ್ರೇ ಬಳಸಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ